fbpx
ಸಾಧನೆ

ಪತ್ರಿಕೋದ್ಯಮ ಮತ್ತು ಸಾರಿಗೆ ಎರಡೂ ಕ್ಷೇತ್ರಗಳಲ್ಲಿ ನಂ.1 ಸ್ಥಾನದಲ್ಲಿರುವ ವಿಜಯ ಸಂಕೇಶ್ವರ್ ರವರ ಬದುಕಿನ ಹಾದಿ ನಮ್ಮೆಲರಿಗೂ ಪ್ರೇರಣೆ.

ಒಂದು ಟ್ರಕ್ ನಿಂದ ಪ್ರಾರಂಭಿಸಿ ಇಂದು 4300 ಗಾಡಿಗಳ ದೇಶದ ಅತ್ಯಂದ ದೊಡ್ಡ ಉದ್ದಿಮೆಯಾಗಿಸಿದ ವಿಜಯ್ ಸಂಕೇಶ್ವರ್ ಅವರ ಕಥೆ

ಆರಂಭದಲ್ಲಿ ಅವರು ಇಂಗ್ಲಿಷ್-ಕನ್ನಡ ಭಾರದ್ವಾಜ್ ಡಿಕ್ಷನರಿಯನ್ನು ಪ್ರಕಟಿಸುತ್ತಿದ್ದರು. ತಮ್ಮ 16 ನೇ ವಯಸ್ಸಿನಲ್ಲಿ ಮರಾಠಿಯಲ್ಲಿ ಅದನ್ನು ಪ್ರಕಟಿಸುವ ಪ್ರಯತ್ನ ಮಾಡಿದ್ದರು. ಸಂಕೇಶ್ವರರು 25ನೇ ವಯಸ್ಸಿಗೆ ಒಂದು ಲಾರಿಯನ್ನು ತೆಗೆದುಕೊಂಡೆ. ಬಂಧು-ಬಳಗ ಎಲ್ಲರೂ ವೀರಶೈವನಾಗಿ ಲಾರಿ ವ್ಯವಹಾರಕ್ಕೆ ಇಳಿಯುವುದು ಕನಿಷ್ಠ ದರ್ಜೆಯ ಉದ್ಯೋಗ ಎಂದು ಹೀಯಾಳಿಸಿದರು. ಆಗ ಮನಸ್ಸಿನಲ್ಲಿ ತಳಮಳ ಆಗಿದ್ದು ನಿಜ. ಕಾಯಕ ಸಂಸ್ಕೃತಿಯ ಬಗ್ಗೆ ಅಪಾರ ಶ್ರದ್ಧೆಯುಳ್ಳವನಾಗಿದ್ದರಿಂದ ಇಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ. ಒಂದು ಹಂತದಲ್ಲಂತೂ ನಷ್ಟಕ್ಕೆ ತುತ್ತಾಗಿ ಎಲ್ಲವೂ ಮುಗಿದೇ ಹೋಯಿತು ಎಂಬ ಸ್ಥಿತಿ ತಲುಪಿದರೂ ಅಚಲ ನಿರ್ಧಾರದಿಂದ ಮುಂದುವರಿದರು.

ಕೆಲಸ ಯಾವುದೆ ಇರಲಿ ಶೃದ್ದೆಯಿಂದ ಮಾಡಬೇಕು. ತನ್ನ ಮೇಲೆ ತನಗೆ ಭರವಸೆ ಇರಬೇಕು, ಆತ್ಮವಿಶ್ವಾಸವಿರಬೇಕು. ಎಂಬುವದರಲ್ಲಿ ನಂಬಿಕೆ ಇಟ್ಟುಕೊಂಡವರು…

aug5-16-LEAD1

ವಿಆರ್‌ಎಲ್‌ ಸಮೂಹ ಸಂಸ್ಥೆ

ಗದಗ, ಉತ್ತರ ಕರ್ನಾಟಕದ ಒಂದು ಸಣ್ಣ ಪಟ್ಟಣದಲ್ಲಿ 1976 ರಲ್ಲಿ ಒಂದು ಟ್ರಕ್‌ನಿಂದ ಶುರು ಮಾಡಿದ್ದ ಬಿಸಿನೆಸ್ ಈಗ 4,300 ಗಾಡಿಗಳ ಆಗಿ ಇಡೀ ದೇಶದಾಗ ಅತ್ಯಂತ ದೊಡ್ದ ಟ್ರಾನ್ಸಪೊರ್ಟೆಶನ್ ಸಂಸ್ಥೆ ಆಗಿದೆ. ವಿಆರ್‌ಎಲ್ (VRL) ಸಂಸ್ಥೆ ಇಂದು 28 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಶಾಖೆಗಳು, 4,300 (3,900 trucks and 400 buses)ಕ್ಕೂ ಅಧಿಕ ವಾಹನಗಳನ್ನು ಹೊಂದಿ ದೇಶಾದ್ಯಂತ ಮನೆಮಾತಾಗಿದೆ. ವಿಆರ್‌ಎಲ್ ಲಾಜಿಸ್ಟಿಕ್ಸ್ ಅನ್ನು ವಿಶ್ವಾಸಾರ್ಹತೆ, ನಿಷ್ಠೆಗೆ ಮತ್ತೊಂದು ಹೆಸರಾಗಿಸಿ, ಗ್ರಾಹಕಸ್ನೇಹಿಯಾಗಿ ರೂಪಿಸಿರುವ ವಿಜಯ ಸಂಕೇಶ್ವರ ಅವರ ಸಾಧನೆ ಗುರುತಿಸಿ ಅನೇಕ ಸಂಘ- ಸಂಸ್ಥೆಗಳು ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿವೆ. ಹೊಸ ಪೀಳಿಗೆಯ ಸಂವೇದನಾ ಶಕ್ತಿಯಾಗಿ ರುವ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡಿದವರು. ಸಾರಿಗೆ ಕ್ಷೇತ್ರದಲ್ಲಿ 19 ವರ್ಷಗಳ ಸುದೀರ್ಘ ಅನುಭವವುಳ್ಳ ಅವರು, ಜಾಗತಿಕ ಸ್ಪರ್ಧೆಗೆ ಅನುಗುಣವಾದ ಚಿಂತನೆ, ದೂರದರ್ಶಿತ್ವ ಹಾಗೂ ನಾಯಕತ್ವ ಗುಣದಿಂದಾಗಿ ಸಂಸ್ಥೆಯನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ.

ಅವರ ವ್ಯವಹಾರ ಜ್ಞಾನ ಎಷ್ಟು ಪ್ರಖರವೆಂದರೆ, ಒಂದು ಟೈರ್ ಸವೆದು ಹೋಗಿದ್ದರೆ, ಅದು ಎಷ್ಟು ಕಿ.ಮೀ. ಓಡಿರಬಹುದು ಎಂಬುದನ್ನು ಕಣ್ಣಳತೆಯಲ್ಲೇ ನೋಡಿ ಹೇಳಬಲ್ಲರು.

ಸಂಕೇಶ್ವರರು ಯಾವ ಕ್ಷೇತ್ರಕ್ಕೆ ಕೈ ಹಾಕುತ್ತಾರೋ ಆ ಕ್ಷೇತ್ರದಲ್ಲಿ ಅವರಿಗೆ ನಂ.1 ಪಟ್ಟ ಸಲ್ಲುತ್ತದೆ. ಸಾರಿಗೆ, ಪತ್ರಿಕೋದ್ಯಮ ಎರಡರಲ್ಲೂ ನಂ.1 ಆಗಿದ್ದಾರೆ. ಯಾರಲ್ಲಿ ಕಾಯಕ ನಿಷ್ಠೆ ಇರುತ್ತದೋ ಅವರು ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯ.

vani_061412-2

1976 ರಲ್ಲಿ 2 ಲಕ್ಷ ರೂ ವಹಿವಾಟಿನಿಂದ ಹೆಚ್ಚು 15,000 ಉದ್ಯೋಗಿಗಳನ್ನು ಒಳಗೊಂಡಂತಹ ವಿಆರ್‌ಎಲ್‌ ಗ್ರೂಪ್ ಸಾರಿಗೆ, ಕೊರಿಯರ್ ಸೇವೆ , ಪ್ರಕಾಶನ , ಗಾಳಿಯಂತ್ರಗಳು ಮತ್ತು air chartering business ಹಾಗು 300 ಕೋಟಿ ಪಬ್ಲಿಷಿಂಗ್ ಹೌಸ್ ನಿರ್ಮಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top