ವಾಸ್ತುಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡ್ರೆ ಕೆಲಸದಲ್ಲಿ ನಷ್ಟ ಆಗೋದು ಗ್ಯಾರಂಟಿ!!!
ನಾವು ನಮ್ಮ ಜೇಬಿನಲ್ಲಿ ಹಣ, ಕೈಗವಸು, ಮನೆ ಕೀಲಿಗಳು, ವ್ಯಾಲೆಟ್ ಇತ್ಯಾದಿಗಳಲ್ಲಿ ಇಟ್ಟುಕೊಳ್ಳುತ್ತೇವೆ. ಆದರೆ, ನಿಮ್ಮ ಜೇಬಿನಲ್ಲಿ ಕೆಲವು ವಸ್ತುಗಳನ್ನು ಇರಿಸಿದರೆ ಋಣಾತ್ಮಕ ವಾಸ್ತನ್ನು ಆಕರ್ಷಿಸಬಹುದು ಎಂದು ನಿಮಗೆ ತಿಳಿದಿದೆಯೇ? ನೀವು ನಿಮ್ಮ ಜೇಬಿನಲ್ಲಿ ಯಾವ ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂದು ತಿಳಿದುಕೊಳ್ಳಲು ಮುಂದೆ ಓದಿ …
1. ಹಳೆ ರಶೀದಿಗಳು:
ವಾಸ್ತು ಶಾಸ್ತ್ರದ ಪ್ರಕಾರ ಹಳೆ ರಶೀದಿಯನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡ್ರೆ ಆ ಹಳೆ ರಶೀದಿಗಳು ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ.ಅವನ್ನು ಜೇಬಿನಲ್ಲಿ ಇಟ್ಟುಕೊಳ್ಳುವ ಬದಲು ಒಂದು ಫೈಲ್ ಮಾಡಿ ಅದರಲ್ಲಿ ಇಡಬಹುದು
2.ಹರಿದ ಪರ್ಸ್(wallet):
ಹರಿದು ಹೋಗಿರುವ ವ್ಯಾಲೆಟ್ ಅನ್ನು ಜೇಬಿನಲ್ಲಿ ಇಟ್ಟುಕೊಂಡರೆ ಋಣಾತ್ಮಕ ಶಕ್ತಿಗಳು ಆಕರ್ಷಿತಗೊಂಡು ನಿಮ್ಮ ಹಣದ ನಷ್ಟಕ್ಕೆ ಸಿಕುವಂತೆ ಮಾಡುತ್ತವೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
3.ಔಷದಗಳು ಮತ್ತು ಮಾತ್ರೆಗಳು:
ವಾಸ್ತು ಶಾಸ್ತ್ರದ ಪ್ರಕಾರ ಔಷಧಿಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಅರೋಗ್ಯ ಸುಧಾರಿಸುವುದಿಲ್ಲ ಮತ್ತು ಇನ್ನೂ ಹದಗೆಡುತ್ತದೆ.
4.ಧಾರ್ಮಿಕ ದರಗಳು(ಯಂತ್ರಗಳು):
ವಸ್ತು ಶಾಸ್ತ್ರ ಜೋತಿಷಿಗಳು ಕೊಟ್ಟಿರುವಂತಹ ಧಾರ್ಮಿಕ ದರಗಳನ್ನು ನಮ್ಮ್ ಜೇಬಿನಲ್ಲಿ ಇಟ್ಟುಕೊಳ್ಳಬಾರದೆಂದು ಹೇಳುತ್ತವೆ ಏಕೆಂದರೆ ಅವು ನಿಮ್ಮ ಮೇಲೆ ಋಣಾತ್ಮಕ ದುಷ್ಟ ಶಕ್ತಿಗಳನ್ನು ಆಕರ್ಷಿಸುತ್ತವೆ.
5.ಹರಿದ ಮತ್ತು ಮುದುರಿದ ನೋಟುಗಳು:
ಹರಿದ ಮತ್ತು ಮುದುರಿದ ನೋಟುಗಳನ್ನು ನಿಮ್ಮ ಜೇಬಿನೊಳಗೆ ಇಟ್ಟುಕೊಂಡರೆ ನೀವು ಮಾಡುವ ಕೆಲಸದಲ್ಲಿ ನಷ್ಟ ಅನುಭವಿಸುತ್ತೀರ.
6.ಕುರುಕಲು ತಿಂಡಿ:
ವಸ್ತು ಶಾಸ್ತ್ರದ ಪ್ರಕಾರ ಕುರುಕಲು ತಿಂಡಿಯನ್ನು ಕೂಡ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಾರದು ಏಕೆಂದರೆ ಅದು ನಿಮ್ಮನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ.
ಈ ಪದಾರ್ಥಗಳನ್ನು ಇಟ್ಟುಕೊಳ್ಳುವುದರ ಬದಲು ಲಕ್ಷೀದೇವರ ಫೋಟೋ, ಬೆಳ್ಳಿ ನಾಣ್ಯ, ಆಲದ ಎಲೆ, ತಾವರೆ ಹೂವಿನ ಎಸಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡೆ ಒಳ್ಳೇದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
