fbpx
ಸಾಧನೆ

ಎಲ್ಲಾ ಕಳೆದು ಕೊಂಡು ಮತ್ತೆ ಜೀವನವನ್ನ ‘0’ ಇಂದ ಶುರು ಮಾಡಿದವಳ ಕಥೆ

ಎಲ್ಲಾ ಕಳೆದು ಕೊಂಡು ಮತ್ತೆ ಜೀವನವನ್ನ ‘0 ‘ ಇಂದ ಶುರು ಮಾಡಿದವಳ ಕಥೆ

ಆಕೆ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಬೆಳೆದವಳು ಆಕೆಯ ತಂದೆಯ ಬ್ಯುಸಿನೆಸ್ಸ್ ಬೆಲೆಬಾಳುವ ಲೋಹದ ವ್ಯಾಪಾರಿ
ಆದರೆ ದುರಾದೃಷ್ಟವಶಾತ್ 7 ನೇ ವರ್ಷ ಇರುವಾಗಲೇ ಅವಳ ತಂದೆಯ ವ್ಯಾಪಾರ ಸಂಪೂರ್ಣವಾಗಿ ಮುಳುಗಿ ಹೋಯ್ತು .

ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಆಕೆಯನ್ನು ಹತ್ತಿರದ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು , ಕೆಲವು ತಿಂಗಳುಗಳ ನಂತರ ಆಕೆ ಮರಳಿ ಮನೆಗೆ ಬಂದಾಗ ಅವರ ಮನೆಯ ಕಾರ್ ,ಸಾಮಾನು , ಬಟ್ಟೆ ಬರೆ ಏನು ಇರಲಿಲ್ಲ ಎಲ್ಲವನ್ನು ಸಾಲಗಾರರು ತೆಗೆದುಕೊಂಡು ಹೋಗಿಬಿಟ್ಟಿದ್ದರು ,ಉಳಿದವನ್ನು ಮನೆಯ ಖರ್ಚಿಗಾಗಿ ಅವರ ತಂದೆ ತಾಯಿ ಮಾರಾಟ ಮಾಡಿದ್ದರು ,ಆಕೆಗೆ ನಡೆದದ್ದು ಅರ್ಥವೇ ಆಗಿರಲಿಲ್ಲ .

ರಾಜ ಕುಮಾರಿಯಂತೆ ಬದುಕಿದ್ದವಳು ಬರಿಗಾಲಿನಲ್ಲಿ ನಡೆಯುವಂತಾಗಿತ್ತು , ಒಂದು ದಿನ ಪಾರ್ಕ್ ನಲ್ಲಿ ಆಟ ಆಡುವ ಸಂದರ್ಭದಲ್ಲಿ ಮಕ್ಕಳು ಕೊಳಚೆಯಲ್ಲಿ ಬರಿಗಾಲಿನಲ್ಲಿ , ಹರಿದ ಬಟ್ಟೆ ತೊಟ್ಟು ಆಡುತ್ತಿದ್ದನ್ನು ಕಂಡು ಅವಳು ತೀರ್ಮಾನ ಮಾಡಿದಳು ಮುಂದೊಂದು ದಿನ ನಾನು ಕಲಾವಿದೆಯಾಗಿ ಬಹಳ ಎತ್ತರಕ್ಕೆ ಬೆಳೆದ ಮೇಲೆ ಈ ಮಕ್ಕಳಿಗೆ ಏನಾದರೂ ಮಾಡಬೇಕೆಂದು .

ಅವಳು 8 ವರ್ಷದವಳಿರುವಾಗ ಹಾಡನ್ನು ತಾನೇ ಬರೆದು ,ಹಾಡಲು ಶುರು ಮಾಡಿದಳು , 10 ನೇ ವಯಸ್ಸಿನಲ್ಲಿ ಹಾಡಲು ಶುರು ಮಾಡಿದಾಗ ಎಲ್ಲರು ಮೇಕೆಯ ಹಾಗೆ ಹಾಡುತ್ತಾಳೆ ಎಂದು ಗೇಲಿ ಮಾಡಿ ನಕ್ಕರು ಅವಳು ಬೇಜಾರು ಪಟ್ಟುಕೊಳ್ಳಲಿಲ್ಲ .

ಕಷ್ಟ ಪಟ್ಟು ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದಳು ಆಕೆಯ ಮೊದಲು ಎರಡು ಆಲ್ಬಮ್ ಗಳು ಸೋತು ಸುಣ್ಣವಾದವು ,ಮುಂದಿನ ಬಾರಿ ಚಾನ್ಸ್ ಗಿಟ್ಟಿಸಿಕೊಳ್ಳಲು ಬಹಳ ಕಷ್ಟವೇ ಆಗಿ ಹೋಯ್ತು .


ಹಾಗೋ ಹೀಗೋ ಆಕೆಯ ಮೂರನೆಯ ಆಲ್ಬಮ್ ಜನಪ್ರಿಯ ಗೊಂಡಿತ್ತು , ಇದಾಗಿದ್ದೆ ತಡ ಆಕೆ ಅಂದುಕೊಂಡಂತೆ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿದಳು  ಆಗ ಅವಳಿಗೆ ವಯಸ್ಸು ಕೇವಲ 18 , ಈ ಸಂಸ್ಥೆ ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಎಷ್ಟೋ ಬಡ ಮಕ್ಕಳಿಗೆ ಊಟ ,ವಸತಿ ಮತ್ತು ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದೆ.

ನೀವು ಇಷ್ಟು ಹೊತ್ತು ಓದಿದ ಕಥೆ ಖ್ಯಾತ ಪಾಪ್ ತಾರೆ ಶಕೀರಾ ಅವರದ್ದು , ಈ ಕಥೆಯಿಂದ ನಮಗೆ ತಿಳಿದು ಬರುವ ನೀತಿ ಏನೆಂದರೆ ಕೆಳಗೆ ಬೀಳುವುದು ಸಹಜ ಮತ್ತೆ ಹೇಗೆ ನಾವು ಎದ್ದು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ .

ನೀವು ಏನಂತೀರಾ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹೇಳಿ ಮತ್ತು ನಮ್ಮ ಫೇಸ್ ಬುಕ್ ಪುಟ fb.com/Aralikattez ಲೈಕ್ ಮಾಡೋಕೆ ಮರೆಯಬೇಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top