1.ಮನೆಯಲ್ಲಿ ಹಚ್ಚುವ ದೀಪಕ್ಕೆ ಈ ಎಣ್ಣೆ ಹಾಕುವುದರಿಂದ ದಾರಿದ್ರ್ಯ ಹೆಚ್ಚುತ್ತದೆ.
ನಿತ್ಯವೂ ನೀವು ಮನೆಯಲ್ಲಿ ದೀಪ ಹಚ್ಚುತ್ತೀರಾ .ಆದರೆ ಈ ಎಣ್ಣೆಯಿಂದ ನೀವು ದೀಪ ಹಚ್ಚುತ್ತಿದ್ದರೆ ದಾರಿದ್ರ್ಯ ಅನ್ನೋದು ಕಟ್ಟಿಟ್ಟ ಬುತ್ತಿ,ಧನ ನಷ್ಟವೇ, ಎಷ್ಟೋ ಜನಕ್ಕೆ ಗೊತ್ತಿಲ್ಲ.ನಿತ್ಯ ನೀವು ಮನೆಯಲ್ಲಿ ಹಚ್ಚೋ ದೀಪಕ್ಕೆ ಎಷ್ಟು ಮಹತ್ವ ಇದೆ ಅಂತ.
ದೀಪ ಅಂದರೆ ಏನು ಗೊತ್ತಾ ?
ದೀಪ ಅಂದರೆ ನಿಮ್ಮ ಮನಸ್ಸಾಕ್ಷಿ.ಮನೆಯಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಲೇಬಾರದು. ಯಾಕೆಂದರೆ ಎಳ್ಳು ಶನಿ ಕಾರಕ .ದೇವರಿಗೆ ಈ ಎಳ್ಳೆಣ್ಣೆಯನ್ನು ಹಾಕಿದರೆ ನಮ್ಮ ಜೀವನದಲ್ಲಿ ಇನ್ನಷ್ಟು ಕಷ್ಟಗಳು ಬರುತ್ತವೆ .
ಮನಸ್ಸಿನಲ್ಲಿ ಕೋರಿಕೆಗಳನ್ನು ಇಟ್ಟುಕೊಂಡು ದೇವರಿಗೆ ಈ ಎಳ್ಳೆಣ್ಣೆಯಿಂದ ದೀಪ ಹಚ್ಚುತ್ತಿದ್ದೀರ ? ಅದು ಶನೈಶ್ಚರನ ದೇವಸ್ಥಾನದಲ್ಲಿ ಮಾತ್ರ ಹಚ್ಚಬೇಕು.
ಶನಿಗೆ ಎಳ್ಳೆಣ್ಣೆ ಎಂದರೆ ಪ್ರಿಯ ಹಾಗಂತ ಮನೆಯಲ್ಲಿ ಈ ಎಣ್ಣೆಯನ್ನು ಬಳಸಿ ದೀಪ ಹಚ್ಚಬಾರದು.ಶನಿ ಕರ್ಮ ಕಾರಕ, ಮಂದ ಗಮನ,ನಿಮ್ಮ ಕಾರ್ಯವೆಲ್ಲ ಮಂದವೇ ? ಯಾವಾಗ ಕೆಲಸಗಳೆಲ್ಲ ಮಂದವಾಗಿ ಆಗುತ್ತೋ ಆಗ ಕೆಲಸ ಕೆಟ್ಟೋಯ್ತು ಅಂತ ಅರ್ಥ. ಅದ್ದರಿಂದ ನಿಮ್ಮ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಎಳ್ಳೆಣ್ಣೆಯನ್ನು ಹಾಕಿ ದೀಪ ಹಚ್ಚಲೇ ಬಾರದು.
2.ಈ ದೀಪ ಬೆಳಗಿಸುವುದರಿಂದ ದಂಪತಿಗಳಿಗೆ ಮನೆಯಲ್ಲಿ ಶುಭಯೋಗ.
ಯಾವಾಗ್ಲೂ ಮನೆಗೆ ಯಾಕಾದ್ರೂ ಹೋಗ್ತೀನಿ ಅನ್ಸತ್ತೆ ಅಂತ ಗಂಡ,ನನ್ನ ಗಂಡ ಯಾಕಾದರೂ ಮನೆಗೆ ಬರುತ್ತಾನೋ ಅಂತ ಹೆಂಡ್ತಿ. ಗಂಡ -ಹೆಂಡ್ತಿ ಜಗಳ ತಿಂದು ಉಂಡು ಮಲಗೋ ತನಕ ಅಂಥ ಆಡೋ ಮಾತಿದೆ.ಆದರೆ ಊಟ ಮಾಡಿ ಮಲಗುವಾಗಲೇ ಜಗಳ ಶುರುವಾಗೋದು.ಅಂದರೆ ಏನೋ ಆಪಶ್ರುತಿ ಎಲ್ಲೋ ಸಂಸಾರದ ಹಾದಿ ತಪ್ಪಿದ್ದಾರೆ ಅಂತ ಅರ್ಥ. ಆಗ ಮನಸ್ಸುಗಳು ಒಡೆದು ಹೋಗುತ್ತೆ,ಕುಟುಂಬ ಒಡೆಯುತ್ತೆ, ದಂಪತಿಗಳು ಸಹ ದೂರ ಆಗಬಿಡ್ತಾರೆ.ಮದುವೆ ಆಗಿರೋದು ದೂರ ಆಗೋಕೆ ಅಲ್ಲ, ಒಟ್ಟಾಗಿ ಜೊತೆಯಲ್ಲೇ ಇದ್ದು ಸಂಸಾರವನ್ನ ಮುನ್ನೆಡಿಸಿಕೊಂಡು ಹೋಗೋಕೆ. ಮದುವೆ ಅಂಥ ಆದ್ಮೇಲೆ ನಮ್ಮ ಮೇಲೆ ಒಂದು ಬಹು ದೊಡ್ಡ ಜವಾಬ್ದಾರಿನೇ ಇರತ್ತೆ.ಅಂತಹ ಜವಾಬ್ದಾರಿ ಹೊಡೆದು ಹೋಗಬಾರದು ಅಲ್ವಾ.
ಪರಿಹಾರ.
ಒಡೆದು ಹೋದ ಮನಸ್ಸುಗಳನ್ನು ಸರಿ ಮಾಡಲು ಒಂದು ಸುಲಭವಾದ ಪರಿಹಾರ ಇದೆ.ನಿತ್ಯ ಮನೆಯ ದೇವರಿಗೆ ಎರಡು ಇಂಚಿನ ದೀಪವನ್ನು ಹಚ್ಚುತ್ತಾ ಬನ್ನಿ.ನಿಮ್ಮ ಮನೆಯ ದೇವರಿಗೆ ಕಲಶವನ್ನು ಸ್ಥಾಪಿಸಿ,ಎರಡು ಇಂಚಿನ ದೀಪ ಅದು ತುಪ್ಪ ಹಾಕಿ ಹಚ್ಚಬೇಕು.
ನಿತ್ಯ ಸಂಧ್ಯಾ ಕಾಲದಲ್ಲಿ ತುಪ್ಪದ ದೀಪ ಹಚ್ಚ್ಚಿ,ನೈವೇದ್ಯವನ್ನು ಸಮರ್ಪಿಸಿ(ಕೇಸರಿ ಬಾತ್,ಸಿಹಿ ಪಾಯಸ) ಹೀಗೆ ಯಾವುದಾದರೂ ಒಂದು ನೈವೇದ್ಯ ಮಾಡಿ ಅರ್ಪಿಸಬೇಕು.ಪೂಜೆ ಎಲ್ಲ ಮುಗಿದ ನಂತರ ಗಂಡನಿಗೆ ಪ್ರಸಾಧವಾಗಿ ನೈವೇದ್ಯವನ್ನು ಕೊಟ್ಟು ಹೆಂಡತಿಯು ಸಹ ಸೇವಿಸಬೇಕು. ಹೀಗೆ 48 ದಿನ ಸತತವಾಗಿ ಬಿಡದೇ ಮಾಡಬೇಕು.ಆಗ ದಂಪತಿಗಳು ಮದ್ಯೆ ಇರೋ ವಿರಸ,ಜಗಳ ಎಲ್ಲವೂ ನಿವಾರಣೆಯಾಗಿ ಸುಖವಾಗಿ ಸಂತೋಷದಿಂದ ಜೀವನವನ್ನು ನೆಡೆಸುತ್ತೀರ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
