fbpx
ಸಣ್ಣ ಕಥೆ

ನಾವು ಒಳ್ಳೇದು ಮಾಡಿದ್ರೆ ಒಳ್ಳೇದಾಗುತ್ತೆ ಕೆಟ್ಟದ್ದು ಮಾಡಿದ್ರೆ ತುಂಬಾ ಕೆಟ್ಟದ್ದು ಅನ್ನೋದಕ್ಕೆ ಈ ಕಥೆ

ಕೆಲಸ ಮಾಡುವಾಗ ಫಲವನ್ನು ಆಶಿಸಲೇ ಬಾರದು.ಇದಕ್ಕೊಂದು ಉತ್ತಮ ಉದಾಹರಣೆ ಈ ಕಥೆ.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ.ಒಮ್ಮೆ ಆ ರಾಜ ತನ್ನ ಬಳಿಯಿದ್ದ ಮೂವರು ಸೇನಾಧಿಪತಿಗಳನ್ನು ಕರೆದು ನೀವೆಲ್ಲರೂ ತೋಟದೊಳಗೆ ಹೋಗಿ  ತೋಟದಲ್ಲಿರುವ  ಮರಗಳಿಂದ ಒಳ್ಳೆಯ ಹಣ್ಣುಗಳನ್ನು ಆರಿಸಿ ಒಂದೊಂದು  ಚೀಲ ಹಣ್ಣುಗಳನ್ನು ಕಿತ್ತು ತನ್ನಿರಿ ಎಂದು ಆಜ್ಞೆ ಮಾಡಿದ.

ಅದೇ ರೀತಿ ಮೂರು ಜನ ಸೇನಾಧಿಕಾರಿಗಳು  ತಲಾ ಒಂದೊಂದು ಚೀಲ ಹಿಡಿದುಕೊಂಡು ತೋಟದೊಳಗೆ ಪ್ರವೇಶಿಸಿದರು.

ಮೊದಲನೇ ಸೇನಾಧಿಕಾರಿ.

ಒಳ್ಳೆಯ  ಗುಣಮಟ್ಟದ ಹಣ್ಣುಗಳನ್ನು ಚೀಲದ ತುಂಬ ತುಂಬಿಸಿಕೊಂಡು ಹೋಗುತ್ತೇನೆ.ನನ್ನ ಕೆಲಸವನ್ನು  ನೋಡಿ ರಾಜ ಮೆಚ್ಚಬೇಕು ಎಂದು ಆಲೋಚಿಸುತ್ತಾ .ಪ್ರತೀ ಮರದಲ್ಲಿದ್ದ ಒಳ್ಳೆಯ ಹಣ್ಣುಗಳನ್ನು ಕಿತ್ತು ಮೂಟೆಗೆ ತುಂಬಿಸಿದ.

ಎರಡನೆಯ ಸೇನಾಧಿಕಾರಿ.

ನಾನು ಕಿತ್ತುಕೊಂಡು ಹೋಗುವ ಹಣ್ಣುಗಳಲ್ಲಿ ಒಳ್ಳೆಯದು ಯಾವುದು ? ಕೆಟ್ಟದ್ದು ಯಾವುದು ?  ಎಂದು ರಾಜ ಪ್ರತಿಯೊಂದು ಹಣ್ಣನ್ನೂ ಪರೀಕ್ಷಿಸಿ ನೋಡಲಾರ ಎಂದು ಭಾವಿಸಿ ಒಳ್ಳೆಯ ಹಣ್ಣುಗಳನ್ನು,ಕೊಳೆತ ಹಣ್ಣುಗಳು, ಕಾಯಿಗಳು ಯಾವುದು ?  ಎಂದು ಸಹ  ನೋಡದೆ ಕೈಗೆ ಸಿಕ್ಕ  ಎಲ್ಲವನ್ನು ಕಿತ್ತು  ಚೀಲದೊಳಗೆ ತುಂಬಿಕೊಂಡು ಬಂದ.

ಮೂರನೆಯ ಸೇನಾಧಿಕಾರಿ.

ರಾಜ ತನ್ನ ರಾಜ್ಯವನ್ನು,ಆತನ ಮೂವರು ಹೆಂಡತಿಯರನ್ನು ನೋಡಿಕೊಳ್ಳುವುದಕ್ಕೆ ಸಮಯವಿಲ್ಲ.ಇನ್ನೂ ನಾನು ಕಿತ್ತುಕೊಂಡು ಹೋಗುವ ಹಣ್ಣುಗಳನ್ನು  ನೋಡುತ್ತಾನೆಯೇ ಎಂದು ಯೋಚನೆ ಮಾಡಿ.ಮರ ಹತ್ತಿ ಕೀಳುವವರು ಯಾರು ? ಎಂದು ಅಲ್ಲಿಯೇ ಇದ್ದ ಹುಲ್ಲನ್ನು ಕಿತ್ತು  ಚೀಲದ ತುಂಬ ಹುಲ್ಲನ್ನೇ ತುಂಬಿಕೊಂಡ.

ಮರು ದಿನ ರಾಜ ಮೂವರು ಸೇನಾಧಿಕಾರಿಗಳನ್ನು ಕರೆದು,ಒಳ್ಳೆಯ ಹಣ್ಣುಗಳನ್ನು ತಂದಿರುವಿರಾ  ? ಎಂದು ಕೇಳಿದ.ಅದಕ್ಕೆ ಆ ಮೂವರು ಹೌದು ಎಂದು ತಲೆ ಆಲ್ಲಾಡಿಸಿದರು.

ಒಡನೆಯೇ ರಾಜ,ರಾಜ ಭಟರನ್ನು ಕರೆದು ಮೂರು ತಿಂಗಳುಗಳ ಕಾಲ ಈ ಮೂವರನ್ನು ಕಾರಾಗೃಹ ದಲ್ಲಿಡಿ ಎಂದು ರಾಜಾಜ್ಞೆ ಹೊರಡಿಸಿದ.

ರಾಜ ಹೇಳಿದ ಹಾಗೆ ಭಟರು ಆ ಮೂವರನ್ನು  ಅವರು ತಂದ ಹಣ್ಣಿನ ಚೀಲಗಳೊಂದಿಗೆ ಕಾರಾಗೃಹದಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಿದರು.

ಸಂಜೆಯ ಹೊತ್ತಿಗೆ ಅವರೆಲ್ಲರಿಗೂ ಹಸಿವಾಗತೊಡಗಿತು. ಮೊದಲನೆಯವನು ತಾನು ತಂದ ಹಣ್ಣುಗಳನ್ನು ತಿನ್ನ ತೊಡಗಿದ. ಎರಡನೆಯವನು ಸಹ ಅವನು ತಂದ  ಹಣ್ಣುಗಳನ್ನು ಪಕ್ವವಾದ ಹಣ್ಣುಗಳನ್ನು ತಿನ್ನ ತೊಡಗಿದ.

ಹಸಿವನ್ನು ತಾಳಲಾರದೆ ಮೂರನೆಯವನು ಸಹ ತನ್ನ ಚೀಲದಲ್ಲಿರುವ ಹುಲ್ಲನ್ನು  ತಿನ್ನ ತೊಡಗಿದ.ತಾನು ತಿಂದ  ಹುಲ್ಲನ್ನು ಅರಗಿಸಿಕೊಳ್ಳಲಾಗದೆ ಒಂದು ವಾರದ ನಂತರ  ಮೂರನೆಯವನು  ಮರಣಿಸಿದ.

ಕೊಳೆತ ಹಣ್ಣುಗಳನ್ನು ತಿಂದ ಎರಡನೆಯವನು ಅನಾರೋಗ್ಯದಿಂದ ಬಳಲಿ ಒಂದು ತಿಂಗಳ ನಂತರ ಮರಣಿಸಿದ.

ಮೊದಲನೆಯವನು ಮಾತ್ರ ಮೂರು ತಿಂಗಳ ನಂತರ ಮತ್ತಷ್ಟು ಕಾಂತಿಯುತವಾಗಿ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ.

ನೀತಿ-“ಶ್ರಮಕ್ಕೆ ತಕ್ಕ ಪ್ರತಿಫಲ”  ಆದ್ದರಿಂದ ನಾವು ಒಳ್ಳೆಯದನ್ನು ಮಾಡಿದರೆ  ನಮಗೂ ಒಳ್ಳೆಯದೇ ಆಗುವುದು, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುವುದು ಎಂದು ಹೇಳುವುದಕ್ಕೆ ಈ ಕಥೆಯೇ ಒಂದು ಸಣ್ಣ ಸಾಕ್ಷಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top