fbpx
ದೇವರು

ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಪುರಾಣ ಕಥೆ.

ಅನಂತ ಪದ್ಮನಾಭ  ಸ್ವಾಮಿ ದೇವಸ್ಥಾನದ ಪುರಾಣ ಕಥೆ.

ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಅಂದ್ರೆ,ನಮಗೆ ಮೊಟ್ಟ ಮೊದಲು ನೆನಪಿಗೆ ಬರುವುದು ಅಂದರೆ, ಆ ದೇವಸ್ಥಾನದ ನಿಧಿಯ ಬಗ್ಗೆ.ಆದರೆ ದೇವಸ್ಥಾನದ ಪ್ರಾಮುಖ್ಯತೆ ಮತ್ತು ಚರಿತ್ರೆಯ ಬಗ್ಗೆ ನಮಗೆ ತಿಳಿದಿದೆ.ಈಗ ನಾವು ಆ ದೇವಸ್ಥಾನ ಹೇಗೆ ನಿರ್ಮಾಣವಾಯಿತು ಎಂಬುದನ್ನು ತಿಳಿಯೋಣ.

ಕಲಿಯುಗದಲ್ಲಿ 950 ವರ್ಷಗಳ ಹಿಂದೆ ವಿಲ್ಪ ಮಂಗಳಂ ಸ್ವಾಮಿಯವರ ಕೇರಳದ ಅನುಯಾಯಿಯಂತೆ ನೆಲೆಸಿದ್ದರು.

ಅವರು ವಿಷ್ಣು ದೇವರನ್ನು ನೋಡುವ ಅವಕಾಶ ಪಡೆಯಲು ಪೂಜೆ ಮತ್ತು ಧ್ಯಾನ,ನೃತ್ಯ ಮಾಡುತ್ತಿದ್ದರು.ಒಂದು ದಿನ ಆಕರ್ಷಕ ಮತ್ತು ಮುದ್ದಾದ ಹುಡುಗ ತನ್ನ ಮನೆಗೆ ಭೇಟಿ ನೀಡುತ್ತಾನೆ.

ಸ್ವಾಮಿಯವರು ಹುಡುಗನ ಕಡೆ ಆಕರ್ಷಿತವಾದರು.ಆ ಹುಡುಗನನ್ನು ಶಾಶ್ವತವಾಗಿ ತನ್ನ ಮನೆಯಲ್ಲಿ ಉಳಿಯಲು ಹೇಳಿದರು.ಆದರೆ ಆ ಹುಡುಗ ಒಂದು ಷರತ್ತಿನ ಮೇಲೆ ಅವರ ಮನೆಯಲ್ಲಿ ಉಳಿಯಲು ಒಪ್ಪಿಕೊಂಡನು.

ನೀವು ನನಗೆ ಗೌರವಿಸಲಿಲ್ಲ  ಅಂದರೆ, ನಾನು ಏನೇ ಮಾಡಿದರೂ ಯಾಕೆ  ? ಏನು ? ಎಂದು ಕೇಳಬಾರದು ? ಹಾಗೇನಾದರೂ ಕೇಳಿದರೆ ಆ ದಿನ ನಾನು “ಅನಂತ ಕಾಡು” ಎಂಬ ಸ್ಥಳಕ್ಕೆ ಹೊರಟು ಹೋಗುತ್ತೇನೆ ಅಂದನು.ಸ್ವಾಮಿಯವರು ಈ ಷರತ್ತನ್ನು ಒಪ್ಪಿಕೊಂಡರು.

ಆದರೆ  ದಿನ ಕಳೆದಂತೆ ತನ್ನ ತುಂಟತನದ ನಡೆವಳಿಕೆಯಿಂದ ದೈನಂದಿನ ಜೀವನದಲ್ಲಿ ಸ್ವಾಮಿಯವರಿಗೆ ಜಿಗುಪ್ಸೆ ಬರಿಸಿದ ಈ ಹುಡುಗ.

ಒಂದು ದಿನ ಸ್ವಾಮಿಯವರು ವಿಷ್ಣುವಿನ ಪೂಜೆ ಮಾಡುತ್ತಿದ್ದಾಗ ಆ ಹುಡುಗ ವಿಷ್ಣುವಿನ ವಿಗ್ರಹದೊಂದಿಗೆ ಆಟವಾಡುತ್ತಿದ್ದಾಗ ಸ್ವಾಮಿಯವರು ಆ ಹುಡುಗನಿಗೆ ಎಚ್ಚರಿಸಿದರು.

ತಕ್ಷಣ ಆ ಹುಡುಗ ಮನೆ ಬಿಟ್ಟು ಹೋಗುತ್ತಾನೆ.ಮತ್ತೆ ಸ್ವಾಮಿಯವರು ಆ ಹುಡುಗನನ್ನು ಹುಡುಕುತ್ತಾ ಅನಂತ ಕಾಡಿಗೆ ತಲುಪಿದರು. ಆ ಹುಡುಗ ಸ್ವಾಮಿಯವರ   ನೋಡು ನೋಡುತ್ತಿದ್ದಂತೆಯೇ ಒಂದು   ಮರದ ಒಳಗೆ ಪ್ರವೇಶಿಸಿದನು.

ತಕ್ಷಣ 13 ಕಿಲೋಮೀಟರ ಎತ್ತರದವರೆಗೆ ಒಂದು ದೊಡ್ಡ  ಮರದ ಹಾಗೆ ಬೆಳೆದು  ನಂತರ ಕೆಳಗುರುಳಿತು .ಐದು ದೊಡ್ಡ ಸರ್ಪಗಳ   ಆಕಾಶ ಹಾಗು ಅನಂತನ ಮೇಲೆ ಒರಗಿಕೊಂಡಿರುವಂತೆ ವಿಷ್ಣುವಿನ ಒಂದು ಬೃಹತ್ ವಿಗ್ರಹದ ಹಾಗೆ ಕಾಣಿಸಿತು.

ನಂತರ ಆ ಹುಡುಗ ಮಹಾವಿಷ್ಣು ಎಂಬುದನ್ನು ಅರಿತ ಸ್ವಾಮಿಯವರು ಪ್ರಾರ್ಥನೆ ಮಾಡಿ ಒಂದು ಸಣ್ಣ ಪ್ರಮಾಣದ ವಿಗ್ರಹದಂತೆ ಆಗಬೇಕು ಎಂದು ಬೇಡಿಕೊಂಡರು.

ತಕ್ಷಣ ಆ ವಿಗ್ರಹ 18 ಅಡಿ ಎತ್ತರ  ವಿಗ್ರಹವಾಗಿ ರಚನೆಯಾಗುತ್ತದೆ.

ನಂತರ ಅಲ್ಲಿರುವ  ಟ್ರವಾಂಕೂರ್ ರಾಜರ ಬಳಿ ಹೋಗಿ ಅವರ  ಜೊತೆ ಸ್ವಾಮಿಯವರು ಮಾತನಾಡಿ ಒಂದು ದೇವಾಲಯವನ್ನು ಕಟ್ಟಿಸುತ್ತಾರೆ.

ಇದು ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಹಿಂದಿರುವ ಪೌರಾಣಿಕ ಕಥೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top