fbpx
ಆರೋಗ್ಯ

ಗರ್ಭಪಾತದ ಬಗ್ಗೆ ನೀವು ತಿಳ್ಕೊಂಡಿರುವ ತಪ್ಪು ಕಲ್ಪನೆಗಳು!

ಗರ್ಭಪಾತದ ಬಗ್ಗೆ ನೀವು ತಿಳ್ಕೊಂಡಿರುವ ತಪ್ಪು ಕಲ್ಪನೆಗಳು!

ಜನರು ಗರ್ಭಪಾತದ ಬಗ್ಗೆ ನಂಬಲು ಅನರ್ಹವಾದಂತಹ ಅನೇಕ ಮೂಡ ನಂಬಿಕೆಯನ್ನು ಹೊಂದಿರುತ್ತಾರೆ. ಹಾಗಾಗಿ ನಾವು ಆ ಮೂಢನಂಬಿಕೆಗಳ ಸತ್ಯಾಸತ್ಯತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಗರ್ಭಪಾತದ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳಿ.

1. ಗರ್ಭಪಾತ ಮಾಡಿಸಿದರೆ ಮತ್ತೆ ಗರ್ಭಿಣಿಯಾಗುವ ಸಾಧ್ಯತೆ ಇದೆಯೇ?:

ಈಗ ತಾನೇ ಗರ್ಭಪಾತ ಮಾಡಿಸಿಕೊಂಡ ಮಹಿಳೆ ತಕ್ಷಣದಲ್ಲಿ ಇನ್ನೊಂದು ಗರ್ಭಧಾರಣೆಗೆ ಸಿದ್ಧವಾಗಿರುವುವಿಲ್ಲ. ಗರ್ಭಪಾತ ಎಂದೂ ಬಂಜೆತನಕ್ಕೆ ಕಾರಣವಾಗುವುದಿಲ್ಲ. ಅಚಾತುರ್ಯವಾಗಿ ಮಹಿಳೆ ಪುನಃ ಗರ್ಭಧರಿಸಿದರೂ ಗಭಾವಸ್ಥೆಯನ್ನು ಮುಂದುವರಿಸಿದರೆ ಯಾವುದೇ ಅಪಾಯವಿರುವುದಿಲ್ಲ.

2.ಗರ್ಭಪಾತ ಮಾಡಿಸುವುದು ಅಪಾಯಕಾರಿಯೇ? .

ಗರ್ಭಪಾತವು ಅಪಾಯಕಾರಿಯೂ ಇಲ್ಲವೋ ಎನ್ನುವುದು ನೀವು ಸುರಕ್ಷಿತ ಹೊಂದಿರುವಿರೋ ಇಲ್ಲ ಅಸುರಕ್ಷಿತ ಗರ್ಭಪಾತದ ಮಾರ್ಗವನ್ನು ಅನುಸರಿಸಿದಿರೋ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ನೀವು ವೈದ್ಯರ ಬಳಿ ಹೋಗಿ ಅವರ ಸಲಹೆ ಮಾರ್ಗವನ್ನು ಅನುಸರಿಸಿದ್ದಾರೆ ನಿಮಗೆ ಯಾವುದೇ ಸಮಸ್ಯೆಗಳು ಹೆಚ್ಚಾಗಿರುವುದಿಲ್ಲ.

3.ಗರ್ಭಪಾತವು ಬಂಜೆತನಕ್ಕೆ ಕಾರಣವಾಗುತ್ತದೆಯೇ?

ನೀವು ಸುರಕ್ಷಿತ ಮಾರ್ಗವನ್ನು ಅನುಸರಿಸಿದ್ದೇ ಆದರೆ ಗರ್ಭಪಾತದಿಂದ ಶಾಶ್ವತ ಬಂಜೆತನಕ್ಕೆ ಕಾರಣವಾಗುವುದಿಲ್ಲ. ನೀವು ಬೇರೆ ಗರ್ಭಕೋಶದ ಸಮಸ್ಯೆಯನ್ನು ಹೊಂದಿದ್ದರೆ ಮಾತ್ರ ಬಂಜೆತನ ಉಂಟಾಗುವ ಅಪಾಯವು ಇರುತ್ತದೆ.

4.ಭ್ರೂಣಕ್ಕೆ ನೋವಾಗುತ್ತದೆಯೇ?

ಗರ್ಭಿಣಿಯರಿಗೆ ಗರ್ಭಪಾತವಾದಾಗ ಬ್ರೂಣಕ್ಕೆ ನೋವಾಗುತ್ತದೆ ಎಂದು ಅನೇಕ ಜನರು ಭಾವಿಸಿರುತ್ತಾರೆ ಆದರೆ ಅದು ಅಕ್ಷರಸಹ ಸುಳ್ಳು. ಭ್ರೂಣಕ್ಕೆ ಯಾವುದೇ ನೋವಿನ ಅನುಭವವಾಗುವುದಿಲ್ಲ.ದೇಹದ ನರದ ತುದಿಗಳು ಗರ್ಭಿಣಿಯರಿಗೆ ಮಾತ್ರ ನೋವಿನ ಅನುಭವವನ್ನು ತರುತ್ತವೆ.

5.ಗರ್ಭಪಾತದ ನಂತರ ಮಹಿಳೆಯರು ಮಾನಸಿಕ ಆಘಾತದಿಂದ ಬಳಲುತ್ತಾರೆಯೇ?

ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ಮತ್ತು ತೊಡಕುಗಳ ಕಾರಣದಿಂದ ಗರ್ಭಪಾತದ ನಂತರ ಸ್ವಲ್ಪ ಕಾಲ ಮಾನಸಿಕ ಆಘಾತದಿಂದ ಬಳಲುತ್ತಾರೆ.

6.ಗರ್ಭಪಾತ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದೇ?

ಗರ್ಭಪಾತವಾಗುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎಂದು ತಿಳಿದಿರುತ್ತಾರೆ ಆದ್ರೆ ಗರ್ಭಪಾತವಾಗುವುದು ಯಾವುದೇ ಕಾರಣಕ್ಕೂ ಸ್ತನ ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ.

7. ಅಬಾರ್ಷನ್ ಮಾಡಿಸುವುದು ಕಾನೂನು ಬಾಹಿರವೇ?

ಭಾರತದ ಕಾನೂನಿನ ಪ್ರಕಾರ 12 ರಿಂದ 20 ವಾರಗಳ ಕಾಲದ ಭ್ರೂಣವನ್ನು ತೆಗಿಸಲು ಅನುಮತಿ ಇದೆ. ಮತ್ತು ಇದು ಕಾನೂನು ಬಾಹಿರವಲ್ಲ ಎಂದು 1971ರ ಪ್ರೆಗ್ನೆನ್ಸಿ ಆಕ್ಟ್ ಹೇಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top