fbpx
ದೇವರು

ಕೊಲ್ಲೂರು ಮೂಕಾಂಬಿಕಾ ತಾಯಿ ನೆಲೆಗೊಂಡ ಪುರಾಣದ ಕಥೆ.

ಕೊಲ್ಲೂರು ಮೂಕಾಂಬಿಕಾ ತಾಯಿ ನೆಲೆಗೊಂಡ ಪುರಾಣದ ಕಥೆ.

ಕಾಮಾಸುರ ಎಂಬ ಒಬ್ಬ ಅಸುರ  ದುಷ್ಟ ರಾಕ್ಷಸ ಮೃತ್ಯುಂಜಯನಾಗಿ ಇರಬೇಕು ಎಂದುಕೊಂಡ.ಆದರೆ ಸ್ತ್ರೀ ಶಕ್ತಿ ಜಗನ್ಮಾತೆಯು ಅವನನ್ನು ಎಂದಾದರೂ ಸುಮ್ಮನೆ ಬಿಡುವುದುಂಟೆ,ಇಲ್ಲ ಎಂದಿಗೂ  ಅವನನ್ನು ಈ ಭೂಮಿಯ ಮೇಲೆ  ಜೀವಿಸಲು  ಬಿಡುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿ.

ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯು ಅತ್ಯಂತ ಪ್ರಾಚೀನ ಕ್ಷೇತ್ರಗಳಲ್ಲಿ ಇದು ಕೂಡ  ಒಂದು.ಈ ಶ್ರೀ ಕ್ಷೇತ್ರವು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ 17 ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಇದರ  ಸಮೀಪದಲ್ಲೇ  ಕೊಡಚಾದ್ರಿ ಬೆಟ್ಟಗಳನ್ನು ಈ ಕ್ಷೇತ್ರ  ಸುತ್ತುವರೆದಿದೆ .

ಈ ಶ್ರೀ ಕ್ಷೇತ್ರದ ಉತ್ತರ ಭಾಗದಲ್ಲಿ  ಸೌಪರ್ಣಿಕಾ ಎಂಬ ನದಿ ಇದೆ. ಸುವರ್ಣ ಎಂಬ ಗರುಡ ಪಕ್ಷಿಯು ಈ ನದಿಯ ದಡದಲ್ಲಿ ತಪ್ಪಸ್ಸು ಮಾಡಿ ಮೋಕ್ಷ ಪಡೆದ್ದಿದ್ದರಿಂದ ಈ ನದಿಗೆ ಸೌಪರ್ಣಿಕಾ ಎಂದು  ಹೆಸರು  ಬಂತು ಎಂದು ಸ್ಥಳೀಯರು ಹೇಳುತ್ತಾರೆ.ಈ ನದಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ.ಈ ನದಿಯಲ್ಲಿ ಸ್ನಾನ ಮಾಡಿದರೆ ಅನೇಕ ರೋಗಗಳು ಗುಣವಾಗುತ್ತವೆ ಎಂದು ಭಕ್ತರಿಗೆ ಅಗಾಧವಾದ ನಂಬಿಕೆ ಇದೆ.

ಈ ದೇವಿಯು ಸ್ವಯಂಭುವಾಗಿ ನೆಲೆಸಿದ್ದಾಳೆ. ಆದ್ದರಿಂದ  ಸಾಕ್ಷಾತ್ ಪರಮೇಶ್ವರ ತನ್ನ ಮಗನಾದ ಕುಮಾರಸ್ವಾಮಿಗೆ ಈ ಕ್ಷೇತ್ರದ ಬಗ್ಗೆ ಹೇಳುತ್ತಾರೆ. ನಂತರ ಸುಬ್ರಮಣ್ಯ ಸ್ವಾಮಿಯು ಇಲ್ಲಿ ತಪಸ್ಸು ಮಾಡಿದ ಎಂದು ಪುರಾಣಗಳ ಕಥೆಯಲ್ಲಿ ಉಲ್ಲೇಖವಾಗಿದೆ.

ಕಾಮಾಸುರ ಎಂದು ಇದ್ದ  ರಾಕ್ಷಸನ ಹೆಸರು ಮೂಕಾಸುರ ಹೇಗಾಯಿತು ಗೊತ್ತೇ?

ಕೃತಯುಗದಲ್ಲಿ ಈ ಪ್ರದೇಶದಲ್ಲಿ ಕಾಮಾಸುರನೆಂಬ ರಾಕ್ಷಸನು ದೇವತೆಗಳಿಗೆ,ಋಷಿಗಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದ.ಅವನು ಕಠೋರ ತಪ್ಪಸನ್ನು ಮಾಡಿ ಪರಶಿವನನ್ನು ಮೆಚ್ಚಿಸಿ ಎಂದಿಗೂ ಅವನಿಗೆ  ಮರಣ ಬಾರದೇ ಇರುವ ಹಾಗೆ ವರವನ್ನು ಪಡೆಯಲು ಸಂಕಲ್ಪ ಮಾಡಿದ್ದನಂತೆ. ಪರಮೇಶ್ವರನು ಪ್ರತ್ಯಕ್ಷನಾದ ಒಡನೆಯೇ ದೇವಿಯು ಕಾಮಾಸುರನಿಗೆ ಮಾತನಾಡಲು ಬಾಯಿ ಬರದ ಹಾಗೆ ಮಾಡಿದಳು.ಆದ್ದರಿಂದ ಅಲ್ಲಿಂದ ಇವನ ಹೆಸರು ಮೂಕಾಸುರ ಎಂದಾಯಿತು.

ದೇವಿಗೆ ಮೂಕಾಂಬಿಕೆ ಎನ್ನುವ ಹೆಸರು ಹೇಗೆ ಬಂತು

ಆದರೆ ಕಾಮಾಸುರ ಋಷಿಗಳನ್ನು,ದೇವತೆಗಳನ್ನು ಹಿಂಸಿಸುತ್ತಿದ್ದನು. ಶುಕ್ಲ ಪಕ್ಷ ಅಷ್ಟಮಿಯ ದಿನ ದೇವಿಯು ಇವನನ್ನು ಕೊಡಚಾದ್ರಿ ಬೆಟ್ಟದ ಮೇಲೆ ಸಂಹಾರ ಮಾಡಿದಳು.ದೇವಿಯು ಮೂಕಸುರನನ್ನು  ಸಂಹಾರ ಮಾಡಿದ್ದಕ್ಕಾಗಿ  ಮೂಕಾಂಬಿಕೆ ದೇವಿ ಎನ್ನುವ ಹೆಸರು ಬಂತು.

ದೇವಸ್ಥಾನದ ವರ್ಣನೆ.

ಈ ದೇವಾಲಯವನ್ನು  ಕೇರಳದ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ.ಒಳಗಡೆ ಪ್ರವೇಶಿಸುತ್ತಿದ್ದ ಹಾಗೆ  20 ಅಡಿಗಳಷ್ಟು ಎತ್ತರವಿರುವ ದ್ವಜಸ್ತಂಭವು ಭಕ್ತರನ್ನು ಆಕರ್ಷಿಸುತ್ತದೆ.ಅದರ ಪಕ್ಕದಲ್ಲಿಯೇ ಅದಕ್ಕಿಂತ ಚಿಕ್ಕದಾದ ದ್ವಜ ಸ್ತಂಬವು ಚಿನ್ನದ ವಧಿಕೆಯಿಂದ ಕಂಗೊಳಿಸುತ್ತದೆ.ದ್ವಜ ಸ್ತಂಭವನ್ನು ದರ್ಶನ ಮಾಡಿ ನಮಸ್ಕರಿಸಿದ ನಂತರ ಭಕ್ತರು ಗರ್ಭ ಗುಡಿಯೊಳಗೆ ಪ್ರವೇಶ ಮಾಡುತ್ತಾರೆ.

ದೇವಸ್ಥಾನದ   ಒಳಗೆ ಪ್ರವೇಶ ಮಾಡುವಾಗ   ಪುರುಷರು ಅಂಗಿ ಮತ್ತು ಬನಿಯನ್ ಅನ್ನು ತೆಗೆದು ದರ್ಶನ ಮಾಡಬೇಕು. ಮೂಕಾಂಬಿಕಾ ದೇವಿಯು ಪದ್ಮಾಸನದ ಭಂಗಿಯಲ್ಲಿ ಕುಳಿತು ನಮಗೆ ದರ್ಶನ ಕೊಡುತ್ತಾಳೆ.ಶಾಂತರೂಪಳಾಗಿ ಕಾಣಿಸುತ್ತಾಳೆ,ನಾಲ್ಕು ಕೈಗಳು ಇರುವ ದೇವಿಗೆ.ಮೊದಲ  ಎರಡು ಕೈಯಲ್ಲಿ ಒಂದು ಕೈಯಲ್ಲಿ ಶಂಖ , ಇನ್ನೊಂದು ಕೈಯಲ್ಲಿ ಚಕ್ರ ಹಿಡಿದಿರುತ್ತಾಳೆ.ಉಳಿದ ಇನ್ನೆರಡು ಕೈಗಳಲ್ಲಿ ಒಂದು ಅಭಯ ಮುದ್ರೆಯಲ್ಲಿ ಇನ್ನೊಂದು ವರದ ಮುದ್ರೆಯಲ್ಲಿ ಇರುತ್ತವೆ.

ದೇವಿಯಲ್ಲಿ ಶೌರ್ಯವನ್ನು ತೋರಿಸುವ ಖಡ್ಗವನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಜಿ. ರಾಮಚಂದ್ರ ಅವರು ದಾನವಾಗಿ ನೀಡಿದ್ದಾರೆ. ಅವರು ದೇವಿಯನ್ನು ಆಗಾಗ ಬಂದು ದರ್ಶನ ಮಾಡುತ್ತಿದ್ದರಂತೆ.

ಜಗದ್ಗುರು ಆದಿ ಶಂಕಾರಾಚಾರ್ಯರಿಂದ ದೇವಿಯ ಪ್ರತಿಷ್ಠಾಪನೆ.

ಈಗ ಇರುವ ದೇವಿಯ ವಿಗ್ರಹವನ್ನು ಪಂಚಲೋಹದಿಂದ ತಯಾರಿಸಿದವರು, ಪ್ರತಿಷ್ಠಾಪಿಸಿದರು ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರು.ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪೀಠವಿದೆ.

ಉಗ್ರ ರೂಪದ ದೇವಿಯನ್ನು ಶಾಂತಗೊಳಿಸಿದವರು

ಮೊದಲು ದೇವಿ ಉಗ್ರ ರೂಪದಲ್ಲಿ ಇದ್ದಳೆಂದು ಹೇಳಲಾಗುತ್ತದೆ. ಶ್ರೀ ಶಂಕರಾಚಾರ್ಯರು ಬಾಲ್ಯದಲ್ಲಿ ಕಾಲ್ನಡಿಗೆಯಲ್ಲಿ ಈ ಪ್ರದೇಶಕ್ಕೆ ಬಂದಾಗ ಆಕೆಯ ಉಗ್ರ ರೂಪ ನೋಡಿ ಭಯ ಭೀತರಾಗಿದ್ದರು.ಆದ್ದರಿಂದ  ನಿರಂತರವಾಗಿ  ಪೂಜಿಸಿ,ತಪ್ಪಸ್ಸನ್ನು ಆಚರಿಸಿ  ದೇವಿಯನ್ನು ಶಾಂತ ರೂಪಳನ್ನಾಗಿ  ಮಾಡಿ ಶಾಂತವಾಗಿಸಿದವರು  ಶಂಕರಾಚಾರ್ಯರು  ಎಂದು ಪುರಾಣ ಕಥೆಗಳು ಹೇಳುತ್ತವೆ.

ನಂತರದ ದಿನಗಳಲ್ಲಿ ರಾಜರು ಈ ದೇಶವನ್ನು ಆಳಿದವರು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಲೇ ಬಂದರು.ಇಲ್ಲಿ ಗಣೇಶನಿಗೆ ಬಲಗಡೆ ಸೊಂಡಿಲು ಇದೆ.

ಸ್ವಯಂಭು ಲಿಂಗದ ಮಹತ್ವ

ಮೂಕಾಂಬಿಕೆಯ ದೇವಿಯ ವಿಗ್ರಹದ ಮುಂದೆ ಆಕೆಯ ಸ್ವಯಂಭು ಲಿಂಗವಿದೆ.ಈ ಲಿಂಗದಲ್ಲಿ ಎರಡು ಗೆರೆಗಳು ಇದ್ದು ಲಿಂಗವು ಎರಡು ಭಾಗಗಳು ಆಗಿರುವಂತೆ ಕಾಣಿಸುತ್ತದೆ. ಅದರಲ್ಲಿನ ಚಿಕ್ಕ ಭಾಗವು  ಬ್ರಹ್ಮ, ವಿಷ್ಣು ಸ್ಥಳಗಳೆಂದು,ದೊಡ್ಡ ಸ್ಥಳವು ಸರಸ್ವತಿ,ಮಹಾಲಕ್ಷ್ಮೀ, ಮಹಾಕಾಳಿ ಸ್ಥಳವೆಂದು ಇಲ್ಲಿಯೇ ಜ್ಞಾನ ಶಕ್ತಿ,ಕ್ರಿಯಾ ಶಕ್ತಿ,ಇಚ್ಛಾ ಶಕ್ತಿ ಇರುತ್ತವೆ ಎಂದು ಹೇಳಲಾಗುತ್ತದೆ.

ಅಲಂಕಾರ ,ಪೂಜೆಗಳು ಮೂಕಾಂಬಿಕೆಗೆ,ಅಭಿಷೇಕ ಮಾತ್ರ ಲಿಂಗಕ್ಕೆ ನೆರವೇರಿಸಲಾಗುತ್ತದೆ.ಬೆಳಗ್ಗೆ 5 ಗಂಟೆಯಿಂದ ರಾತ್ರಿ 8.30 ರ ವರೆಗೆ ದೇವಿಯ ದರ್ಶನ ಪಡೆಯಲು ಕಾಲಾವಕಾಶವಿದೆ.

ದೇವಸ್ಥಾನದ ದಕ್ಷಿಣದಲ್ಲಿ 10 ಕೈಗಳು ಉಳ್ಳ ದಶಮುಖ ಬಲಮುರಿ ಗಣಪತಿ ದೇವಸ್ಥಾನವಿದೆ.ಈ ಗಣಪತಿಗೆ ಸೊಂಡಿಲು ಬಲಗಡೆಯಲ್ಲಿದೆ. ಆದ್ದರಿಂದ ಇದು ಇಲ್ಲಿಯ ಇನ್ನೊಂದು ವಿಶೇಷತೆ.

ದೇವಸ್ಥಾನದ ಆವರಣದಲ್ಲಿ ಸರಸ್ವತಿ ದೇವಿಯ ದೇವಸ್ಥಾನವಿದೆ. ರಾತ್ರಿ ಮೆರವಣಿಗೆಯ ನಂತರ  ವಿಗ್ರಹವನ್ನು ಸರಸ್ವತಿ ದೇವಿಯ  ದೇವಸ್ಥಾನದ ಒಳಗೆ ಇಡಲಾಗುತ್ತದೆ.

ಇಲ್ಲಿ ಭಕ್ತರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಕೂಡ ಮಾಡಿಸುತ್ತಾರೆ.

ಆಕ್ಟೋಬರ್ -ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿ ಜಾತ್ರೆಯಂತೆ ಜನ ಸಾಗರವೇ  ಬಂದು ಸೇರುತ್ತದೆ.

ಕೊಲ್ಲೂರಿಗೂ ಹನುಮಂತನಿಗೂ ಸಂಬಂಧವಿದೆ

ಹಿಮಾಲಯದಿಂದ ಸಂಜೀವಿನಿ  ಪರ್ವತವನ್ನು ಲಂಕೆಗೆ ಕೊಂಡೊಯ್ಯುವಾಗ  ಕೊಡಚಾದ್ರಿ ಬೆಟ್ಟಗಳ ತಪ್ಪಲಿನಲ್ಲಿ ಸಂಜೀವಿನಿ ಪರ್ವತ  ಬಿದ್ದಿರುವುದರಿಂದ  ಸಾಕಷ್ಟು ಗಿಡಮೂಲಿಕೆಗಳು  ಸಹ ಇಲ್ಲಿ ದೊರೆಯುತ್ತವೆ ಎಂದು ಹೇಳುತ್ತಾರೆ ಇಲ್ಲಿನ ಸ್ಥಳೀಯರು.

ಈ ಶ್ರೀ ಕ್ಷೇತವು ಹಚ್ಚ ಹಸಿರಿನ ,ಪ್ರಕೃತಿಯ ರಮಣೀಯವಾದ ಸೌಂದರ್ಯದಿಂದ ಪ್ರಶಾಂತತೆಯಿಂದ ಕೂಡಿರುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ.

ಇಲ್ಲಿ ಭಕ್ತರಿಗೆ ಉಳಿದುಕೊಳ್ಳಲು ದೇವಸ್ಥಾನದ ಮಂಡಳಿಯು ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಆದರೆ ಮಾರ್ಚ ತಿಂಗಳಿನಲ್ಲಿ ಇಲ್ಲಿ ಜಾತ್ರೆ ನೆಡೆಯುವುದರಿಂದ ಭಕ್ತರ ಜನಸಾಗರವೇ ಹರಿದು ಬರುತ್ತದೆ.ಆದ್ದರಿಂದ ಜನ ಸಂಧಣಿ ಅಧಿಕವಾಗಿರುತ್ತದೆ.

ಬೆಂಗಳೂರಿನಿಂದ 420 ಕಿಲೋಮೀಟರ್ ಮತ್ತು ಮಂಗಳೂರಿನಿಂದ 120 ಕಿಲೋಮೀಟರ್ ದೂರ ಇದೆ. ಭಕ್ತಾದಿಗಳಿಗೆ ಸಾರಿಗೆ ಸೌಲಭ್ಯವೂ ಸಹ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top