ಶ್ರಾವಣ ಮಾಸದ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ಈ 20 ಮಂಗಳಕರ ಮತ್ತು ಕುತೂಹಲಕಾರಿ ವಿಷಯಗಳು.
1.ಶ್ರಾವಣ ಮಾಸ.
ಈ ವರ್ಷ ಶ್ರಾವಣ ಮಾಸವು ಜುಲೈ 23 ನೇ ತಾರೀಖಿನಂದು ಪ್ರಾರಂಭವಾಗಿ ಆಗಸ್ಟ್ 20 ರಂದು ಕೊನೆಗೊಳ್ಳಲಿದೆ.ಈ ಮಾಸದಲ್ಲಿ ಅಧಿಕವಾಗಿ ಮಳೆಯಾಗಲಿದ್ದು ,ಹಿಂದೂಗಳಿಗೆ ಶ್ರಾವಣ ಮಾಸವು ಅತ್ಯಂತ ಪವಿತ್ರ ಮಾಸವಾಗಿದೆ.
2.ಜಗದೊಡೆಯ ಶಿವನಿಗೆ ಪ್ರಿಯ.
ಶ್ರಾವಣ ಮಾಸವನ್ನು ಭಾರತದ ಬೇರೆ ಭಾಗಗಳಲ್ಲಿ “ಸಾವನ್” ಎಂದು ಸಹ ಕರೆಯುತ್ತಾರೆ . ಮೂರು ಲೋಕಗಳ ಒಡೆಯನಾಗಿರುವ ಶಿವನಿಗೆ ಇದು ಅತ್ಯಂತ ಪ್ರಿಯವಾದ ಮಾಸವಾಗಿದ್ದು.ಇಂದು ನಾವು ಶ್ರಾವಣ ಮಾಸದ ಬಗ್ಗೆ ಅನೇಕ ಜನರಿಗೆ ಗೊತ್ತಿರದೇ ಇರೋ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ
3.ಸಮುದ್ರ ಮಥನ.
ತುಂಬಾ ಪ್ರಸಿದ್ದಿ ಪಡೆದಿರುವ ಈ ಸಮುದ್ರ ಮಂಥನ ನಡೆದಿದ್ದು ಇದೇ ಶ್ರಾವಣ ಮಾಸದಲ್ಲಿ. ಸಮುದ್ರವನ್ನು ಕಡೆಯುವಾಗ ವಿಷವು ಅಷ್ಟೇ ಅಲ್ಲದೆ ,ಅಮೃತವೂ ಸಹ ಉದ್ಭವಿಸಿತ್ತು. ಇದರ ಜೊತೆಗೆ ಇನ್ನೂ ಕೆಲವು ಅಂಶಗಳು ಸಹ ಉದ್ಭವಿಸಿದವು ಅವುಗಳಾದ ಚಂದ್ರ,ದೇವತೆಗಳ ಪಾನೀಯ,ಹಸು(ಗೋ ಮಾತೆ),ಕಾಮಧೇನು,ಲಕ್ಷ್ಮೀ ಸಮುದ್ರದಿಂದ ಹೊರಬಂದವು.
4.ಭಯಾನಕ ವಿಷ(ಹಾಲಹಲ).
ಶಿವನು ಆ ವಿಷವನ್ನು ಕುಡಿದು ಗಂಟಲಿನಲ್ಲಿ ಇಟ್ಟುಕೊಂಡ ಕಾರಣ ಶಿವನ ಕಂಠ ನೀಲಿಯಾಯಿತು. ಅದು ತುಂಬಾ ತೀಕ್ಷ್ಣವಾದ ಭಯಾನಕ ವಿಷ ವಾಗಿತ್ತು.ಇಡೀ ಪೃಥ್ವಿಯನ್ನೇ ನಾಶಪಡಿಸುವಂತಹ ತೀಕ್ಷ್ಣ ಮತ್ತು ಭಯಂಕರ ವಿಷವಾಗಿತ್ತು. ಆದ್ದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರು ಬಂತು.
6.ವಿಷದ ಪರಿಣಾಮ.
ಈ ಶ್ರಾವಣ ಮಾಸದಲ್ಲಿಯೇ ಶಿವನು ಈ ಅರ್ಧ ಚಂದ್ರಾಕೃತಿ ಹೊಂದಿರುವ ಚಂದ್ರನನ್ನು ತನ್ನ ಜಡೆಯಲ್ಲಿ.ಅಂದರೆ ತಲೆಯ ಮೇಲೆ ಅಲಂಕರಿಸುತ್ತಾನೆ. ಚಂದ್ರದ ತಂಪಾದ ಗುಣ,ಶೀತಲ ಮೇಲ್ಮೈ ವಾತಾವರಣ ಹಾಲಹಲದ ಪರಿಣಾಮವನ್ನು ತಗ್ಗಿಸಿತ್ತು.
7.ಶಿವನಿಗೆ ಏನೇನನ್ನು ಅರ್ಪಿಸಬೇಕು.
ಈ ಶ್ರಾವಣ ಮಾಸವೆಂದರೆ ವಿಶೇಷವಾಗಿ ಶಿವನಿಗೆ ಶ್ರೇಷ್ಠ ಆದ್ದರಿಂದ ಶಿವನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಹಾಲು,ಹೂವು (ನೀಲಿ ಬಣ್ಣದ ಹೂವುಗಳು),ವೀಳ್ಯದೆಲೆಯನ್ನು ಶಿವನ ದೇವಸ್ಥಾನದಲ್ಲಿ ಅರ್ಪಿಸಬೇಕು.ಈ ಮಾಸದಲ್ಲಿ ಅನೇಕ ಭಕ್ತಾದಿಗಳು ಶಿವನ ದೇವಸ್ಥಾನಕ್ಕೆ ಭಕ್ತಿಯಿಂದ ಭೇಟಿ ನೀಡಿ ಶಿವನನ್ನು ಪ್ರಾರ್ಥಿಸುತ್ತಾರೆ.
8.ಶ್ರಾವಣ ಮಾಸದ ಉಪವಾಸ ವ್ರತ.
ಈ ಮಾಸದಲ್ಲಿ ಜನಗಳು ಉಪವಾಸ,ವ್ರತಗಳನ್ನು ಭಕ್ತಿಯಿಂದ ಕೈಗೊಳ್ಳುತ್ತಾರೆ.ಅದರಲ್ಲೂ ವಿಶೇಷವಾಗಿ ಸೋಮವಾರ ವ್ರತವನ್ನು ,ಉಪವಾಸವನ್ನು ಕೈಗೊಂಡರೆ ಇನ್ನೂ ಒಳ್ಳೆಯದು ಶಿವನು ಪ್ರಸನ್ನನಾಗುತ್ತಾನೆ.ಈ ಮಾಸ ಉಪವಾಸ ವ್ರತಗಳನ್ನು ಕೈಗೊಂಡರೆ ನಿಮ್ಮ ಆಸೆ ಕನಸುಗಳು ಶೀಘ್ರವಾಗಿ ಈಡೇರುತ್ತವೆ.
9.ಕಠಿಣ ವ್ರತ ಅಥವಾ ಭಾಗಶಃ (ಅರ್ಧ).
ಯಾವ ರೀತಿಯ ಉಪವಾಸ ಕೈಗೊಂಡರೆ ಉತ್ತಮ ಎನ್ನುವ ಪ್ರಶ್ನೆ ಬಂದರೆ ಅದು ಭಕ್ತಾದಿಗಳಿಗೆ ಬಿಟ್ಟ ವಿಷಯ. ಅವರವರ ಅನುಕೂಲಕ್ಕೆ ತಕ್ಕಂತೆ ಕಠಿಣ ,ಭಾಗಶಃ ಅಥವಾ ಸಂಪೂರ್ಣ ಉಪವಾಸವನ್ನು ಕೈಗೊಳ್ಳಬಹುದು.
10.ಆರೋಗ್ಯ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.
ಕೆಲವು ಭಕ್ತಾದಿಗಳು (ಸಾಮಾನ್ಯವಾಗಿ ಮಹಿಳೆಯರು,ಹುಡುಗಿಯರು) ಈ ಉಪವಾಸ ವ್ರತವನ್ನು ಕೈಗೊಂಡರೆ ಜೀವನದಲ್ಲಿ ಅವರಿಗೆ ತಕ್ಕ ಜೀವನ ಸಂಗಾತಿಯನ್ನು ಪಡೆಯುವರು ಎಂಬ ನಂಬಿಕೆ ಇದೆ.ಇನ್ನೂ ಕೆಲವರು ಉತ್ತಮ ಆರೋಗ್ಯವನ್ನು ಪಡೆಯಲು ಸಮೃದ್ಧಿ ಮತ್ತು ಸುಖಕ್ಕಾಗಿಯೂ ಕೂಡ ಉಪವಾಸ ವ್ರತಗಳನ್ನು ಕೈಗೊಳ್ಳುತ್ತಾರೆ.
11.ಮಂಗಳ ಗೌರಿ ವ್ರತ ಮತ್ತು ಪೂಜೆ.
ಮಂಗಳ ಗೌರಿ ಪೂಜೆ ಮತ್ತು ವ್ರತವನ್ನು ಸಹ ಇದೇ ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.ಶ್ರಾವಣ ಮಂಗಳವಾರದ ದಿನ ಮಂಗಳ ಗೌರಿ ವ್ರತ ಕಥೆಯನ್ನು ಓದಿದರು,ಕಥೆಯನ್ನು ಕೇಳಿದರು ಪುಣ್ಯ ಲಭಿಸುತ್ತದೆ.ಮಂಗಳ ಗೌರಿಯು ಎಲ್ಲಾ ಸುಖ ,ಸಂತೋಷ ಕೊಟ್ಟು ತಮ್ಮ ಗಂಡಂದಿರಿಗೆ ದೀರ್ಘಾಯುಷ್ಯ ಕರುಣಿಸಿ,ಸಮಂಗಲಿಯಾಗಿ ಕಾಪಾಡುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.
12.ಒಳ್ಳೆಯದನ್ನು ಮಾತ್ರ ಕೇಳಿ.
ಶ್ರಾವಣ ಎನ್ನುವ ಶಬ್ದದ ಮೂಲ ಅರ್ಥವೇ ಕೇಳಿಸಿಕೊಳ್ಳುವುದು. ಈ ಮಾಸ ಪೂರ್ತಿ ಭಕ್ತಾದಿಗಳು ಒಳ್ಳೆಯದನ್ನೇ ಕೇಳಬೇಕು.ಭಕ್ತಿ ಗೀತೆಗಳು, ಹರಿ ಕಥೆಗಳನ್ನು, ಶಿವನ ಕುರಿತ ಹಾಡುಗಳನ್ನು ,ಶಿವನನ್ನು ಹೋಗಳುತ್ತಾ ಕಾಲ ಕಳೆಯಬೇಕು.
13.ಐದನೇ ತಿಂಗಳು.
ಶ್ರಾವಣ ಮಾಸವು ಹಿಂದೂಗಳ ಕ್ಯಾಲೆಂಡರ್ ಪ್ರಕಾರ ವರ್ಷ ಪ್ರಾರಂಭವಾದ ನಂತರ ಐದನೇ ತಿಂಗಳು ಬರುತ್ತದೆ.ಇಡೀ ಭಾರತ ದೇಶದಲ್ಲಿರುವ ಹಿಂದೂಗಳು ಈ ಮಾಸವನ್ನು ಹಬ್ಬವನ್ನಾಗಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಜನರು ದೇವರನ್ನು ಹೊಗಳುತ್ತಾ, ಭಜನೆಗಳನ್ನು ಮಾಡುತ್ತಾರೆ.
14.ಶ್ರಾವಣ ಎನ್ನುವ ಹೆಸರು ಹೇಗೆ ಬಂತು ?
ಶ್ರಾವಣ ಎನ್ನುವ ಹೆಸರು ಹೇಗೆ ಬಂತು ಎನ್ನುವುದಕ್ಕೆ ಅನೇಕ ಕಥೆಗಳಿವೆ.ಆದರೆ ಶ್ರಾವಣ ಅಂದರೆ ಮಳೆ ಎಂದರ್ಥ. ಈ ಮಾಸವು ಮಳೆಗಾಲಕ್ಕೆ ಸೀಮಿತವಾಗಿದ್ದು ಈ ಮಾಸದಲ್ಲಿ ವಿಶೇಷವಾಗಿ ಕೆಲವು ಹೂವುಗಳು ಹೊರ ಹರಳುತ್ತವೆ.
15.ನಕ್ಷತ್ರ ಸಮೂಹ.
ಶ್ರಾವಣ ಮಾಸದಲ್ಲಿ ಆಕಾಶದಲ್ಲಿ ನಕ್ಷತ್ರ ಸಮೂಹವು ಪೂರ್ಣ ಚಂದ್ರನ ದಿನ ಅಂದರೆ ಪೌರ್ಣಮಿಯ ದಿನ ರಾತ್ರಿ ಕಾಣಿಸಿಕೊಳ್ಳುತ್ತದೆ.ಇದು ನಮಗೆ ವಾಮನನ ಮೂರು ಹೆಜ್ಜೆ ಗುರುತುಗಳ ಹಾಗೆ ಗೋಚರಿಸುತ್ತದೆ. (ವಾಮನನು ವಿಷ್ಣುವಿನ ಐದನೇ ಅವತಾರ).
16.ಶ್ರವಣ ಕುಮಾರ.
ಆಕಾಶದಲ್ಲಿ ಪೌರ್ಣಮಿಯ ದಿನ ರಾತ್ರಿ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಹತ್ತಿರದಿಂದ ನೋಡಿದಾಗ ನಕ್ಷತ್ರ ಸಮೂಹವು ಶ್ರವಣ ಕುಮಾರನು ತನ್ನ ಕುರುಡಾಗಿರುವ ತಂದೆ ತಾಯಿಯರನ್ನು ತೀರ್ಥ ಯಾತ್ರೆಗೆ ಕರೆದುಕೊಂಡು ಹೋಗುತ್ತಿರುವ ಹಾಗೆ ಕಾಣಿಸುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಎಂಬ ಹೆಸರು ಬಂದಿದೆ.
17.ಋಷಿ.
ಶ್ರೀ ಮಾರ್ಕಂಡೇಯ ಮಹಾ ಋಷಿಗಳು ಮಹಾ ಮೃತ್ಯುಂಜಯ ಮಂತ್ರವನ್ನು ಇದೇ ಶ್ರಾವಣ ಮಾಸದಲ್ಲಿ ರಚಿಸಿದ್ದರು.ಇದುವರೆಗೂ ಸಹ ಈ ಮಂತ್ರ ಅತ್ಯಂತ ಪ್ರಭಾವ ಶಾಲಿಯಾಗಿದೆ.ಜೀವನದಲ್ಲಿ ಮನುಷ್ಯರನ್ನು ಸಾವಿನ ಸುಳಿಯಿಂದ ರಕ್ಷಿಸುತ್ತದೆ.
18.ದುರ್ಮರಣವನ್ನು ತಪ್ಪಿಸುತ್ತದೆ.
ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಪ್ರಭಾವಶಾಲಿಯಾಗಿದ್ದು. ಶಕ್ತಿಯುತ ಮಂತ್ರವಾಗಿದೆ.ಇದನ್ನು ಭಕ್ತಿಯಿಂದ ತಪ್ಪದೇ ಜಪಿಸಿದರೆ ಸಾವನ್ನು ಸಹ ಮುಂದೂಡಬಹುದಾಗಿದೆ.
19.ಶಿವ ನಾಶ ಮಾಡುವವನು.
ಮೂರು ಕಣ್ಣಿನ ದೇವನಾದ ಶಿವ.ತನ್ನ ಮೂರನೇ ಕಣ್ಣಿನಿಂದ ಇಡೀ ಈ ಜಗತ್ತನ್ನೇ ಯಾವಾಗ ಬೇಕಾದರೂ ನಾಶ ಮಾಡಬಹುದು.ಆದರೂ ಸಹ ನಮ್ಮೆಲ್ಲರನ್ನು ರಕ್ಷಿಸುವವನೂ ಅವನೇ ಆಗಿದ್ದಾನೆ. ಆದ್ದರಿಂದ ಶಿವನಿಗೆ ಪೂಜೆ,ಪ್ರಾರ್ಥನೆಯನ್ನು ಭಕ್ತಿ ಭಾವದಿಂದ ಮಾಡಿದರೆ ಮೋಕ್ಷವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇದೆ.
20.ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ.
ಈ ಶ್ರಾವಣ ಮಾಸವನ್ನು ತಮಿಳು ಭಾಷೆಯಲ್ಲಿ “ಅವನಿ” ಎಂದು ಕರೆಯುತ್ತಾರೆ.ಶ್ರಾವಣ ಮಾಸ ಶುರುವಾದ ತಕ್ಷಣ ಸೂರ್ಯನು ಸಿಂಹರಾಶಿಗೆ ಪ್ರವೇಶಿಸುತ್ತಾನೆ.ಈ ಮಾಸದ ಪ್ರತಿ ದಿನವೂ ಸಹ ಅದರದ್ದೇ ಆದ ಮಹತ್ವವನ್ನು ಹೊಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
