ಆಧಾರ್ ನ ತಪ್ಪಾದ ಮಾಹಿತಿಯನ್ನ ನಿಮ್ಮ ಮೊಬೈಲ್ ನಲ್ಲೇ ಸರಿಪಡಿಸೋದು ಹೇಗೆ ಗೊತ್ತಾ?
ಆಧಾರ್ ಕಾರ್ಡ್ ಗುರುತಿನ ಸಂಖ್ಯೆಗೆ ಈಗ ಎಲ್ಲಿಲ್ಲದ ಪ್ರಾಮುಖ್ಯತೆ ಬಂದಿದೆ. ಸರ್ಕಾರ ತನ್ನ ಎಲ್ಲ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ವಿಷಯ ನಮಗೆಲ್ಲ ತಿಳಿದಿದೆ. 12 ಸಂಖ್ಯೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಸಂಖ್ಯೆಯಾಗಿ ಮಾರ್ಪಟ್ಟಿದೆ.
ಆದರೆ ನಮ್ಮ ಆಧಾರ್ ಕಾರ್ಡ್‌ನಲ್ಲಿ ನಮ್ಮ ಹೆಸರು, ವಿಳಾಸ,ಲಿಂಗ, ಹುಟ್ಟಿದ ದಿನ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ಮಾಹಿತಿಗಳನ್ನು ದಾಖಲಿಸುವಾಗ ಸಹಜವಾಗಿಯೇ ತಪ್ಪುಗಳು ಆಗಿರಬಹುದು. ಆ ತಪ್ಪುಗಳಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿರಬಹುದು. ಇದನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ಎಷ್ಟೋ ಜನರಿಗೆ ತಿಳಿದೇ ಇಲ್ಲ.ಇಂಟರ್ ನೆಟ್ ಸೌಲಭ್ಯವಿದ್ದರೆ ನಿಮ್ಮ ಮೊಬೈಲ್ ನಲ್ಲಿಯೇ ಈ ಬದಲಾವಣೆಗಳನ್ನು ಕೇವಲ ಐದೇ ನಿಮಿಷದಲ್ಲಿ ಮಾಡಿಕೊಳ್ಳಬಹುದು. ಅದಕ್ಕಾಗಿ ಇಲ್ಲೊಂದು ಮಾರ್ಗದರ್ಶಿ ಇದೆ
ಹಂತ-1:
ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ದಾಖಲಾಗಿರುವ ನಿಮ್ಮ ದಾಖಲೆಗಳನ್ನು ಸರಿಪಡಿಸಲು ನೀವು ಪ್ರಥಮವಾಗಿ ಆಧಾರ್ ನ ಅಧಿಕೃತ ವೆಬ್ ಸೈಟ್ ಭೇಟಿಕೊಡಬೇಕು.
https://ssup.uidai.gov.in/web/guest/update
ಹಂತ-2:
ನಿಮ್ಮ ಮೊಬೈಲ್ ನಂಬರ್ ನೋಂದಣಿ ಆಗಿದ್ದರೆ ಮಾತ್ರ ಯುಐಡಿಎಐ ಮೂಲಕ ಆಧಾರ್ ಆನ್ಲೈನ್ ನಲ್ಲಿ ಬದಲಾಯಿಸಬಹುದು. ನಿಮ್ಮ ಆಧಾರ್ ನಂಬರ್ ನಮೂಧಿಸಿ. ನಂತರ ನಿಮಗೆ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಯ ಪೋನಿಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ. ಟೆಕ್ಸ್‌ಟ್ ವೆರಿಫಿಕೇಶನ್ ಬಾಕ್ಸ್‌ನಲ್ಲಿ ನೀವು ನಿಮಗೆ ದೊರಕಿರುವ ಓಟಿಪಿಯನ್ನು ನಮೂದಿಸಬೇಕು
ಹಂತ-3
ಒಟಿಪಿ ಯನ್ನು ನಮೂದಿಸಿದ ನಂತರ ನಿಮಗೆ ಅನೇಕ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
ಹೆಸರು ಬದಲಾವಣೆ, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿ ಬದಲಾವಣೆ
ಹಂತ-4
ಅಲ್ಲಿ ಇರುವ ಆಯ್ಕೆಗಳಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಸರಿಯಾದ್ ಅಮಾಹಿತಿಗಳನ್ನು ಭರ್ತಿಮಾಡಿ. ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭಾರ್ತಿ ಮಾಡಿದ ನಂತರ BPO service provider based on the Avg. response time ಸೆಲೆಕ್ಟ್ ಮಾಡಿ. ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಯಶಸ್ವಿ ಸಲ್ಲಿಕೆ ನಂತರ ಅಪ್ಡೇಟ್ ರಿಕ್ವೆಸ್ಟ್ ನಂಬರ್(URN) ಜನರೇಟ್ ಆಗುತ್ತದೆ. ನಂತರ ನಿಮ್ಮ ಮೊಬೈಲ್ ಗೆ SMS ಬರುತ್ತದೆ. ಇಲ್ಲಿಗೆ ನಿಮ್ಮ ಆಧಾರ್ ನ ಮಾಹಿತಿ ಬದಲಾವಣೆ ಪ್ರಕ್ರಿಯೆ ಯಶಸ್ವಿಯಾಗುತ್ತದೆ.
ಸೂಚನೆ: ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ರಿಜೆಸ್ಟರ್ ಮಾಡಿಸದೇ ಇರುವವರು ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್ ನಂಬರನ್ನು ಲಿಂಕ್ ಮಾಡಿಸಿಕೊಳ್ಳಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
