ನಿಮಗೆ ತಿಳಿದಿರುವಂತೆ ವಾರದ ಎಲ್ಲಾ ದಿನಗಳು ಸಹ ಒಂದೊಂದು ದೇವರಿಗೆ ಮೀಸಲಾಗಿದೆ. ಸೋಮವಾರ ಶಿವನಿಗೆ ಮೀಸಲಾದರೆ, ಮಂಗಳವಾರ ಹನುಮಾನ್, ಶುಕ್ರವಾರ ಶಕ್ತಿ ದೇವತೆಯ ದಿನ… ಹೀಗೆ ಎಲ್ಲಾ ದಿನದಲ್ಲೂ ಒಂದೊಂದು ದೇವರನ್ನು ಪೂಜೆ ಮಾಡಲಾಗುತ್ತದೆ. ಹಾಗಾದರೆ ಯಾವ ದಿನ ಯಾವ ದೇವರಿಗೆ ಪೂಜೆ ಮಾಡಿದರೆ, ಮನೆಯಲ್ಲಿನ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತವೆ ತಿಳಿಯಿರಿ.
ಭಾನುವಾರ: ಸೂರ್ಯ ದೇವನ ವಾರ. ಇಂದು ಕೆಂಪು ಬಣ್ಣದ ಉಡುಗೆ ಧರಿಸಿ ವ್ರತ ಕೈಗೊಳ್ಳಿ. ಮನಸ್ಸಿನ ಇಚ್ಛೆ ಈಡೇರಿಕೆಗೆ ಈ ವೃತ ಸಹಾಯಕ. ಪೂಜೆಯ ವೇಳೆಗೆ ಕೆಂಪು ಹೂವು ಅರ್ಪಿಸಿ.
ಸೋಮವಾರ: ಕನ್ಯೆಯರು ಶೀಘ್ರ ಕಲ್ಯಾಣ ಪ್ರಾಪ್ತಿಗಾಗಿ ಶಿವನ ಪೂಜಿಸಿ ಇಂದು ವೃತ ಕೈಗೊಳ್ಳುತ್ತಾರೆ. ಸೂರ್ಯಸ್ತಮಾನದ ವೇಳೆ ಶಿವನ ಪೂಜೆ ನೆರವೇರಿಸಿ ಬಳಿಕ ಸಿಹಿ ಉಣಲಾಗುತ್ತದೆ.
ಮಂಗಳವಾರ: ಹನುಮಾನ್ ಪೂಜಿಸುವ ದಿನ. ಮನೆಯಲ್ಲಿನ ಸಂಕಷ್ಟ ನಿವಾರಣೆಗಾಗಿ ಹನುಮನನ್ನು ಸ್ಮರಿಸಿ ಉಪವಾಸ ಕೈಗೊಂಡರೆ ಕಷ್ಟಗಳು ನಿವಾರಣೆಯಾಗುವುದು.
ಬುಧವಾರ: ದಂಪತಿ ಶಿವನ ಪೂಜಿಸಿ ಉಪವಾಸ ಕೈಗೊಳ್ಳೋ ದಿನ. ದಾಂಪತ್ಯ ಜೀವನ ಸುಖಕರ ಸಾಗಲು ಈ ದಿನ ಉಪವಾಸ ಕೈಗೊಳ್ಳಲಾಗುತ್ತದೆ .
ಗುರುವಾರ: ವಿಷ್ಣು ದೇವನನ್ನು ಸ್ಮರಿಸೋ ದಿನ. ಸಂಪತ್ತು ಹಾಗೂ ಸುಖಕರ ಜೀವನಕ್ಕೆ ಇಂದು ವೃತ ಮಾಡಲಾಗುತ್ತದೆ. ಹಳದಿ ಉಡುಗೆ ಧರಿಸಿ ವೃತ ಮಾಡಿ. ಬಳಿಕ ಉಪ್ಪು ಹಾಕದ ಹಳದಿ ಬಣ್ಣದ ಖಾದ್ಯ ಸೇವಿಸಿ.
ಶುಕ್ರವಾರ: ಶಕ್ತಿ ದೇವತೆಯ ಪೂಜಿಸುವ ದಿನ. ಸಂಪತ್ತು ಹಾಗೂ ಸಂತೋಷಕ್ಕಾಗಿ ಈ ದಿನ ಉಪವಾಸ ಮಾಡಲಾಗುತ್ತದೆ. ಕೆಂಪು ಸೀರೆ ಉಡುಗೆ ಧರಿಸಿ ವೃತ ಮಾಡಿ.
ಶನಿವಾರ : ಶನಿದೇವನ ಸ್ಮರಿಸೋ ವಾರ. ಜೀವನದಲ್ಲಿ ಕಷ್ಟಗಳ ಸುರಿಮಳೆ ಅನುಭವಿಸಿರುವರು ಈ ವಾರ ಉಪವಾಸ ಮಾಡಿ, ಸಂಜೆ ಕಪ್ಪು ವಸ್ತ್ರ, ಕಪ್ಪು ಉದ್ದು, ಸಾಸಿವೆ, ಸಾಸಿವೆ ಎಣ್ಣೆ ದಾನ ಮಾಡಿ ಒಳಿತಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
