ಕನಸಿನ ಉದ್ಯೋಗ ಬೇಕೆ ಹಾಗಾದರೆ ಈ ದೇವರನ್ನು ಪೂಜಿಸಿ.
ಹಿಂದೂ ಪುರಾಣಗಳ ಪ್ರಕಾರ ಒಟ್ಟು 33 ಕೋಟಿ ದೇವತೆಯರಿದ್ದಾರೆ.ಪ್ರತಿ ದೇವತೆಗೂ ಒಂದೊಂದು ಶಕ್ತಿಯಿದ್ದು ವಿಶೇಷ ಪಾತ್ರವನ್ನು ನಿರ್ವಹಿಸುತ್ತಾರೆ. ಉದಾಹರಣೆಗೆ ಲಕ್ಷ್ಮೀ ಎಂದರೆ ಧನದೇವತೆ ಸರಸ್ವತಿ ಎಂದರೆ ವಿದ್ಯಾ ದೇವತೆ.ಗಣೇಶ ವಿಜ್ಞ ನಿವಾರಕ ಹೀಗೆ.
ಹಾಗಾದರೆ ಉತ್ತಮ ಉದ್ಯೋಗ ಪಡೆಯಲು ಯಾವ ದೇವರನ್ನು ಒಲಿಸಿಕೊಳ್ಳಬೇಕು ? ಅಷ್ಟಕ್ಕೂ ಉದ್ಯೋಗಕ್ಕಾಗಿ ಪುರಾಣದಲ್ಲಿ ಯಾವುದಾದರೂ ದೇವತೆ ಇದ್ದಾರೆಯೇ ? ಈ ಪ್ರಶ್ನೆಯನ್ನು ಪಂಡಿತರಲ್ಲಿ ಕೇಳಿದರೆ ನಮಗೆ ಸಿಗುವ ಉತ್ತರ ‘ಇಲ್ಲ’.
ವಾಸ್ತವವಾಗಿ ಉದ್ಯೋಗಕ್ಕಾಗಿ ಯಾವುದೇ ದೇವತೆ ಹಿಂದೂ ಪರಂಪರೆಯಲ್ಲಿ ನಿಗದಿಪಡಿಸಿಲ್ಲ.ಆದರೆ ಇದಕ್ಕೂ ಒಂದೂ ಪರ್ಯಾಯವಾದ ಮಾರ್ಗವಿದೆ. ಕೆಲವು ಶಕ್ತಿಗಳು ಒಂದಕ್ಕಿಂತ ಹೆಚ್ಚು ದೇವರುಗಳನ್ನು ಆರಾಧಿಸುವ ಮೂಲಕ ನಿಮ್ಮ ಕನಸಿನ ಉದ್ಯೋಗ ಪಡೆಯಲು ಖಂಡಿತ ಸಾಧ್ಯವಿದೆ.ಈ ನಿಟ್ಟಿನಲ್ಲಿ ಯಾವ ದೇವರನ್ನು ಆರಾಧಿಸಬಹುದು ಎಂಬುದನ್ನು ನೀವೇ ಪರಾಮರ್ಶವಾಗಿ ಅತ್ಯಂತ ಸೂಕ್ತ ಎಂದು ಕಂಡು ಬಂದ ದೇವರನ್ನು ಆಯ್ದುಕೊಳ್ಳಿ.
ಗಣೇಶ.
ಗಣೇಶ ಗಣನಾಯಕನೂ ಹೌದು,ವಿಜ್ಞ ನಿವಾರಕನೂ ಹೌದು.ಅಂತೆಯೇ ಯಾವುದಾದರೂ ಹೊಸತನ್ನು ಪ್ರಾರಂಭಿಸುವಾಗ ಯಾವುದೇ ವಿಜ್ಞಗಳು ಬರದಂತೆ ಗಣೇಶನನ್ನು ಪೂಜಿಸಿಯೇ ಕಾರ್ಯಾರಂಭಗೊಳಿಸಲಾಗುತ್ತದೆ.
ಗಣೇಶ ದೇವರನ್ನು ಮೊದಲು ಪೂಜಿಸಲು ಕಾರಣಗಳೇನು ?
“ಓಂ ಗಂ ಗಣೇಶಾಯಃ ನಮಃ”
“ಓಂ ಗಂ ಗಣಪತಯೇ ನಮಃ”
ಅಂತೆಯೇ ಗೃಹಪ್ರವೇಶ, ಹೊಸ ವಾಹನ ವ್ಯಾಪಾರ ಮೊದಲಾದವುಗಳ ಪ್ರಾರಂಭದಲ್ಲಿ ಪೂಜೆ ಗಣೇಶನಿಗೆ ಮೀಸಲು.ಆದ್ದರಿಂದ ನಿಮ್ಮ ಉದ್ಯೋಗದ ಸಂದರ್ಶನದ ದಿನದಂದು ಗಣೇಶ ಮಂತ್ರವನ್ನು ಪಠಿಸಿ ಹೊರಡಿ. ಮಂತ್ರವೇನು ಕಷ್ಟದಲ್ಲ ಈ ಮೇಲೆ ಹೇಳಿದ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಹೇಳಿಕೊಂಡರೆ ಸಾಕು.
ದೇವಿ ಲಕ್ಷ್ಮೀ.
ಲಕ್ಷ್ಮೀ ಕೇವಲ ಧನದ ದೇವತೆ ಮಾತ್ರವಲ್ಲ,ಉತ್ತಮ ಭವಿಷ್ಯ ನೀಡುವ ದೇವತೆಯೂ ಆಗಿದ್ದಾಳೆ.ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.ಸಾಮಾನ್ಯವಾಗಿ ಮನೆತನವನ್ನು ಆಧರಿಸಿ ಗುರುವಾರ ಮತ್ತು ಶುಕ್ರವಾರದಂದು ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಗುತ್ತದೆ.ಈ ಸಂದರ್ಭವನ್ನು ನಿಮ್ಮ ಉದ್ಯೋಗ ಪಡೆಯಲು ಉಪಯೋಗಿಸಿಕೊಂಡು ಸಂದರ್ಶನ ಮುನ್ನಾ ದಿನದಲ್ಲಿ ಪ್ರಾರ್ಥಿಸುವ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.
ದೇವಿ ಸರಸ್ವತಿ.
ವಿದ್ಯೆ,ಕಲೆ,ಸಂಗೀತ ಮೊದಲಾದವುಗಳಿಗೆ ಸರಸ್ವತಿ ದೇವಿಯನ್ನು ಆರಾಧಿಸಬೇಕು. ಇಂದು ಉದ್ಯೋಗ ಪಡೆಯಬೇಕೆಂದು ವಿದ್ಯೆ ಅತ್ಯಂತ ಅಗತ್ಯವಾಗಿದೆ.ಆದ್ದರಿಂದ ವಿದ್ಯಾವಂತರಾಗಿ ಉದ್ಯೋಗವನ್ನು ಅರಸಲು ಹೊರಡುವ ಮುನ್ನ ಸರಸ್ವತಿಯನ್ನು ಆರಾಧಿಸಿ ಬಿಳಿಯ ಹೂವುಗಳನ್ನು ಅರ್ಪಿಸಿ ಹೊರಡುವ ಮೂಲಕ ಮುಂದಿನ ಕಾರ್ಯಗಳು ಸುಗಮವಾಗುತ್ತವೆ.
ಉದ್ಯೋಗಕ್ಕಾಗಿ ಎಲ್ಲಾ ದೇವತೆಗಳನ್ನು ಆರಾಧಿಸಲೇಬೇಕು ಎಂದೇನಿಲ್ಲ. ನಿಮಗೆ ಸೂಕ್ತ ಎನಿಸಿದ ಎರಡು ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಸಾಕು.ಇದರಿಂದ ನಿಮಗೆ ಮನಸ್ಸಿನಲ್ಲಿ ದೊರಕುವ ಬೆಂಬಲ ಮತ್ತು ನಿರಾಳತೆ ಉದ್ಯೋಗ ಪಡೆಯಲು ನೆರವಾಗುತ್ತದೆ.ಆದರೆ ದೇವರು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾರೆಯೇ ಹೊರತು ಬೇರೇನನ್ನೂ ಅಲ್ಲ. ಆದ್ದರಿಂದ ಸೂಕ್ತವಾದ ತಯಾರಿ ಮಾಡಿಕೊಂಡೇ ಹೊರಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
