ಮೂರ್ಖ ಸ್ನೇಹಿತರಿಗಿಂತ,ಬುದ್ದಿವಂತ ಶತ್ರುವೇ ಉತ್ತಮ.!ಯಾಕೆ ಗೊತ್ತಾ? ಈ ಕತೆ ಓದಿ
ಒಂದು ಅರಮನೆ ಇತ್ತು ಆ ಅರಮನೆಯಲ್ಲಿ ಒಂದು ವಿಚಿತ್ರವಿತ್ತು, ಅದೇನೆಂದ್ರೆ ಅಲ್ಲಿ ವಾಸವಾಗಿದ್ದ ಕೋತಿ, ಕೋತಿ ರಾಜನ ಆಪ್ತ ಗೆಳೆಯನಾಗಿದ್ದ ರಾಜನ ಒಂದು ದಿನ ಆ ಕೋತಿ ಮತ್ತು ರಾಜನು ಉದ್ಯಾನದಲ್ಲಿ ನಡೆದಾಡುತ್ತಿದ್ದರು.
ಆಗ ಕೋತಿ ರಾಜನ ಕಾಲಿನ ಹತ್ರ ಬರುತ್ತಿರುವ ಹಾವನ್ನು ನೋಡಿತು, ರಾಜನನ್ನು ಪಕ್ಕಕ್ಕೆ ಸರಿಸಿ ರಾಜನನ್ನು ರಕ್ಷಿಸಿತು. ಇದರಿಂದ ರಾಜನಿಗೆ ತುಂಬ ಸಂತೋಷವಾಯಿತು ಕೋತಿಯನ್ನು ಧನ್ಯವಾದಿಸಿದನು.ಕೋತಿಯ ಜೊತೆ ಅರಮನೆಗೆ ಹೋದ ರಾಜನು ಅಲ್ಲಿ ಮಂತ್ರಿಗಳಿಗೆ “ಇಂದು ಈ ಕೋತಿಯು ಹಾವಿನಿಂದ ನನ್ನನ್ನು ರಕ್ಷಿಸಿದೆ, ಇನ್ನು ಮುಂದೆ ಈ ಕೊತಿಯೇ ನನ್ನ ಅಂಗರಕ್ಷಕ”ಎಂದು ಹೇಳಿದನು. ಆಗ ಮಂತ್ರಿಯು “ಮಹಾರಾಜ!ಒಂದು ಕೋತಿ ಹೇಗೆ ನಿಮ್ಮ ಅಂಗರಕ್ಷಕನಗಲು ಸಾಧ್ಯ,, ಸ್ವಲ್ಪ ಎಚ್ಚರಿಕೆ ವಹಿಸಿ ಯೋಚನೆ ಮಾಡಿ, ನೀವು ನಿಮ್ಮ ರಕ್ಷಣೆಗೆ ತೊಂದರೆ ತಂದುಕೊಳ್ಳುತ್ತಿದ್ದೀರಾ”ಎಂದು ಹೇಳಿಹೋದನು. ಅಗ ರಾಜನು “ಇಲ್ಲ ಮಂತ್ರಿಗಳೇ, ಈ ಕೋತಿ ತುಂಬಾ ಎಚ್ಚರಿಕೆಯಿಂದ ಮತ್ತು ಚುರುಕಿನಿಂದ ನನ್ನನ್ನು ಚನ್ನಾಗಿ ನೋಡಿಕೊಳ್ಳುತ್ತಾನೆ ಹಾಗಾಗಿ ಈ ಕೋತಿ ಏಕೆ ನನ್ನ ಅಂಗರಕ್ಷಕನಾಗಬಾರದು,ಹೆದರಬೇಡಿ ನಾನು ಶುರಕ್ಷಿತವಾಗಿರುತ್ತೇನೆ”ಎಂದು ಹೇಳಿದನು.
ಒಂದಿನ ರಾಜ ಮಲಗಿದ್ದನು ಆಗ ಒಂದು ನೊಣ ಕಿಟಕಿಯಿಂದ ಒಳಗೆಬಂದು ಕೋತಿಯ ಕಿವಿ ಹತ್ರ ಗೊಂಯ್ ಗುಡ್ತು, ನೊಣ ರಾಜನ ತಲೆದಿಂಬಿನ ಮೇಲೆ ಹಾರಾಡ್ತಿತ್ತು ಅದನ್ನು ಓಡ್ಸೋಕೆ ಎಷ್ಟೇ ಪ್ರಯತ್ನ ಪಟ್ಟರು ಕೋತಿಯಿಂದ ಓಡಿಸೋದಕ್ಕೆ ಆಗ್ಲೇ ಇಲ್ಲ, ಕೊನೆಗೆ ನೊಣ ರಾಜನ ಮೂಗಿನ ಮೇಲೆ ಕುಳಿತುಕೊಂಡಿತು ಆಗ ಕೋತಿ ಕೋಪಗೊಂಡು “ಏ ಮುಟ್ಟಾಳ ನೊಣವೇ! ನಮ್ಮ ರಾಜನ ಮೂಗಿನ ಮೇಲೆ ಕೂತ್ಕೋತೀಯ ಎಷ್ಟು ಧೈರ್ಯ ನಿನಗೆ ಇರು ನಿನಗೆ ಸರಿಯಾದ ಪಾಠ ಕಳುಸ್ತೀನಿ”ಎಂದು ಅಲ್ಲೇ ಇದ್ದ ಒಂದು ಕತ್ತಿಯನ್ನು ತೆಗೆದುಕೊಂಡು ರಾಜನ ಮೇಲೆ ಎತ್ತಿತು..
ಆಗ ಅಲ್ಲಿಗೆ ಬಂದ ಮಂತ್ರಿಯು ಇದನ್ನು ನೋಡಿ ರಾಜನನ್ನು ಕೂಗಿ ಎಬ್ಬಿಸಿ ರಾಜನನ್ನು ರಕ್ಷಣೆಮಾಡಿದನು. ರಾಜ ಎದ್ದು ಕೋತಿಯನ್ನು ಯಾಕೆ ಕತ್ತಿಯನ್ನು ನನ್ನ ಮೇಲೆ ಎತ್ತಿರುವೆ ಎಂದು ಕೇಳಿದಾಗ ನೊಣವನ್ನು ಸಾಯಿಸಲು ಎಂದು ಹೇಳಿತು.ಇದರಿಂದ ಕೋಪಗೊಂಡ ರಾಜನು “ನೊಣ ಹೊಡೆಯಲು ಕತ್ತಿಯನ್ನು ಉಪಯೋಗಿಸುತ್ತಾರೆಯೇ ಮೂರ್ಖ!ನೀನು ನನ್ನ ಪ್ರಾಣವನ್ನೇ ತೆಗೆದುಬಿಡುತ್ತಿದ್ದೆ”ಎಂದು ಕೋತಿಗೆ ಹೇಳಿ ನಂತರ ಮಂತ್ರಿಗೆ “ಧನ್ಯವಾದಗಳು ಮಂತ್ರಿ ನೀನು ಇಲ್ಲದಿದ್ದರೆ ಈ ಕೋತಿ ನನ್ನ ಪ್ರಾಣವನ್ನೇ ತೆಗೆದು ಬಿಡುತ್ತಿತ್ತು, ಇವನನ್ನು ಅಂಗರಕ್ಷಕನನ್ನಾಗಿ ಮಾಡಿ ತಪ್ಪು ಮಾಡಿದೆ,,ಆದ್ರೆ ಇವನು ಸ್ನೇಹಿತನಾಗಿ ಬೇಕಾದರೆ ಇರಬಹುದು ಅಂಗರಕ್ಷಕನಾಗಿ ಅಲ್ಲ” ಎಂದು ಹೇಳಿದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
