fbpx
ಕನ್ನಡ

ಮೂರು ವರ್ಲ್ಡ್ ರೆಕಾರ್ಡ್ ಮಾಡಿದ ಈ ‘ಕನ್ನಡಿಗ ರಾಕ್ ಸ್ಟಾರ್’ ನಮ್ಮ ಹುಬ್ಬಳ್ಳಿಯವ

‘ಹುಬ್ಬಳ್ಳಿಯ ರಾಕ್ ಸ್ಟಾರ್’ ಪ್ರಸನ್ನ ಭೋಜಶೆಟ್ಟರ ಮೂರು ವಿಶ್ವ ದಾಖಲೆ ನಿರ್ಮಿಸಿದ ವೀರ….!

ಹಾರ್ಮೋನಿಯಂ, ಕೀಬೋರ್ಡ್‌, ಕಾಂಗೊ, ಬ್ಯಾಂಗೊ, ಡ್ರಮ್ಸ್‌, ತಬಲಾ, ತಾಳ, ತಪ್ಪಡ, ಮೌಥ್ ಆರ್ಗನ್‌ಗಳನ್ನು ಬೆರಳ ತುದಿಯಲ್ಲೇ ಇಟ್ಟುಕೊಂಡಿರುವ ಇವರು ಉತ್ತರ ಕರ್ನಾಟಕದಲ್ಲಿ ‘ಹುಬ್ಬಳ್ಳಿ ರಾಕ್‌ಸ್ಟಾರ್‌’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸಂಗೀತದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ ಕನ್ನಡದ ಹೆಮ್ಮೇಯ ಪುತ್ರ

ಈ ಯುವ ಸಂಗೀತಗಾರನ ಹೆಸರು ಪ್ರಸನ್ನ ಭೋಜಶೆಟ್ಟರ್‌. ಸದ್ಯಕ್ಕೆ ಇನ್ನಷ್ಟುಪ್ರಯೋಗಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

 

ಹಾಡು ಹಾಡುತ್ತಲೇ ಚಿತ್ರವನ್ನು ಉಲ್ಟಾ ಬಿಡಿಸಬಲ್ಲರು. ಅದೇ ಕ್ಷಣದಲ್ಲೇ ಬಾಲ್‌ಗಳ ಮೂಲಕ ಜಗ್ಲಿಂಗ್ ಮಾಡುತ್ತಾ ನೋಡುಗರ ಕಣ್ಣಿಗೆ ಮ್ಯಾಜಿಕ್ ಮಾಡುವರು. ಹಾಡು ಬರೆಯಲೂ ಸೈ.ಗಿಟಾರ್‌ಕಾರ್ಡ್ಸ್‌ನೊಂದಿಗೆ, ಡ್ರಮ್ಸ್‌ ಬೀಟ್‌ನೊಂದಿಗೆ ಈ ಸಂಭಾಷಣೆಯುಕ್ತ ಹಾಡು  ಹಾಡುತ್ತಿದ್ದರೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುತ್ತವೆ. ‘ಹುಬ್ಬಳ್ಳಿಯ ರಾಕ್ ಸ್ಟಾರ್’ ಎನಿಸಿಕೊಂಡಿರುವ ಆ ಯುವಸಂಗೀತಗಾರನ ಹೆಗಲಿಗೆ ಗಿಟಾರ್‌ ಇಟ್ಟರೆ ಮಾಡುವ ಮೋಡಿ ಒಂದೊಂದಲ್ಲ ಹುಬ್ಬಳ್ಳಿ ರಾಕ್‌ ಸ್ಟಾರ್‌  ತಂಡ ಕಟ್ಟಿಕೊಂಡು ಹಿಂದೂಸ್ತಾನಿ ತವರೂರಲ್ಲಿ ರಾಕ್‌ ಸುಧೆ ಹರಿಸುತ್ತಿರುವ ಪ್ರಸನ್ನ ಒಂದು ಕೈಯಲ್ಲಿ ಮೈಕ್‌, ಮತ್ತೊಂದರಲ್ಲಿ ಮೂರು ಬಾಲ್‌ಗಳ ಜೊತೆ ಜಗ್ಲಿಂಗ್‌ ಮಾಡುತ್ತಾಹಾಡುತ್ತಿದ್ದರೆ ಕೇಳುಗರ ಕಣ್ಣು, ಕಿವಿ ಅರಳುತ್ತವೆ. ಹಾಡುವಾಗ ಡಾನ್ಸ್‌ ಮಾಡುವುದನ್ನು ನೋಡಿರುತ್ತೇವೆ. ಆದರೆ ಇವರು ಹಾಡುತ್ತಾ ಕರಾಟೆ ಪ್ರದರ್ಶಿಸಿ ನೋಡುಗರ ಮನಸ್ಸಿಗೆ ಕಚಗುಳಿಇಡುತ್ತಾರೆ.ಹಾಡಿನ ಭಾವಕ್ಕೆ ಇನ್ನೊಬ್ಬ ಕಲಾವಿದ ಕ್ಯಾನ್ವಾಸ್‌ ಮೇಲೆ ಬಣ್ಣ ತುಂಬುವುದನ್ನೂ ಕಂಡಿದ್ದೇವೆ. ಆದರೆ ಪಲ್ಲವಿ ಚರಣಗಳ ನಡುವಿನ ತಾಳದ ಗತಿಯ ಜೊತೆ ಇವರೇ ಚಿತ್ರಕಲೆಯನ್ನೂಏಕಕಾಲದಲ್ಲಿ ಮಾಡುತ್ತಾರೆ, ಅದೂ ಉಲ್ಟಾ! ಹಾಡು ಮುಗಿದೊಡನೆ ಚಿತ್ರವನ್ನು ತಿರುಗಿಸಿಡುತ್ತಾರೆ. ಆಗ ಇಡೀ ವೇದಿಕೆಯಲ್ಲಿ ವಿದ್ಯುತ್‌ ಸಂಚಾರ ಸೃಷ್ಟಿಯಾಗುತ್ತದೆ.ಕೈಗೆ ಕ್ಯೂಬಿಕ್ಸ್ ಕೊಟ್ಟರೆ ಹಾಡುಮುಗಿಯುವುದರೊಳಗಾಗಿ ಅದರ ಬಣ್ಣ ಒಂದಾಗಿರುತ್ತದೆ. ಹಾಡಿನ ಜೊತೆ ಮ್ಯಾಜಿಕ್‌ ಮಾಡುತ್ತಾರೆ. ಹಾಡು ಮುಗಿಯುವುದರೊಳಗಾಗಿ ಕರಕುಶಲ ವಸ್ತು ತಯಾರಿಸಿ ತೋರಿಸುತ್ತಾರೆ.

ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ 28 ವರ್ಷ ವಯಸ್ಸಿನ ಈ ಪ್ರತಿಭೆಗೆ ವೇದಿಕೆ ಅಂದರೆ ಪಂಚಪ್ರಾಣ. ತನ್ನ ವಿದ್ಯಾರ್ಥಿ ಜೀವನದ ಬಹುಭಾಗವನ್ನು ಕಳೆದಿದ್ದುವೇದಿಕೆ ಮೇಲೆಯೇ. ಕನ್ನಡ, ಹಿಂದಿ, ಇಂಗ್ಲಿಷ್‌ ಮೂರೂ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಹಾಡುಗಳನ್ನು  ಬರೆದು, ಸ್ವರ ಸಂಯೋಜಿಸಿ, ಅದಕ್ಕೆ ದೃಶ್ಯರೂಪ ಕೊಟ್ಟಿದ್ದಾರೆ. ಅವರ ನವೀನ ಕಾರ್ಯಗಳಿಂದಾಗಿ ಅವರು ಭಾರತದಾದ್ಯಂತಪ್ರದರ್ಶನ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕಾಗಿಯೇ ಹಲವು ಗೀತೆ ಬರೆದು ರಾಗ ಸಂಯೋಜನೆ ಮಾಡಿ ನಾಡಿನ ಭಕ್ತಿ ಮೆರೆದಿದ್ದಾರೆ. ವಚನ, ಶಾಯಿರಿಗಳನ್ನೂ ಬರೆದು ಸ್ವರ ಸಂಯೋಜನೆ ಮಾಡಿದ್ದಾರೆ.ಮೊದಲೇಎಂಜಿನಿಯರ್‌ ಆಗಿರುವ ಪ್ರಸನ್ನ ತಾವೇ ಎಡಿಟಿಂಗ್‌ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಇದರಿಂದ ಇವರ ಗಾಯನ ಮೋಡಿಯನ್ನು ಲಕ್ಷಾಂತರ ಜನರು ನೋಡಿಆನಂದಪಟ್ಟಿದ್ದಾರೆ.ಗಾಯನದ ವೇಳೆ ಏನೇ ಮೋಡಿ ಮಾಡಿದರೂ ಶೃತಿ, ರಾಗ, ಲಯ, ತಾಳ, ಗತಿ, ಸಾಹಿತ್ಯಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹಾಡೇ ಮೊದಲು ನಂತರ ಹಲವು ಸಾಹಸ.ಸಮಕಾಲೀನ ಸಂಗೀತದಲ್ಲಿ ಹಲವು ಕನಸು, ಕನವರಿಕೆಗಳಿದ್ದರೂ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯ ಅವರ ಸಂಗೀತಕ್ಕಿದೆ.

ಪಂ.ನರಸಿಂಹಲು ವಡಿವಾಟಿ, ಪಂ. ಜಯತೀರ್ಥ ಮೇವುಂಡಿಯಂಥ ದಿಗ್ಗಜರ ಕೈಯಲ್ಲಿ ಪಳಗಿರುವ ಅವರು ಸಂಗೀತದ ವಿವಿಧ ಮಗ್ಗುಲುಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

2015ರ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಟಾಪ್‌–

10 ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇವರು ಹಿಂದೂಸ್ತಾನಿ ಸಂಗೀತದ ತವರಿನಲ್ಲಿ ರಾಕ್‌ ಹಾಡುತ್ತಾ ಯುವ ಮನಸ್ಸುಗಳಿಗೆ ನಾದದುಂದುಬಿ ಹರಿಸಿದ್ದಾರೆ.

ಅವರ ಬಾಲ್ಯದಿಂದಲೂ ಅವರು ನವೀನ ಕೌಶಲ್ಯದಿಂದ ಜನರನ್ನು ಆಶ್ಚರ್ಯ ಪಡಿಸುತ್ತಿದ್ದಾರೆ. ಅವರು ಎನ್ಸಿಸಿ ಯಲ್ಲಿ ಗೋಲ್ಡ್ ಮೆಡಲಿಸ್ಟ್ಆಗಿದ್ದಾರೆ ಮತ್ತು ಅತ್ಯುತ್ತಮ ಕ್ಯಾಡೆಟ್ ಮತ್ತು ಅತ್ಯುತ್ತಮ ಸಿಂಗರ್ ಪ್ರಶಸ್ತಿಯನ್ನು ಪಡೆದವರು. ಅವರು ಪೆನ್ಸಿಲ್ ಸ್ಕೆಚ್, ಚಿತ್ರಕಲೆ, ಕ್ರೀಡೆಗಳಲ್ಲಿಬಹಳ ಒಳ್ಳೆಯದು ಮತ್ತು ರಾಜ್ಯವು ಒಂದು ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದಾರೆ.

ಇವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್ ಮತ್ತು ಎಂ.ಟೆಕ್ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಇವರು ಸಾಫ್ಟ್ವೇರ್ಇಂಜಿನಿಯರ್ ಆಗಿ 3 ವರ್ಷ ಕೆಲಸ ಮಾಡಿದ್ದಾರೆ ಮತ್ತು ಒಂದು ವರ್ಷಗಳ ಕಾಲ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ.

ಮೂರು ವಿಶ್ವದಾಖಲೆ

2016 ರಲ್ಲಿ ಪ್ರಸನ್ನ ಭೋಜಶೆಟ್ಟರ್ ಹುಬ್ಬಳ್ಳಿ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನ ಪ್ರತ್ಯೇಕ ಮೂರು ವಿಭಾಗಗಳಲ್ಲಿ ವಿಶ್ವ ದಾಖಲೆ ನಿರ್ಮಿಸುವಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿ ನಗರದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದಾರೆ.

ಮೂರು ಪ್ರತ್ಯೇಕ ವಿಭಾಗದಲ್ಲಿ ಪ್ರದರ್ಶನ ನೀಡಿದ ಅವರು, ಆರಂಭದಲ್ಲಿ ಮೂರು ಟೆನ್ನಿಸ್ ಬಾಲ್‌‌ಗಳನ್ನು ಜಗ್ಲಿಂಗ್ ಮಾಡುತ್ತಾ ಯಮನ್ ರಾಗದಲ್ಲಿ 347 ಸ್ವರಗಳನ್ನು ಹಾಡಿದರು. ಸಮಯ ಒಂದುನಿಮಿಷಕ್ಕೆ ನಿಗದಿಯಾಗಿತ್ತು. ಆದ್ರೆ 59 ಸೆಕೆಂಡ್‌‌‌ಗಳಲ್ಲಿ ಮುಗಿಯಿತು. ಇದು ಹೊಸ ದಾಖಲೆಯಾದ ಕಾರಣ ತಿರ್ಪುಗಾರರು 59 ಸೆಕೆಂಡ್‌‌ಗಳ ದಾಖಲೆ ಯತ್ನಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ ನಿಯಮದಪ್ರಕಾರ ಪ್ರಸನ್ನ ಮತ್ತೊಂದು ಅವಕಾಶ ಪಡೆದು ಒಂದು ನಿಮಿಷ ಪೂರ್ಣ ಜಗ್ಲಿಂಗ್ ಮಾಡುತ್ತ 347 ಸ್ವರಗಳನ್ನು ಪೂರ್ಣಗೊಳಿಸಿ ಮೊದಲನೇ ವಿಶ್ವದಾಖಲೆ ನಿರ್ಮಿಸಿದರು.

ಎರಡನೇ ವಿಭಾಗದಲ್ಲಿ ಹಾಡು ಹೇಳಿಕೊಂಡು ಒಂದೇ ಯತ್ನದಲ್ಲಿ 205 ಸೆಕೆಂಡ್ಸ್ ನಲ್ಲಿ ಮಗುವನ್ನು ಅಪ್ಪಿದ ಅಮ್ಮನ ದೃಶ್ಯದ ಉಲ್ಟಾ ಚಿತ್ರವನ್ನು ರಚಿಸಿ ಎರಡನೇ ವಿಶ್ವದಾಖಲೆ ನಿರ್ಮಿಸಿದರು. ತಾರೆಜಮೀನ್ ಪರ್‌‌ ಚಿತ್ರದ ಗೀತೆ ಹಾಡುತ್ತ ಉಲ್ಟಾ ಪೇಟಿಂಗ್ ಮಾಡಿ ಹಾಡಿನ ಕೊನೆಯಲ್ಲಿ ತಿರುಗಿಸಿ ಇಟ್ಟರು. ಅವರು ಚಿತ್ರಾಕೃತಿಯನ್ನು ತಿರುಗಿಸಿ ಇಟ್ಟ ಕೂಡಲೇ ಸಭಾಂಗಣದಲ್ಲಿ ಚಪ್ಪಾಳೆಗಳಸುರಿಮಳೆ ಸುರಿಯಿತು. ಮಗುವನ್ನು ಅಪ್ಪಿದ ಅಮ್ಮನ ದೃಶ್ಯ ಹಾಡಿನ ಸಾಹಿತ್ಯಕ್ಕೆ ಪೂರಕವಾಗಿತ್ತು.

ಮೂರನೇ ವಿಭಾಗದಲ್ಲಿ ಪ್ರಸನ್ನ ಅವರು ತಾವೇ ರಚಿಸಿದ ಸಕಾರ ಮೊದಲಕ್ಷರವುಳ್ಳ 100 ಶಬ್ದ 32 ಸಾಲುಗಳ ಚೌಪದಿ ಗೀತೆಯನ್ನು ಗಿಟಾರ್ ಹಾಗೂ ಕೀಬೋರ್ಡ್‌ ನುಡಿಸುತ್ತಾ ಹಾಡಿದರು. “ಸರಿಗಮಪದನಿಸ ಸ್ವರಗಳ ಸಂಗಮ” ಪಲ್ಲವಿಯಿಂದ ಆರಂಭವಾದ ಗೀತೆ, ಸಾಹಿತ್ಯಕ್ಕೆ ಸಂಗೀತ ಸಂಜೀವಿನಿ ಚರಣದೊಂದಿಗೆ ಪೂರ್ಣಗೊಳಿಸಿ ಮೂರನೇ ವಿಶ್ವದಾಖಲೆ ನಿರ್ಮಿಸಿದರು.

ಹೀಗೆ ಒಂದಾದ ಮೇಲೊಂದರಂತೆ ಮೂರು ವಿಶ್ವ ದಾಖಲೆ ನಿರ್ಮಿಸಿದ ಪ್ರಸನ್ನ ಅವರ ಪ್ರತಿಭೆಗೆ ಶುಭಾಶಯ ಹಾಗೂ ಶ್ಲಾಘನೆಗಳ ಮಹಾಪೂರವೇ ಹರಿದು ಬಂತು. ಪ್ರಸನ್ನ ಅವರ ಪ್ರತಿಭೆಯನ್ನುಕಂಡು ಬೆರಗಾದ ಪ್ರೇಕ್ಷಕರು, ವಿದ್ಯಾರ್ಥಿಗಳು ಚಪ್ಪಾಳೆಗಳಿಂದ ಸ್ವಾಗತಿಸಿದರು.

ದಾಖಲೆ ನಿರ್ಮಾಣ ಯತ್ನಕ್ಕೆ ವೇದಿಕೆ ಕಲ್ಪಿಸಿದ್ದ ಯುನಿವರ್ಸಲ್ ರೆಕಾರ್ಡ್‌ ಫೋರಂ (ಯುಆರ್‌ಎಫ್) ಮುಖ್ಯ ಸಂಪಾದಕ ಡಾ. ಸುನೀಲ್ ಜೋಸೆಫ್, ಪ್ರಸನ್ನ ಭೋಜಶೆಟ್ಟರ ಮೂರು ಹೊಸ ದಾಖಲೆನಿರ್ಮಾಣ ಮಾಡಿರುವುದಾಗಿ ಸ್ಥಳದಲ್ಲಿಯೇ ಘೋಷಿಸಿದರು. ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಮಾಣ ಪತ್ರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top