ರುದ್ರಾಕ್ಷಿ ಧಾರಣೆ ಸಮಯ
ಗ್ರಹಣ ಕಾಲ, ಮಹಾತ್ಮರ ಜನ್ಮ ದಿನಾಚರಣೆ, ಸಂಕ್ರಾಂತಿ, ಶಿವರಾತ್ರಿ, ಶ್ರಾವಣ ಸಮಯ, ಪೂರ್ಣಿಮ, ಸೋಮವಾರ ದಿನದಲ್ಲಿ ಧಾರಣೆ ಮಡಿಕೊಳ್ಳಬೇಕು. 108 ರುದ್ರಾಕ್ಷಿ ಮಾಲೆಯನ್ನು ಸತತ ಧಾರಣ ಮಾಡುವುದರಿಂದ ಒಂದು ಅಶ್ವಮೇಧ ಯಾಗದ ಫಲವು ಪ್ರಾಪ್ತಿಯಾಗುತ್ತದೆ. ರುದ್ರಾಕ್ಷಿ ಮಾಲೆಯಿಂದ ಜಪ ಮಾಡುವವರುಮೃಗ ಚರ್ಮ,ವ್ಯಾಘ್ರ ಚರ್ಮ, ಆಸನದ ಮೇಲೆ ಪೂರ್ವ ಅಥವ ಉತ್ತರಾಭಿಮುಖವಾಗಿ ಕುಳಿತುಕೊಂಡು ಜಪ ಮಾಡಿದರೆ ಶೀಘ್ರವಗಿ ಕಾರ್ಯ ಸಿದ್ಧಿಯಾಗುತ್ತದೆ. ವ್ಯಾಘ್ರ ಚರ್ಮಾಸನ ಅಥವಾ ಚಿತ್ರಾಸನ ದರ್ಭೆಯ ಆಸನ ಉಪಯೋಗಿಸಬಹುದು.
ಉತ್ತಮ ರುದ್ರಾಕ್ಷಿ
ಮೆಣಸಿನ ಕಾಳಿನಷ್ಟು ರುದ್ರಾಕ್ಷಿ ಕನಿಷ್ಟವಾದವು. ಕಡಲೆ ಕಾಳಿನಷ್ಟು ಶ್ರೇಷ್ಠ. ಅದಕ್ಕಿಂತ ಸ್ವಲ್ಪ ಗಾತ್ರವಾದವು ಜಪಮಾಲೆಗೆ ಮತ್ತು ಧಾರಣೆ ಮಾಡಿಕೊಳ್ಳಲು ಉತ್ತಮ. ಈ ವಿಧದಲ್ಲಿ ತಿಳಿದುಕೊಂಡು ನಡೆದಿದ್ದಾರೆ ಯಾವ ದೋಷವಿರುವುದಿಲ್ಲ. ಯವ ರುದ್ರಾಕ್ಷಿ ಭಿನ್ನವಾಗದೆ ಮುಳ್ಲಿನಿಂದ ಕೂಡಿ ಗಟ್ಟಿಯಾಗು ಗಾತ್ರವಾಗಿರುವುದೋ ಅದು ಧಾರಣೆ ಮಾಡಿದ ವ್ಯಕ್ತಿಯ ಮನೋರಥವನ್ನು ಪೂರ್ಣ ಮಾಡುತ್ತದೆ. ಇದು ಅಲ್ಲದೆ ಸರ್ವ ದೋಷ ನಿವಾರಣೆಯನ್ನು ಸಹ ಮಾಡುತ್ತದೆ ಎಂದು ಸಂಕಲ್ಪಿಸಬಹುದಾಗಿದೆ. ಒಂದು ಮುಖದ ರುದ್ರಾಕ್ಷಿಯಿಂದ 13 ಮುಖದ ರುದ್ರಾಕ್ಷಿ ವರೆಗೆ ಧರಿಸಿಕೊಳ್ಳುವುದರಿಂದ ಸಿಧ್ಧಿ, ಧನ, ಧಾನ್ಯ, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಪ್ರತಿ ದಿನ ಜಪ ಮಾಡುವವರು ಬಿಲ್ವಪತ್ರಿ, ಪುಷ್ಟ, ಧೂಪ, ದೀಪಾದಿಗಳ ಕರ್ಪೂದಿಂದ ಪೂಜೆ ಮಾಡಿ ಈ ಕೆಳಗಿನ ಮಂತ್ರ ಸ್ಮರಣೆ ಮಾಡಿ ನಮಸ್ಕರಿಸಿ ಜಪ ಪ್ರಾರಂಭ ಮಾಡಬೇಕು.
ರುದ್ರಾಕ್ಷಿ ಮಂತ್ರ
ರುದ್ರಾಕ್ಷಿ ರುದ್ರ ಬೀಜಾಯ ಭೂತಿ ಸಂಭುತಿ ಹೇತವೇ
ನೇತ್ರತ್ರಯಾಯ ರುದ್ರಾಯ ನಮೋ ಲೋಕಹಿತಾರ್ಥನೆ
ಎಂದು ನಮಸ್ಕರಿಸಬೇಕು.
ಭದ್ರಾಕ್ಷಿ
ಭದ್ರಾಕ್ಷಿಗಳಿಗೆ ಮುಖವಿರುವುದಿಲ್ಲ ಮತ್ತು ಮೈತುಂಬಾ ಮುಳ್ಳು ಇರುವುದಿಲ್ಲ. ಇವುಗಳನ್ನು ಧಾರಣೆ ಮಾಡಬಾರದು. ಹಣದ ದುರಾಸೆಗಾಗಿ ರುದ್ರಾಕ್ಷಿಯನ್ನು ಭದ್ರಾಕ್ಷಿ ಎಂದು ಮಾರುತ್ತಾರೆ. ಭದ್ರಾಕ್ಷಿ ಬಾರೆಯ ಬೀಜದೋಪಾದಿಯಲ್ಲಿರುತ್ತದೆ. ಅದಕ್ಕೆ ಕೃತ್ರಿಮವಾಗಿ ತೂತು ಮಡಿ ದಾರ ಪೋಣಿಸಿ ಕಟ್ಟಿರುತ್ತಾರೆ. ರುದ್ರಾಕ್ಷಿಯು ಸ್ವಯಂ ರಂಧ್ರವಾಗಿರುತ್ತದೆ. ಭದ್ರಾಕ್ಷಿಗೆ ಸ್ವಯಂ ರಂದ್ರ ಇರುವುದಿಲ್ಲ. ಇದನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕು.
ಮಾಲೆ ವಿಚಾರ
ಕೇವಲ ಸಂಖ್ಯಾ ನೆನಪಿಗಾಗಿಯೇ 108 ಮಣಿಗಳ ಮಾಲೆಯನ್ನು ಪೂರ್ವಜರು ಮಾಡಿರುವುದಿಲ್ಲ. ಹಾಗಿದ್ದ ಪಕ್ಷದಲ್ಲಿ ಸ್ಥಾನಗಳಿಗೆ ಅನುಸರಿಸಿ ಆಯಾಯ ಮುಖದ ರುದ್ರಾಕ್ಷಿ ಧಾರಣವನ್ನು ಶೃತಿ, ಸ್ಮøತಿ, ಪುರಾಣ ಆಗಮ, ಉಪನಿಷತ್ತುಗಳಲ್ಲಿ ಹೇಳುತ್ತಿರಲಿಲ್ಲ. ರುದ್ರಾಕ್ಷಿ ಮಲೆಯ ಉಪಯೋಗವು ಧಾರ್ಮಿಕ ತತ್ವಾನುಕ್ರಮವಾಗಿದೆ. ರುದ್ರಾಕ್ಷಿಯಲ್ಲಿ ಬೇರೆ ಬೇರೆ ಜಾತಿಯ ಮಾಲೆಯನ್ನು ಸಹ ಜಪ ಮಾಡಲು ಮಹಾತ್ಮರು ಉಪಯೋಗಿಸುತ್ತಾರೆ.
ರುದ್ರಾಕ್ಷಿಯಲ್ಲಿರುವ ಬೇರೆ ಬೇರೆ ಜಾತಿಯ ಮಾಲೆಯ ಮಹತ್ವ
ಪುತ್ರ ಜೀವ ಮಾಲೆ
ಪುತ್ರ ಸಂತಾನವಿಲಲ್ದವರು ಈ ಮಾಲೆಯನ್ನು ಜಪ ಮಡಿದರೆ ಸಂತಾನವಾಗುತ್ತದೆ ಎಂಬುದಾಗಿ ಪುರಾಣ ಪ್ರತೀತಿ ಇದೆ. ಇದು ಸಾಮಾನ್ಯವಾಗಿ ಒಂದು ಗಿಡದ ಫಲ, ಇದಕ್ಕೆ ಮುಖವಿರುವುದಿಲ್ಲ.
ಮುತ್ತಿನ ಮಾಲೆ
ಇದು ಸೌಭಾಗ್ಯವನ್ನು ಅನುಗ್ರಹಿಸುತ್ತದೆ. ಪ್ರಾಪಂಚಿಕ ಮಸುಖ ಸಂಪತ್ತನ್ನು ಸಹ ಪ್ರಾಪ್ತಿ ಮಾಡುತ್ತದೆ.
ಸ್ಪಟಿಕ ಮಣಿ ಮಾಲೆ
ಸಂಪತ್ತನ್ನು ಕೊಡುತ್ತದೆ. ಇದು ಮಾನವ ಸೃಷ್ಟಿಯು, ಇದು ಕೃತ್ರಿಮದಿಂದ ಕೂಡಿದೆ.
ಕುಶ ಮಾಲೆ
ಪಾಪವನ್ನು ಹರಣ ಮಾಡುತ್ತದೆ.
ಬಂಗಾರದ ಮಣಿ ಮಾಲೆ
ಸರ್ವ ಮನೋರಥ ಪೂರ್ಣಗೊಳಿಸುತ್ತದೆ. ಸದಾ ಕಲ್ಯಾಣಮಯ ಮತ್ತು ಶುದ್ಧವಾದುದು.
ಶ್ವೇತ ಶಿಲಾ ಮಾಲೆ
ತತ್ಕಾಲಿಕ ಸುಕ ಶಾಂತಿ ಕೊಡುತ್ತದೆ.
ಅರಿಷ್ಠ ಮಾಲೆ
ಇದು ಅರಿಷ್ಠವನ್ನು ನಾಶ ಮಾಡುತ್ತದೆ.
ಜಂಗಮ ಪೋತ ಮಾಲೆ
ಇದು ಒಂದು ಜಾತಿಯ ಗಿಡ. ಈ ಮಾಲೆಯನ್ನು ಧರಿಸುವುದರಿಂದ ವಿದ್ಯೆ ಪ್ರಾಪ್ತಿಯಾಗುತ್ತದೆ.
ಇವುಗಳೆಲ್ಲಕ್ಕಿಂತ ರುದ್ರಾಕ್ಷಿ ಮಾಲೆಯನ್ನು ಅಧಿಕವಾಗಿ ಋಷಿಮುನಿಗಳು ಉಪಯೋಗಿಸುತ್ತಾರೆ. ಪುರಾಣ ಉಪನಿಷತ್ತುಗಳಲ್ಲಿ ವಿಧಿಯುಕ್ತವಾಗಿರುವುದನ್ನು ಓದಿದ್ದೇವೆ. ರುದ್ರಾಕ್ಷಿಗೆ ಅಧಿಕ ಪ್ರಮಾಣದಲ್ಲಿ ಮಹತ್ವ ಕೊಡುತ್ತ ಬಂದಿದ್ದಾರೆ. ಶಿವ ಪುರಾಣಗಳು ಇದಕ್ಕೆ ಪ್ರಬಲ ಪ್ರಮಾಣವಾಗಿವೆ.
ಆಸನ ಇಲ್ಲದ ಅನುಷ್ಠಾನ, ಜಲ ಸ್ಪರ್ಶ ಇಲ್ಲದ ದಾನ, ಸಂಖ್ಯ ಹೀನ ಜಪ ಇವೆಲ್ಲ ನಿಷ್ಪಲವಾದವುಗಳು. ರುದ್ರಾಕ್ಷಿ ಮಾಲೆಯನ್ನು ಜಪಕ್ಕೆ ಉಪಯೋಗಿಸಲು ಶಾಸ್ತ್ರಗಳು ಅನುಮೋದಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
