fbpx
ಸಣ್ಣ ಕಥೆ

ಮೂರ್ಖ ಬ್ರಾಹ್ಮಣ – ಕಥೆ

ಮೂರ್ಖ ಬ್ರಾಹ್ಮಣ.

ಕಾರ್ಕೆಯ ಎಂಬ ಮೇಧಾವಿ ಬ್ರಾಹ್ಮಣನು ಈಶ್ವರನ ಕುರಿತು ತಪಸ್ಸು ಮಾಡಲು ಕಾಡಿಗೆ ಹೋದನು.ಅವನ ತಪ್ಪಸ್ಸಿನಿಂದ ಸುಪ್ರೀತನಾದ ಶಿವ ಅವನ ಮುಂದೆ  ಒಂದು ದಿನ ಪ್ರತ್ಯಕ್ಷನಾದನು.

ಶಿವ- ಭಕ್ತ ಬ್ರಾಹ್ಮಣ, ಒಂದು ವರ ಕೇಳುವುದಕ್ಕೆ ಯೋಗ್ಯನಾಗಿರುವೆ ಆದ್ದರಿಂದ ನೀನು ಯಾವುದಾದರೂ ಒಂದು ವರವನ್ನು ಈಗ ಕೇಳಬಹುದು ಎಂದ.

ಕಾರ್ಕೆಯ-  ಓ ಮಹೇಶ್ವರ,  ದಯವಿಟ್ಟು ನನಗೆ ಸಂಜೀವಿನಿಯನ್ನು ದಯಪಾಲಿಸು ಆದ್ದರಿಂದ ನಾನು ಸತ್ತ ಜೀವಕ್ಕೆ ಮತ್ತೆ ಜೀವ ಕೊಡಬಹುದು ಎಂದ.

ಶಿವ-“ ನೀನು ಸತ್ತವರನ್ನು ಬದುಕಿಸಬೇಕು  ಎಂದುಕೊಂಡಾಗಲೆಲ್ಲ  ಈ ಎಲೆಯನ್ನು ಹಿಂಡಿ ಅದರ ರಸವನ್ನು ಜೀವ ಬರಿಸಬೇಕಾದ  ಮೃತ ದೇಹದ ಮೇಲೆ ಚಿಮುಕಿಸು.ಹೀಗೆ ಮಾಡಿದರೆ  ದೇಹವು ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿ,ಬಲಶಾಲಿಯಾಗಿ ಚುರುಕಾಗಿ ಇರುತ್ತದೆ.ಅಷ್ಟೇ ಅಲ್ಲದೆ ಈ ಎಲೆಗಳು ಒಣಗುವುದಿಲ್ಲ. ಇಲ್ಲವೇ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ”.ಇಷ್ಟು ಹೇಳಿ ಶಿವನು ಅದೃಶ್ಯನಾದನು.

ಬ್ರಾಹ್ಮಣ ಅಪಾರ ಆನಂದದಿಂದ ಹಳ್ಳಿಯ ಕಡೆಗೆ ಹೊರಟನು.ಈ ಎಲೆಗಳ ಮೂಲಕ ನಾನು ನಮ್ಮ ಹಳ್ಳಿಯಿಂದ ಸಾವನ್ನು ಹೊಡೆದು ಓಡಿಸುತ್ತೇನೆ. ನಮ್ಮ ಹಳ್ಳಿಯಲ್ಲಿ ನನ್ನ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ನಾನು ಗ್ರಾಮ ಮುಖಂಡ ಕೂಡ ಆಗಬಹುದು ಎಂದು ಬಹಳ ಸಂತೋಷದಿಂದ ಹೊರಟನು.

ಕೂಡಲೇ ಅವನಿಗೆ ಅನುಮಾನ ಬರಲು  ಪ್ರಾರಂಭಿಸಿತು.ದೇವರು ನನಗೆ   ತಮಾಷೆ  ಮಾಡಲಿಲ್ಲ ತಾನೇ ಎಂದು ಮನಸ್ಸಿನಲ್ಲಿ ಯೋಚಿಸುತ್ತ, ಈ ಎಲೆಗಳು ಸಾಧಾರಣ ಎಲೆಗಳಾಗಿದ್ದರೆ  ಎಂದು ಅನುಮಾನಗೊಂಡು. ದಾರಿಯಲ್ಲಿ ಅವನು ಬರುವ ಮಾರ್ಗದಲ್ಲಿ ಒಂದು ಸಿಂಹ ಸತ್ತು ಬಿದಿತ್ತು. ಆ ಸತ್ತ ಸಿಂಹದ ಕಡೆಗೆ ಇವನ ಗಮನ ಹೋಯಿತು. ಆ  ಎಲೆಗಳನ್ನು ಪರೀಕ್ಷಿಸುವುದಕ್ಕಾಗಿ ಬ್ರಾಹ್ಮಣ ಈ ಸತ್ತ ಸಿಂಹದ  ಮೇಲೆ ಆ ಎಲೆಗಳನ್ನು ಪ್ರಯೋಗಿಸುವ   ಯೋಚನೆ ಮಾಡಿದ .

ಅವನು ಎಷ್ಟೇ ಬುದ್ಧಿವಂತನಾದರೂ ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೆ ವಿಚಾರ ಮಾಡದೆ ಅವನು ಸಂಜೀವಿನಿ ಎಲೆಗಳನ್ನು ತನ್ನ ಹಸ್ತದ ಮೇಲೆ ಇಟ್ಟುಕೊಂಡು ಹಿಸುಕಿದ ರಸವನ್ನು ಸಿಂಹದ ಮೇಲೆ ಚಿಮುಕಿಸಿದ . ಸತ್ತ ಸಿಂಹಗೆ ಪುನಃ ಜೀವ ಬಂತು.

ಆಗ  ಎದ್ದು ಸಿಂಹ ಹಾ ನನಗೆ ತುಂಬಾ ಹಸಿವಾಗಿದೆ ಎಂದು ಯೋಚನೆ ಮಾಡುತ್ತಿತ್ತು.

ಬ್ರಾಹ್ಮಣ- ನಿಜ ನಿಜ ಎಲೆಗಳು ಕೆಲಸ ಮಾಡುತ್ತಿವೆ,  ಅಷ್ಟರಲ್ಲೇ ಹುಲಿ ಗರ್ಜನೆ ಮಾಡಿತು.ಅಯ್ಯೋ ದೇವರೇ ನಾನು ಏನು ಮಾಡಿಬಿಟ್ಟೆ. ನಾನು ಈಗ ನನ್ನ ಜೀವ ಉಳಿಸಿಕೊಳ್ಳುವುದಕ್ಕೆ ಇಲ್ಲಿಂದ ಓಡುವುದೇ ಸರಿ ಎಂದು ಓಡಲು ಶುರು ಮಾಡಿದ . ಹುಲಿ ಗರ್ಜನೆ ಮಾಡುತ್ತಾ  ಕೂಡಲೇ ಅವನ ಮೇಲೆ ಎರಗಿತು.ಮೂರ್ಖ ಬ್ರಾಹ್ಮಣನ ಜೀವವು ಕೊನೆಯಾಯಿತು.

ನೀತಿ:- “ಅವಸರ ಕಾರ್ಯ ನಷ್ಟಕ್ಕೆ ಉಪಾಯ”  “ಅವಸರವೇ ಅಪಘಾತಕ್ಕೆ ಕಾರಣ”

ಯಾವುದೇ ಕಾರ್ಯವಾಗಲಿ ,ಮಾತಗಲಿ ಏನೇ ಮಾಡುವುದಕ್ಕೂ ಒಂದಲ್ಲ, ಎರಡಲ್ಲ,ಮೂರು ಬಾರಿ ಯೋಚನೆ ಮಾಡಬೇಕು. ಒಂದು ಬಾರಿ ಮಾಡಿದ ನಷ್ಟದ ಕೆಲಸ ಮತ್ತೆ ಯಾವತ್ತೂ ಸರಿಪಡಿಸಲಾಗದು.ಹಾಗೆ ಬ್ರಾಹ್ಮಣನ ಹೋದ ಜೀವ ಎಂದಿಗೂ ತಿರುಗಿ ಮತ್ತೆ  ಜೀವ ಬರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top