fbpx
ಆರೋಗ್ಯ

ಪುರುಷರಲ್ಲಿ ಆ ಕ್ರಿಯೆಯ ಆಸಕ್ತಿ ಹೆಚ್ಚಿಸುವುದು ಹೇಗೆ ?

ಪುರುಷರಲ್ಲಿ ಆ ಕ್ರಿಯೆಯ ಆಸಕ್ತಿ ಹೆಚ್ಚಿಸುವುದು ಹೇಗೆ ?

ಹಾರ್ಮೋನುಗಳ ಬದಲಾವಣೆ ಈಸ್ಟ್ರೋಜೆನ್, ಪ್ರೊಜೆಸ್ಟಿರೋನ್ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್ ಗಳ ಏರಿಳಿತ ಲೈಂಗಿಕ ಕ್ರಿಯೆಯ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ ಪುರುಷರ ಟೆಸ್ಟೋಸ್ಟಿರಾನ್ ಹಾರ್ಮೋನ್ ವೃಷಣದಲ್ಲಿ ಉತ್ಪತ್ತಿಯಾಗುತ್ತದೆ .

ಈ ಹಾರ್ಮೋನು ಗಂಡಸು ತನಕ್ಕಾಗಿ , ದೇಹದ ರಚನೆ ,ಕೂದಲು ,ಲೈಂಗಿಕ ಕ್ರಿಯೆ ಮತ್ತು ವೀರ್ಯಾಣುಗಳ ಉತ್ಪಾದನೆಯಲ್ಲಿ ಬಹಳ ಮುಖ್ಯವಾಗಿ ಬೇಕಾಗುತ್ತದೆ , ಒಬ್ಬರಿಗೆ ಇರುವಷ್ಟು ಮಟ್ಟ ಇನ್ನೊಬ್ಬ ಪುರುಷನಲ್ಲಿ ಕಂಡುಬರುವುದಿಲ್ಲ ಎಲ್ಲವು ನೈಸರ್ಗಿಕ ದತ್ತವಾಗಿ ಬರುತ್ತದೆ , ಕೆಲವರಿಗೆ ವಯಸ್ಸು ಹೆಚ್ಚಾದಂತೆ ಹಾರ್ಮೋನ್ ಬದಲಾವಣೆಯಾಗುತ್ತಾ ಸಾಗುತ್ತದೆ ,ಈ ಹಾರ್ಮೋನ್ ಕಡಿಮೆಯಾದರೆ ಕಾಮಾಸಕ್ತಿ ಕಡಿಮೆಯಾಗುತ್ತದೆ ,

ನೈಸರ್ಗಿಕವಾಗಿ ಪುರುಷತ್ವ ಹೆಚ್ಚಿಸುವ ಕೆಲವು ವಿಧಾನಗಳು ಇಲ್ಲಿವೆ

ಚಿಪ್ಪು ಮೀನು(Oysters):

ಕಾಮೋತ್ತೇಜಕ ಅಂಶ ಆಫ್ರೊದಿಸಿಯಾಕ್ಸ್(aphrodisiacs) ಪುರುಷರ ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ.
ಜಿಂಕ್ ಅಧಿಕ ಪ್ರಮಾಣದಲ್ಲಿ ಇದ್ದು ಜನನಾಂಗದ ರಕ್ತ ಪರಿಚಲನೆ ವೃದ್ಧಿಯಾಗುತ್ತದೆ. ವೀರ್ಯಾಣು ಸಂಖ್ಯೆ ಯನ್ನು ವೃದ್ಧಿಸುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ ಟೆಸ್ಟೋಸ್ಟೆರಾನ್ ಹೆಚ್ಚಿಸುತ್ತದೆ, ಇದು ಪ್ರೋಟೀನ್ ಹೀರುವಿಕೆ ಸುಧಾರಿಸುತ್ತದೆ ಮತ್ತು ಸ್ನಾಯುಗಳನ್ನ ಬಲಪಡಿಸುತ್ತದೆ.

ಈಗಿನ ಬ್ಯುಸಿ ಜೀವನ ಕ್ರಮ ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆಯಾಗುವಂತೆ ಮಾಡಿ , ೧೦೦ ರಲ್ಲಿ ಶೇಕಡಾ ೪೦ ರಿಂದ ೪೫ ಮಂದಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ,
ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಕುಡಿತ, ಧೂಮಪಾನ ,ಪಿಜ್ಜಾ ಬರ್ಗರ್ ನಂತಹ ಆಹಾರಗಳು ಹಾಗು ಅಧಿಕ ಕೆಲಸದ ಒತ್ತಡ .

ಸುಲಭವಾಗಿ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳಿಂದ ವೀರ್ಯಾಣು ಸಂಖ್ಯೆ ಯನ್ನು ವೃದ್ಧಿಸಿಕೊಂಡು ಗಂಡಸರ ಪುರುಷತ್ವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು

ಮೀನು :

ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ತೈಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

ಕುಂಬಳಕಾಯಿ ಬೀಜ:

ಕುಂಬಳಕಾಯಿ ಬೀಜದಲ್ಲಿ ಜಿಂಕ್, ಒಮೇಗಾ ಫ್ಯಾಟಿ ಆಸಿಡ್ ಇದ್ದು ಜನನಾಂಗಕ್ಕೆ ರಕ್ತ ಸರಾಗವಾಗಿ ಸರಬರಾಜಾಗುವಂತೆ ಮಾಡುತ್ತದೆ.

ಚೆನ್ನಾಗಿ ನಿದ್ದೆ ಮಾಡಿ :

ಪುರುಷರು ಚೆನ್ನಾಗಿ ನಿದ್ದೆ ಮಾಡಬೇಕು ಕನಿಷ್ಠ 8 ಗಂಟೆಗಳ ನಿದ್ದೆ ಮಾಡಿದರೆ ಒಳ್ಳೆಯದು , ದೇಹವನ್ನು ಕೆಟ್ಟ ಚಟಗಳಿಂದ ದೂರ ಇರಿಸಿ

ದೇಹದ ತೂಕ ಕಡಿಮೆ ಮಾಡಿ :

ಹೆಚ್ಚು ತೂಕ ಇದ್ದಷ್ಟು ಟೆಸ್ಟೋಸ್ಟಿರಾನ್ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ , ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ .

ಪ್ಲಾಸ್ಟಿಕ್ ಉಪಯೋಗ ಬೇಡ :

ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಂಗ್ರಹಿಸಿ ಇಟ್ಟ ಆಹಾರ , ಕಾಫಿ ಮಗ್ ನಲ್ಲಿ ಕುಡಿಯುವುದು ಇವೆಲ್ಲ ಅಭ್ಯಾಸಗಳು ನಿಮ್ಮ ಟೆಸ್ಟೋಸ್ಟಿರಾನ್ ಮಟ್ಟ ಕೆಳಗೆ ಹೋಗುವಂತೆ ಮಾಡುತ್ತದೆ .

ಹೆಚ್ಚು ಸತುವಿರುವ ಆಹಾರ ಸೇವನೆ ಮಾಡಿ

ಹೆಚ್ಚು ಡ್ರೈ ಫ್ರುಇಟ್ಸ್ ಸತುವಿನಿಂದ ಸಮೃದ್ಧವಾದ ಆಹಾರ ಸೇವನೆ ಮಾಡಿ ಇದು ಪುರುಷರ ವೀರ್ಯಾಣು ಮಟ್ಟವನ್ನು ವೃದ್ಧಿಗೊಳಿಸುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top