fbpx
ಉಪಯುಕ್ತ ಮಾಹಿತಿ

ನಿಮ್ಮ ಲೆದರ್ ಬ್ಯಾಗ್ ಬೇಗ ಹಾಳಾಗದಂತೆ ಬಹಳ ದಿನಗಳವರೆಗೆ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?

ನಿಮ್ಮ ಲೆದರ್ ಬ್ಯಾಗ್ ಬೇಗ ಹಾಳಾಗದಂತೆ ಬಹಳ ದಿನಗಳವರೆಗೆ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?

ಜಾಸ್ತಿ ದುಡ್ಡು ಕೊಟ್ಟು ನಿಮಗೆ ಇಷ್ಟವಾದ ಲೆದರ್‌ ಬ್ಯಾಗ್‌ ಕೊಂಡುಕೊಳ್ಳುವುದು ತುಂಬಾನೆ ಸುಲಭ. ಆದರೆ ಅದನ್ನು ಬಹಳ ದಿನಗಳವರೆಗೆ ಚನ್ನಾಗಿ ಇಟ್ಟಿಕೊಳ್ಳೋದು ತುಂಬಾನೆ ಕಷ್ಟವಾಗಿದೆ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ.ನಿಮಗಾಗಿ ಇಲ್ಲಿವೆ ಒಂದಿಷ್ಟು ಟಿಪ್ಸ್‌. ಈ ಟಿಪ್ಸ್ ಗಳನ್ನೂ ಬಳಸಿ ಲೆದರ್‌ಬ್ಯಾಗ್‌ ಗಳು ಬಹುದಿನಗಳ ಕಾಲ ಬಾಳಿಕೆ ಬರುವಂತೆ ಮಾಡಿ.

1.ಲೆದರ್ ಬ್ಯಾಗ್‌ ತಗೊಂಡ ಮೊದಲ ಮೂರು ತಿಂಗಳು ಅದನ್ನು ಕಲೆ, ಗ್ರೀಸ್‌ ಆಗದಂತೆ ಎಚ್ಚರವಹಿಸಿ. ನಿಮಗೆ ಬೇಕಾದ ಕ್ರೀಂ ಹಚ್ಚಿ ಬ್ಯಾಗ್ ಹೊಳೆಯುವಂತೆ ಮಾಡಿಕೊಳ್ಳಿ.

2.ಲೆದರ್‌ ಬ್ಯಾಗ್‌ನ್ನು ಯಾವಾಗಲೂ ಸರಿಯಾದ ಜಾಗದಲ್ಲಿ ಇಡಿ.ಆದರೆ ಯಾವತ್ತೂ ಅದನ್ನು ಪ್ಲಾಸ್ಟಿಕ್‌ ಕವರ್ ನಲ್ಲಿ ಇಡಬೇಡಿ. ಇದರಿಂದ ಬ್ಯಾಗ್ ಅಲ್ಲಲ್ಲಿ ಕಲೆಗಳಾಗುತ್ತವೆ.

3. ಬ್ಯಾಗನ್ನು ಮಡಿಚಿಡಬೇಡಿ. ಬ್ಯಾಗ್ ಅನ್ನು ಯಾವಾಗಲೂ ಒಂದೇ ಶೇಪ್ ನಲ್ಲಿರಿಸಿ. ಬ್ಯಾಗ್ ಖಾಲಿ ಮಾಡಿದರು ಅದರೊಳಗೆ ಬಟ್ಟೆ, ಸ್ಪೇಟರ್ ಮುಂತಾದಿ ವಸ್ತುಗಳನ್ನು ಇಡುವುದರಿಂದ ಬ್ಯಾಗ್ ಒಂದೇ ಶೇಪ್ ನಲ್ಲಿರಲು ಸಹಾಯವಾಗುತ್ತದೆ.

4. ಬ್ಯಾಗ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಿ:
ವಿನೆಗರ್ ಅನ್ನು ಬಳಸಿ ಆಗಾಗ್ಗೆ ಬ್ಯಾಗ್ ಅನ್ನು ಸ್ವಚ್ಛಗೊಳಿಸುತ್ತಿರಿ. ನೀವು ಬ್ಯಾಗ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಬ್ಯಾಗ್ ತನ್ನ ಕಲೆಯನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗುತ್ತಾ ಬರುತ್ತದೆ.

5.ಮಳೆಗಾಲ ಅಥವಾ ಚಳಿಗಾಲದ ಟೈಮ್ ನಲ್ಲಿ ಈ ಲೆದರ್ ಬ್ಯಾಗ್‌ಗಳನ್ನು ಮುಚ್ಚಿ ಒಳಗೆ ಇಡಬೇಡಿ.ಅದರ ಬದಲಾಗಿ ಬಿಸಿಲಿನಲ್ಲಿ ಇಡಿ.ಇದರಿಂದ ಬ್ಯಾಗ್‌ನಿಂದ ಕೆಟ್ಟ ವಾಸನೆ ಬರುವುದು ಕಡಿಮೆಯಾಗುತ್ತದೆ.

6.ಯಾವುದೆ ಲಿಕ್ವಿಡ್‌ ಮತ್ತು ಕಾಸ್ಮೆಟಿಕ್‌ ಪದಾರ್ಥಗಳನ್ನು ಬೇರೆಯದೆ ಎಡಿಎ ಒಂದು ಸಣ್ಣ ಪೌಚ್‌ನಲ್ಲಿ ಹಾಕಿ ನಿಮ್ಮ ಬ್ಯಾಗ್‌ನಲ್ಲಿಡಿ. ಇದರಿಂದ ನಿಮ್ಮ ಲೆದರ್‌ ಬ್ಯಾಗ್‌ಗೆ ಡ್ಯಾಮೇಜ್‌ ಆಗುವುದನ್ನು ತಪ್ಪಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top