ಫೆಂಗ್ ಶುಯ್ ಪ್ರಕಾರ ಯಾವ ಬಣ್ಣದ ಪರ್ಸ್ ನಿಮಗೆ ಅದೃಷ್ಟ ತರುತ್ತೆ.
ನಮ್ಮಲ್ಲಿ ಹೆಚ್ಚಿನವರು ನಿತ್ಯದ ಖರ್ಚಿಗೆ ಅಗತ್ಯವಾದ ಹಣವನ್ನು ಜೇಬಿನಲ್ಲಿ ಇಡುವ ಬದಲಾಗಿ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾರೆ.ಪರ್ಸ್ ಸದಾ ತುಂಬಿರುವುದು ಸಮೃದ್ಧಿಯ ಲಕ್ಷಣವಾಗಿದೆ. ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಸುಲಭವಾಗಿ ಎದುರಿಸಬಹುದು.
ಈ ಪರ್ಸ್ ತುಂಬಿಕೊಂಡಿರುವುದು ಒಂದು ಅದೃಷ್ಟಕರ ಚಿಹ್ನೆಯಾಗಿದ್ದು. ಚೀನಿಯರ ಫೆಂಗ್ ಶುಯ್ ವಿಧಾನದ ಮೂಲಕ ಸದಾ ಸಮೃದ್ಧಿ ಇರುವಂತೆ ನೋಡಿಕೊಳ್ಳುತ್ತಾರೆ.
ಕಪ್ಪು ಬಣ್ಣದ ಪರ್ಸ್.
ಬೆಂಕಿ,ಭೂಮಿ,ಮತ್ತು ಲೋಹದ ಶಕ್ತಿ ಪ್ರವಾಹ ಇರುವವರು ಕಪ್ಪು ಬಣ್ಣವನ್ನು ಆಯ್ದುಕೊಳ್ಳಬಾರದು. ಆದರೆ ನೀಲಿ ಮತ್ತು ಕಾಷ್ಠದ ಶಕ್ತಿ ಪ್ರವಾಹದ ವ್ಯಕ್ತಿಗಳು ಕಪ್ಪು ಬಣ್ಣದ ಪರ್ಸ್ ಹೊಂದಿರುವುದು ಉತ್ತಮ.
ಕೆಂಪು ಬಣ್ಣದ ಪರ್ಸ್.
ಕೆಂಪು ಬಣ್ಣದ ಬೆಂಕಿಯ ಶಕ್ತಿ ಪ್ರವಾಹದ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ಪರ್ಸ್ ಗಳು ಈ ಬಣ್ಣದಲ್ಲಿ ಸಿಗುವುದು ಅತ್ಯಂತ ವಿರಳ.
ನೀಲಿ ಬಣ್ಣದ ಪರ್ಸ್.
ನೀಲಿ ಬಣ್ಣ ಸಮೃದ್ಧಿಯ ಸಂಕೇತವಾಗಿದ್ದು.ನೀಲಿ ಬಣ್ಣ ನೀರಿನ ಶಕ್ತಿ ಪ್ರವಾಹ ಇರುವವರಿಗೆ ಹೆಚ್ಚು ಸೂಕ್ತವಾದುದು.ಸದಾ ಸಮೃದ್ಧತೆ ತುಂಬಿರಲು ನೆರವಾಗುತ್ತದೆ.
ಕಂದು ,ಹಳದಿ ಬಣ್ಣದ ಪರ್ಸ್.
ಪರ್ಸ್ ಗಳಲ್ಲಿ ಅತೀ ಹೆಚ್ಚಾಗಿ ಬಳಸಲ್ಪಡುವ ಬಣ್ಣವೆಂದರೆ ಕಂದು ಬಣ್ಣ. ಫೆಂಗ್ ಶುಯ್ ಪ್ರಕಾರ ಈ ಬಣ್ಣ ಭೂಮಿ ಎಂಬ ಶಕ್ತಿಯನ್ನು ಪ್ರಮುಖವಾಗಿ ಪಡೆದು ವ್ಯಕ್ತಿಗಳಿಗೆ ಈ ಬಣ್ಣದ ಪರ್ಸ್ ಸೂಕ್ತವಾಗಿದೆ. ನೀರು ಮತ್ತು ಬೆಂಕಿಯ ಶಕ್ತಿ ಪಡೆದಿರುವವರು ಈ ಬಣ್ಣವನ್ನು ಆಯ್ಕೆ ಮಾಡದಿರುವುದೇ ಉತ್ತಮ.
ಹಸಿರು ಬಣ್ಣದ ಪರ್ಸ್.
ಇದು ಮರದ ಬಣ್ಣವಾಗಿದ್ದು.ಇದು ಜೀವನದಲ್ಲಿ ಅಭಿವೃದ್ಧಿ ಮತ್ತು ಧನಾತ್ಮಕತೆಯ ಸಂಕೇತವಾಗಿದೆ.ಹಸಿರು ಬಣ್ಣ ಸಮೃದ್ಧಿಯನ್ನು ಆಕರ್ಷಿಸುತ್ತದೆ. ವ್ಯವಹಾರ ಮಾಡುವವರಿಗೆ ಈ ಬಣ್ಣ ಅದೃಷ್ಟದ ಸಂಕೇತವಾಗಿದೆ.ಇದು ಅವರ ಬುದ್ದಿ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
ಬಿಳಿ ,ಬೂದು ,ಬೆಳ್ಳಿಯ ಮತ್ತು ಬಂಗಾರದ ಬಣ್ಣದ ಪರ್ಸ್.
ಇವು ಕಬ್ಬಿಣದ ಅಂಶವುಳ್ಳ ಬಣ್ಣಗಳಾಗಿದ್ದು.ಈ ಬಣ್ಣಗಳು ನಿಮ್ಮ ಸಮೃದ್ಧಿಯನ್ನು ಹೆಚ್ಚಿಸುವುದೇ ಅಲ್ಲದೆ ಸಮೃದ್ಧಿಯನ್ನು ಸ್ಥಿರವಾಗಿ ಮತ್ತು ಶಾಶ್ವತವಾಗಿ ನೆಲೆಸುವಂತೆ ಮಾಡುತ್ತದೆ.ಬಂಗಾರದ ಬಣ್ಣವು ಇಷಾರಾಮಿಗೆ ಸಂಬಂಧ ಪಟ್ಟಿದ್ದು.ಆದ್ದರಿಂದ ಬಂಗಾರದ ಬಣ್ಣದ ಪರ್ಸ್ ಗಳು ಐಷಾರಾಮಿ ಜೀವನದ ಸಂಕೇತವಾಗಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
