ತನ್ನ ಬುದ್ದಿವಂತಿಕೆಯಿಂದ ರಾಜನ ಕತ್ತಲ್ಲಿದ್ದ ಮುತ್ತಿನಹಾರವನ್ನೇ ಉಡುಗೊರೆಯಾಗಿ ಬಿಚ್ಚಿಸಿಕೊಂಡ ತೆನಾಲಿರಾಮ!
ಒಂದು ದಿನ ವಿಜಯನಗರದಲ್ಲಿ ಹಬ್ಬ ನಡೆಯುತ್ತಿತ್ತು ಜನರೆಲ್ಲಾ ಹಾಡಿ ಕುಣಿದು ನಲಿದಾಡಿದರು. ಕರುಣಾಮಯಿ ರಾಜ ಕೃಷ್ಣದೇವರಾಯನೂ ಸಹ ತನ್ನ ಸಂತೋಷವನ್ನು ಹಂಚಿಕೊಳ್ಳಲು ಆಸೆ ಪಟ್ಟನು.ಅದಕ್ಕಾಗಿ ಅವನು ತನ್ನ ಆಸ್ತಾನಿಕರಿಗೆ ಉಡುಗೊರೆಗಳನ್ನು ಕೊಡಲು ನಿರ್ಧರಿಸಿದನು.ಆ ಸಂಜೆ ರಾಜ ಕೃಷ್ಣದೇವರಾಯ ಅನೇಕ ಚಿನ್ನ ಮತ್ತು ಒಡವೆಗಳನ್ನು ಆಸ್ಥಾನದ ಒಂದು ಮೇಜಿನ ಮೇಲೆ ಇರಿಸಿದನು.ಅವನು ತನ್ನ ಆಸ್ತಾನಿಕರನ್ನು ಕರೆದು “ಬನ್ನಿ ನಿಮಗೆ ಏನು ಬೇಕೋ ಆರಿಸಿಕೊಳ್ಳಿ” ಎಂದು ಹೇಳಿದನು
ಆಸ್ಥಾನಿಕರಿಗೆ ಬಹಳ ಸಂತೋಷವಾಯಿತು ತಮಗೆ ಬೇಕಾದನ್ನು ಆರಿಸಿಕೊಳ್ಳಲು ಮುನ್ನುಗ್ಗಿದರು ಅವರಿಗೆ ಇಷ್ಟವಾದದನ್ನು ಆರಿಸಿಕೊಂಡರು ಅಷ್ಟರಲ್ಲಿ ರಾಜನ ಸ್ನೇಹಿತ ಚತುರ ತೇನಾಲಿರಾಮನು ಆಸ್ಥಾನಕ್ಕೆ ಬಂದನು. ಅಲ್ಲಿದ್ದ ಜನರ ಗುಂಪನ್ನು ನೋಡಿದನು ಇಲ್ಲೇನು ನಡೆಯುತ್ತಿದೆ ಎಂದು ಯೋಚಿಸುತ್ತಾ ಬಾಗಿಲ ಬಳಿಯಲ್ಲೇ ನಿಂತನು.
ಆಸ್ತಾನಿಕನೊಬ್ಬನು ಹೊರಗೆ ಹೋಗುವಾಗ ತೆನಾಲಿ ರಾಮನಿಗೆ ನಡೆದಿದ್ದಾನೆಲ್ಲಾ ವಿವರಿಸಿದನು ಹಾಗೆಯೇ ಮೇಜಿನಮೇಲಿದ್ದ ಅವನ ಪಾಲಿನ ಉಡುಗೊರೆಗಳನ್ನು ತೆಗೆದುಕೊಳ್ಳಲು ಹೇಳಿದನು.ಆಗ ತೇನಾಲಿರಾಮನು ಒಳಗೆ ಹೋಗಿ ನೋಡಿದಾಗ ಆ ಮೇಜಿನ ಮೇಲೆ ಒಂದು ಕಾಲಿ ಬೆಳ್ಳಿಯ ತಟ್ಟೆ ಮಾತ್ರ ಉಳಿದಿತ್ತು.ಅವನು ಸಮಾದಾನವಾಗಿ ಅದರ ಹತ್ತಿರ ನಡೆದು ಅದಕ್ಕೆ ಒಂದು ರೇಷ್ಮೆಯ ಬಟ್ಟೆಯನ್ನು ಹೊದಿಸಿದನು.
ಇದನ್ನು ನೋಡಿದವರಿಗೆಲ್ಲಾ ಆಶ್ಚರ್ಯವಾಯಿತು ಕುತೂಹಲ ಗೊಂಡ ರಾಜನು ತೇನಾಲಿರಾಮನನ್ನು ಅವನ ವಿಚಿತ್ರ ನಡತೆಗೆ ಕಾರಣ ಕೇಳಿದನು.ಅದಕ್ಕೆ ತೆನಾಲಿ ರಾಮನು “ನಾನು ನಿಮ್ಮ ಹೆಸರನ್ನು ಉಳಿಸಲು ಹೀಗೆ ಮಾಡುತ್ತಿರುವೆ, ಮಹಾಪ್ರಭು!” ಎಂದನು. ಆಗ ಕೃಷ್ಣದೇವರಾಯನು ಆಶ್ಚರ್ಯಗೊಂಡು “ಹಾ! ಅದು ಹೇಗೆ ಸಾಧ್ಯ” ಎಂದು ರಾಜನು ಮತ್ತಷ್ಟು ಕುತೂಹಲದಿಂದ ಕೇಳಿದನು.ಆಗ ತೇನಾಲಿರಾಮನು “ಮಹಾಪ್ರಭು ನಾನು ಈ ಕಾಲಿತಟ್ಟೆಯನ್ನು ಮನೆಗೆ ತೆಗೆದುಕೊಂಡು ಹೋಗುವುದನ್ನು ಊರಿನ ಜನರು ನೋಡಿದರೆ ರಾಜ ಶ್ರೀಮಂತನಲ್ಲ ಎಂದು ತಿಳಿದುಕೊಳ್ಳುವರು ಆದ್ರೆ ಆ ತಟ್ಟೆಗೆ ಒಂದು ಬಟ್ಟೆಯನ್ನು ಸುತ್ತಿಕೊಂಡು ಹೋದರೆ ಅದೇ ಜನರು ಅದರೊಳಗೆ ಯಾವುದೋ ಅತ್ಯಮೂಲ್ಯ ವಸ್ತು ಇರಬಹುದು ಎಂದು ತಿಳಿಯುತ್ತಾರೆ” ಎಂದನು.
ಇದರಿಂದ ರಾಜನಿಗೆ ಬಹಳ ಸಂತೋಷವಾಯಿತು ಅವನು ತೇನಾಲಿರಾಮನಿಗೆ “ರಾಮ ನೀನು ನನ್ನ ಗೌರವ ,ಹೆಸರನ್ನು ಉಳಿಸಲು ಉತ್ತಮವಾದ ಉಪಾಯವನ್ನೇ ಮಾಡಿದ್ದೀಯ ಈಗ ಆ ತಟ್ಟೆಯನ್ನು ತೆಗೆದುಕೊಂಡು ಬಾ” ಎಂದರು. ರಾಮನು ರಾಜ ಹೇಳಿದಂತೆ ಆ ತಟ್ಟೆಯನ್ನು ರಾಜನ ಸಿಂಹಾಸನದ ಹತ್ತಿರ ತೆಗೆದುಕೊಂಡು ಹೋದನು ಆಗ ರಾಜನು ತನ್ನ ಅಮೂಲ್ಯವಾದ ಮುಟ್ಟಿನಹಾರವನ್ನು ಕತ್ತಿನಿಂದ ತೆಗೆದು ಆ ತಟ್ಟೆಯಲ್ಲಿ ಇಟ್ಟನು “ನೋಡು ಈಗ ಈ ತಟ್ಟೆ ಕಾಲಿ ಇಲ್ಲ ಎಂದು ರಾಜನು ನಗುತ್ತ ಹೇಳಿದನು”
ಹೀಗೆ ತೇನಾಲಿರಾಮನು ತನ್ನ ಬುದ್ದಿವಂತಿಕೆ ಯಿಂದ ಎಲ್ಲರಿಗಿಂತ ಬೆಲೆಬಾಳುವ ಉಡುಗೊರೆಯನ್ನು ಗಳಿಸಿದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
