ಮಂಗಳವಾರ, ೨೫ ಜುಲೈ ೨೦೧೭
ಸೂರ್ಯೋದಯ : ೦೫:೪೨
ಸೂರ್ಯಾಸ್ತ : ೧೯:೧೨
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಶ್ರಾವಣ
ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಆಶ್ಲೇಷ
ಯೋಗ : ವ್ಯತೀಪಾತ
ರಾಹು ಕಾಲ: ೧೫:೪೯ – ೧೭:೩೧
ಗುಳಿಕ ಕಾಲ: ೧೨:೨೭ – ೧೪:೦೮
ಯಮಗಂಡ: ೦೯:೦೫ – ೧೦:೪೬
ಮೇಷ (Mesha)
ಅನಿರೀಕ್ಷಿತ ರೀತಿಯಲ್ಲಿ ಉತ್ತಮ ಫಲಗಳು ತೋರಿ ಬಂದಾವು. ದಾಯಾದಿಗಳು, ಹಿತಶತ್ರುಗಳು ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಯಾರು. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿದರೆ ಉತ್ತಮ.
ವೃಷಭ (Vrushabh)
ಬಾಳ ಸಂಗಾತಿಯೊಡನೆ ಹೊಂದಾಣಿಕೆ ಸಮಾಧಾನದಲ್ಲಿದ್ದರೆ ನೆಮ್ಮದಿ ಸಿಗಲಿದೆ. ಶ್ರೀದೇವರ ದರ್ಶನ ಭಾಗ್ಯದಿಂದ ಸಮಾಧಾನ, ನೆಮ್ಮದಿ ಸಿಗಲಿದೆ. ಮನೆಯಲ್ಲಿ ಆಲಂಕಾರಿಕ ವಸ್ತುಗಳಿಗಾಗಿ ಖರ್ಚು ಬಂದೀತು.
ಮಿಥುನ (Mithuna)
ಯಾವುದೇ ಅವಸರದ ನಿರ್ಣಯಗಳನ್ನು ತೆಗೆದುಕೊಳ್ಳದೆ ಮುಂದುವರಿಯಿರಿ. ಆರ್ಥಿಕವಾಗಿ ತುಸು ಹೂಡಿಕೆ ಲಾಭಕರವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಲ್ಲಿ ತೃಪ್ತಿ ಪಡುವಂತಾದೀತು.
ಕರ್ಕ (Karka)
ಯಾವುದೇ ಅವಸರದ ನಿರ್ಣಯಗಳನ್ನು ತೆಗೆದುಕೊಳ್ಳದೆ ಮುಂದುವರಿಯಿರಿ. ಆರ್ಥಿಕವಾಗಿ ತುಸು ಹೂಡಿಕೆ ಲಾಭಕರವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಲ್ಲಿ ತೃಪ್ತಿ ಪಡುವಂತಾದೀತು.
ಸಿಂಹ (Simha)
ಆರ್ಥಿಕವಾಗಿ ಅನಾವಶ್ಯಕ ಹೆಚ್ಚಿನ ಹೊಡಿಕೆ ಉತ್ತಮವಲ್ಲ ವೈವಾಹಿಕ ಜೀವನದಲ್ಲಿ ಸಮಾಧಾನಕರವಾದ ವಾತಾವರಣ. ದೊಡ್ಡ ಬಂಡವಾಳ ಹೂಡಿ ಸ್ವಯಂ ಉದ್ಯೋಗ ಬೇಡ. ಮಕ್ಕಳ ಬಗ್ಗೆ ಸಮಾಧಾನವಿದೆ.
ಕನ್ಯಾರಾಶಿ (Kanya)
ಮಹಿಳಾ ಉದ್ಯೋಗಿಗಳಿಗೆ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಪ್ರವೇಶವನ್ನು ಅಭ್ಯಾಸಕ್ಕಾಗಿ ಪಡೆಯಲಿದ್ದಾರೆ. ಸಾಂಸಾರಿಕವಾಗಿ ದಾಂಪತ್ಯದಲ್ಲಿ ಸುಖ, ಸಮಾಧಾನಗಳಿರುತ್ತವೆ. ಅತಿಥಿಗಳ ಆಗಮನ.
ತುಲಾ (Tula)
ಹಿರಿಯರಿಂದ ಶುಭವಾರ್ತೆ. ವಾಹನ ಯೋಗ, ಗೈರು ನಿರ್ಮಾಣ ಯೋಗಗಳಿಗೆ ಸಕಾಲ. ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಕಟ್ಟು ನಿಟ್ಟಿರಲಿ. ಯಾರಿಗೂ ಗ್ಯಾರಂಟಿ ನೀಡದಿರಿ. ದಿನಾಂತ್ಯ ಶುಭವಿದೆ.
ವೃಶ್ಚಿಕ (Vrushchika)
ಸಿಕ್ಕಿದ ಅವಕಾಶಗಳನ್ನು ಪಡೆದುಧಿಕೊಳ್ಳಿರಿ. ಉತ್ತಮ ಅವಕಾಶಗಳು ವಿದ್ಯಾರ್ಥಿಗಳಿಗೆ ಸಿಗಲಿವೆ. ಸಾಲದ ಬಾಧೆಯಿಂದ ಮುಕ್ತರಾಗಲು ಹಲವು ದಾರಿಗಳು ತೋರಿ ಬಂದಾವು. ಶ್ರೀದೇವತಾದರ್ಶನ ಭಾಗ್ಯವಿದೆ.
ಧನು ರಾಶಿ (Dhanu)
ವೃತ್ತಿಕ್ಷೇತ್ರದಲ್ಲಿ ಬಂದ ಅವಕಾಶ ಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಿರಿ. ಅನಾವಶ್ಯಕವಾಗಿ ಇತರರೊಡನೆ ವಾದ ವಿವಾದಕ್ಕೆ ಕಾರಣರಾಗದಿರಿ. ಹಳೆಯ ಸ್ನೇಹಿತರ ಭೇಟಿ ಸಮಾಧಾನ ತರಲಿದೆ. ದಿನಾಂತ್ಯ ಶುಭವಿದೆ.
ಮಕರ (Makara)
ಉತ್ತಮ ಗುರುಬಲದಿಂದ ಮುನ್ನಡೆಗೆ ಸಾಧನೆ ತೋರಿ ಬರುತ್ತದೆ. ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗೆ ಒಳಗಾಗದಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದಲ್ಲಿ ಸಫಲತೆಯನ್ನು ಸಾಧಿಸಲಿದ್ದಾರೆ.
ಕುಂಭರಾಶಿ (Kumbha)
ಉತ್ಮಮ ಶನಿಬಲದಿಂದ ಮುನ್ನಡೆಯಲು ಇದು ಸರಿಯಾದ ಸಮಯ. ವಿದ್ಯಾರ್ಥಿಗಳು ಉತ್ತಮ ವಿದ್ಯಾಲಾಭ ಹೊಂದಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಶಾಂತಚಿತ್ತರಾಗಿರಿ.
ಮೀನರಾಶಿ (Meena)
ಶ್ರೀ ದೇವತಾನುಗ್ರಹವಿರುವುದರಿಂದ ದೃಢ ನಿರ್ಧಾರದಿಂದ ಮುನ್ನುಗ್ಗಿ. ಸಾಫಲ್ಯ ಕಂಡು ಬರುತ್ತದೆ. ಸಾಧನೆಗೆ ಹಲವಾರು ದಾರಿಗಳು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮನ್ನು ಮುನ್ನಡೆಸಲಿವೆ. ದೇವತಾ ದರ್ಶನ ಮಾಡಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
