ಶುಕ್ರವಾರ ಎಂದರೆ ಮಾತ್ರ ಲಕ್ಷ್ಮೀ ದೇವರಿಗೆ ಅತ್ಯಂತ ಪ್ರಿಯ ? ಶುಕ್ರವಾರ ಎನ್ನುವ ಹೆಸರು ಹೇಗೆ ಬಂತು ?
ಲಕ್ಷ್ಮೀದೇವಿಯ ಹೆಸರು ಹೇಳುತ್ತಿದ್ದಂತೆಯೇ ಶುಕ್ರವಾರ ಜ್ಞಾಪಕಕ್ಕೆ ಬರುತ್ತದೆ. ಏಕೆ ಬಹಳ ಜನರು ಶುಕ್ರವಾರವೇ ಲಕ್ಷ್ಮೀಯನ್ನು ಆರಾಧಿಸುತ್ತಾರೆ ಗೊತ್ತಾ ?
ನಮ್ಮ ಪುರಾಣದ ಪ್ರಕಾರ ಶುಕ್ರಾಚಾರ್ಯರು, ರಾಕ್ಷಸರ ಗುರು ಅವರ ಹೆಸರಿನಿಂದಲೇ ಶುಕ್ರವಾರ ಎಂಬ ಹೆಸರು ಬಂದಿದೆ.ಶುಕ್ರಾಚಾರ್ಯರ ತಂದೆಯವರಾದ ಬೃಗು ಮಹರ್ಷಿಗಳು,ಬ್ರಹ್ಮ ದೇವರ ಸಂತಾನದಲ್ಲಿ (ಮಕ್ಕಳಲ್ಲಿ) ಒಬ್ಬರು.
ಈ ಬೃಗು ಮಹರ್ಷಿಗಳು ಲಕ್ಷ್ಮೀದೇವಿಯ ತಂದೆಯೂ ಕೂಡ ಹೌದು. ಅದಕ್ಕೆ ಲಕ್ಷ್ಮೀದೇವಿಗೆ ‘ ಭಾರ್ಗವಿ’ ಎನ್ನುವ ಹೆಸರು ಸಹ ಇದೆ.
ಈ ವಿಧವಾಗಿ ಲಕ್ಷ್ಮೀದೇವಿಗೆ ಶುಕ್ರಾಚಾರ್ಯರು ಸಹೋದರರು ಆಗುತ್ತಾರೆ .ಅದಕ್ಕೆ ಶುಕ್ರವಾರ ಎಂದರೆ ಲಕ್ಷ್ಮೀಗೆ ತುಂಬ ಅಚ್ಚು ಮೆಚ್ಚು.
ಲಕ್ಷ್ಮೀ ದೇವಿಗೆ ಕೆಂಪು ಮತ್ತು ಹಸಿರು ಬಣ್ಣ ಅಂದರೆ ತುಂಬ ಇಷ್ಟ.ಕೆಂಪು ಬಣ್ಣ ಶಕ್ತಿಯ ಸಂಕೇತ,ಹಸಿರು ಬಣ್ಣ ಸಮೃದ್ಧಿ ಮತ್ತು ಪ್ರಕೃತಿಯ ಸಂಕೇತವಾಗಿದೆ.
ಶುಕ್ರವಾರ ಲಕ್ಷ್ಮೀ ದೇವಿಯನ್ನು ಹಲವು ರೀತಿಯ ಪರಿಮಳ ಯುಕ್ತ ಕೆಂಪು ಮತ್ತು ಬಿಳಿ ಬಣ್ಣದ ಅಥವಾ ತಾವರೆ ಹೂವುಗಳಿಂದ ಅಲಂಕರಿಸಿ . ಪೂಜೆಯನ್ನು ಮಾಡುವುದರಿಂದ ಆ ತಾಯಿಯು ಅನುಗ್ರಹ ಪಡೆಯಬಹುದು.
ಇನ್ನೊಂದು ಅರ್ಥದಲ್ಲಿ ಕೆಂಪು ಬಣ್ಣ ಕುಂಕುಮದ ಪ್ರತೀಕವಾಗಿ ಹಸಿರು ಬಣ್ಣ ಹಸಿರು ಬಳೆಗಳನ್ನು ಸಹ ಸೂಚಿಸುತ್ತದೆ.
ಈ ರೀತಿ ಮುತೈದೆಯರು ಕೆಂಪು ಮತ್ತು ಹಸಿರು ಬಣ್ಣದ ವಸ್ತ್ರವನ್ನು ಧರಿಸಿ. ಕೈ , ಕಾಲು ಮತ್ತು ಮುಖಕ್ಕೆ ಹರಿಷಿಣವನ್ನು ಹಚ್ಚಿಕೊಂಡು ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀ ದೇವಿಯು ಕರುಣೆ ಮತ್ತು ಕೃಪಾ ಕಟಾಕ್ಷ ಸಿಗುತ್ತದೆ.
ಶುಕ್ರವಾರದ ದಿನ ಲಕ್ಷ್ಮೀ ಗೆ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು ,ನೈವೇದ್ಯವಾಗಿ ಶುದ್ಧ ಹಸುವಿನ ಹಾಲನ್ನು ಸಮರ್ಪಿಸಬೇಕು.
ಶುಕ್ರವಾರದ ದಿನ ಈ ರೀತಿ ಶ್ರೀ ಮಹಾಲಕ್ಷ್ಮೀಗೆ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ ನಮಗೆ ಸುಖ-ಶಾಂತಿ,ಐಶ್ವರ್ಯ ,ಆರೋಗ್ಯ ಸಹ ದೊರೆಯುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
