ವೀರ್ಯಾಣು ದಾನದ ಬಗ್ಗೆ ನಿಮಗೆ ಗೊತ್ತಿದ್ಯಾ ? ಯಾರು ಯಾವ ರೀತಿ ವೀರ್ಯಾಣು ದಾನ ಮಾಡಬಹುದು ತಿಳ್ಕೊಳ್ಳಿ ..
ಇತ್ತೀಚಿನ ದಿನಗಳಲ್ಲಿ ವಿವಿಧ ಆಹಾರ ಬದಲಾವಣೆಗಳು , ಆಧುನಿಕ ಜೀವನ ಶೈಲಿ , ಒತ್ತಡ , ಸಮಯ ಇನ್ನು ಮುಂತಾದ ಸಮಸ್ಯೆಗಳಿಂದ ಪುರುಷರ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತಿದೆ .
ಮೊದಲು ಮಕ್ಕಳು ಮನೆ ತುಂಬಾ ಇರ್ಲಿ ಅಂತಿದವ್ರು ಈಗ ರೋಡ್ ಗೆ ಒಂದು ಅನ್ನೋ ಪರಿಸ್ಥಿತಿಗೆ ಬಂದ್ಬಿಟ್ಟಿದ್ದಾರೆ .
ನಮ್ಮದೇ ಮಗು ಬೇಕು ಆದ್ರೆ ಗಂಡನಿಗೆ ಲೈಂಗಿಕ ಸಮಸ್ಯೆ ಯಾಕೋ ಮಕ್ಳಆಗುತ್ತಿಲ್ಲ ಅನ್ನೋರಿಗೆ ಒಳ್ಳೆ ಸುದ್ಧಿ .
ಪುರುಷ ಪಾಲುದಾರನು ಯಾವುದೇ ವೀರ್ಯಾಣು (ಅಜೋಸ್ಪೆರ್ಮಿಯಾ) ಅನ್ನು ಉತ್ಪಾದಿಸುವಂತಹ ಸ್ಥಿತಿಗೆ ತಲುಪಿ
ಗಂಡು ಬಂಜೆತನದ ಕಾರಣದಿಂದಾಗಿ ಮಕ್ಕಳನ್ನು ಉತ್ಪಾದಿಸಲು ಅಸಮರ್ಥವಾದ ಜೋಡಿಗಳಿಗೆ ನೆರವಾಗಲು ವೀರ್ಯದಾನವನ್ನು ಬಳಸಲಾಗುತ್ತದೆ.
ಲೈಂಗಿಕ ಆಸಕ್ತಿ ಹೊಂದಿರದ ಅಥವಾ ಬರಿ ಹೆಣ್ಣಿನಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಸಹ ವೀರ್ಯಾಣು ದಾನವನ್ನು ಸಕ್ರಿಯಗೊಳಿಸುವ ಸಾಧನವಾಗಿ ಜನಪ್ರಿಯವಾಗಿ ಬಳಸುತ್ತಾರೆ .
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ:
ವೀರ್ಯಾಣು ದಾನಿ 21 ರಿಂದ 45 ವರ್ಷದೊಳಗಿರಬೇಕು
ಅವರ ಎತ್ತರ, ತೂಕ, ಚರ್ಮದ ಬಣ್ಣ, ವೃತ್ತಿ, ಕುಟುಂಬದ ಹಿನ್ನೆಲೆ, ರೋಗಗಳು , ಜನಾಂಗೀಯ ಮೂಲ ಮತ್ತು ಡಿಎನ್ಎ ಬೆರಳಚ್ಚು ಮುಂತಾದ ದಾನಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಕ್ಲಿನಿಕ್ ಮತ್ತು ದಂಪತಿ ಹೊಂದಿರುತ್ತಾರೆ.
ಆದರೆ ದಾನ ಪಡೆಯುವವರಿಗೆ ದಾನಿಯ ಯಾವುದೇ ಇತರ ವೈಯಕ್ತಿಕ ವಿಚಾರಗಳನ್ನು ತಿಳಿಸಲಾಗುವುದಿಲ್ಲ .
ದಾನ ಮಾಡಲು ನಿಯಮಗಳು:
ಒಂದು ವೀರ್ಯ ಬ್ಯಾಂಕ್ನಲ್ಲಿ, ದಾನಿ ಒಂದು ನಿರ್ದಿಷ್ಟ ಅವಧಿಗೆ ವೀರ್ಯ ದಾನ ಮಾಡಲು ಒಂದು ಒಪ್ಪಂದಕ್ಕೆ ಸಹಿ ಹಾಕುತ್ತಾನೆ.
ದಾನದ 48 ಗಂಟೆಗಳ ಮುಂಚೆ ಲೈಂಗಿಕ ಅಥವಾ ಹಸ್ತಮೈಥುನದಿಂದ ದೂರವಿರಲು ಹೇಳಲಾಗುತ್ತದೆ
ಸ್ಪರ್ಮ್ ಬ್ಯಾಂಕುಗಳು ಸಾಮಾನ್ಯವಾಗಿ 5-10 ಸ್ಯಾಂಪಲ್ಗಳನ್ನೂ 90 ದಿನಗಳ ಕಾಲ ದ್ರವರೂಪದ ಸಾರಜನಕದಲ್ಲಿ ಇಟ್ಟು ವೀರ್ಯಾಣುವಿನ ಚಲನವಲನ , ಸೋಂಕುಗಳು ಮತ್ತು ರೋಗಗಳಾದ
ಹೆಚ್‌ಐವಿ, ಹೆಪಟೈಟೀಸ್ ಬಿ , ಸಿ, ಏಡ್ಸ್ , ಕ್ಯಾನ್ಸರ್, ಮಧುಮೇಹ ಇನ್ನಿತರ ಯಾವುದೇ ಗುಪ್ತ ರೋಗಗಳ ಬಗ್ಗೆ ಪರೀಕ್ಷಿಸಲ್ಪಡುತ್ತದೆ.
ಇದಾದ ಆರು ತಿಂಗಳುಗಳ ನಂತರ ವೀರ್ಯಾಣು ಆರೋಗ್ಯವಾಗಿದ್ದರೆ ಮಾತ್ರ ಬಳಸಲಾಗುತ್ತದೆ.
ಪ್ರತಿ ದಾನಕ್ಕಾಗಿ, ದಾನಿಗೆ 1,000 ರಿಂದ 2,000 ರೂಪಾಯಿ ಪಾವತಿಸಲಾಗುತ್ತದೆ.
ವಾರ್ಷಿಕವಾಗಿ ರೂ 40,000 ವರೆಗೆ ಗಳಿಸಬಹುದು.
ಈ ಬೆಲೆಯೂ ಕ್ಲಿನಿಕ್ ನ ಮೇಲೆ ಆಧಾರವಾಗಿದೆ ಕೆಲವು ಕಡೆ ಇನ್ನು ಹೆಚ್ಚು ಹಣ ನೀಡುತ್ತಾರೆ .
ಖಾಸಗಿ ಕೋಣೆಯಲ್ಲಿ ಹಸ್ತಮೈಥುನದ ಮೂಲಕ ವ್ಯಕ್ತಿ ವೀರ್ಯ ಬ್ಯಾಂಕ್ನಲ್ಲಿ ದಾನ ನೀಡುತ್ತಾನೆ.
ಅಷ್ಟೇ ಅಲ್ಲದೆ ದಾನಿಯ ಜಾತಿ ,ಧರ್ಮವನ್ನು , ಕುಟುಂಬದ ಇತಿಹಾಸ , ವಿದ್ಯಾಭ್ಯಾಸ , ಅಭ್ಯಾಸಗಳು ಸಹ ಪರಿಗಣನೆಗೆ ಒಳಪಡುತ್ತದೆ ,
ಕೆಲವರಿಗೆ ಅವರದ್ದೇ ಜಾತಿಯ ವ್ಯಕ್ತಿಯ ವೀರ್ಯಾಣು ಬೇಕಾಗಿರುತ್ತದೆ .
ಕೆಲವರಿಗೆ ಗಂಡಸಿನ ಉದ್ಯೋಗದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಏಕೆಂದರೆ ಆತ ಬುದ್ದಿವಂತನೋ ಅಲ್ಲವೋ ಎಂದು ಇಂತಹ ವೀರ್ಯಗಳಿಗೆ ಮತ್ತಷ್ಟು ಹಣ ಕೊಟ್ಟು ದಾನ ಮಾಡಿಸಿಕೊಳ್ಳುತ್ತಾರೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
