fbpx
ಭವಿಷ್ಯ

ಮನೆಯೊಳಗಿರುವ ಋಣಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ಓಡಿಸಲು ಹೀಗೆ ಮಾಡಿ

ನಮ್ಮ ಮನೆಯೊಳಗೆ ಇರುವ ಋಣಾತ್ಮಕ   ಮತ್ತು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗೆ ಓಡಿಸಲು ಏನು ಮಾಡಬೇಕು.

ನಮ್ಮ ಮನೆಯಲ್ಲಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆಯನ್ನು ಅನುಭವಿಸುತ್ತಿದ್ದರೆ, ನಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚು ಇದೆ ಎಂದು ಅರ್ಥ.

ನಮ್ಮ ಮನೆಯಲ್ಲಿ ನಾವು ಮಾತ್ರವೇ ಇದ್ದರೂ ಸಹ,ನಮ್ಮ ಮನೆಗೆ ಬರುವ ಬೇರೆ ಮನುಷ್ಯರು ಅಂದರೆ ಸ್ನೇಹಿತರು,ಅತಿಥಿಗಳು,ಬಂಧುಗಳ ಕಡೆಯಿಂದ ಋಣಾತ್ಮಕ ಶಕ್ತಿ ನಮ್ಮ ಮನೆಗೆ ಬರಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ವಾಸ್ತು ದೋಷ ಮತ್ತು ಋಣಾತ್ಮಕ ಶಕ್ತಿ ಇವೆರಡನ್ನು  ದೂರ ಮಾಡಿಕೊಂಡು ಸುಖವಾದ ಜೀವನವನ್ನು ಅನುಭವಿಸಬೇಕೆಂದರೆ ಏನು ಮಾಡಬೇಕು ? ಎಂದು ನಾವು ಈಗ ಅದರ ಬಗ್ಗೆ ತಿಳಿದುಕೊಳ್ಳೋಣ…..

1.ಬೇವಿನ ಎಲೆಗಳು.

ಬೇವಿನ ಎಲೆಗಳನ್ನು ಸುಟ್ಟು ಮನೆಯ ಒಳಗೆ  ಹೊಗೆ ಹಾಕಿದರೆ ಮನೆಯಲ್ಲಿರುವ ಕೆಟ್ಟ, ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ. ಅದಲ್ಲದೆ ಮನೆಯ ವಾಸ್ತು ದೋಷಗಳು ಸಹ ದೂರವಾಗುತ್ತವೆ.

2.ಸುಗಂಧ ದ್ರವ್ಯಗಳು ಅಥವಾ ಪರಿಮಳ.

ಅಗರಬತ್ತಿಯನ್ನು  ಪೂಜಾ ಸಮಯದಲ್ಲಿ ಮಾತ್ರವಲ್ಲದೆ ಬೇರೆ ಸಮಯದಲ್ಲಿಯೂ ಸಹ ಮನೆಯಲ್ಲಿ ಹಚ್ಚಿಟ್ಟು ಉಪಯೋಗಿಸಬಹುದು. ಇದರಿಂದ ಪರಿಮಳ ಸುಗಂಧ ಹೆಚ್ಚುತ್ತದೆ.ಮನೆಯಲ್ಲಿ ಸುವಾಸನೆ ಹೆಚ್ಚಿ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ.ಅಗರ ಬತ್ತಿಯನ್ನು ಬೆಸ ಸಂಖ್ಯೆಯಲ್ಲಿ ಮಾತ್ರವೇ ಉಪಯೋಗಿಸಬೇಕು 3,5,7, ಅಂತಹ ಲೆಕ್ಕದಲ್ಲಿ ಅಗರ ಬತ್ತಿಯನ್ನು ಹಚ್ಚಬೇಕು.

3.ಪೀಠೋಪಕರಣಗಳ ಸ್ಥಳವನ್ನು ಬದಲಾಯಿಸಿ.

ಮಂಚ ಮತ್ತು ಪೀಠೋಪಕರಣಗಳನ್ನು ಯಾವಾಗಲೂ ಒಂದೇ ಕಡೆ ಇಡದೆ, ಆಗಾಗ ಅದನ್ನು ಬೇರೆ ದಿಕ್ಕಿನಲ್ಲಿ ಬದಲಾಯಿಸುತ್ತಾ ಇರಬೇಕು. ಹೀಗೆ  ಮಂಚ ಮತ್ತು ಪೀಠೋಪಕರಣಗಳನ್ನು ಬದಲಾಯಿಸುವುದರಿಂದ ಮನೆಯಲ್ಲಿರುವ ಋಣಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.

4.ಗಾಳಿ ಮತ್ತು ಬೆಳಕು.

ಕಿಟಕಿಗಳನ್ನು ಆದಷ್ಟು ಹಗಲಿನ ಸಮಯದಲ್ಲಿ ಯಾವಾಗಲೂ ತೆರೆದಿಟ್ಟು ಕೊಳ್ಳಬೇಕು. ಕಿಟಕಿಗಳನ್ನು ತೆರೆದಿಟ್ಟು ಸೂರ್ಯನ ಬೆಳಕು ಮತ್ತು ಗಾಳಿ ಚೆನ್ನಾಗಿ ಆಡುತ್ತಿದ್ದರೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯೊಳಗೆ ಸುಳಿಯುವುದಿಲ್ಲ.

5.ಪರಿಮಳ ಯುಕ್ತ ಹೂವಿನ ಗಿಡಗಳನ್ನು ಬೆಳಿಸಿ.

ಮನೆಯ ಹತ್ತಿರ  ಮನೆಯ ಮುಂದೆ,ಸುತ್ತಮುತ್ತಲೂ  ಹೂವಿನ ಗಿಡಗಳನ್ನು ಬೆಳೆಸಿದರೆ ಋಣಾತ್ಮಕ ಶಕ್ತಿಯನ್ನು ಹೊರಗಡೆ ಹಾಕಿ,ಧನಾತ್ಮಕ ಶಕ್ತಿಯನ್ನು ಮನೆಗೆ ಆಕರ್ಷಿಸುವಂತೆ ಮಾಡುತ್ತದೆ.

6.ಸಮುದ್ರ ಉಪ್ಪು.

ಮನೆಯ ಸುತ್ತಲೂ ಮೂಲೆ ಮೂಲೆಯಲ್ಲೂ ಸಮುದ್ರ ಉಪ್ಪನ್ನು ಸಿಂಪಡಿಸಿ. ಸಮುದ್ರ ಉಪ್ಪನ್ನು ಸ್ವಲ್ಪ  ಉಗುರು ಬೆಚ್ಚನೆಯ ನೀರಿಗೆ ಹಾಕಿ ಕರಗಿಸಿ ಅದನ್ನು ಸ್ಪ್ರೇ ಮೂಲಕ ಮನೆಯಲ್ಲೆಲ್ಲಾ ಸಿಂಪಡಿಸಿದರೆ ಒಳ್ಳೆಯದು.

7.ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಮನೆಯನ್ನು  ಪ್ರತಿದಿನ ಕಸ ಗುಡಿಸಿ ನೆಲವರೆಸಿ ಸ್ವಚ್ಛವಾಗಿಟ್ಟುಕೊಳ್ಳಿ. ಮೂಲೆ ಮೂಲೆಯಲ್ಲಿ ಇರುವ ಕಸವನ್ನು ಗುಡಿಸಿ ತೆಗೆದು ಹೊರ ಹಾಕಬೇಕು. ಅಡುಗೆ ಮನೆಯನ್ನು ಮುಖ್ಯವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಿ, ಪ್ರತಿರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಮಲಗಿ.ಪಾತ್ರೆಗಳನ್ನು ಸ್ವಚ್ಛಗೊಳಿಸಿ ಇಡಿ.

8.ಚಪ್ಪಾಳೆ.

ಮನೆಯಲ್ಲಿ ಆಗಾಗ್ಗೆ ಚಪ್ಪಾಳೆಯ ಸದ್ದನ್ನು ಮಾಡುವ ಮೂಲಕ ಅದರಿಂದ ಬರುವ ಧನಾತ್ಮಕ ತರಂಗಗಳ ಅಲೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಸೇರಿಕೊಂಡಿದ್ದರೆ  ಅದನ್ನು ಓಡಿಸಿ ಧನಾತ್ಮಕ ಶಕ್ತಿಯಿಂದ ಮನೆಯನ್ನು ತುಂಬಿಸುತ್ತದೆ.

9.ಕೇಸರಿ.

ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಕೇಸರಿಯನ್ನು ಹಾಕಿ ಇಡಿ. ಕೇಸರಿಯ ಪರಿಮಳಕ್ಕೆ ನಕಾರಾತ್ಮಕ ಶಕ್ತಿಗಳಾದ ದೆವ್ವ,ಭೂತ,ಪಿಶಾಚಿಯಂತಹ ಕೆಟ್ಟ ಶಕ್ತಿಗಳು ಮನೆಯಿಂದ ಹೊರಗೆ  ಓಡಿ ಹೊಗುತ್ತವೆ.

10.ಸಂಗೀತ.

ನಿಮಗೆ ಯಾವ ಹಾಡು ಇಷ್ಟವೂ ಆ ಹಾಡನ್ನು ಜೋರಾದ ದ್ವನಿಯಿಂದ ಹಾಡಿರಿ ಅಥವಾ ಸಂಗೀತವನ್ನು ದ್ವನಿವರ್ಧಕಗಳ ಮೂಲಕ ಸ್ವಲ್ಪ ಜೋರಾದ ದ್ವನಿಯಲ್ಲಿ  ಮನೆಯೊಳಗೆ ಸಂಗೀತ ಹಾಕಿ ಗೋಡೆ ಗೋಡೆಗೂ  ಕೇಳಿಸುವಂತೆ ಮಾಡಿ.ಆ ಸಂಗೀತದ ಅಲೆಗಳಿಂದ ಬರುವ ತರಂಗಗಳು ನಕಾರಾತ್ಮಕ ಶಕ್ತಿಯನ್ನು ದೂರ ಓಡಿಸುತ್ತವೆ.

ನಿಮಗೆ ಗೊತ್ತಿರುವ  ದೇವರ ಮಂತ್ರವನ್ನು  ,ಜಪಿಸುತ್ತಾ ಇಡೀ ಮನೆಯಲ್ಲಿ ಸುತ್ತಾಡಿ.ದೇವರ ಧ್ಯಾನ ಮಾಡಿ,ಮನೆಯಲ್ಲಿ ಸುಗಂಧ ಪರಿಮಳ ಯುಕ್ತ ಪುಷ್ಪಗಳನ್ನು ಇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top