fbpx
ಸಾಧನೆ

ಒಂದು ಕಾಲದಲ್ಲಿ 35 ರೂಪಾಯಿಗಾಗಿ ಕೂಲಿ ಮಾಡುತ್ತಿದ್ದ 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಮ್ ಇಂಡಿಯಾ ಆಟಗಾರ.

ಒಂದು ಕಾಲದಲ್ಲಿ 35 ರೂಪಾಯಿಗಾಗಿ ಕೂಲಿ ಮಾಡುತ್ತಿದ್ದ 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಮ್ ಇಂಡಿಯಾ ಆಟಗಾರ.

ಟೀಮ್ ಇಂಡಿಯಾದ ಎಲೆ ಮರೆಕಾಯಿಯಾಗಿ ಮಿಂಚಿದ ಆಟಗಾರ ಗುಜರಾತ್​ನ ಮುನಾಫ್​ ಪಟೇಲ್​. ಮುಖ್ಯವಾಗಿ 2011 ವಿಶ್ವಕಪ್ ಮ್ಯಾಚ್‌ಗಳನ್ನು ನೋಡಿದವರಿಗೆ ಮುನಾಫ್ ಪಟೇಲ್ ಸದಾಕಾಲ ನೆನಪಿರುತ್ತಾರೆ. ಆತ ಆ ಪಂದ್ಯಾವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬೌಲಿಂಗ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದ. ಇದರಿಂದ ಭಾರತಕ್ಕೆ ವಿಶ್ವಕಪ್ ಒಲಿದಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಗಾಯದ ಕಾರಣದಿಂದಾಗಿ ಮುನಾಫ್ ಪಟೇಲ್ ತಂಡದಿಂದ ದೂರವಾದರು.

ಗುಜರಾತ್‘​ನ ಇಖಾರ್​ ಎಂಬ ಸಣ್ಣ ಹಳ್ಳಿಯ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು ಮುನಾಫ್​. ಅವರ ಕುಂಟುಂಬದಲ್ಲಿ ಬಡತನ ತಾಂಡವ ಆಡುತ್ತಿತ್ತು. ಆತನ ತಂದೆ ಒಬ್ಬ ಕೂಲಿ ಕಾರ್ಮಿಕ ಅವರು ದಿನಕ್ಕೆ ರೂ.7 ಕೂಲಿ ಪಡೆಯುತ್ತಿದ್ದರು. ಈ ಹಣದಿಂದ ಸಂಸಾರ ನೆಡೆಸುಡುವುದು ತುಂಬಾ ಕಷ್ಟವಾಗಿದ್ದರಿಂದ ಮುನಾಫ್ ಕೂಡ ಸ್ಥಳೀಯ ಫ್ಯಾಕ್ಟಾರಿಯೊಂದಕ್ಕೆ ಕೂಲಿಗೆ ಸೇರಿಕೊಂಡರು. ಅಲ್ಲಿ ಅವರಿಗೆ 35 ರೂಪಾಯಿ ಕೂಲಿ ಕೊಡುತ್ತಿದ್ದರು.

ಮನೆಯಲ್ಲಿ ಕ್ರಿಕೆಟ್​ ಆಡುವಂತ ವಾತಾವರಣವಿಲ್ಲದಿದ್ದರೂ ಮುನಾಫ್​ ಆಗಾಗ ಸ್ನೇಹಿತರ ಜೊತೆ ಕ್ರಿಕೆಟ್​ ಆಡುತ್ತಿದ್ದರು.ಅವರು ಬಾಲ್​ ಹಾಕುತ್ತಿದ್ದ ವೇಗಕ್ಕೆ ಅವರ ಊರಿನಲ್ಲೇ ಯಾರು ಅವರ ಎಸೆತಗಳನ್ನು ಎದುರಿಸುತ್ತಿರಲಿಲ್ಲವಂತೆ.ಮುನಾಫ್ ಪಟೇಲ್‌ಗೆ ಯೂಸೂಫ್ ಎಂಬ ಸ್ನೇಹಿತ ಇದ್ದ. ಆತನೇ ಮುನಾಫ್‌ಗೆ ಕ್ರಿಕೆಟ್ ಆಡುವವಂತೆ ಪ್ರೋತ್ಸಾಹಿಸುತ್ತಿದ್ದ. ಆತ ಮುನಾಫ್‌ಗೆ ಕ್ರಿಕೆಟ್ ಆಡಲು ಬೇಕಿದ್ದ ಶೂ ಸಹ ಕೊಡಿಸಿದ್ದ.

ಭಾರತದ ಮಾಜಿಆಟಗಾರ ಕಿರಣ್ ಮೋರೆ ಮುನಾಫ್​ ಪಟೇಲ್​ ರನ್ನು ನೋಡಿ. ಒಳ್ಳೆ ಅಭ್ಯಾಸ ನಡೆಸುವಂತೆ ಹೇಳಿ, ತಮ್ಮದೇ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡಿದರು, ಕೊನೆಗೆ ಎಂಆರ್​ಎಫ್​ ಪೇಸ್​ ಫೌಂಡೇಶನ್‘​ಗೆ ಸೇರಿಸಿದರು. ಅಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್​ ಇಂಡಿಯಾಗೆ ಆಯ್ಕೆಯಾದರು.ಟೀಮ್ ಇಂಡಿಯಾ ಆಡಿದ ಅನೇಕ ಪಂದ್ಯಗಳಲ್ಲಿ ಗೆಲುವಿಗೆ ಕಾರಣವಾಗಿದ್ದರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟೆಲ್ಲಾ ದೊಡ್ಡ ಸ್ಟಾರ್ ಆಗಿ ಹೆಸರು ಮಾಡಿರುವ ಮುನಾಫ್ ಈಗಲೂ ತನ್ನ ಹಳ್ಳಿಯಲ್ಲೇ ವಾಸವಾಗಿದ್ದಾನೆ. ಅಷ್ಟೇ ಅಲ್ಲದೇ ಅಲ್ಲಿನ ಉತ್ಸಾಹಿ ಯುವಕರಿಗೆ ಕ್ರಿಕೆಟ್‌ಗಾಗಿ ಸಹಾಯ ಮಾಡುತ್ತಿದ್ದಾನೆ. ಅವರಿಗೆ ಅಗತ್ಯವಾದ ಕ್ರೀಡಾ ಸಾಮಗ್ರಿಯನ್ನು ನೀಡುತ್ತಿದ್ದಾನೆ. ಇದು ಮುನಾಫ್ ಅವರಲ್ಲಿನ ದೊಡ್ಡತನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top