ಸ್ಲಮ್ ನಲ್ಲಿ ಬೆಳೆದು ತನ್ನ 16ನೇ ವಯಸ್ಸಿನಲ್ಲಿ ಕಂಪನಿಯನ್ನು ಸ್ಥಾಪಿಸಿ 25ನೇ ವಯಸ್ಸಿನಲ್ಲೇ ಸಾವಿರಾರು ಕೋಟಿ ಒಡೆಯನಾದ ಛಲಗಾರ.
ಯಶಸ್ಸು ಎನ್ನುವುದು ವಂಶಪಾರಂಪರ್ಯವಾಗಿ ಪಡೆಯಬಹುದಾದ ವಿಷಯ ಅಲ್ಲ ಆದರೆ ಅದನ್ನು ಪಡೆಯಬೇಕಾದರೆ ಸಂಪೂರ್ಣ ಕಠಿಣ ಪರಿಶ್ರಮ ಅಗತ್ಯವಾಗಿರುತ್ತದೆ.ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಒಂದು ದಿನ ಯಶಸ್ಸು ನಿಮ್ಮ ಮನೆ ಬಾಗಿಲ ಬಳಿ ಬರುತ್ತದೆ. ಉದ್ಯಮಿಗಳು ಮ್ಮ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ.ಆದರೆ ಎಲ್ಲ ವ್ಯವಹಾರಕಾರನು ಯಶಸ್ವಿಯಾಗಲು ಸಾಧ್ಯವಾಗೋದಿಲ್ಲ,
ಕೊಳಚೆ ಪ್ರದೇಶದಲ್ಲಿ ಬೆಳೆದು ಇಂದು ಕೋಟ್ಯಾಧಿಪತಿಯಾಗಿರುವ ಉದ್ಯಮಿ ಗುರುಬಕ್ಷ್ ಚಾಹಲ್ ಅವರ ಯಶಸ್ಸಿನ ಕತೆ ಯುವ ಉದ್ಯಾಮುಗಳಿಗೆ ಪ್ರೇರಣೆಯಾಗಿದೆ.ಚಾಹಲ್ ರವರು ಪಂಜಾಬ್ ನ ತರ್ನ್ ತಾರಾನ್ ಸಾಹಿಬ್ ಎಂಬಲ್ಲಿ ಹುಟ್ಟಿದರು,, ತನಗೆ ಕೇವಲ ಮೂರು ವರ್ಷ ವಯಸ್ಸಾಗಿದ್ದಾಗ ಅವರ ಕುಟುಂಬ ಅಮೆರಿಕಾಗೆ ಸ್ಥಳಾಂತರವಾಗುತ್ತದೆ. ತಮ್ಮ ಹೊಸದೇಶದಲ್ಲಿ ಕುಟುಂಬವು ಕೊಳೆಗೇರಿಗಳಲ್ಲಿ ವಾಸಿಸುತ್ತಿತ್ತು ಮತ್ತು ಸಣ್ಣ ವ್ಯವಹಾರಗಳನ್ನು ಮಾಡುವ ಮೂಲಕ ತಮ್ಮ ದಿನದ ಊಟವನ್ನು ಗಳಿಸುತ್ತಿದ್ದರು.ಬಾಲ್ಯದಿಂದಲೂ, ಚಾಹಲ್ ಅವರು ತಂತ್ರಜ್ಞಾನ, ಇಂಟರ್ನೆಟ್ ಇತ್ಯಾದಿಗಳಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು, ಆದರೆ ಅವರು ಸೌಲಭ್ಯಗಳನ್ನು ಹೊಂದಿರದ ಕಾರಣ ಅವರು ಹೆಚ್ಚು ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ.ಆದಾಗ್ಯೂ, ಅಂತರ್ಜಾಲ ಜಾಹೀರಾತಿನಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ಚಾಹಲ್ ಶಾಲೆಯನ್ನು ತೊರೆದು ತನ್ನ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ಮುಂದಾದರು. ತನ್ನ 16ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದು ಕ್ಲಿಕ್ಎಜೆಂಟ್ಸ್ ಎಂಬ ತನ್ನ ಮೊದಲ ಕಂಪನಿಯನ್ನು ಪ್ರಾರಂಭಿಸಿದರು.
ಚಾಹಲ್ ತನ್ನ ಕಂಪೆನಿ ಯಶಸ್ವಿಯಾಗಲು ತುಂಬಾ ಶ್ರಮಿಸುತ್ತಿದ್ದರು. ಆ ಸಮಯದಲ್ಲಿ, ಜಾಹಿರಾತು ಎನ್ನುವುದು ಹೊಸ ಪರಿಕಲ್ಪನೆಯಾಗಿತ್ತು ಮತ್ತು ಜಾಹೀರಾತಿನ ಬೇಡಿಕೆ ತುಂಬಾ ಕಡಿಮೆಯಾಗಿತ್ತು. ಹಾಗಾಗಿ ಅವರು ಮೊದಲ ಆರು ತಿಂಗಳು ಯಾವುದೇ ಒಪ್ಪಂದವನ್ನು ಪಡೆಯಲಿಲ್ಲ.ಇದರಿಂದ ನಿರಾಶೆಗೊಂಡಿದ್ದರೂ ಸಹ, ಆತ ತನ್ನ ಪ್ರಯತ್ನಗಳನ್ನು ಬಿಟ್ಟುಬಿಡಲಿಲ್ಲ, ಕೆಲವು ತಿಂಗಳುಗಳ ನಂತರ, ಲಂಡನ್ ನಲ್ಲಿ ಪ್ರೋಗ್ರಾಮರ್ ನಿಂದ ಜಾಹೀರಾತು ಕ್ಲಿಕ್ ಗಾಗಿ ಅವರು ಒಪ್ಪಂದವನ್ನು ಪಡೆದರು.ಕ್ರಮೇಣ ಆ ಕಂಪನಿಗೆ ಗ್ರಾಹಕರು ಪ್ರತಿಕ್ರಿಯಿಸಲು ಪ್ರಾರಂಭಿಸಿದರು ಮತ್ತು ಕಂಪನಿಯು ದೊಡ್ಡದಾಗಿ ಬೆಳೆಯಿತು. ಅವರ ಚಂದಾದಾರರ ಸಂಖ್ಯೆಯು ಹೆಚ್ಚಿದಾಗ, ಅವರು “ಬ್ಲೂಲಿಥಿಯಮ್” ಮತ್ತು “ರೇಡಿಯಮ್ ಒನ್” ಎಂದು ಕರೆಯಲ್ಪಡುವ ಎರಡು ಕಂಪನಿಗಳನ್ನು ಪ್ರಾರಂಭಿಸಿದರು.2007 ರಲ್ಲಿ, ಚಾಹಲ್ “ಬ್ಲೂಲಿಥಿಯಮ್” ಅನ್ನು $300 ಮಿಲಿಯನ್ (ಸುಮಾರು 2,000 ಕೋಟಿ ರೂಪಾಯಿಗಳಿಗೆ) ಗೆ ಯಾಹೂ ಕಂಪನಿಗೆ ಮಾರಾಟ ಮಾಡಿದರು.ಈ ವ್ಯವಹಾರದ ನಂತರ, ಜಾಹೀರಾತು-ತಂತ್ರಜ್ಞಾನದ ಪ್ರಪಂಚದಲ್ಲಿನ ಪ್ರತಿಯೊಬ್ಬರೂ ಚಾಹಲ್ ನ ಹೆಸರಿನೊಂದಿಗೆ ಪರಿಚಿತರಾದರು.ಅವರು ವ್ಯವಹಾರವನ್ನು ಮುಂದುವರಿಸಿ “ಗ್ರಾವಿಟಿ 4” ಎಂಬ ಮತ್ತೊಂದು ಕಂಪನಿಯನ್ನು ರಚಿಸಿದರು.
ಇಂದು, ಕಡಿಮೆ ಅವಧಿಯಲ್ಲೇ ಸಾವಿರಾರು ಕೋಟಿ ಒಡಯನಾಗಿರು ಗುರುಬಾಕ್ಷ್ ಚಾಹಲ್ ಅವರು ಒಮ್ಮೆ ಭಾರತದಿಂದ ಅಮೇರಿಕಾಕ್ಕೆ ಹೋಗಿ ಮತ್ತು ಅವರ ಇಡೀ ಬಾಲ್ಯವನ್ನು ಅಮೆರಿಕಾದ ಕೊಳಚೆ ಪ್ರದೇಶದಲ್ಲಿ ವಾಸಿಸಿ ಇಂದು ಈ ಮಟ್ಟಕ್ಕೆ ಸಾಧನೆ ಮಾಡಿರುವುದು ವಿಶ್ವದಾದ್ಯಂತದ ಯುವಕರಿಗೆ ಪ್ರೇರಣೆ ಎಂದು ಪರಿಗಣಿಸಲಾಗಿದೆ. ಈ ಭಾರತೀಯ ಮೂಲದ ವಾಣಿಜ್ಯೋದ್ಯಮಿ ಪ್ರಪಂಚದಾದ್ಯಂತ “ಜಾಹೀರಾತುಗಳ ರಾಜ” ಎಂದು ಪ್ರಖ್ಯಾತನಾಗಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
