ಆಗಾಗ್ಗೆ ಈಜುವುದರಿಂದ ಯಾವೆಲ್ಲಾ ಪ್ರಯೋಜನಗಳನ್ನ ಪಡ್ಕೋಬೋದು ಗೊತ್ತಾ?
ಈಜು ಒಂದು ಕ್ರೀಡೆ, ವ್ಯಾಯಾಮ ಹಾಗು ಹವ್ಯಾಸವೂ ಹೌದು, ಆಗಾಗ್ಗೆ ಈಜಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕಾಗಿ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಈಜುವುದರಿಂದ ಯಾವ್ಯಾವ ಪ್ರಯೋಜನಗಳು ಆಗುತ್ತವೆ ಎಂದು ಈ ಕೆಳಗೆ ವಿವರಿಸಲಾಗಿದೆ ನೋಡಿ.
1. ಫ್ರೆಶ್ ಆಗಿಸುತ್ತೆ:
ದಿನವಿಡಿ ದುಡಿದು ದಣಿವಾಗಿರುವವರು ಸ್ನಾನ ಮಾಡಿದಾಗ ದೇಹ ಹೇಗೆ ಮನಸ್ಸು ಮತ್ತು ದೇಹ ಫ್ರೆಶ್ ಆಗುತ್ತದೆಯೋ ಹಾಗೆಯೇ ಈಜುವಿಕೆಯಿಂದ ಮನಸ್ಸು ಶಾಂತವಾಗಿ ಪ್ರಫುಲ್ಲಿತವಾಗುತ್ತದೆ. ನೀರಿನ ತಂಪಿನ ಗುಣ ಮನಸಿಗೆ ರೀಲ್ಯಾಕ್ಸ್ ನೀಡಿ ದಣಿವನ್ನು ನಿವಾರಿಸುತ್ತದೆ.
2.ಕೀಲು ನೋವನ್ನು ನಿವಾರಿಸುತ್ತದೆ:
ನಿರ್ದಿಷ್ಟ ಪ್ರಮಾಣದಲ್ಲಿ ಆಗಾಗ್ಗೆ ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ ಮತ್ತು ಕೀಲುಗಳ ನೋವನ್ನು ನಿವಾರಣೆ ಮಾಡುತ್ತದೆ.
3.ದೇಹದ ತೂಕವನ್ನು ಇಳಿಸುತ್ತದೆ:
ಈಜುವುದರಿಂದ ಮುಖ್ಯವಾಗಿ ತುಂಬಾ ಸುಲಭವಾಗಿ ಕೊಬ್ಬು ಕರಗಿಸಬಹುದು. ಒಂದು ಗಂಟೆ ಈಜುವುದರಿಂದ ಸುಮಾರು 800ರಿಂದ 1 ಸಾವಿರ ಕ್ಯಾಲೊರಿ ಕರಗುತ್ತದೆ. ಇದರಿಂದ ಸುಲಭವಾಗಿ ದೇಹದ ಬೊಜ್ಜು ಕರಗಿಸಿಕೊಂಡು ತೂಕ ಕಡಿಮೆ ಮಾಡಿಕೊಳ್ಳಬಹುದು.
4.ಅಸ್ತಮಾ ರೋಗಿಗಳಿಗೆ ಉಪಕಾರಿ:
ಈಜುವುದರಿಂದ ಉಸಿರನ್ನು ಜೋರಾಗಿ ಎಳೆದುಕೊಳ್ಳಬೇಕಾಗುತ್ತದೆ ಇದರಿಂದ ಶ್ವಾಸಕೋಶಗಳು ಹಿಗ್ಗುತ್ತವೆ. ಆಗಾಗ್ಗೆ ಈಜುವುದರಿಂದ ಅಸ್ತಮಾ ಕಾಯಿಲೆಯನ್ನು ದೂರಮಾಡಿಕೊಳ್ಳಬಹುದು.
5.ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ:
ಈಜುವುದರಿಂದ ಉಸಿರಾಟಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ಹೃದಯವನ್ನು ಆರೋಗ್ಯವಾಗಿಡುತ್ತದೆ. ಇದರಿಂದ ದೇಹದಲ್ಲಿ ರಕ್ತಪರಿಚಲನೆಯು ಉತ್ತಮವಾಗಿ ನಡೆಯುತ್ತದೆ.
6.ದೇಹದ ದುರ್ವಾಸನೆ ದೂರವಾಗುತ್ತದೆ:
ನಿಗದಿತವಾಗಿ ಈಜುವುದರಿಂದ ಬೆವರಿನಿಂದ ಉಂಟಾಗಿರುವ ದೇಹದ ದುರ್ಗಂಧವನ್ನು ದೂರಮಾಡಿಕೊಂಡು ಫ್ರೆಶ್ ಆಗಬಹುದು.
7.ಮಕ್ಕಳಿಗೆ ಲಾಭ:
ಮಕ್ಕಳು ಈಜುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾಗಿರುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
