fbpx
ದೇವರು

ಸಿರಿ ಸಂಪತ್ತು ಒದಗಿಬರಲು ಶ್ರೀ ಮಹಾಲಕ್ಷ್ಮೀಯನ್ನು ಒಲಿಸಿಕೊಳ್ಳಲು 5 ಸೂತ್ರಗಳು.

ಸಿರಿ ಸಂಪತ್ತು ಒದಗಿಬರಲು ಶ್ರೀ ಮಹಾಲಕ್ಷ್ಮೀ ಹೇಳಿದ 5 ಸೂತ್ರಗಳು.

ಸಿರಿ ಸಂಪತ್ತು ಬರಬೇಕಾದರೆ ಶ್ರೀ ಮಹಾಲಕ್ಷ್ಮೀ ಹೇಳಿದ 5 ಸೂತ್ರಗಳು ಇವು.ಶ್ರೀ ಮಹಾಲಕ್ಷ್ಮೀ ಎಲ್ಲಾ ಲೋಕಗಳಿಗೂ ಸರ್ವ ಮಂಗಳೇ. ಭಕ್ತರು ಕೋರಿದ ಕೋರಿಕೆಗಳನ್ನು ಈಡೇರಿಸುವ ಕಲ್ಪವಲ್ಲಿ ಆಕೆ.ಅಲ್ಲದೆ ದಾರಿದ್ರ್ಯನಾಶಿನಿ ಭಾಗ್ಯಲಕ್ಷ್ಮೀ.

ಶ್ರೀ ಮಹಾಲಕ್ಷ್ಮೀಯನ್ನು ಮದುವೆಯಾಗಲು ಶ್ರೀ ಮಹಾವಿಷ್ಣು ಅನೇಕ ಅವತಾರಗಳನ್ನು ತಾಳಿ ಅವಳನ್ನು ಒರಿಸಿದನಂತೆ ಕಲಿಯುಗದಲ್ಲಿ ಶ್ರೀ ವೆಂಕೆಟೇಶ್ವರನಾಗಿ ಆಕೆಯನ್ನು ಮದುವೆಯಾಗಿ.ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂದು ಹೆಸರು ಪಡೆದ.

ಆದರೆ ಪೂರ್ವದಲ್ಲಿ ಒಂದಾನೊಂದು ದಿನ ಭೂ ಲೋಕದಲ್ಲಿ ಸಂಪೂರ್ಣವಾಗಿ ದಾರಿದ್ರ್ಯ ಬೆಳೆದು ತಾಂಡವ ಮಾಡುತ್ತಿತ್ತಂತೆ.ಸರ್ವರು ದಾರಿದ್ರ್ಯ  ಪೀಡಿತರಾಗಿ ರೋಧಿಸುತ್ತಾ ಶ್ರೀ ಮಹಾವಿಷ್ಣುವಿನಲ್ಲಿಗೆ ಹೋಗಿ ಅವರ ಕಷ್ಟಗಳಿಗೆ, ದಾರಿದ್ರ್ಯಗಳಿಗೆ ಉಪಾಯ,ಪರಿಹಾರವನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಶ್ರೀ ಮಹಾವಿಷ್ಣುವು ಮಹಾಲಕ್ಷ್ಮೀಯ ಬಗ್ಗೆ 5 ಸೂತ್ರಗಳನ್ನು ಹೇಳಿದನಂತೆ.

ಶ್ರೀ ಮಹಾಲಕ್ಷ್ಮೀಯ ಸಂಪೂರ್ಣ ಕೃಪಾ ಕಟಾಕ್ಷ  ಹೊಂದಬೇಕು ಅಂದರೆ ಸಿರಿ ಸಂಪತ್ತು ನಿಮ್ಮದಾಗಬೇಕು ಎಂದರೆ ಈ 5 ಸೂತ್ರಗಳನ್ನು ತಪ್ಪದೇ ಎಲ್ಲರೂ ಪಾಲಿಸಬೇಕೆಂದು ಹೇಳಲಾಗಿದೆ.ಇದು ನಮ್ಮ ಧರ್ಮ,ಸಂಪ್ರದಾಯಗಳಲ್ಲಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಶಾಸ್ತ್ರ ಅಂದರೆ ತಪ್ಪದೆ ಪಾಲಿಸತಕ್ಕದ್ದು ಅಂತ ಅಲ್ಲವೇ  ? ಹೀಗಿದ್ದಾಗ ಅವುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಅವುಗಳನ್ನು  ಶ್ರೀ ಮಹಾಲಕ್ಷ್ಮೀಯ ಕೃಪಾ ಕಟಾಕ್ಷ ಆಗುತ್ತದೆ ಎಂದು ಅರ್ಥ.ಬನ್ನಿ  ಈ ಐದು ಸೂತ್ರಗಳನ್ನು ತಿಳಿದುಕೊಳ್ಳೋಣ

1.ದೀಪ ಬೆಳಗಿಸಿ.

ಪ್ರಾತಃಕಾಲ ಹಾಗೂ ಸಾಯಂಕಾಲದ ಸಮಯದಲ್ಲಿ ಹಸುವಿನ ತುಪ್ಪದ ದೀಪ ಬೆಳಗಬೇಕು.ಹೀಗೆ ಮಾಡಿದರೆ ದಾರಿದ್ರ್ಯಗಳು,ಸಮಸ್ಯೆಗಳು, ತೊಲಗಿ ಜೀವನದಲ್ಲಿ ಆರ್ಥಿಕವಾಗಿ ಬೆಳಕು ಪಸರಿಸುತ್ತದೆ.

2.ಮೂಕ ಪ್ರಾಣಿಗಳಿಗೆ ಆಹಾರ ಕೊಡಿ.

ಸಮಸ್ಯೆಗಳಿಂದ ಕಿರಿಕಿರಿ ಉಂಟಾಗುತ್ತಾ ಇದ್ದರೆ.ಬಾಯಿ ಇಲ್ಲದ ಅಂದರೆ ಮಾತನಾಡಲು ಆಗದ ಮೂಕ ಪ್ರಾಣಿಗಳಿಗೆ ಪ್ರತಿದಿನ ಯತಾಃಶಕ್ತಿ ಏನನ್ನಾದರೂ  ಆಹಾರವಾಗಿ ತಿನ್ನಲು  ಕೊಡಬೇಕು.ಅದರಲ್ಲೂ ಆಕಳು,ಕರುಗಳು ಅಥವಾ ನಾಯಿಗೆ ಆಹಾರ ಕೊಡಿ.ಹೀಗೆ ಇಂತಹ ಮೂಕ ಪ್ರಾಣಿಗಳಿಗೆ ಏನನ್ನಾದರೂ ತಿನ್ನಲು ಕೊಟ್ಟರೆ ಸಾಕು ಶ್ರೀ ಮಹಾಲಕ್ಷ್ಮೀ ಶೀಘ್ರವಾಗಿ ಕರುಣಿಸುತ್ತಾಳೆ ಎಂದು ತಿಳಿಸಿದ್ದಾರೆ ಶ್ರೀ ಮಹಾವಿಷ್ಣು .

3.ತುಳಸಿ.

ಪ್ರತಿ ಮನೆಯಲ್ಲಿಯೂ ಸಹ  ಮನೆಯ ಮುಂದೆ ತುಳಸಿ ಗಿಡ ತಪ್ಪದೇ ಇರಲೇಬೇಕು.ಇನ್ನೂ ಶ್ರೀ ತುಳಸಿಯ ಮುಂದೆ ನಿತ್ಯ ಶುಭ್ರಗೊಳಿಸಿ ರಂಗೋಲಿಯನ್ನು ಇಟ್ಟು ಪ್ರಾತಃಕಾಲ ಹಾಗೂ ಸಾಯಂಕಾಲ ದೀಪವನ್ನು ಬಳಸಿ ಪ್ರದಕ್ಷಿಣೆಯನ್ನು ಸಲ್ಲಿಸಬೇಕು.ಅಂತಹ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀ ನೆಲೆಸಿ ಧನಕನಕವನ್ನು ಸುರಿಸುತ್ತಾಳೆ.ಹಣದ ಕೊರತೆಯನ್ನು ಕಡಿಮೆ ಗೊಳಿಸುತ್ತಾಳೆ

4.ರಂಗೋಲಿ.

ಮನೆಯ ಮುಖ್ಯ ದ್ವಾರದ ಮುಂದೆ ಪ್ರತಿದಿನ ಬೆಳ್ಳಗ್ಗೆ ನಿತ್ಯ ತಪ್ಪದೆ ಶುಭ್ರ ಗೊಳಿಸಿ.ಹೊಸಿಲಿನ ಅಕ್ಕಪಕ್ಕದಲ್ಲಿ ಶುಭ್ರವಾಗಿ ಇಟ್ಟುಕೊಂಡು ಅದಕ್ಕೆ ಪ್ರತಿದಿನ ಶುಚಿಗೊಳಿಸಿ ರಂಗೋಲಿಯನ್ನು ಹಾಕಬೇಕು.

5.ಶುಚಿಯಾಗಿ ಇಟ್ಟುಕೊಳ್ಳಿ.

ಮನೆಯ ಒಳಗೆ ಶುಭ್ರಗೊಳಿಸಿ ಕಸ ಗುಡಿಸಿ , ನೆಲ ವರೆಸಿ ಸುಮಂಗಲಿಯರು ನಂತರ ದಿನ  ನಿತ್ಯದ ಕಾರ್ಯಗಳನ್ನು ಪ್ರಾರಂಭಿಸಬೇಕು. ಹೀಗೆ ಮಾಡಿದರೆ ಮಹಾಲಕ್ಷ್ಮೀ ಸುಪ್ರೀತಳಾಗಿ, ಅನುಗ್ರಹಿಸಿ ಕರುಣಿಸುತ್ತಾಳೆ.

ಅಂತೆಯೇ ನಾವು ಶ್ರೀ ಮಹಾಲಕ್ಷ್ಮೀಯನ್ನು ಗಣಪತಿಯಯೊಂದಿಗೆ ಆಗಲಿ ಅಥವಾ ಪತಿ  ಸಮೇತ ಅಂದರೆ ಶ್ರೀ ಮಹಾವಿಷ್ಣುವಿನೊಂದಿಗೆ ಇರುವ ಶ್ರೀ ಮಹಾಲಕ್ಷ್ಮೀಯನ್ನು ಪೂಜಿಸಿಬೇಕು.ಹೀಗೆ ಮಾಡಿದರೆ  ಪ್ರತಿದಿನ ಆ ತಾಯಿ ಕಣ್ಣು ತೆರೆದು ನಮ್ಮನ್ನು ಅನುಗ್ರಹಿಸುತ್ತಾಳೆ.ತನ್ನ ಕರುಣಾ  ಕೃಪಾ ಕಟಾಕ್ಷದಿಂದ ಆ ಮನೆಯನ್ನು ಸಿರಿ ಸಂಪತ್ತಿನಿಂದ ತೂಗುತ್ತಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top