ದಂಟಿನ ಸೊಪ್ಪು ಯಾವೆಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದು ನಿಮ್ಗೆ ಗೊತ್ತಾದ್ರೆ ಆಶ್ಚರ್ಯ ಪಡ್ತೀರ!!!
ನಾವೆಲ್ಲರೂ ದಂಟಿನ ಸೊಪ್ಪಿನ ಪಲ್ಯ ಹಾಗೂ ಸಾರುಗಳನ್ನು ನಾವು ತಿಂದಿರುತ್ತೇವೆ.ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಳೆಗಾಲ ಸಮಯದಲ್ಲಿ ಈ ಸೊಪ್ಪನ್ನು ಹೆಚ್ಚು ಬೆಳೆಯಲಾಗುತ್ತದೆ. ಹೆಚ್ಚು ನಾರಿನಂಶದಿಂದ ಕೂಡಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಈ ಸೊಪ್ಪು ಆರೋಗ್ಯಕ್ಕೂ ತುಂಬಾ ಒಳ್ಳೇದು.ದಂಟಿನ ಸೊಪ್ಪು ಪ್ರೊಟೀನ್, ಮಿನರಲ್ಸ್, ವಿಟಮಿನ್ ಎ ಮತ್ತು ಸಿ, ಐರನ್, ಪೊಟಾಷಿಯಮ್ ಹಾಗೂ ಗಂಧಕವನ್ನು ಹೊಂದಿರುತ್ತದೆ.
ದಂಟಿನ ಸೊಪ್ಪು ಅನೇಕ ಅರೋಗ್ಯ ಗುಣಗಳನ್ನು ಹೊಂದಿದೆ ಅವು ಯಾವು ಎಂದು ತಿಳಿದುಕೊಳ್ಳಲು ಮುಂದೆ ಓದಿ
1.ಜೀರ್ಣಶಕ್ತಿ ಹೆಚ್ಚಿಸುತ್ತದೆ:
ದಂಟಿನ ಸೊಪ್ಪಿನಲ್ಲಿ ಜಾಸ್ತಿ ಪ್ರಮಾಣದ ನಾರಿನಂಶವು ಇರುವುದರಿಂದ ಇದು ಜೀರ್ಣ ಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತದೆ.
2.ಮಲಬದ್ದತೆಗೆ ರಾಮಬಾಣ:
ದಂಟಿನ ಸೊಪ್ಪಿನಲ್ಲಿರುವ ನಾರಿನ ಅಂಶವು ಮಲಬದ್ಧತೆ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಲ ಬದ್ಧತೆ ಇರುವವರು ದಂಟನ್ನು ಆಗಾಗ್ಗೆ ಸೇವಿಸಿದರೆ ಮಲಬದ್ಧತೆಯು ನಿವಾರಿಸುತ್ತದೆ.
3.ಋತುಚಕ್ರ ಸಮಸ್ಯೆಗೆ ಒಳ್ಳೆಯದು:
ಮಹಿಳೆಯರಲ್ಲಿ ಸಾಮನ್ಯವಾಗಿ ಎದುರಾಗುವ ಋತುಚಕ್ರದ ಸಮಸ್ಯೆಗೆ ದಂಟಿನ ಸೊಪ್ಪು ದಿವ್ಯಔಷದ ಇದ್ದಂತೆ. ಆಹಾರದಲ್ಲಿ ಆಗಾಗ್ಗೆ ದಂಟಿನ ಸೊಪ್ಪು ಮತ್ತು ಎಳೆ ಕಾಂಡಗಳನ್ನು ಸೇವಿಸುವುದರಿಂದ ಋತುಚಕ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
4.ದೇಹವನ್ನು ತಂಪುಗೊಳಿಸಲು:
ದೇಹದ ಉಷ್ಣತೆಯಿಂದ ಬಳಲುತ್ತಿರುವವರು ದಂಟಿನ ಸೊಪ್ಪನ್ನು ಉಪಯೋಗಿ ಅವರ ಸಮಸ್ಯೆಯನ್ನು ಬಗೆಹಜಾರಿಸಿಕೊಳ್ಳಬಹುದು, ದಂಟಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ನೀರು ಉಗುರು ಬೆಚ್ಚಗೆ ಆದಮೇಲೆ ಆ ನೀರನ್ನು ತಲೆಯ ಬುಡಕ್ಕೆ, ಕೂದಲಿಗೆ ಹಚ್ಚಿದರೆ ದೇಹವು ತಂಪಾಗುತ್ತದೆ. ಇದು ಒಳ್ಳೆಯ ಕಂಡೀಶನರ್ಆಗಿ ಕೂಡ ಕೆಲಸ ಮಾಡುತ್ತದೆ.
5.ಬಾಣಂತಿಯರಲ್ಲಿ ಹಾಲನ್ನು ವೃದ್ಧಿಸುತ್ತದೆ:
ಬಾಣಂತಿಯರಿಗೆ ದಂಟಿನ ಸೊಪ್ಪನ್ನು ಹೆಚ್ಚು ಹೆಚ್ಚಾಗಿ ನೀಡುವುದರಿಂದ ಅವರಲ್ಲಿ ಉತ್ತಮ ಪೌಷ್ಟಿಕ ಎದೆ ಹಾಲಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತದೆ.
6.ಹಸಿವನ್ನು ಹೆಚ್ಚಿಸುತ್ತದೆ:
ದಂಟಿನ ಸೊಪ್ಪಿನಲ್ಲಿರುವ ನಾರಿನಂಶವು ತ್ವರಿತವಾಗಿ ಜೀರ್ಣಕ್ರಿಯೆಯು ನಡೆಯುವಂತೆ ಮಾಡಿ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಹೊಟ್ಟೆ ಹಸಿವಾಗೋದೇ ಇಲ್ಲ ಅನ್ನೋರು ದಂಟಿನ ಸೊಪ್ಪನ್ನು ಬಳಸಿದರೆ ಉತ್ತಮ
7.ರಕ್ತವನ್ನು ಶುದ್ದೀಕರಿಸುತ್ತದೆ:
ದಂಟಿನ ಸೊಪ್ಪು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ತವನ್ನು ಶುದ್ಧೀಕರಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
