fbpx
ಸಣ್ಣ ಕಥೆ

ಉರಿದುಕೊಳ್ಳುವವರು ಸುಟ್ಟು ಬುದ್ದಿಯಾಗ್ತಾರೆ- ಕಾಜಿಯ ನಾಚಿಕೆ.

ಕಾಜಿಯ ನಾಚಿಕೆ.

ಒಂದು ದಿನ ಅಕ್ಬರ್ ಬಾದುಶಹರು ಬೀರಬಲ್ಲನಿಗೆ ಯಾವುದೋ ಒಂದು ಕೆಲಸದಿಂದ ಸಂತೋಷಗೊಂಡು ಹೀಗೆ ಹೇಳಿದರು. ವಾಹ್, ಬೀರಬಲ್ಲ ನಿನ್ನ ಎಷ್ಟು ಹೊಗಳಿದರೂ ಕಡಿಮೆಯೇ.ನಿನ್ನ ಚಾತುರ್ಯ, ನಿನ್ನ ನ್ಯಾಯದಿಂದ ನಾವು ಅತ್ಯಂತ ಪ್ರಸನ್ನರಾಗಿದ್ದೇವೆ.
ಬೀರಬಲ್ಲ-ಅದು ನಿಮ್ಮ ಹಿರಿತನ ಮಹಾರಾಜರೇ.
ಅಕ್ಬರ್-ಹಾಗಲ್ಲ ,ಬೀರಬಲ್ಲ.ನೀನು ನಿಜವಾಗಿಯೂ ಎಲ್ಲರಿಗಿಂತ ಶ್ರೇಷ್ಠನೂ.ಆದ್ದರಿಂದ ನಾನು ಮನಸಾರೆ 200 ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡುವೆ.ನೀನು ಇದನ್ನು ಸ್ವೀಕರಿಸು.

ಬೀರಬಲ್ಲ-ತಮ್ಮ ಇಚ್ಚೆಯಂತೆಯೇ ಆಗಲಿ ಮಹಾರಾಜರೇ.

ಬೀರಬಲ್ಲನಿಗೆ ದೊರೆತ ಬಹುಮಾನದಿಂದ ಅವನ ಮೇಲೆ ಹೊಟ್ಟೆಕಿಚ್ಚು ಪಡುವವರಲ್ಲಿ ಮನಸ್ಸಿನಲ್ಲಿ ಕೋಲಾಹಲವಾಯಿತು.ಬೀರಬಲ್ಲನಿಗೆ ದೊರೆತ ಸನ್ಮಾನವನ್ನು ಕಂಡು ಹೊಟ್ಟೆಕಿಚ್ಚು ಪಡುವವರಲ್ಲಿ ಬಾದುಶಹನ ಹೆಂಡತಿಯ ಸೋದರ ಶೇರ್ಖಾನ ಮತ್ತು ಅವರ ಸಂಗಡಿಗರೊಂದಿಗೆ ಕಾಜಿ ಎಂಬ ಮತ್ತೊಬ್ಬನು ಇದ್ದ.ಬೀರಬಲ್ಲನನ್ನು ಸೋಲಿಸಿ ಬಾಯಿ ಮುಚ್ಚಿಸುವ ಆಸೆಯಿಂದ ಅವನು ಹೇಳಿದ ಮಹಾರಾಜರೇ ನಿಮ್ಮ ಈ ಮಂತ್ರಿ ಚತುರರಾಗಿದ್ದಾರೆ.

ಅಕ್ಬರ್-ಹ,ಹ,ಹ,ಹ, ಆದೇ ಸರಿ .
ಕಾಜಿ-ಆದರೆ ಮಹಾರಾಜರೇ ನಾನು ಇಂದು ಬೀರಬಲ್ಲನಿಗೆ ಒಂದು ಅತೀ ಸುಲಭವಾದ ಪ್ರಶ್ನೆ ಕೇಳುವೆ ಆದರೆ ಅದರ ಉತ್ತರ ಕೊಡಲು ಆತ ಶಕ್ತನಾಗಿದ್ದರೆ ಮಾತ್ರ ನಾನು ಆತನನ್ನು ಚತುರ ಎಂದು ಪರಿಗಣಿಸುವೆ.
ಅಕ್ಬರ್-ಹಾ ಆಗಲಿ ಕಾಜಿ ಬೇಕಾದ ಪ್ರಶ್ನೆ ಕೇಳು.ಆಗಲಿ,ಬಾದುಷಹರೇ. ಬೀರಬಲ್ಲ ಆತನ ಪತ್ನಿಯ ಕೈಯನ್ನು ದಿನಕ್ಕೆ ಎಷ್ಟು ಬಾರಿ ನೋಡ್ತಾನೆ.
ಅಕ್ಬರ್- ಹಮ್ಮು….
ಕಾಜಿ-ಹಾಗಾದರೆ ತನ್ನ ಪತ್ನಿಯ ಕೈಯಲ್ಲಿ ಎಷ್ಟು ಬಳೆಗಳಿವೆ ? ಈ ಪ್ರಶ್ನೆಗೆ ಅವನು ಸರಿಯಾದ ಉತ್ತರ ನೀಡಲಿ.
ಬೀರಬಲ್ಲನ ವಿರುದ್ಧ ಕಾಜಿಯ ಮೋನೋಭಾವದ ರೂಪಾಂತರ ವಿವಾದಕ್ಕೆ ಎಡಗೊಡದಿರಲಿ ಎನ್ನುವ ಉದ್ದೇಶದಿಂದ ಅಕ್ಬರ್ ಈ ರೀತಿ ಹೇಳಿದ.
ಅಕ್ಬರ್-ಹ ಹ ಹ ವಾಹ್ ಕಾಜಿ ತುಂಬಾ ಅದ್ಭುತವಾದ ಪ್ರಶ್ನೆ ಇದು.ಇದುವರೆಗೂ ನನಗೆ ನನ್ನ ಬೇಗಂ ಎಷ್ಟು ಬಳೆಗಳನ್ನು ಧರಿಸುತ್ತಾಳೆ ಎನ್ನುವುದು ನನಗೂ ತಿಳಿದಿಲ್ಲ.ಹ ,ಹ ,ಹ ಹ .ಎಂದು ಎಲ್ಲರೂ ನಗ ತೊಡಗಿದರು.

ಬೀರಬಲ್ಲ-ಮಾಹಾರಾಜರೇ ನಮ್ಮ ಕಾಜಿ ಸಾಯೇಬರು ಗಣಿತದಲ್ಲಿ ಅತ್ಯಂತ ನಿಪುಣರು.ಇದು ಎಲ್ಲರಿಗೂ ಗೊತ್ತು.ಮತ್ತೆ ಸದಾ ಅವರಿಗೆ ತಮ್ಮ ಗದ್ದದ ಮೇಲೆ ಕೈ ಸವರಿಕೊಂಡು ಇರುವ ಅಭ್ಯಾಸ ಇದೆ .ಆದ್ದರಿಂದ ಅವರ ಗಡ್ಡದಲ್ಲಿ ಎಷ್ಟು ಕೂದಲುಗಳಿವೆ ಇದೆ ಎಂಬುದು ಅವರಿಗೆ ಗೊತ್ತಿರಲೇ ಬೇಕಲ್ಲ.
ಕಾಜಿ-ಪ್ರಶ್ನೆ ನೆನಪಿದೆ ತಾನೇ ಬೀರಬಲ್ಲ.

ಬೀರಬಲ್ಲ-ಅದಕ್ಕೆ ಉತ್ತರ ನೀಡುತ್ತಿದ್ದೇನೆ ಕಾಜಿ ಸಾಯೇಬರೆ ನೋಡಿ ನಿಮ್ಮ ಗದ್ದದಲ್ಲಿ ಒಟ್ಟು ಎಷ್ಟು ಕೂದಲುಗಳಿವೆ ಅದರಲ್ಲಿ ಒಂದು ಸಾವಿರಕ್ಕೆ ಒಂದು ಅಂಶ ಆಗುವಷ್ಟು ಬಳೆಗಳು ನನ್ನ ಪತ್ನಿಯ ಕೈಯಲ್ಲಿ ಇವೆ. ಹ,ಹ, ಹ,ಹ, ವಾ,ವಾ ,ವಾ ಹ,ಹ, ಹ, ಎಂದು ಬೀರಬಲ್ಲನ ಈ ಉತ್ತರವನ್ನು ಆಲಿಸಿದ ಬಾದುಶಹರು ಮತ್ತು ಎಲ್ಲಾ ಆಸ್ತಾನಿಕರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರು ಮತ್ತು ಕಾಜಿಯದ್ದಾಯಿತು ಮೋಜು.ಇದೆ ರೀತಿಯ ಇನ್ನೊಂದು ಪ್ರಶ್ನೆ ಅಕ್ಬರ್ ಕೇಳಲು ಇಚ್ಛಿಸಿದ.ಒಂದು ವೇಳೆ ಬೀರಬಲ್ಲ ಉತ್ತರ ಕೊಟ್ಟರೆ ಮೋಜು ಅನಿಸುತ್ತೆ. ಕೊಡದಿದ್ದರೆ ಬೀರಬಲ್ಲ ಮೊದಲ ಬಾರಿಗೆ ನಿರುತ್ತರನಾಗುತ್ತಾನೆ.
‘ನಮ್ಮ ಗಾಜರಾದ ವೀಣೆ ನುಡಿದರೆ ನುಡಿಯಿತು,ನುಡಿಯದಿದ್ದರೆ ಮುರಿದು ತಿಂದರಾಯಿತು’ ಎಂದು ಅಕ್ಬರ್ ಹೇಳಿದ.

ಅಕ್ಬರ್-ಬೀರಬಲ್ಲ ನನ್ನ ಪೂರ್ಣ ಶರೀರದಲ್ಲಿ ರೋಮವಿದೆ.ಆದರೆ ನನ್ನ ಈ ಕೈಯ ಅಂಗೈಯಲ್ಲಿ ಮಾತ್ರ ರೋಮ ಯಾಕಿಲ್ಲ.
ಬೀರಬಲ್ಲ-ಈಗ ಬಾದುಶಹರು ಕೂಡ ತಮಾಷೆ ಮಾಡಲು ಉತ್ಸುಕರಾಗಿದ್ದಾರೆ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲ್ಲ.ಅದಕ್ಕೆ ಬೀರಬಲ್ಲನು ಹೇಳಿದ.ಏನು ಮಾತು ಅಂತ ಆಡ್ತಿದ್ದೀರಿ ತಾವು ತುಂಬಾ ದೊಡ್ಡವರು ಮತ್ತು ಪರೋಪಕಾರಿಯಾಗಿದ್ದೀರಿ. ಆಮೇಲೆ ತಮ್ಮ ಕೈಯಿಂದ ಒಬ್ಬನಲ್ಲ ಒಬ್ಬನಿಗೆ ಹಣ ಹಂಚಲು ಪಡುತ್ತೆ.ದಾನ ಅಂತ ಚಿನ್ನದ ನಾಣ್ಯ ಹಂಚಲು ಪಡುತ್ತೆ.ಈ ನಾಣ್ಯಗಳಿಂದ ಅಂಗೈಯಲ್ಲಿ ಆಗುವ ನಿರಂತರ ಘರ್ಷಣೆಯಿಂದ ನಿಮ್ಮ ಅಂಗೈಯಲ್ಲಿ ರೋಮಗಳು ಉದುರಿಹೋಗುತ್ತವೆ.ಹೀಗಿರುವಾಗ ತಮ್ಮ ಅಂಗೈಯಲ್ಲಿ ರೋಮವಿರೋದು ಹೇಗೆ ಸಾಧ್ಯ ಹೇಳಿ.

ಅಕ್ಬರ್-ಹಮ್ಮು ಇದನ್ನೆನ್ನೋ ನಾನು ಒಪ್ಪುತ್ತೇನೆ ಬೀರಬಲ್ಲ. ಆದರೆ ನೀನೆಲ್ಲಿ ಯಾರಿಗಾದರೂ ದಾನ ಕೊಡುತ್ತೀಯಾ ? ಆದರೆ ನಿನ್ನ ಅಂಗೈಯಲ್ಲಿ ರೋಮ ಯಾಕಿಲ್ಲ ?
ಬೀರಬಲ್ಲ-ನಿಮ್ಮ ಮಾತು ಅಕ್ಷರಶಃ ನಿಜ ಮಹಾರಾಜರೇ ನಾನು ಮೊದಲೇ ಹೇಳಿದಂತೆ ತಾವು ತಿಳಿದಿರುವವರು ಮತ್ತು ಪರೋಪಕಾರಿಯಾಗಿದ್ದೀರಿ.ಪದೇ ಪದೇ ತಾವು ಸಂತೋಷಗೊಂಡಾಗ ಇಂತಹ ಚಿನ್ನದ ನಾಣ್ಯ ನೀಡುತ್ತೀರಿ.ತಮ್ಮ ಅಂಗೈ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟು ಕೊಟ್ಟು ರೋಮಗಳು ಹೋಯಿತು, ಅದೇ ರೀತಿ ಬಹುಮಾನ ಪಡೆದು ಪಡೆದು ನನ್ನ ಅಂಗೈ ರೋಮ ಹೋಯಿತು.

ಅಕ್ಬರ್-ಹ ,ಹ,ಹ,ಹ, ನಿನ್ನ ಈ ಮಾತನ್ನು ಒಪ್ಪುತ್ತೇನೆ.ಆದರೆ ಬೀರಬಲ್ಲ ಆಸ್ತಾನದಲ್ಲಿ ಇಷ್ಟೊಂದು ಜನರಿದ್ದಾರೆ ಅವರ ಅಂಗೈಯಲ್ಲಿ ರೋಮ ಯಾಕಿಲ್ಲ.
ಈಗ ಸಿಕ್ಕಿಬಿದ್ದ,ಈಗ ಸಿಕ್ಕಿ ಹಾಕಿಕೊಂಡ ,ಈಗ ಏನು ಹೇಳ್ತಾನೆ ನೋಡೋಣ.
ಕಾಜಿ-ಮಹಾರಾಜರೇ ನಾನು ಇದನ್ನೇ ಕೇಳಬೇಕು ಎಂದುಕೊಂಡಿದ್ದೆ.
ಬೀರಬಲ್ಲ-ಕ್ಷಮಿಸಿ ಮಹಾರಾಜರೇ, ಆದರೆ ನನಗೀಗ ಸಂಕೋಚವಿಲ್ಲದೆ ಹೇಳಬೇಕಾಗುತ್ತದೆ.ತಾವು ಪ್ರತಿ ಸಲ ಸಂತೋಷಗೊಂಡು ನನಗೆ ಏನಾದರೂ ಬಹುಮಾನ ನೀಡುತ್ತೀರಿ ಆದರೆ ಈ ವಿಷಯ ಆಸ್ತಾನದಲ್ಲಿ ಯಾರಿಗೂ ಹಿಡಿಸುವುದಿಲ್ಲ.ಆದರೆ ತಾವು ನನಗೆ ಬಹುಮಾನ ಕೊಟ್ಟಾಗ.ಇವರು ಉರಿದು ತಮ್ಮ ಒಂದು ಅಂಗೈಗೆ ಇನ್ನೊಂದು ಅಂಗೈಯನ್ನು ಉಜ್ಜುತ್ತಾರೆ.ಆದ್ದರಿಂದಲೇ ಅವರ ಅಂಗೈ ರೋಮ ಉದುರುತ್ತೆ.

ಅಕ್ಬರ್-ಹ,ಹ,ಹ,ಹ,ಮೆಚ್ಚಿದೆ ಬೀರಬಲ್ಲ.
ಈ ಉತ್ತರದಿಂದ ಅಕ್ಬರನಿಗೆ ಮತ್ತೊಮ್ಮೆ ಬಹಳ ಸಂತೋಷವಾಯಿತು ಅವನಿಗೆ 50 ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟರು.ಉರಿ ಎಂದು ಅಂಗೈಗಳನ್ನು ತಿಕ್ಕ ತೊಡಗಿದರು ಹ,ಹ,ಹ,ಹ, ಎಂದು ನಗುತ್ತಿತ್ತು ಇಡೀ ಆಸ್ಥಾನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top