ಸರ್ಪ ದೋಷ,ಕಾಳ ಸರ್ಪ ದೋಷದಂತಹ ಘೋರ ಸಂಕಷ್ಟಗಳನ್ನು ದೂರ ಮಾಡುವ ಸುಲಭ ಪರಿಹಾರಗಳು.
ಸರ್ಪ ವನ್ನು ಕಂಡರೆ ಎಲ್ಲರೂ ಭಯ ಪಡುತ್ತಾರೆ. ನೋಡಿದ ತಕ್ಷಣ ಅದನ್ನು ಸಾಯಿಸಿ ಎಂದು ಹೇಳುವರೆ ಜಾಸ್ತಿ.
ಆದರೆ ಇದು ತಪ್ಪು ಹೀಗೆ ಮಾಡುವುದರಿಂದ ಸರ್ಪ ದೋಷ ಬರುತ್ತದೆ.ಇದು ಜನ್ಮ ಜನ್ಮಕ್ಕೂ ತಲೆತಲಾಂತರ ಗಳವರೆಗೆ ನಮ್ಮ ಮಕ್ಕಳಿಗೆ,ಮರಿಮಕ್ಕಳಿಗೆ, ಹೇಗೆ ವಂಶ ಪರಂಪರ್ಯಾವಾಗಿ ಬೆಳೆದು ಬಿಡುತ್ತದೆ.
ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ,ದಾಂಪತ್ಯದಲ್ಲಿ ವಿರಸ, 30 ವರ್ಷ ವಯಸ್ಸಾದರು ಮದುವೆಯ ಯೋಗ ಇರುವುದಿಲ್ಲ,ಚರ್ಮದ ರೋಗಗಳು,ಒಳ್ಳೆಯ ಕೆಲಸ ಸಿಗುವುದಿಲ್ಲ,ಹೆಜ್ಜೆ ಹೆಜ್ಜೇಗೂ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ,. ಸರ್ಪ ದೋಷದ ಲಕ್ಷಣಗಳು ಒಬ್ಬ ವ್ಯಕ್ತಿಗೆ 22ವರ್ಷದ ನಂತರ ಪ್ರಾರಂಭವಾಗುತ್ತದೆ ಇದು 31 ವರ್ಷಗಳ ನಂತರ ಕಡಿಮೆಗೊಳ್ಳುತ್ತಾ ಹೋಗುತ್ತದೆ.
ವಿವಿಧ ಸರ್ಪಗಳ ಹೆಸರು ಮತ್ತು ದೋಷ.
1.ಅನಂತ.2.ವಾಸುಕಿ.3.ಶೇಷಾ.4.ಪದ್ಮನಾಭ.5.ಕಂಬಲಾ.6.ಶಂಕಪಾಲ. 7.ದೃತರಾಷ್ಟ್ರ8.ತ್ತಾಕ್ಷಕ.9.ಕಾಳಿಂಗ.ಈ ಸರ್ಪಗಳಿಗೆ ವಿಶೇಷವಾಗಿ ಹಾನಿ, ನೋವೂ ಉಂಟು ಮಾಡಿದರೆ ಸರ್ಪ ದೋಷ ಬರುತ್ತದೆ.
ವಿವಿಧ ಸರ್ಪಗಳ ದೋಷ ನಿವಾರಣೆಗಾಗಿ ಪರಿಹಾರಗಳು
1.ನಿತ್ಯ ಶಿವಲಿಂಗಕ್ಕೆ ಭಕ್ತಿ ಶ್ರದ್ಧೆಯಿಂದ ಪೂಜೆ ಸಲ್ಲಿಸಿ ,ಹಾಲು ಮತ್ತು ನೀರಿನ ಅಭಿಷೇಕ,ಪ್ರತಿನಿತ್ಯ ನೂರಾಎಂಟು ಭಾರಿ ಪ್ರಣವ ಪಂಚಾಕ್ಷರಿ ಮಂತ್ರ ಜಪ ಮಾಡುವುದು.
ಓಂ ನಮಃ ಶಿವಾಯ
2.ಹದಿನೆಂಟು ಸೋಮವಾರ ರಾಹುವಿಗೆ ಸಂಬಂಧಿಸಿದ ವಸ್ತುಗಳನ್ನು ಯೋಗ್ಯರಿಗೆ ದಾನ ಮಾಡಿ ಅಂದರೆ ಉದ್ದಿನಬೇಳೆ ಮತ್ತು ಮೈಸೂರು ಬೇಳೆಯನ್ನೂ ದಾನ ಮಾಡಬಹುದು.
3.ನಾಗಪಂಚಮಿಯಂದು ತಪ್ಪದೇ ನಾಗಪೂಜೆ ಮಾಡಿ ಹುತ್ತಕೆ ಹಾಲನ್ನು ಎರೆಯಿರಿ.
4.ಪ್ರತೀ ತಿಂಗಳು ಶುಕ್ಲ ಮತ್ತು ಕೃಷ್ಣ ಪಂಚಮಿ ತಿಥಿಯಂದು ನಾಗ ಪೂಜೆ ಮಾಡಿ.ಹದಿನೈದು ಪಂಚಮಿಗಳಂದು ಪೂಜೆ ನೆರವೇರಿಸಿ ಹದಿನಾರನೆಯ ಪoಚಮಿಯ ದಿನ ಮುಕ್ತಾಯ ಮಾಡಿ.
5.ಇಪ್ಪತ್ತೊಂದು ಸೋಮವಾರ ಒಂದು ತೆಂಗಿನಕಾಯಿಯನ್ನ ಸಮುದ್ರದ ನೀರಿನಲ್ಲಿ ತೇಲಿ ಬಿಡಿ.
6.ವರ್ಷಕ್ಕೊಮ್ಮೆ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ದಿನದಂದು ಶಿವನಿಗೆ ರುದ್ರಾಭಿಷೇಕ,ನವಗ್ರಹ ಪೂಜೆ,ರಾಹು ಕೇತು ಶಾಂತಿ,ಮಹಾಮೃತ್ಯುoಜಯ ಹೋಮ,ಪೂಜೆ,ಜಪವನ್ನು ಮಾಡಿಸಿ.
7.ಸರ್ಪ ಹೋಮ,ಸರ್ಪ ಸಂಸ್ಕಾರ, ಸರ್ಪ ಪ್ರತಿಷ್ಠಾಪನೆ, ಕೂಡ ಮಾಡಿಸಬಹುದು.ಇವೆಲ್ಲವನ್ನು ನೀವೂ ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ಕಾಳ ಹಸ್ತಿಯಲ್ಲಿ ಮಾಡಿಸಬಹುದು.
8.ಮೂವತ್ಮೂರು ಸೋಮವಾರ ದಂದು ಒಂದು ಮುಷ್ಠಿ ಗೋಧಿಯನ್ನು ಶಿವ ಮಂದಿರಕ್ಕೆ ಹೋಗಿ ದಾನ ಮಾಡಿ ಯಾವುದೇ ಪ್ರಸಾದ ತೀರ್ಥ ಸೇವನೆಯನ್ನು ಸ್ವೀಕರಿಸದೇ ತಿರುಗಿ ನೋಡದೇ ಬನ್ನಿ.
9.ಐವತ್ತೊಂದು ದಿನ ಪ್ರತೀ ರಾತ್ರಿ ನವನಾಗ ಗ್ರಂಥದ ಐದು ಅಧ್ಯಾಯ ಗಳನ್ನು ಓದಿರಿ ಅಥವಾ ಹದಿನಾರು ಸೋಮವಾರ ಪುಸ್ತಕವನ್ನಾದರು ಓದಿ ಮುಗಿಸಿರಿ ಅಥವಾ ಹದಿನಾರು ಸೋಮವಾರ ವ್ರತ ಮಾಡಿರಿ.
10.ಪ್ರತೀ ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ಎರಡು ಹೂವಿನ ಹಾರ, ಮತ್ತು ಬಿಲ್ವಪತ್ರೆಯನ್ನು ಕೊಟ್ಟು ಬನ್ನಿ. ಇದರಿಂದ ಶಿವನು ಸಂತುಷ್ಟನಾಗುವನು.
11.ಪಿತೃಪೂಜಾ ಕ್ರಮವನ್ನು ಪಿತೃ ಪಕ್ಷ ದಲ್ಲಿ ನೆರವೇರಿಸಿ. ಇದ್ದನ್ನು ಎಲ್ಲಾರು ಸೇರಿ ಮಾಡಬೇಕು. ಇದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ.
12.ಬಟುಕು ಬೈರವ ಮಂತ್ರವನ್ನು ನಿತ್ಯ ಹನ್ನೊಂದು ಬಾರಿ ನೂರನಾಲ್ಕು ಸಲ ಓದಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
