fbpx
ದೇವರು

18 ಅಮ್ಮನವರ ಶಕ್ತಿ ಪೀಠಗಳು ಹೇಗೆ ಹುಟ್ಟಿದವು ಮತ್ತು ಎಲ್ಲೆಲ್ಲಿವೆ ಸಂಪೂರ್ಣ ಮಾಹಿತಿ

18 ಅಷ್ಟ ದಶ ಶಕ್ತಿ ಪೀಠಗಳ ಬಗ್ಗೆ ಸಂಪೂರ್ಣ ಮಾಹಿತಿ.

ಹಿಂದೂ ಮತ ಸಂಪ್ರದಾಯದ ಪ್ರಕಾರ ಅತ್ಯಂತ ಹೆಚ್ಚು ಶ್ರದ್ದೆ,ಭಕ್ತಿಯಿಂದ, ಪೂಜೆಗಳನ್ನು ಸ್ವೀಕರಿಸುವ ಆದಿ ಪರಾ ಶಕ್ತಿ ರೂಪಗಳೇ ಶಕ್ತಿ ಪೀಠಗಳು.

ಭಾರತ ದೇಶದಲ್ಲೆಲ್ಲ ವಿಸ್ತರಿಸಿರುವ ಪೀಠಗಳಿಗೆ ಪ್ರಮುಖವಾಗಿ ಅಧಿ ದೇವತೆ ಗೌರಿ ಅಥವಾ ಪಾರ್ವತಿ. ಸಾಮರಸ್ಯಕ್ಕೆ ಮತ್ತು ಮಾಂಗಲ್ಯ ಭಾಗ್ಯಕ್ಕೆ ಆಕೆ ಪ್ರತಿರೂಪಳು. ಪಾರ್ವತಿ ದೇವಿಯ ಪ್ರತಿ ರೂಪ ದುರ್ಗಾ ದೇವಿ. ಶಕ್ತಿ ಶೌರ್ಯಕ್ಕೆ ಪ್ರತೀಕ ,ಮತ್ತೊಂದು ಪ್ರತಿರೂಪ ಮಹಾಕಾಳಿ ದುಷ್ಟ ಶಕ್ತಿ ಸಂಹಾರಕ್ಕೆ  ಪ್ರತೀಕ.ಇದಕ್ಕೆ ಸಂಭಂಧಪಟ್ಟಂತಹ ಪುರಾಣ ಕಥೆ ಇದು.

ಬ್ರಹ್ಮ ಕುಮಾರನಾದ  ದಕ್ಷ ಪ್ರಜಾಪತಿಗೆ 27 ಜನ ಹೆಣ್ಣುಮಕ್ಕಳು. ಇವರಲ್ಲಿ ದಾಕ್ಷಾಯಿಣಿಯು ಒಬ್ಬರು.ದಾಕ್ಷಾಯಿಣಿ ಪರಮೇಶ್ವರನನ್ನು ಮದುವೆ ಮಾಡಿಕೊಳ್ಳುತ್ತಾಳೆ.ಒಂದು ಸಾರಿ ಅಗ್ನಿದೇವರು ನಿರ್ವಹಿಸುತ್ತಿದ್ದ ಯಾಗಕ್ಕೆ ಬಂದ  ದಕ್ಷ ಪ್ರಜಾಪತಿಯನ್ನು ನೋಡಿ ಎಲ್ಲರೂ ಶಿವನನ್ನು ಹೊರತು ಪಡಿಸಿ ಉಳಿದವರೆಲ್ಲ ಎದ್ದು ನಿಂತು ಗೌರವ ನೀಡುತ್ತಾರೆ. ಇದನ್ನು ಗಮನಿಸಿದ ದಕ್ಷ ಪ್ರಜಾ ಪತಿಗಳು ಘಟನೆಯಿಂದ ತುಂಬಾ ಮುಜುಗರ ಪಡುತ್ತಾರೆ.

ಇದರಿಂದ ಅವಮಾನಿತರಾದ ದಕ್ಷರು,ದಕ್ಷರು  ನಿರ್ವಹಿಸುತ್ತಿದ್ದ ಯಾಗಕ್ಕೆ ಮಗಳಾದ ದಾಕ್ಷಾಯಿಣಿಯನ್ನು ಅಳಿಯನಾದ ಶಿವನನ್ನು  ಆಹ್ವಾನಿಸುವುದಿಲ್ಲ.ದಾಕ್ಷಾಯಿಣಿಯು ತಂದೆಯ ಆಹ್ವಾನವಿಲ್ಲದಿದ್ದರೂ ತವರು ಮನೆಯ ಮಮಕಾರದಿಂದ ,ವಿರೋಧವಿದ್ದರೂ ಯಾಗಕ್ಕೆ ಹೋಗಲು ತಯಾರಾಗುತ್ತಾಳೆ.ಯಾಗಕ್ಕೆ ಹೋದಾಗ ಅಲ್ಲಿ ಅಕ್ಕ ತಂಗಿಯರಾಗಲಿ,ತಾಯಿಯಿಂದ ಆಗಲಿ ಯಾರಿಂದಲೂ ಯಾವುದೇ ರೀತಿಯ ಗೌರವಗಳು ದೊರೆಯುವುದಿಲ್ಲ. ಇದಲ್ಲದೆ  ತಂದೆಯಾದ ದಕ್ಷನು, ತನ್ನ ಗಂಡನಾದ ಶಿವನನ್ನು ದೂಷಿಸುತ್ತಿರುವುದನ್ನು  ತಡೆಯಲಾಗದೆ ದಾಕ್ಷಾಯಿಣಿಯು ಆಕೆ ತನ್ನ ಬಲಗಾಲಿನ ಬೆಳಿನ ಘರ್ಷಣೆಯಿಂದ ಉದ್ಭವವಾದ ಬೆಂಕಿಯಿಂದ ದಾಕ್ಷಾಯಿಣಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.

ವಿಚಾರವನ್ನು ತಿಳಿದ ಪರಮೇಶ್ವರನು ಕೆಂಡಾ ಮಂಡಲನಾಗಿ ಜಟಾಜೂಟದಿಂದ (ಜೆಡೆಯಿಂದ) ಒಂದು ಕೂದಲನ್ನು ತೆಗೆದು ನೆಲಕ್ಕೆ ಅಪ್ಪಳಿಸಿದಾಗ ಅದರಿಂದ ಉದ್ಭವವಾದ ವೀರಭದ್ರನು, ದಕ್ಷನ ಯಾಗದ ಸ್ಥಳಕ್ಕೆ ಹೋಗಿ ದಕ್ಷನ ತಲೆಯನ್ನು ಕತ್ತರಿಸಿ ತಂದನು.ಅಲ್ಲಿಗೆ  ಹೋದ ಪರಮೇಶ್ವರನು ಅಗ್ನಿ ಜ್ವಾಲೆಯಲ್ಲಿ ಸುಟ್ಟು  ಹೋಗುತ್ತಿರುವ  ದಾಕ್ಷಾಯಿಣಿಯ ಮೃತ ದೇಹವನ್ನು ಎತ್ತಿಕೊಂಡು ಪ್ರಳಯ ಭಯಂಕರನಾಗಿ ರುದ್ರ ರೂಪದ ರೌದ್ರ ತಾಂಡವವನ್ನು ಮಾಡಿದನು. ಶಿವನ ರೌದ್ರ ತಾಂಡವದಿಂದ ಭಯಭೀತರಾದ ಪ್ರಜೆಗಳು, ದೇವಾನುದೇವತೆಗಳು ದಿಕ್ಪಾಲಕರು ಭಯ ಭೀತರಾಗಿ ವಿಷ್ಣುವನ್ನು ಬೇಡಿದರು ಕಾಪಾಡುವಂತೆ ,ಪ್ರಾರ್ಥನೆ ಮಾಡಿದರು.

ದಾಕ್ಷಾಯಿಣಿಯ ಮೃತ ದೇಹವೇ ಶಿವನ ಕೋಪಕ್ಕೆ ಕಾರಣವೆಂದು ತಿಳಿದ ವಿಷ್ಣುವು ಸುದರ್ಶನ ಚಕ್ರದಿಂದ ಮೃತದೇಹವನ್ನು ತುಂಡು  ತುಂಡಾಗಿ ಕತ್ತರಿಸಿದನು. ತುಂಡಾದ  ಶರೀರದ ಭಾಗಗಳು ಭಾರತ ಮತ್ತು ಶ್ರೀಲಂಕಾದ ಪ್ರದೇಶಗಳಲ್ಲಿ ಬಿದ್ದವು.  ಪ್ರದೇಶಗಳೇ ಶಕ್ತಿ ಪೀಠಗಳಾಗಿ ಮಾರ್ಪಡಾಗಿವೆ. ಎರಡು ದೇಶಗಳಲ್ಲಿರುವ 18 ಶಕ್ತಿ ಪೀಠಗಳನ್ನು ಅಷ್ಟ ದಶ ಶಕ್ತಿ ಪೀಠಗಳು ಎಂದು ಕರೆಯುತ್ತಾರೆ.ಆದರೆ ಕೆಲವರು 51 ಶಕ್ತಿ ಪೀಠಗಳು ಇವೆ ಎಂದು ,ಮತ್ತೆ ಕೆಲವರು 108 ಶಕ್ತಿ ಪೀಠಗಳು ಇವೆ ಎಂದು ವಾದ ಮಾಡುತ್ತಾರೆ. ಆದರೆ ಗುರು ಆದಿ ಶಂಕರಾಚಾರ್ಯರ ಶ್ಲೋಕದ ವಿರಚಿತದ ಆಧಾರದ ಮೇಲೆ 18 ಶಕ್ತಿ ಪೀಠಗಳ ಬಗ್ಗೆ ಇಲ್ಲಿ  ವಿವರಣೆ ಮಾಡಲಾಗಿದೆ.

ಲಂಕಾಯಾಂ ಶಾಂಕರೀ ದೇವಿ,ಕಾಮಾಕ್ಷಿ ಕಾಂಚಿಕಾಪುರೇ, ಪ್ರದ್ಯುಮ್ನೆ ಶುಂಖಳಾ ದೇವಿ,ಚಾಮುಂಡಿ ಕ್ರೌoಚಪಟ್ಟಣೆ, ಆಲಂಪುರೇ ಜೋಗುಳಾoಭೇ, ಶ್ರೀ ಶೈಲ ಭ್ರಮರಾಂಭಿಕ,ಕೊಲ್ಹಾಪುರೇ ಮಹಾಲಕ್ಷ್ಮೀ, ಮಾಹುರ್ಯೆ ಏಕವೀರಿಕಾ,ಉಜ್ಜೆಯ್ನಂ ಮಹಾಕಾಳಿ, ಪೀಠಿಕಾಯೆ ಪುರುಹೂತಿಕಾ, ಬಡನ್ನವೇ ಗಿರಿಜಾದೇವಿ,ಮಾಣಿಕ್ಯ ದಕ್ಷವಾಟಿಕಾ, ಹರಿಕ್ಷೇತ್ರೇ ಕಾಮರೂಪಿ, ಪ್ರಯಾಗೇ ಮಾಧವೇಶ್ವರಿ, ಜ್ವಾಲಾಯಾಂ ವೈಷ್ಣವಿ ದೇವಿ,  ಗಯಾ ಮಾಂಗಲ್ಯ ಗೌರಿಕಾ, ವಾರಾಣಾಸ್ಯಾಂ ವಿಶಾಲಾಕ್ಷಿ, ಕಾಶ್ಮೀರೇತು ಸರಸ್ವತಿ ,ಅಷ್ಟ ದಶ ಶಕ್ತಿ ಪೀಠಾಣಿ ಯೋಗಿಣಾ ಬವತು ದುರ್ಲಭಂ  ಸಾಯಂಾಲೇತು ಪಟೇನಿತ್ಯಂ ಸರ್ವಶತ್ರು ವಿನಾಶಾನಂ ,ಸರ್ವರೋಗಂ ಹರಂ ದಿವ್ಯಂ, ಸರ್ವ ಸಂಪತ್ತ ಕರಂ ಶುಭಂ”.

  ಶ್ಲೋಕದ ಪ್ರಕಾರ ಅಷ್ಟದಶ ಶಕ್ತಿ ಪೀಠಗಳ ವಿವರಣೆ

1.ಟ್ರಿಂಕೋಮಲೇ, ಶ್ರೀಲಂಕಾದಲ್ಲಿ ಇದೆ.ಬಿದ್ದ ಶರೀರದ ಭಾಗ ನಡುವಿನ ಭಾಗ (ಸೊಂಟ).ಆದಿ ಶಕ್ತಿ ರೂಪ ಶ್ರೀ ಶಂಕರಿ ದೇವಿ.

2.ಕಂಚಿ, ತಮಿಳುನಾಡಿನಲ್ಲಿ ಇದೆ.ಬಿದ್ದ ಶರೀರದ ಭಾಗ ಬೆನ್ನಿನ ಭಾಗ.ಆದಿ ಶಕ್ತಿ ರೂಪ ಶ್ರೀ  ಶಂಕರಿ ದೇವಿ.

3.ಪ್ರದ್ಯುಮ್ನಮ್ಪಶ್ಚಿಮ ಬಂಗಾಳದಲ್ಲಿ ಇದೆ. ಬಿದ್ದ ಶರೀರದ ಭಾಗ ಹೊಟ್ಟೆಯ ಭಾಗ.ಅದಿ ಶಕ್ತಿ ರೂಪ ಶ್ರೀ ಶುಂಖಳಾದೇವಿ.

4.ಮೈಸೂರು,ಕರ್ನಾಟಕದಲ್ಲಿ ಇದೆ. ಬಿದ್ದ ಶರೀರದ ಭಾಗ ಕೂದಲು. ಆದಿ ಶಕ್ತಿ ರೂಪ ಶ್ರೀ ಚಾಮುಂಡೇಶ್ವರಿ ದೇವಿ.

5.ಆಲಂಪುರ್,ಅಂದ್ರ ಪ್ರದೇಶದಲ್ಲಿ ಇದೆ.ಬಿದ್ದ ಶರೀರದ ಭಾಗ ಮೇಲಿನ ಹಲ್ಲು.ಆದಿ ಶಕ್ತಿ ರೂಪ ಜೋಗುಳಾo ದೇವಿ.

6.ಶ್ರೀ ಶೈಲ, ಆಂಧ್ರ  ಪ್ರದೇಶದಲ್ಲಿ ಇದೆ. ಬಿದ್ದ ಶರೀರದ ಭಾಗ ಕತ್ತಿನ ಭಾಗ.ಆದಿ ಶಕ್ತಿ ರೂಪ ಭ್ರಮರಾಂಭಿಕ ದೇವಿ.

7.ಕೊಲ್ಹಾಪುರ,ಮಹಾರಾಷ್ಟದಲ್ಲಿ ಇದೆ.ಬಿದ್ದ ಶರೀರದ ಭಾಗ ಕಣ್ಣುಗಳು.ಆದಿ ಶಕ್ತಿ ರೂಪ  ಶ್ರೀ ಮಹಾಲಕ್ಷ್ಮೀ ದೇವಿ.

8.ನಂದೇಡ್ , ಮಹಾರಾಷ್ಟ್ರದಲ್ಲಿ ಇದೆ.ಬಿದ್ದ ಶರೀರದ ಭಾಗ ಬಲಗೈ.ಆದಿ  ಶಕ್ತಿ ರೂಪ  ಶ್ರೀ ಏಕ ವೀರಿಕಾ ದೇವಿ.

9.ಉಜ್ಜಯಿನಿ, ಮಧ್ಯ ಪ್ರದೇಶದಲ್ಲಿ ಇದೆ.ಬಿದ್ದ ಶರೀರದ ಭಾಗ  ಮೇಲಿನ ತುಟಿಯ ಭಾಗ.ಆದಿ ಶಕ್ತಿ ರೂಪ  ಶ್ರೀ ಮಹಾಕಾಳಿ ದೇವಿ.

10 ಪೀಠಪುರಮ್,ಅಂದ್ರ ಪ್ರದೇಶದಲ್ಲಿ ಇದೆ.ಬಿದ್ದ ಶರೀರದ ಭಾಗ ಎಡಗೈ. ಆದಿ ಶಕ್ತಿರೂಪ ಪುರುಹೂತಿಕಾ ದೇವಿ.

11.ಜಾಜಪು,ಒರಿಸ್ಸಾ  ರಾಜ್ಯದಲ್ಲಿ ಇದೆ. ಬಿದ್ದ ಶರೀರದ ಭಾಗ ಹೊಕ್ಕಳಿನ ಭಾಗ.ಆದಿ ಶಕ್ತಿ ರೂಪ ಶ್ರೀ ಗಿರಿಜಾದೇವಿ.

12.ದ್ರಾಕ್ಷಾರಾಮಮ್, ಅಂದ್ರ ಪ್ರದೇಶದಲ್ಲಿ ಇದೆ. ಬಿದ್ದ ಶರೀರದ ಭಾಗ ಎಡ ಕೆನ್ನೆ.ಆದಿ ಶಕ್ತಿ ರೂಪ ಶ್ರೀ ಮಾಣಿಕ್ಯಂಭಾ ದೇವಿ.

13.ಗುವಾಹಾಟಿ, ಆಸ್ಸಾಂ ರಾಜ್ಯದಲ್ಲಿ ಇದೆ.ಬಿದ್ದ ಶರೀರದ ಭಾಗ ಯೋನಿ. ಆದಿ ಶಕ್ತಿ ರೂಪ ಕಾಮರೂಪಿಣಿ ದೇವಿ.

14.ಪ್ರಯಾಗ್, ಉತ್ತರ ಪ್ರದೇಶದಲ್ಲಿ ಇದೆ.ಬಿದ್ದ ಶರೀರದ ಭಾಗ ಬೆರಳುಗಳು.ಆದಿ ಶಕ್ತಿ ರೂಪ ಶ್ರೀ ಮಾಧವೇಶ್ವರಿ ದೇವಿ.

15.ಜ್ವಾಲಾ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಇದೆ.ಬಿದ್ದ ಶರೀರದ ಭಾಗ. ತಲೆ. ಆದಿ ಶಕ್ತಿ ರೂಪ ಶ್ರೀ ವೈಷ್ಣವಿ ದೇವಿ.

16.ಗಯಾ,ಬಿಹಾರ ರಾಜ್ಯದಲ್ಲಿ ಇದೆ. ಬಿದ್ದ ಶರೀರದ ಭಾಗ ಎದೆಯ ಭಾಗ. ಆದಿ ಶಕ್ತಿ ರೂಪ  ಶ್ರೀ ಸರ್ವಮಂಗಳಾ ದೇವಿ.

17.ವಾರಣಾಸಿ,ಉತ್ತರ ಪ್ರದೇಶದಲ್ಲಿ ಇದೆ.ಬಿದ್ದ ಶರೀರದ ಭಾಗ  ಕೈ ಮಣಿಕಟ್ಟಿನ ಭಾಗ. ಆದಿ ಶಕ್ತಿ ರೂಪ ಶ್ರೀ ವಿಶಾಲಾಕ್ಷಿ ದೇವಿ.

18.ಕಾಶ್ಮೀರ, ಬಿದ್ದ ಶರೀರದ ಭಾಗ  ಬಲಗೈ.ಆದಿ ಶಕ್ತಿ ರೂಪ  ಶ್ರೀ ಸರಸ್ವತಿ ದೇವಿ.

ಇವುಗಳಲ್ಲಿ ಕಾಮಕ್ಯ, ಗಯಾ,ಉಜ್ಜಯಿನಿಯ ಶಕ್ತಿ ಪೀಠಗಳು ಅತ್ಯಂತ ಶಕ್ತಿಶಾಲಿ ಪೀಠಗಳು ಎಂದು ಹೇಳುತ್ತಾರೆ. ಮೂರು  ಪೀಠಗಳು ಸೃಷ್ಟಿ,ಸ್ಥಿತಿ, ಲಯಕ್ಕೂ ಪ್ರತಿರೂಪಗಳು ಎಂದು ಹೇಳಲಾಗುತ್ತದೆ.ಕಾಮರೂಪಿ ದೇವಿ,ಸರ್ವಮಂಗಳಾ ದೇವಿ ಮತ್ತು ಮಂಗಳಗೌರೀ ದೇವಿಯೂ  ಮಹಾಕಾಳಿಯ  ಪ್ರತಿರೂಪಗಳಾಗಿವೆ.

ಅಷ್ಟಶಕ್ತಿ ಪೀಠಗಳಲ್ಲಿ ಕಂಚಿ ಕಾಮಾಕ್ಷಿ,ಮಧುರೈ ಮೀನಾಕ್ಷಿ,ಕಾಶಿ ವಿಶಾಲಾಕ್ಷಿ  ಅತ್ಯಂತ ಪ್ರಭಾವಶಾಲಿಯಾದವುಗಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top