fbpx
ಸಮಾಚಾರ

ಜಿಯೋ ಎಫೆಕ್ಟ್ : ಕಡಿಮೆದರದಲ್ಲಿ 4G ಫೋನ್ ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಏರ್ಟೆಲ್.

ಜಿಯೋ ಎಫೆಕ್ಟ್ : ಕಡಿಮೆದರದಲ್ಲಿ 4G ಫೋನ್  ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಏರ್ಟೆಲ್.

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಆಫರ್ ಗಳನ್ನು ಪರಿಚಯಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ 500 ರೂಪಾಯಿಗೆ ಸ್ಮಾರ್ಟ್ ಫೋನ್, 1,500 ರೂಪಾಯಿಗಳಿಗೆ 4 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ ಇನ್ನು ಸರಿಯಾಗಿ ಒಂದು ವಾರವೂ ಆಗಿಲ್ಲ ಆಗಲೇ ಅದರ ಬಿಸಿ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಅದರ ಬಿಸಿ ತಟ್ಟುತ್ತಿದೆ ಈ ನಡುವೆ ದೇಶದ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಭಾರ್ತಿ ಏರ್ಟೆಲ್ ಕಂಪನಿಯೂ ಸಹ ಅತಿ ಕಡಿಮೆ ದರದಲ್ಲಿ 4Gಫೋನ್ ಗಳನ್ನು ಕೊಡುವ ಯೋಜನೆಯನ್ನು ಹಾಕಿಕೊಳ್ಳುತ್ತಿದೆ.ಕಡಿಮೆ ವೆಚ್ಚದಲ್ಲಿ 4G ಫೋನ್ ಗಳನ್ನು ನೀಡುವುದಾಗಿ ಜಿಯೋ ಘೋಷಿಸಿದ ಬೆನ್ನಲ್ಲೇ ಏರ್ಟೆಲ್ ಕೂಡ ಅಂತದ್ದೇ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.ಈ ಟೆಲಿಕಾಮ್ ಕಂಪನಿಗಳ ಭಾರಿ ಸ್ಪರ್ಧೆಯು ಭಾರತೀಯ ಗ್ರಾಹಕರುಗಳಲ್ಲಿ ಭಾರಿ ಪ್ರಯೋಜನವನ್ನುಂಟು ಮಾಡುತ್ತಿದೆ.ಗ್ರಾಹಕರಿಗೆ ಅತಿ ಕಡಿಮೆ ವೆಚ್ಚದಲ್ಲಿ 4G ಫೀಚರ್ಡ್ ಫೋನ್ ಗಳನ್ನು ನೀಡಲು ಏರ್ಟೆಲ್ ಕಂಪನಿಯು ಹ್ಯಾಂಡ್ಸೆಟ್ ಗಳನ್ನು ತಯಾರು ಮಾಡುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.


ಸದ್ಯ ಏರ್ಟೆಲ್ ಕಂಪನಿಯು ತನ್ನ ಎರಡು ಪ್ರಮುಖ ಯೋಜನೆಗಳನ್ನು ಘೋಷಿಸಿದೆ ಆ ಯೋಜನೆಗಳಾವುವೆಂದರೆ
1.ಮಾರ್ಚ್ 2018 ರ ವೇಳೆಗೆ, ಏರ್ಟೆಲ್ ರಾಷ್ಟ್ರವ್ಯಾಪಿ 4G VoLTE ನೆಟ್ ವರ್ಕ್ ಅನ್ನು ಪ್ರಾರಂಭಿಸುವುದು.
2.ಅವರು ಕಡಿಮೆ ವೆಚ್ಚದ 4G ಫೋನ್ ಗಳನ್ನು ನೀಡಲು ಹ್ಯಾಂಡ್ ಸೆಟ್ ತಯಾರಕರೊಂದಿಗೆ ಪಾಲುದಾರರಾಗುತ್ತಾರೆ, ಅದು ಹಲವಾರು ಯೋಜನೆಗಳೊಂದಿಗೆ ಸಂಯೋಜಿಸಲ್ಪಡುತ್ತದೆ.

 

ಆದರೂ ಜಿಯೋ ರೀತಿ ಸಬ್ಸಿಡಿ ತರಹದಲ್ಲಿ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುವ ಬದಲು ಅತಿ ಕಡಿಮೆ ಬೆಲೆಯಲ್ಲಿ4G ಫೋನ್ ಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ ಮತ್ತು ಆ ಫೋನ್ ಗಳಿಗೆ ಬಹಳ ಆಫರ್ ಗಳನ್ನು ನೀಡಲಾಗುತ್ತದೆ. ಎಂದು ಏರ್ಟೆಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪನಾ ನಿರ್ದೇಶಕರಾದ ಗೋಪಾಲ್ ವಿಠ್ಠಲ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top