fbpx
ಉಪಯುಕ್ತ ಮಾಹಿತಿ

ವೋಟರ್ ಐಡಿ ಗೆ ಫೋನ್ ನಂಬರ್ ಲಿಂಕ್ ಮಾಡಿಲ್ಲ ಅಂದ್ರೆ ಈ ರೀತಿ ಲಿಂಕ್ ಮಾಡ್ಕೊಳಿ.

ವೋಟರ್ ಐಡಿ ಗೆ ಫೋನ್ ನಂಬರ್ ಲಿಂಕ್ ಮಾಡಿಲ್ಲ ಅಂದ್ರೆ ಈ ರೀತಿ ಲಿಂಕ್ ಮಾಡ್ಕೊಳಿ.

ಮತದಾನ ಚಲಾಯಿಸಲು ಅಗತ್ಯವಾಗಿರುವ ವೋಟರ್ ಐಡಿ ಗೆ ಫೋನ್ ನಂಬರ್ ಲಿಂಕ್ ಮಾಡದೆ ಇರುವವರು ಈ ಕೆಳಗೆ ವಿವರಿಸಿರುವ ಸೂಚನೆಗಳನ್ನನುಸರಿಸಿ ನಿಮ್ಮ ವೋಟರ್ ಐಡಿಗೆ ನಿಮ್ಮ ಫೋನ್ ನಂಬರ್ ಅನ್ನು ಲಿಂಕ್ ಮಾಡಿಕೊಂಡು ಸರ್ಕಾರದ ಸೂಚನೆಗಳನ್ನು ನಿಮ್ಮ ಮೊಬೈಲ್ ನಂಬರ್ ಗೆ SMS ಬರುವಂತೆ ಮಾಡಿಕೊಳ್ಳಿ.

ಹಂತ-1. ಮೊದಲು ನೀವು ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಬೇಕು
http://ceokarnataka.kar.nic.in/

 

ಹಂತ-2. ಈ ವೆಬ್ಸೈಟ್ ಓಪನ್ ಆದ ತಕ್ಷಣ I WANT TO ಎಂಬ ಕಾಲಂ ನಲ್ಲಿರುವ “ಸರ್ಚ್ ಮೈ ನೇಮ್ ಇನ್ ಓಟರ್ ಲಿಸ್ಟ್”ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ. ಆಗ ಮತ್ತೊಂದು ಪುಟ ತೆರೆಯುತ್ತದೆ

 

ಹಂತ-3.ಮತ್ತೊಂದು ಪುಟ ತೆರೆದಮೇಲೆ ಅಲ್ಲಿನ ನಾಲ್ಕನೇ ಆಯ್ಕೆ(ಉತ್ತಮ ನಾಗರೀಕ ಸೇವೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂಧಿಸಿ- register your mobile number for better citizen services)ಯನ್ನು ಕ್ಲಿಕ್ ಮಾಡಿ. ಆಗ ಮತ್ತೊಂದು ಪುಟ ತೆರೆಯುತ್ತದೆ.

ಹಂತ-4. ಹೊಸ ಪುಟ ತೆರೆದ ಮೇಲೆ ಅಲ್ಲಿ ಕೊಟ್ಟಿರುವ ಅಯ್ಕ್ರಗಳನ್ನು ಸರಿಯಾಗಿ ಭರ್ತಿಮಾಡಿ.
ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಿ.ನಂತರ ನಿಮ್ಮ ವೋಟರ್ ಇಡಿಯಲ್ಲಿ ನಿಮ್ಮ ಹೆಸರು ಹೇಗೆ ಇದೆಯೋ ಅದೇ ರೀತಿ ಹೆಸರಿನ ಕಾಲಂನಲ್ಲಿ ಭರ್ತಿಮಾಡಿ.ಸಂಭಂದಿಯ(ತಂದೆ/ಗಂಡ) ಹೆಸರನ್ನು ಸರಿಯಾಗಿ ಭರ್ತಿಮಾಡಿ.ನಿಮ್ಮ ಲಿಂಗವನ್ನು ಆಯ್ಕೆಮಾಡಿಕೊಳ್ಳಿ. ನಂತರ ನಿಮ್ಮ ವಿಧಾನ ಸಭಾ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸರ್ಚ್ ಅನ್ನು ಕ್ಲಿಕ್ ಮಾಡಿ.ಆಗ ನೀವು ಕೊಟ್ಟಿರುವ ಮಾಹಿತಿ ಸರಿಯಾಗಿದ್ದರೆ ಮತ್ತೊಂದು ಹೊಸ ಪುಟ ತೆರೆಯುತ್ತದೆ

ಹಂತ-5. ತೆರೆದ ಹೊಸ ಪುಟದಲ್ಲಿ ನಿಮ್ಮ ಹೆಸರು,ವಿಳಾಸ ಸರಿಯಾಗಿದೆಯೇ ಎಂದು ಡೀಟೇಲ್ಸ್ (DETAILS)ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಪರೀಕ್ಷಿಸಿಕೊಳ್ಳಿ. ಸರಿಯಾಗಿದ್ದರೆ ಮುಂದುವರೆಯಿರಿ. ಒಂದುವೇಳೆ ಸರಿಯಾಗಿರದಿದ್ದರೆ ಸರಿಯಾಗಿರುವ ವಿಳಾಸವನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ಪಕ್ಕದಲ್ಲೇ ಇರುವ ಅಪ್ ಡೇಟ್ (UPDATE)ಮೊಬೈಲ್ ನಂಬರ್ ಆಯ್ಕೆಯನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ನಿಮ್ಮ ಮೊಬೈಲ್ ಗೆ ಒಂದು ಒಟಿಪಿ(OTP) ಬರುತ್ತದೆ ಒಟಿಪಿ ಬಂದಮೇಲೆ. ಒಟಿಪಿ ನಂಬರನ್ನು ನಮೂಧಿಸಿ ಎಂಬ ಆಯ್ಕೆಯಲ್ಲಿ ಎಂಟರ್ ಮಾಡಿ ನಂತರ ಸಬ್ಮಿಟ್(SUBMIT) ಕೊಡಿ.

ಆಗ ನಿಮ್ಮ ಪರದೆಯ ಮೇಲೆ UPDADTED SUCCESSFULLY ಎಂದು ಕಾಣಿಸಿಕೊಂಡರೆ ನಿಮ್ಮ ವೋಟರ್ ಐಡಿಗೆ ಮೊಬೈಲ್ ನಂಬರ್ ಯಶಸ್ವಿಯಾಗಿ ಲಿಂಕ್ ಆಗಿದೆಯೆಂದರ್ಥ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top