fbpx
ಆರೋಗ್ಯ

ಬಾದಾಮಿಯ ಪೌಷ್ಟಿಕಾಂಶಗಳ ಬಗ್ಗೆ ನಿಮಗೆಷ್ಟು ಗೊತ್ತು?

ಬಾದಾಮಿ ದುಬಾರಿಯಾದರೂ ಪೌಷ್ಠಿಕಾಂಶಗಳನ್ನು ಯಥೇಚ್ಛವಾಗಿ ಒಳಗೊಂಡಿರುವ ಪದಾರ್ಥ. ಹೆಚ್ಚು ರುಚಿಕರ ಹಾಗೂ ಜನಪ್ರಿಯವೂ ಹೌದು. ಆದರೆ ಬಹಳಷ್ಟು ಜನರಿಗೆ ದೈಹಿಕ ಆರೋಗ್ಯಕ್ಕೆ ಇದರಿಂದಾಗುವ ಲಾಭಗಳೇನು ಎಂಬುದರ ಅರಿವಿರಲ್ಲ.

ಬಾದಾಮಿಯನ್ನು ವಿವಿಧ ಬಗೆಗಳಲ್ಲಿ ಬಳಕೆ ಮಾಡುವುದರಿಂದ ಹೆಚ್ಚು ಜನಪ್ರಿಯ ಪದಾರ್ಥವಾಗಿದೆ. ಯಾವುದೇ ಸಿಹಿ ಪದಾರ್ಥ, ಕೂಟು ಅಥವಾ ಇನ್ನಿತರೆ ಸಾಂಬಾರು ತಯಾರಿಸಲು ಬಾದಾಮಿ ಇರಲೇಬೇಕು.

ಬಾದಾಮಿಯಲ್ಲಿ ವಿಟವಿನ್ ಮತ್ತು ಖನಿಜಾಂಶಗಳು ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗಲು ನೆರವಾಗುತ್ತದೆ. ವಿಟಮಿನ್ ? ಇ, ವಿಟಮಿನ್ ? ಡಿ ಹಾಗೂ ಖನಿಜಾಂಶಗಳಾದ ಪೆÇಟ್ಯಾಷಿಯಂ, ಮ್ಯಾಗ್ನೀಷಿಯಂ, ಕ್ಯಾಲ್ಸಿಯಂನಂತಹವುಗಳು ಅಧಿಕ ಪ್ರಮಾಣದಲ್ಲಿವೆ.

ಯಕೃತ್‍ನಿಂದಾಗಬಹುದಾದ ತೊಂದರೆಗಳನ್ನು ನಿಯಂತ್ರಿಸುವ ಶಕ್ತಿ ಸಾಮಥ್ರ್ಯಗಳು ಬಾದಾಮಿಯಲ್ಲಿವೆ. ಜೊತೆಗೆ ಗ್ಲೂಕೋಸ್ ಅಂಶಗಳನ್ನು ನಿಯಂತ್ರಿಸಬಲ್ಲದ್ದಾಗಿದೆ. ಸಕ್ಕರೆ ಖಾಯಿಲೆಯಿಂದ ದೂರವಿರಲು ಇದು ಸಹಕಾರಿಯೂ ಹೌದು.

ಬಾದಾಮಿಯಲ್ಲಿ ಒಮೆಗಾ? 6 ಆಸಿಡ್ ಮಿಶ್ರಿತ ಕೊಬ್ಬಿನಾಂಶ ಇದ್ದು, ಇದರಿಂದ ಮೆದುಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ. ಇದರಲ್ಲಿರುವ ಹೆಚ್ಚಿನ ಪೌಷ್ಠಿಕಾಂಶಗಳು, ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ದಾರಿ ಮಾಡಿಕೊಡುತ್ತದೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಬಾದಾಮಿ ಹಾಗೂ ಬಾದಾಮಿ ಎಣ್ಣೆ (ಆಲ್ಮಂಡ್ ಆಯಿಲ್) ನಡುವೆ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರಡರಲ್ಲೂ ಪೌಷ್ಠಿಕಾಂಶಗಳಿರುತ್ತವೆ. ಅಲ್ಲದೆ, ಬಾದಾಮಿ ಎಣ್ಣೆಯಲ್ಲಿ ಪೌಷ್ಠಿಕಾಂಶದ ಜತೆಗೆ ಖನಿಜಾಂಶವೂ ಒಳಗೊಂಡಿದೆ.

ಬಾದಾಮಿ ಎಣ್ಣೆಯನ್ನು ದೈನಂದಿನ ಪದ್ಧತಿಯಲ್ಲಿ ವಿವಿಧ ರೀತಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಪ್ರಯೋಜನಗಳಾಗುತ್ತವೆ. ಪ್ರಮುಖವಾಗಿ ಹೃದಯಕ್ಕೆ ಸಂಬಂಧಿಸಿದಂತೆ ಮೆದುಳಿಗೆ ದೇಹದ ಪ್ರಕ್ರಿಯೆ ಉತ್ತಮವಾಗಿರಲು ಸಹಕರಿಸುತ್ತದೆ.

ಬಾದಾಮಿ ಎಣ್ಣೆ ಬಳಕೆಯಿಂದ ಅತ್ಯುತ್ತಮವಾದ ಡಯಟ್ ಕೂಡ ಕಾಯ್ದುಕೊಳ್ಳಬಹುದಾಗಿದೆ. ಬಾದಾಮಿ ಎಣ್ಣೆಯನ್ನು ಬಳಕೆ ಮಾಡುವುದರಿಂದ ದೇಹದ ವ್ಯವಸ್ಥೆ ಉತ್ತಮವಾಗಿ ಹಾಗೂ ಇನ್ಸುಲಿನ್ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.

ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದರೆ, ಅನಿಮಿಯಾ ರೋಗ ಕಾಣಿಸುತ್ತದೆ. ಹಾಗಾಗಿ ಬಾದಾಮಿ ಎಣ್ಣೆಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ವೃದ್ಧಿಯಾಗಲು ಸಹಾಯವಾಗುತ್ತದೆ. ಅಲ್ಲದೆ, ಆಮ್ಲಜನಕದ ಅಂಶ ಹೆಚ್ಚಾಗುತ್ತದೆ.

ಕಬ್ಬಿಣಾಂಶ, ಕಾಪರ್ ಮತ್ತು ಇನ್ನಿತರ ವಿಟಮಿನ್ ಅಂಶಗಳು ಬಾದಾಮಿ ಎಣ್ಣೆಯಲ್ಲಿ ಲಭ್ಯವಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ವೃದ್ಧಿಯಾಗಲು ನೆರವಾಗುತ್ತದೆ.

ಬಾದಾಮಿ ಎಣ್ಣೆಯಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳು ದೇಹಕ್ಕೆ ಉತ್ತಮ ರೀತಿಯಲ್ಲಿ ಸಹಕಾರಿಯಾಗುತ್ತವೆ. ಗರ್ಭಿಣಿಯರ ಆರೋಗ್ಯ ವೃದ್ಧಿಗೂ ಇದರ ಬಳಕೆ ಸೂಕ್ತ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೂ ಇದು ಉತ್ತಮ ಆಹಾರ ಪದಾರ್ಥವಾಗಿದೆ. ಆದ್ದರಿಂದ ಗರ್ಭಿಣಿಯರು, ಬಾದಾಮಿ ಮತ್ತು ಬಾದಾಮಿ ಎಣ್ಣೆಯನ್ನೆ ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಆರೋಗ್ಯ ವೃದ್ಧಿಸಿಕೊಳ್ಳಲು ಹತ್ತುಹಲವು ಮಾರ್ಗಗಳಿವೆ. ಅದರಲ್ಲಿ ಕೆಲವು ಸರಳ ಮಾರ್ಗಗಳಾದರೆ, ಮತ್ತೆ ಕೆಲವು ದುಬಾರಿ ಎನ್ನಬಹುದು. ಏನೇ ಆದರೂ ಆರೋಗ್ಯ ಸಂರಕ್ಷಣೆ ಮುಖ್ಯವಲ್ಲವೆ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top