fbpx
ಭವಿಷ್ಯ

ಈ ವಸ್ತುಗಳನ್ನು ದಾನ ಮಾಡಿದ್ರೆ ಮನೆಗೆ ದಾರಿದ್ರ್ಯಬರುತ್ತೆ

ಯಾವುದೇ ಪರಿಸ್ಥಿತಿ ಬಂದರೂ ಈ ವಸ್ತುಗಳನ್ನು ದಾನ ಮಾಡಬಾರದು.

ಜ್ಯೋತಿಶ್ಶಾಸ್ತ್ರಾದಲ್ಲಿ ಹೇಳಿರುವ ಪ್ರಕಾರ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ದಾನ ಮಾಡಬಾರದು ಒಂದು ವೇಳೆ ನೀವೇನಾದರೂ ದಾನ ಮಾಡಿದರೆ ನಿಮಗೆ ಜೀವನದಲ್ಲಿ ದಾರಿದ್ರ,ಅನೇಕ ಕಷ್ಟಗಳು , ತೊಂದರೆಗಳು  ಎದುರಾಗುತ್ತವೆ.

ಮನುಷ್ಯರಿಗೆ ದಾನ ಮಾಡುವ ಗುಣ ಇರಬೇಕು ಎಂದು ಹಿರಿಯರು ಹೇಳಿದ್ದಾರೆ. ಹಣ,ಆಹಾರ, ಬಟ್ಟೆಯನ್ನು ಹೀಗೆ ವಸ್ತುಗಳನ್ನು ದಾನ ಮಾಡಿದರೆ ಬಹಳಷ್ಟು ಪುಣ್ಯ ಸಿಗುತ್ತದೆ ಎಂದು ಹಿಂದೂ ಧರ್ಮದವರು ಹೇಳುತ್ತಾರೆ.ಕೇವಲ ಹಿಂದೂ ಧರ್ಮ ಮಾತ್ರವಲ್ಲ ಯಾವುದೇ ಮತ,ಧರ್ಮವಾದರು ಪ್ರತಿ ಮನುಷ್ಯನು ದಾನ ಮಾಡುವ ಗುಣವನ್ನು ಇತರರ ಮೇಲೆ ಕರುಣೆಯನ್ನು ಮಾನವತೆಯನ್ನು ತೋರುವಂತೆ ಹೇಳುತ್ತಿದ್ದಾರೆ.

ಈ ಕ್ರಮದಲ್ಲಿ ಅವರಿಗೆ ತೋಚಿದಷ್ಟು ದಾನ ಮಾಡುತ್ತಾ ಇರುತ್ತಾರೆ ಆದರೆ ನಿಮಗೆ ಗೊತ್ತಾ, ಯಾವ ವಸ್ತುವಾದರೂ ದಾನ ಮಾಡಬಹುದು. ಆದರೆ ನಾವು ಈಗ ಹೇಳುವ ವಸ್ತುವನ್ನು ಮಾತ್ರ ಯಾರು,ಯಾವಾಗಲೂ, ಯಾವುದೇ ಸಮಯದಲ್ಲಿ ಆದರೂ ದಾನ ಮಾಡಕೂಡದು ಎಂದು ಶಾಸ್ತ್ರಗಳು ಹೇಳುತ್ತಿದೆ. ಈ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ.

ಹರಿತವಾದ ಆಯುಧಗಳು.

ಕತ್ತರಿ,ಸೂಜಿ,ಚಾಕು,ಇಂತಹ ಹರಿತವಾದ ವಸ್ತುವನ್ನು ಯಾರು ದಾನ ಮಾಡಬಾರದು,ಹಾಗೆ ದಾನ  ಮಾಡಿದರೆ, ದುರಾದೃಷ್ಟ ಇವರ ಹಿಂದೆ ಬೀಳುತ್ತದೆಯಂತೆ . ಏನು ಮಾಡಿದರೂ ಸಹ ಕೆಲಸ ಕೈಗೂಡುವುದಿಲ್ಲವಂತೆ,ಅದರ ಜೊತೆಗೆ ಯಾವಾಗಲೂ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮಾಡುತ್ತದೆಯಂತೆ, ಅಸಲಿಗೆ ಜೀವನದಲ್ಲಿ  ಒಳ್ಳೆಯದೇ ಆಗುವುದಿಲ್ಲ ಎಂದು ಹೇಳಲಾಗಿದೆ.

ಹಳಸಿದ ಆಹಾರ.

ಅಳಸಿದ ಆಹಾರ ದಾನ ಮಾಡಬಾರದು.ಹೀಗೆ ಮಾಡಿದವರು ಕೋರ್ಟ್ ಕಚೇರಿ ಮೆಟ್ಟಿಲು ಹತ್ತಬೇಕಾಗುತ್ತಂತೆ. ನಿಮ್ಮ ಹತ್ತಿರ ಇರುವ ದುಡ್ಡು ಬಂದರು ಅಸಲಿಗೆ ಕೈಯಲ್ಲಿ ಇರುವುದಿಲ್ಲವೆಂತೆ.

ಕರವಸ್ತ್ರ.

ಕರವಸ್ತ್ರವನ್ನು ಯಾವುದೇ ಸಮಯದಲ್ಲಿಯಾದರೂ ಸಹ  ಯಾರಿಗೂ ದಾನ ಮಾಡಬೇಡಿ.ಹೀಗೆ ದಾನ ಮಾಡಿದರೆ ದಾರಿದ್ರ್ಯ ಹಿಂದೆ ಬರುತ್ತದೆ.ಒಂದು ವೇಳೆ ಕೊಡಲೇಬೇಕಾದ ಸಮಯದಲ್ಲಿ ಬಳಸಿ,ಒಗೆದ ಕರವಸ್ತ್ರವನ್ನು ಕೊಡಬಹುದು.

ಒಡೆದ ವಸ್ತುಗಳು ಮತ್ತು ಹರಿದ ಬಟ್ಟೆಗಳು.

ಒಡೆದ ವಸ್ತುಗಳು ಹರಿದ ಬಟ್ಟೆಯನ್ನು ಯಾರಿಗೂ ಸಹ ದಾನ ಮಾಡಬಾರದು.ಹೀಗೆ ದಾನ ಮಾಡಿದರೆ ಅದೃಷ್ಟ ನಿಮ್ಮ ಹತ್ತಿರ ಸುಳಿಯುವುದಿಲ್ಲ.ಏನು ಮಾಡಿದರೂ ಕೆಟ್ಟದ್ದೇ ಆಗುತ್ತದೆ.ಅಂತಹ ವಸ್ತುವನ್ನು ಅಸಲಿಗೆ ಮನೆಯಲ್ಲಿ ಇಟ್ಟುಕೊಳ್ಳಲೇಬಾರದು.ಅದನ್ನು  ತಕ್ಷಣವೇ ಮನೆಯಿಂದ ಆಚೆ ಹಾಕಬೇಕು.

ಪೊರಕೆ

ಪರಕೆಯನ್ನು ಯಾರಿಗೂ ಸಹ ದಾನ ಮಾಡಬಾರದು ಅಥವಾ ಯಾರಿಗೂ ಸಹ ದಾನವಾಗಿ  ಕೊಡಬಾರದು.ಹೀಗೆ ಮಾಡಿದರೆ ಧನಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲವಂತೆ .ದುಡ್ಡು ಹಾಗೆ ಸುಮ್ಮನೇ ಖರ್ಚು ಆಗುತ್ತದೆಯಂತೆ ದುಡ್ಡು ಬಂದರು ಅಸಲಿಗೆ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top