fbpx
ದೇವರು

ಧರ್ಮ ಪಾಲನೆ ಅಂತ ಬಂದಾಗ ಸೋದರತ್ತೆ ಮಗನನ್ನೇ ಕೊಲ್ಲದೆ ಬಿಟ್ಟಿಲ್ಲ ಕೃಷ್ಣ !

ಶಿಶುಪಾಲ ಯಾರು ?

ಶಿಶುಪಾಲ ದಮಘೋಷ ಎಂಬ ಛೇದಿ ರಾಜ್ಯದ ರಾಜನ ಮಗ.ಶಿಶುಪಾಲನಿಗೆ ಜನ್ಮದಿಂದಲೇ ಮೂರು ಕಣ್ಣುಗಳು ಮತ್ತು ನಾಲ್ಕು ಕೈಗಳನ್ನು ಹೊತ್ತು ಜನ್ಮ ಪಡೆದ ಎಂದು ಮಹಾಭಾರತದ ಕಥೆಯಲ್ಲಿ ಹೇಳಲಾಗುತ್ತದೆ.

ಶಿಶುಪಾಲನ ತಾಯಿ ಯಾರು ?

ಶಿಶುಪಾಲನ ತಾಯಿಯ ಹೆಸರು ಶ್ರುತಕೀರ್ತಿ. ಶ್ರುತಕೀರ್ತಿ  ಕುಂತಿಯ  ಸ್ವಂತ  ತಂಗಿ. ಕುಂತಿಯು  ಐದು ಜನ ಪಾಂಡವರ ತಾಯಿಯಾಗಿದ್ದರು. ಶ್ರುತಕೀರ್ತಿ ಮತ್ತು ಕುಂತಿ ಇಬ್ಬರೂ ಸಹ ವಸುದೇವನ ಸ್ವಂತ ತಂಗಿಯರು.ವಸುದೇವ ಶ್ರೀ ಕೃಷ್ಣನಿಗೆ ಜನ್ಮ ಕೊಟ್ಟ ಪೂಜ್ಯ ತಂದೆ.

ಕೃಷ್ಣನಿಗೂ ಶಿಶುಪಾಲನಿಗೂ ಇರುವ ಸಂಬಂಧ ಏನು ?

ಸಂಬಂಧದಲ್ಲಿ ಕೃಷ್ಣ ಹಾಗೂ ಶಿಶುಪಾಲ ಇಬ್ಬರು ರಕ್ತ ಸಂಬಂಧಿಕರು. ತಂದೆಯ ಕಡೆಯಿಂದ ನೋಡಿದರೆಸೋದರತ್ತೆಯ ಮಕ್ಕಳು.ಆಗಿದ್ದರು ಸಹ ಕೃಷ್ಣನು ಪಾಂಡವರ ಜೊತೆ ಇದ್ದ ಸಲಿಗೆ ಮತ್ತು ಸ್ನೇಹ  ಶಿಶುಪಾಲನ ಜೊತೆ  ಇಂದಿಗೂ ಇರುತ್ತಿರಲಿಲ್ಲ. ಶಿಶುಪಾಲನನ್ನು ಕಂಡರೆ ಶ್ರೀ ಕೃಷ್ಣನಿಗೆ ಅಷ್ಟಕ್ಕೆ ಅಷ್ಟೇ.ಇಬ್ಬರಿಗೂ ಆಗುತ್ತಿರಲಿಲ್ಲ.ಅಲ್ಲದೆ ಪಾಂಡವರು ಹಾಗೂ ಶಿಶುಪಾಲ ಎಲ್ಲರೂ ಅಕ್ಕ-ತಂಗಿಯರ ಮಕ್ಕಳೇ ಅಂದರೆ ದೊಡ್ಡಮ್ಮ ಹಾಗೂ ಚಿಕ್ಕಮ್ಮನ ಮಕ್ಕಳು. ಆದರೂ ಸಹ ಯಾವುದೇ ಸ್ನೇಹ ,ಬಾಂಧವ್ಯ ಇವರಿಬ್ಬರ ನಡುವೆ ಇರಲಿಲ್ಲ.

ಶ್ರೀ ಕೃಷ್ಣ  ಶಿಶುಪಾಲನನ್ನು ದ್ವೇಷಿಸುವುದಕ್ಕೆ ಕಾರಣ ಏನು ?

ಶ್ರೀ ಕೃಷ್ಣನು ಜರಾಸಂಧನ ವಿರೋಧಿ ಎನ್ನುವುದು ಒಂದು ಕಾರಣವಾದರೆ.ಶ್ರೀ ಕೃಷ್ಣನು ಸಾಕ್ಷಾತ್ ವಿಷ್ಣುವಿನ ಒಂದು ಅವತಾರವೇ ಆಗಿದ್ದನು.ಹಿಂದಿನ ಜನ್ಮದಲ್ಲಿ ಶ್ರೀ ಕೃಷ್ಣನು ನರಸಿಂಹ ಅವತಾರದಲ್ಲಿದ್ದಾಗ ಹಿರಣ್ಯಕಶ್ಯಪು ಎಂಬ ರಾಕ್ಷಸನಿದ್ದ (ಹಿರಣ್ಯಕಶ್ಯಪು ವಿಷ್ಣುವಿನ ವಿರೋಧಿ ದ್ವೇಷ ಮಾಡುತ್ತಿದ್ದ) ಅವನೇ ಈ ಜನ್ಮದಲ್ಲಿ ಶಿಶುಪಾಲನಾಗಿ ಮರುಜನ್ಮ ಪಡೆದಿದ್ದಾನೆ.ಆದ್ದರಿಂದ ಶಿಶುಪಾಲನಿಗೆ ಹೇಗಾದರೂ ಮಾಡಿ ಇಡೀ ವಿಶ್ವವನ್ನೇ  ಜಯಿಸಬೇಕು ಎನ್ನುವ ಹಂಬಲ ಅವನಲ್ಲಿದೆ. ಆದ್ದರಿಂದ ಅವನ ವಿನಾಶ ನಿನ್ನಿಂದಲೇ ಆಗಬೇಕಾಗಿದೆ  ಎಂದು ಈ  ರಹಸ್ಯಕಾರಿ ವಿಷಯವನ್ನು ನಾರದ ಮುನಿಗಳು ಶ್ರೀ ಕೃಷ್ಣನಿಗೆ ಬಂದು  ಜ್ಞಾಪಿಸಿದರು.

ಹೀಗೆ ಶ್ರೀ ಕೃಷ್ಣನು ಮೊದಲು ಜರಾಸಂಧನನ್ನು ಸಂಹಾರ ಮಾಡಲು ಯೋಜನೆ ರೂಪಿಸಿದನು. ನಂತರ  ಶಿಶುಪಾಲನನ್ನು ವಧೆ ಮಾಡಲು ರಾಜಸೂಯ ಯಾಗವನ್ನು ಮುಂದಿಟ್ಟುಕೊಂಡು ಶಿಶುಪಾಲನನ್ನು ಯಾಗಕ್ಕೆ ಆಹ್ವಾನಿಸಿ.ಕೊನೆಗೆ ಕೃಷ್ಣನು ತನ್ನ  ಸುದರ್ಶನ ಚಕ್ರದಿಂದಲೇ ಹತ್ಯೆ ಮಾಡುವ  ಸಂಚನ್ನು ಮೊದಲೇ ರೂಪಿಸಿದ್ದನು.

ಶಿಶುಪಾಲನನ್ನು ಈ ಹಿಂದೆಯೇ ಕೊಲ್ಲಬಹುದಿತ್ತು ಆದರೆ…..?

ಶ್ರೀ ಕೃಷ್ಣನು ಶಿಶುಪಾಲನನ್ನು ಈ ಹಿಂದೆಯೇ ಯಾವತ್ತೋ  ಕೊಲ್ಲಬಹುದಾಗಿತ್ತು ಆದರೆ  ತನ್ನ ಸೋದರತ್ತೆಯಾದ  ಶ್ರುತಕೀರ್ತಿಗೆ (ಶಿಶುಪಾಲನ ತಾಯಿ) ಕೊಟ್ಟ  ಒಂದೇ  ಒಂದು ಮಾತಿನಿಂದ ಅವನು ಬಹುದಿನಗಳ ವರೆಗೆ ಕೊಲ್ಲದೆ ತಾಳ್ಮೆಯಿಂದ  ಸುಮ್ಮನಿದ್ದನು.

ಶ್ರುತಕೀರ್ತಿಗೆ (ಸೋದರತ್ತೆಗೆ)ಕೃಷ್ಣ ಕೊಟ್ಟ ಮಾತು ಏನು ?

ತನ್ನ ಮಗ ಶಿಶುಪಾಲನು ಏನೇ ತಪ್ಪು ಮಾಡಿದರು ದಯವಿಟ್ಟು ಅವನಿಗೆ ಯಾವುದೇ ಹಾನಿ ಮಾಡದೆ ಕ್ಷಮಿಸು ಮನ್ನಿಸಿಬಿಡು.ಅವನಿಗೆ ಏನು ಮಾಡಬೇಡ.ಅವನು ಮಾಡುವ  ತಪ್ಪುಗಳ ಸಂಖ್ಯೆ ನೂರರ ಗಡಿ ದಾಟಿ 101ನೇ   ತಪ್ಪಿಗೆ ತಲುಪಿದಾಗ ಅವನನ್ನು ನೀನು ಶಿಕ್ಷಿಸು ಎಂದು ಬೇಡಿದ್ದಳು.ಶ್ರೀ ಕೃಷ್ಣನು ಸಹ ಆಗಲಿ ಎಂದು ಸಮ್ಮತಿಸಿ ಮಾತು ಕೊಟ್ಟಿದನು.ಆದ್ದರಿಂದಲೇ ಶ್ರೀ ಕೃಷ್ಣನು ಅವನ ತಪ್ಪುಗಳನ್ನು ಒಂದೊಂದಾಗಿ ಎಣಿಸುತ್ತಾ ಹೋದನು.ಕೊನೆಗೆ ಅತಿ ಬೇಗನೆ ಶಿಶುಪಾಲನು 101 ತಪ್ಪುಗಳನ್ನು ಮಾಡಿಯೇ ಬಿಟ್ಟಿದ್ದನು.

ರಾಜಸೂಯ ಯಾಗದಲ್ಲಿ ಕೃಷ್ಣನಿಂದ  ಶಿಶುಪಾಲನ ವಧೆ.

ಇಂದ್ರಪ್ರಸ್ಥದಲ್ಲಿ ಒಮ್ಮೆ ರಾಜಸೂಯ ಯಾಗ ಮಾದಿದ್ದರು ಆ ರಾಜಸೂಯ ಯಾಗದ  ಕೊನೆಯಲ್ಲಿ ಅತ್ಯಂತ ಶ್ರೇಷ್ಠರೆನಿಸಿದವರಿಗೆ ಅಗ್ರ ಪೂಜೆಯನ್ನು ಮಾಡುವ ಕಾರ್ಯವಿತ್ತು.ಎಲ್ಲರಲ್ಲಿಯೂ ಶ್ರೇಷ್ಠರಾದವರು ಶ್ರೀ ಕೃಷ್ಣನೆಂದು  ಭೀಷ್ಮರು ಹೇಳಿದರು.ಯುಧಿಷ್ಠಿರನು ಯಾಗದ ದೀಕ್ಷೆ ವಹಿಸಿದ್ದನು.ಆದ್ದರಿಂದ ಯುಧಿಷ್ಠಿರನು ಭೀಷ್ಮರನ್ನೇ ಆಗ್ರ ಪೂಜೆಗೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಹೇಳಿದ್ದನು. ಭೀಷ್ಮರು ಕೃಷ್ಣನೇ ಅಗ್ರಪೂಜೆಗೆ ಯೋಗ್ಯನೆಂದು ತಿಳಿಸಿದಾಗ ಧರ್ಮ ರಾಜನು ಅನೇಕ ವಸ್ತುಗಳನ್ನು ತೆಗೆದುಕೊಂಡು ಬಂದನು.

ಶ್ರೀ ಕೃಷ್ಣನನನ್ನು ಅಗ್ರ ಪೂಜೆಗಾಗಿ ನೀರು ಕೊಟ್ಟು ಆದರಿಸಿದಾಗ ಛೇದಿ ರಾಜ್ಯದ ಶಿಶುಪಾಲ ಅಬ್ಬರಿಸಿದನು.ಶ್ರೀ ಕೃಷ್ಣನನ್ನು ಕಂಡರೆ ಶಿಶುಪಾಲನಿಗೆ ಸಹಿಸಲಾಗುತ್ತಿರಲಿಲ್ಲ.ಶಿಶುಪಾಲನ ಸಾವು ಶ್ರೀ ಕೃಷ್ಣನಿಂದ ಎಂದು ಯಾವುದೋ ಒಂದು  ಅಶರೀರವಾಣಿ ನುಡಿದಿತ್ತು. ಹೀಗೆ ಮೊದಲಿನಿಂದಲೂ ಶಿಶುಪಾಲನನ್ನು ದ್ವೇಷಿಸುತ್ತಿದ್ದನು.

ಶಿಶುಪಾಲನ ತಾಯಿ ಮಗನ ನೂರು ಅಪರಾಧಗಳನ್ನು ಕ್ಷಮಿಸು ಎಂದು ಪ್ರಾರ್ಥಿಸಿ ಬೇಡಿಕೊಂಡಿದ್ದಳು.ಹೀಗೆ ಶಿಶುಪಾಲನ ತಪ್ಪುಗಳನ್ನು, ಅಪರಾಧಗಳನ್ನು ಎಣಿಸುತ್ತಾ ಸಾಗಿದ್ದನು.ಶಿಶುಪಾಲನು ಧರ್ಮರಾಜನನ್ನು ಕೃಷ್ಣನನ್ನು ಬೈಯಲಾರಂಭಿಸಿದನು.

ಭೀಷ್ಮರು ಶ್ರೀ ಕೃಷ್ಣನನ್ನು ವೇದ ವೇದಾಂಗ ಪಾರಂಗತ ಸರ್ವಶ್ರೇಷ್ಠ ಪರಮಾತ್ಮ ನೆಂದು ವರ್ಣಿಸಿದಾಗ ಕೋಪ ಅಹಂಕಾರಗಳಿಂದ ಶಿಶುಪಾಲನು ಅಬ್ಬರಿಸಿದನು.ಕೃಷ್ಣನನ್ನು ವಂಚಕ ಹೇಡಿ,ಸ್ರೀಲೋಲ, ಎಂದು ನಿಂದಿಸಿದನು.ಶ್ರೀ ಕೃಷ್ಣನು ಶಿಶುಪಾಲನ ಎಲ್ಲೇ ಮೀರುತ್ತಿದ್ದಾನೆ. ಇವನನ್ನು ಕ್ಷಮಿಸಲಾರೆ ಎಂದನು.

ಹಿಂದೆ ರುಕ್ಮಿಣಿ ಸ್ವಯಂವರದಲ್ಲಿ ಸಹ ಅಕಾರಣವಾಗಿ ನಿಂದಿಸಿದ್ದನು. ಈಗ ಇವನ ನೂರು ಅಪರಾಧಗಳು ಮುಗಿದಿವೆ. ಇವನ ಅಂತ್ಯ ಸಮೀಪಿಸಿದೆ ಎಂದು ಚಕ್ರವನ್ನು ಆಹ್ವಾನಿಸಿದನು.ಚಕ್ರವನ್ನು ಕಳಿಸಿದಾಗ ಅದು ಶಿಶುಪಾಲನ ತಲೆಯನ್ನು ಕತ್ತರಿಸಿ ಬಂದಿತ್ತು.ಉಳಿದವರೆಲ್ಲರೂ ಶ್ರೀ ಕೃಷ್ಣನಿಗೆ ವಂದಿಸಿದರು.

ಹೀಗೆ ಶಿಶುಪಾಲನ ವಧೆಯ ಮೂಲಕ ರಾಜಸೂಯ ಯಾಗವು ಸಮಾಪ್ತವಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top