fbpx
ದೇವರು

ಈ ಶ್ರಾವಣ ಮಾಸದಲ್ಲಿ ಸುಖ , ಸಂತೋಷ ಮತ್ತು ಸಮೃದ್ಧಿಗಾಗಿ ಈ ವಸ್ತುಗಳನ್ನು ಮನೆಗೆ ತನ್ನಿ ಮತ್ತು ಈ ನಿಯಮಗಳನ್ನು ತಪ್ಪದೆ ಪಾಲಿಸಿ.

ಈ ಶ್ರಾವಣ ಮಾಸದಲ್ಲಿ ಸುಖ , ಸಂತೋಷ ಮತ್ತು ಸಮೃದ್ಧಿಗಾಗಿ ಈ ವಸ್ತುಗಳನ್ನು  ಮನೆಗೆ ತನ್ನಿ ಮತ್ತು ಈ ನಿಯಮಗಳನ್ನು  ತಪ್ಪದೆ ಪಾಲಿಸಿ.

ಈ ವರ್ಷದ 2017 ,ಇದೇ ಜುಲೈ  ತಿಂಗಳಿನ ಸೋಮಾವರ 24 ನೇ ತಾರೀಖಿನಿಂದ ಶ್ರಾವಣ ಮಾಸ ಪ್ರಾರಂಭವಾಗಲಿದೆ.ಈ ವರ್ಷ ಸೋಮವಾರ ಶುರುವಾಗಿರುವುದು ಇನ್ನೂ ಶ್ರೇಷ್ಠ ಯಾಕೆಂದರೆ ಶ್ರಾವಣ ಮಾಸ  ಶಿವನಿಗೆ ಶ್ರೇಷ್ಠ ಮಾಸ ಮತ್ತು ಅತ್ಯಂತ ವಿಶೇಷವಾದ ಮಾಸ.  ಸೋಮವಾರ ಶಿವನ ವಾರ. ಅದರಲ್ಲೂ  ಶ್ರಾವಣ ಮಾಸದ ಸೋಮವಾರದಂದು ಉಪವಾಸ ವ್ರತಗಳನ್ನು ಮಾಡಿದರೆ ಶಿವನು ಸುಪ್ರೀತನಾಗುತ್ತಾನೆ.

1.ಸೋಮವಾರದಂದು ಶಿವನನ್ನು ಮನೆಗೆ ಆಹ್ವಾನಿಸಿ.

ಶ್ರಾವಣ ಶುರುವಾದ ತಕ್ಷಣ ನಾವು ಶಿವನನ್ನು ಪ್ರಾರ್ಥಿಸಲು ಶುರುಮಾಡುತ್ತೇವೆ.ಅವನ ಎಲ್ಲಾ ಅವತಾರಗಳನ್ನು ಪೂಜಿಸಿ ಪ್ರಾರ್ಥಿಸುತ್ತೇವೆ,ಆರಾಧಿಸುತ್ತೇವೆ.ನಾವು ಶ್ರಾವಣದಲ್ಲಿ ದೇವಸ್ಥಾನಕ್ಕೆ ಹೋಗುವುದಷ್ಟೇ ಅಲ್ಲದೆ ಶಿವನನ್ನು ಸಂತೋಷ ಪಡಿಸಲು, ತೃಪ್ತಿಗೊಳಿಸಲು ಇನ್ನೂ ಕೆಲವು ವಿಷಯಗಳನ್ನು ಮುಖ್ಯವಾಗಿ  ಮಾಡಬೇಕಾಗಿದೆ.ಅವು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ…..

2 .ಶಿವನನ್ನು  ಸಂತೋಷಪಡಿಸುವ   ವಸ್ತುಗಳು.

ಈ ಶ್ರಾವಣದಲ್ಲಿ ಶಿವನನ್ನು ಸಂತೋಷ ಪಡಿಸಲು ಇಲ್ಲಿ ಕೆಲವು ವಿಷಯಗಳನ್ನು ತಿಳಿಸಲಾಗಿದೆ.ಅವುಗಳನ್ನು ನೀವು ಸಹ  ಮನೆಯಲ್ಲಿ ಅಥವಾ ನಿಮ್ಮ ಕಾರ್ಯ ಸ್ಥಳಗಳಲ್ಲಿ ತಂದು ಇಟ್ಟುಕೊಳ್ಳಬಹುದು. ಅವು ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ನೆಲೆಸುವಂತೆ ಮಾಡುತ್ತದೆ.

3.ನೀಲಿ ಹೂವುಗಳು.

ನೀಲಿ ಹೂವುಗಳೆಂದರೆ ಶಿವನಿಗೆ ಪ್ರಿಯ,ಇಷ್ಟ.ಶಿವನು  ನೀಲಿ ಹೂವುಗಳನ್ನು ತುಂಬಾ ಇಷ್ಟಪಡುತ್ತಾನೆ ಎಂದು ಹೇಳುತ್ತಾರೆ.ಸ್ವಲ್ಪ ನೀಲಿ ಹೂವುಗಳನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಅಥವಾ ಕಾರ್ಯ ಸ್ಥಳದಲ್ಲಿ ಇಡಿ ಅದು ನಿಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸುತ್ತದೆ.

4.ಉಪ್ಪು ನೀರು.

ಶ್ರಾವಣ ಮಾಸದಲ್ಲಿ ಪ್ರತಿ ದಿನ ನೀವು ಒಂದು ಚಮಚ ಉಪ್ಪನ್ನು ಒಂದು ದೊಡ್ಡ ಲೋಟ ನೀರಿನಲ್ಲಿ ಹಾಕಿ.ಅನಂತರ ಆ ಉಪ್ಪು ನೀರನ್ನು ಮನೆಯ ಸುತ್ತಲೂ ಸಿಂಪಡಿಸಿ.ನೆನಪಿಡಿ ಆ ಉಪ್ಪು ನೀರು  ನಿಮ್ಮ  ಮನೆಯ  ಎಲ್ಲಾ ಮೂಲೆಯನ್ನು ತಲುಪಬೇಕು ಹಾಗೆ ಸಿಂಪಡಿಸಬೇಕು.

ಉಪ್ಪು  ನಿಮ್ಮ ಮನೆಯಲ್ಲಿರುವ  ನಕಾರಾತ್ಮಕತೆಯನ್ನು ತೊಲಗಿಸಿ  ನಿಮ್ಮ ಮನೆಗೆ ಮಳೆಗಾಲದಲ್ಲಿ ಬರುವ  ಕ್ರಿಮಿ ಕೀಟಗಳಿಂದ ರಕ್ಷಿಸಿ ಮನೆಯನ್ನು ಸ್ವಚ್ಛಗೊಳಿಸುತ್ತದೆ.

5.ಮೂರ್ತಿ.

ಶ್ರಾವಣ ಮಾಸದಲ್ಲಿ ಶಿವನ ಹೊಸ ಮೂರ್ತಿಯನ್ನು ಮನೆಗೆ  ತರುವುದು ಮಂಗಳಕರವೆಂದು ಭಾವಿಸಲಾಗಿದೆ. ಶಿವನ ಮೂರ್ತಿಯನ್ನು ಪೂರ್ವ ದಿಕ್ಕಿನಲ್ಲಿ ಗಣೇಶನ ವಿಗ್ರಹದ ಜೊತೆಗೆ ಸ್ಥಾಪಿಸಬೇಕು.ಶಿವನ ಮೂರ್ತಿಯನ್ನು   ಶ್ರಾವಣ ಸೋಮವಾರವೇ  ಮನೆಗೆ ತಂದು ಅಂದೇ ಸ್ಥಾಪಿಸಿದರೆ ಒಳ್ಳೆಯದು.

6. ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಡೆಗಟ್ಟಿ.

ಶ್ರಾವಣ ಮಾಸದಲ್ಲಿ ಆದಷ್ಟು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಡೆಗಟ್ಟಿ ಅಥವಾ ಧರಿಸದೇ ಇರುವುದು ಇನ್ನೂ ಉತ್ತಮ. ತೆಳು ಬಣ್ಣದ ಬಟ್ಟೆಗಳು ಮತ್ತು ಧನಾತ್ಮಕ ಬಣ್ಣಗಳಾದ ಹಸಿರು,ಬಿಳಿ ,ಹಳದಿ ಬಣ್ಣಗಳ ಬಟ್ಟೆಯನ್ನು ಧರಿಸುವುದು ಉತ್ತಮ.ಈ ಶ್ರಾವಣ ಪೂರ್ತಿ ಇದೆ ರೀತಿಯ ಬಟ್ಟೆಗಳನ್ನು ಧರಿಸಿ ಹಾಗೆ ಪ್ರತಿದಿನ ದೇವಸ್ಥಾನಕ್ಕೂ ಮರೆಯದೇ ಹೋಗಿ ದೇವರ  ದರ್ಶನ ಮಾದುವುದು ಇನ್ನೂ ಒಳ್ಳೆಯದು.

7.ಮನೆಯನ್ನು ಸ್ವಚ್ಛಗೊಳಿಸಿ.

ಶ್ರಾವಣ ಮಾಸದಲ್ಲಿ  ಪ್ರತಿದಿನ ದೇವಸ್ಥಾನಕ್ಕೆ ಹೋದರು ಸಹ ಮನೆಯಲ್ಲಿ ಚಿಕ್ಕದಾಗಿ  ಪೂಜೆಯನ್ನಾದರು  ಮಾಡಬೇಕು.ಅದಕ್ಕೂ ಮುಂಚೆ ಸಂಪೂರ್ಣವಾಗಿ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಡಿ.

8.ಸ್ವಸ್ತಿಕ.

ಸ್ವಸ್ತಿಕ ಚಿಹ್ನೆಯನ್ನು ಮನೆಗೆ ತನ್ನಿ ಅಥವಾ ನೀವೇ ಅದನ್ನು ಬರೆಯಿರಿ.ಅದು ಕೆಂಪು ಬಣ್ಣದಿಂದ ಬರೆಯಬೇಕು.ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಶ್ರಾವಣ ಮಾಸದಲ್ಲಿಯೇ ಬರೆಯಬೇಕು.ನಿಮ್ಮ ಮನೆಯಲ್ಲಿರುವ ಕಿಟಕಿ ಮತ್ತು ಬಾಗಿಲುಗಳನ್ನು ಆದಷ್ಟು ಹಗಲಿನ ಸಮಯದಲ್ಲಿ ತೆರೆದಿಡಿ,  ಮುಚ್ಛಬೇಡಿ.

8.ಶುಭ ಲಾಭ.

ಸ್ವಸ್ತಿಕ ಚಿಹ್ನೆಯನ್ನು ಬರೆದ ನಂತರ ಅದರ ಎರಡು ಬದಿಗಳಲ್ಲಿ ಅಂದರೆ ಅಕ್ಕ ಪಕ್ಕದಲ್ಲಿ ಶುಭ ಲಾಭ ಎಂದು ಬರೆಯಬೇಕು.ಇದಕ್ಕೆ ಕೆಂಪು ಬಣ್ಣದ ಕುಂಕುಮ, ಇಂಗಲೀಕ,ಅಥವಾ ರಥಸಂಧೂರ ವನ್ನು    ಬಳಸಿ ಬರೆದರೆ ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top