ಅತಿಯಾಸೆಯ ಬ್ರಾಹ್ಮಣರಿಗೆ ತಕ್ಕ ಪಾಠ ಕಲಿಸಿದ ತೆನಾಲಿರಾಮ.
ರಾಜ ಕೃಷ್ಣದೇವರಾಯನ ತಾಯಿ ಸಾವಿನ ಅಂಚಿನಲ್ಲಿದ್ದರು.ಬ್ರಾಹ್ಮಣರಿಗೆ ಮಾವಿನ ಹಣ್ಣುಗಳ್ಳನು ದಾನವಾಗಿ ಕೊಡುವುದು ಅವಳ ಕೊನೆಯ ಆಸೆಯಾಗಿತ್ತು.ಆದರೆ ಆಗ ಮಾವಿನ ಕಾಲವಾಗಿರಲಿಲ್ಲ ಆದ್ದರಿಂದ ರಾಜನಿಗೆ ಮಾವಿನ ಹಣ್ಣು ಸಿಗಲಿಲ್ಲ. ಅವನ ತಾಯಿ ಕೊನೆಯ ಆಸೆ ಪೂರೈಸಿಕೊಳ್ಳದೆ ಸಾವನ್ನಪ್ಪಿದಳು.ಇದರಿಂದ ರಾಜನು ಬೇಸರಗೊಂಡನು.ಅವನು ಒಬ್ಬ ಪುರೋಹಿತನ ಸಲಹೆಯನ್ನು ಕೇಳಲು ನಿರ್ಧರಿಸಿದನು.ಆದರೆ ಬ್ರಾಹ್ಮಣ ಪುರೋಹಿತನು ಆಸೆಬುರುಗನಾಗಿದ್ದನು ಅವನು ಇದು ಹಣವನ್ನು ಗಳಿಸುವ ಒಳ್ಳೆಯ ಅವಕಾಶ ಎಂದು ತಿಳಿದನು.
ಅವನು “ರಾಜರೇ ನಿಮ್ಮ ತಾಯಿಯ ಆತ್ಮವು ಶಾಂತಿಯಿಂದ ಇರಬೇಕೆಂದರೆ ಅಪ್ಪಟ ಚಿನ್ನದ ಮಾವಿನ ಹಣ್ಣುಗಳನ್ನ ಬ್ರಾಹ್ಮಣರಿಗೆ ದಾನಮಾಡಬೇಕು” ಎಂದು ಹೇಳಿದನು. ರಾಜ ಕೃಷ್ಣದೇವರಾಯನು ಆ ಬ್ರಾಹ್ಮಣ ಹೇಳಿದಂತೆ ಚಿನ್ನದ ಮಾವಿನ ಹಣ್ಣುಗಳನ್ನು ಮಾಡಿಸಿ ಅದರೊಂದಿಗೆ ಅನೇಕ ಉಡುಗೊರೆಗಳನ್ನು ಬ್ರಾಹ್ಮಣರಿಗೆ ನೀಡಿದನು.ಇದರಿಂದ ಬ್ರಾಹ್ಮಣರು ತುಂಬಾ ಖುಷಿಯಾಗಿ ರಾಜನನ್ನು ಹೊಗಳಿದರು.
ಇದೆಲ್ಲವನ್ನು ಗಮನಿಸಿದ್ದ ತೆನಾಲಿರಾಮನಿಗೆ ಆ ಬ್ರಾಹ್ಮಣರ ಅತಿಯಾಸೆಯ ಬಗ್ಗೆ ತಿಳಿಯಿತು ಅವರಿಗೆ ತಕ್ಕ ಪಾಠವನ್ನು ಕಲಿಸಲು ನಿರ್ಧರಿಸಿದರು. ಆ ದಿನವೇ ಅವನು ಬ್ರಾಹ್ಮಣರ ಮನೆಗೆ ಹೋದನು. ತೆನಾಲಿರಾಮನು “ಇಂದು ನನ್ನ ತಾಯಿಯ ತಿಥಿ ನೀವು ಬಂದು ಕರ್ಮ ಮಾಡುವಿರಾ”ಎಂದು ಕೇಳಿದನು. ಬ್ರಾಹ್ಮಣರು ತೆನಾಲಿರಾಮನಿಂದ ಹೆಚ್ಚು ಉಡುಗೊರೆಗಳನ್ನು ಪಡೆಯಬಹುದೆಂದು ಯೋಚಿಸಿ ಒಪ್ಪಿಕೊಂಡರು.
ತೆನಾಲಿರಾಮನ ಮನೆಗೆ ಬಂದ ಬ್ರಾಹ್ಮಣರು ಕಾಯುತ್ತಿದ್ದಂತೆಯೇ ತೆನಾಲಿರಾಮನು ಕಬ್ಬಿಣದ ಸರಳುಗಳನ್ನು ಕೆಂಡವಾಗುವಂತೆ ಕಾಯಿಸಿದನು. ಕೋಪಗೊಂಡ ಬ್ರಾಹ್ಮಣರು “ನೀನು ಸಮಾರಂಭಕ್ಕೆ ತಯಾರಿಯೇ ಮಾಡಿರದೆ ನಮ್ಮನ್ನು ಏತಕ್ಕಾಗಿ ಕರೆದಿರುವೆ” ಎಂದು ಕೇಳಿದರು.ಅದಕ್ಕೆ ತೆನಾಲಿರಾಮನು “ಈ ಕಬ್ಬಿಣದ ಸರಳುಗಳು ಸಮಾರಂಭಕ್ಕಾಗಿಯೇ”ಎಂದು ಹೇಳಿದನು, ಅವನು ಮುಂದುವರೆಸುತ್ತಾ “ನನ್ನ ತಾಯಿ ಮೂಳೆಯ ಕಾಯಿಲೆಯಿಂದ ನರಳುತ್ತಿದ್ದಳು ಸಾಯುವ ಮುನ್ನ ಅವಳು ಕಬ್ಬಿಣದ ಬರೆಯನ್ನು ಎಳೆಯಲು ಹೇಳಿದ್ದಳು,ಆದರೆ ಅವಳ ಕೊನೆಯ ಅಸೆ ತೀರದೆಯೇ ಅವಳು ಸತ್ತು ಹೋದಳು”ಎಂದನು.ನಂತರ “ನೀವು ರಾಜನಿಗೆ ಸಹಾಯ ಮಾಡಿದಂತೆ ನನಗೂ ಸಹಾಯ ಮಾಡಿ ನನ್ನ ತಾಯಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿ,, ಈ ಸರಳುಗಳು ಕಾದಂತೆಯೇ ನಿಮ್ಮ ಮೈಮೇಲೆ ಬರಿಯ ಎಳೆಯುವೆ”ಎಂದನು
ಇದರಿಂದ ಬ್ರಾಹ್ಮಣರು ಭಯಗೊಂಡರು ತೆನಾಲಿರಾಮ ಮಾತಿನ ಅರ್ಥ ಅವರಿಗೆ ಗೊತ್ತಾಯಿತು.ಅವರು ತಮ್ಮ ಅತಿ ಎಸೆತನಕ್ಕೆ ನಾಚಿಕೊಂಡು ತೆನಾಲಿರಾಮನ ಹತ್ತಿರ ಕ್ಷಮೆಯಾಚಿಸಿದರು. ಅಲ್ಲದೆ ಚಿನ್ನದ ಮಾವಿನ ಹಣ್ಣುಗಳನ್ನು ಮತ್ತು ಉಡುಗೊರೆಗಳನ್ನು ರಾಜನಿಗೆ ಹಿಂದಿರುಗಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
