ಮಲಗುವುದಕ್ಕೆ ಮುಂಚೆ ಬಿಸಿನೀರಿನಲ್ಲಿ ಒಂದು ಏಲಕ್ಕೆ ಹಾಕಿ ಕುಡಿಯೋದ್ರಿಂದ ಈ ಕಾಯಿಲೆಗಳು ಶಮನವಾಗುತ್ತವೆ.
ಏಲಕ್ಕಿಯನ್ನು ಕೇವಲ ಸುವಾಸನೆಗೆ ಮಾತ್ರ ಬಳಸಲಾಗುತ್ತದೆ ಎಂದು ಬಹಳಷ್ಟು ಜನರು ಭಾವಿಸಿರುತ್ತಾರೆ.ಆದರೆ ಅದರಲ್ಲಿ ಅನೇಕ ರೋಗಗಳನ್ನು ಓಡಿಸುವ ಔಷಧೀಯ ಗುಣಗಳು ಇದರಲ್ಲಿರುತ್ತವೆ.ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಚನ್ನಾಗಿ ಅರೆದು ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಕುಡಿಯುದರಿಂದ ಆರೋಗ್ಯಕರವಾಗಿ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು ಅವು ಯಾವುವು ಎಂದು ಈ ಕೆಳಗೆ ಓದಿ ತಿಳಿದುಕೊಳ್ಳಿ.
1.ಬೊಜ್ಜು ಕರಗಿಸುತ್ತದೆ:
ಏಲಕ್ಕಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ಸಿ ಯನ್ನು ಹೊಂದಿರುತ್ತದೆ, ಇದು ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ, ಇದರ ಫೈಬರ್ ಮತ್ತು ಕ್ಯಾಲ್ಸಿಯಂ ಸಹಾ ತೂಕವನ್ನು ನಿಯಂತ್ರಿಸುತ್ತದೆ.
2.ಕೂದಲು ಉದುರುವುದನ್ನು ನಿಲ್ಲಿಸುತ್ತದೆ:
ಏಲಕ್ಕಿಯನ್ನು ಬೆಚ್ಚಗಿನ ನೀರಿನ ಜೊತೆ ಕುಡಿದರೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ, ಅದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ತಲೆಹೊಟ್ಟು ತೆಗೆದುಹಾಕುತ್ತದೆ ಮತ್ತು ಕೂದಲು ಉದುರುವುದು ಸಹ ನಿಲ್ಲುತ್ತದೆ.
3. ಸುಧಾರಿಸಿದ ರಕ್ತ ಪರಿಚಲನೆ:
ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಚನ್ನಾಗಿ ಅರೆದು ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಕುಡಿಯುದರಿಂ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಉತ್ತಮ ರಕ್ತಪರಿಚಲನೆಯನ್ನು ಮಾಡುತ್ತದೆ.
4.ನಿದ್ರಾಹೀನತೆಗೆ ರಾಮಬಾಣ:
ಇಂದು ಎಲ್ಲರೂ ಮೊಬೈಲ್ ನ್ನು ತಡರಾತ್ರಿಯವರೆಗೆ ಬಳಸುತ್ತಾರೆ, ಇದು ನಿದ್ರಾಹೀನತೆ ಮತ್ತು ಇತರ ರೋಗಗಳಿಗೆ ಕಾರಣವಾಗುತ್ತದೆ. ಆದರೆ ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಚನ್ನಾಗಿ ಅರೆದು ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಕುಡಿಯುದರಿಂದ ನಿದ್ರಾಹೀನತೆ ದೂರವಾಗುತ್ತದೆ.
5.ಮಲಬದ್ದತೆಯನ್ನು ನಿವಾರಿಸುತ್ತದೆ.
ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಚನ್ನಾಗಿ ಅರೆದು ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಕುಡಿಯುದರಿಂದ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ, ಕರುಳಿನ ಮತ್ತು ಮೂತ್ರಪಿಂಡವನ್ನು ಕೂಡಾ ಸ್ವಚ್ಛಗೊಳಿಸುತ್ತದೆ. ಶೀಘ್ರದಲ್ಲೇ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
