fbpx
ಧರ್ಮ

ಮಹಾಭಾರತದಲ್ಲಿ ಬರೋ ನಕುಲ ಮತ್ತೆ ಸಹದೇವ ಅವ್ರಪ್ಪನ ಮೆದುಳೇ ತಿಂದಿದ್ರು ಅಂತ ನಿಮಗೆ ಗೊತ್ತಾ ?

ಮಹಾಭಾರತದಲ್ಲಿ ಪಾಂಡವರಾಗಿದ್ದ ನಕುಲ ಮತ್ತು ಸಹದೇವರ ಬಗ್ಗೆ ನಿಮಗೆ ತಿಳಿಯದೇ ಇರೋ ವಿಷಯಗಳು.

ಅವಳಿ ಮಕ್ಕಳು ಮತ್ತು  ಪಾಂಡವ ಸಹೋದರರಾದ ನಕುಲ ಮತ್ತು  ಸಹದೇವರಿಗೆ ಅತಿಂದ್ರೀಯ ಶಕ್ತಿ ಇತ್ತು.ಅದನ್ನು ಅವರಿಬ್ಬರೂ  ಸಹ ಯಾರಿಗೂ ಹೇಳಲಿಲ್ಲ.ಈ ರೀತಿಯ ಅತಿಂದ್ರೀಯ ಶಕ್ತಿ ಬಂದಿದ್ದು ಇವರಿಬ್ಬರು  ಅವರ ತಂದೆಯ ಮೆದುಳಿನ ಮಾಂಸವನ್ನು  ತಿಂದ ನಂತರ.

ಮಹಾಭಾರತ ಭಾರತದ  ಪೌರಾಣಿಕ ಮತ್ತು ಪುರಾಣ  ಕಥೆಯಾಗಿದ್ದು ಹಿಂದೂಗಳ  ಪವಿತ್ರ ಮಹಾಗ್ರಂಥವಾಗಿದೆ.ಇದು  ಜ್ಞಾನ ಬಂಡಾರದ ನಿಧಿಯೇ  ಆಗಿದೆ. ಅದರಲ್ಲಿರುವ ಎಲ್ಲಾ ರಹಸ್ಯಗಳನ್ನು  ತಿಳಿಯಲು   ಇದು ವರೆಗೂ ಯಾರಿಂದಲೂ  ಸಾಧ್ಯವಾಗಿಲ್ಲ.ಇಂದು ನಾವು ನಿಮಗೆ ಕೆಲವು ನಿಜಾಂಶಗಳನ್ನು ಇಲ್ಲಿ ಹೇಳುತ್ತಿದ್ದೇವೆ.ಅದರ ಬಗ್ಗೆ ನಿಮಗೆ ಅಲ್ಪ ಸ್ವಲ್ಪ ತಿಳಿದಿರಬಹುದು.ಆ ಇಬ್ಬರು ಆವಳಿ ಸಹೋದರರಾದ ನಕುಲ ಮತ್ತು ಸಹದೇವರ ಬಗ್ಗೆ ವಿಶೇಷವಾಗಿ  ಇಲ್ಲಿ ತಿಳಿಸಲಾಗಿದೆ.

ಪಾಂಡುರಾಜರು,ಪಾಂಡವರ ತಂದೆ.ಅವರು ಸಾವಿನ ಸಮೀಪದಲ್ಲಿದ್ದರು.ಇನ್ನೇನು ಅವರ ದೇಹ ಅವರ ಆತ್ಮವನ್ನು  ಬಿಟ್ಟು ಹಾರಿ ಹೋಗುವುದರಲ್ಲಿತ್ತು. ಆಗ ಅವರು ಅವರ ಕೊನೇ ಆಸೆಯನ್ನು ವ್ಯಕ್ತಪಡಿಸಿದರು.ಅವರ ಮಕ್ಕಳು ಸಹ ಅವರಿಗಿರುವ ಜ್ಞಾನ ಮತ್ತು ಬುದ್ಧಿಯನ್ನು ಪಡೆಯಲು ಇಚ್ಛಿಸಿದರು.ಪಾಂಡುರಾಜರಿಗೆ  ಅಂತಹ ಬುದ್ದಿಶಕ್ತಿ  ಮತ್ತು ಅತೀವ  ಜ್ಞಾನವನ್ನು ಪಡೆಯಲು   ಅದೆಷ್ಟೋ  ಅನೇಕ ವರ್ಷಗಳೇ ಬೇಕಾಗಿದ್ದವು. ಆದ್ದರಿಂದ ಅಂತಹ ಬುದ್ದಿ ಶಕ್ತಿ ವ್ಯರ್ಥವಾಗಿ ನಾಶವಾಗಬಾರದು ಎಂದು ಅವರ  ಕೊನೆ ಆಸೆಯಾಗಿತ್ತು.ನೀವು ನನ್ನ ಮರಣದ ನಂತರ ನನ್ನ ಮೆದುಳಿನ ಮಾಂಸವನ್ನು  ತಿನ್ನಿರಿ ಎಂದು ನಕುಲ ಮತ್ತು ಸಹದೇವನಿಗೆ  ಹೇಳಿ ಪಾಂಡುರಾಜರು ಮರಣ ಹೊಂದಿದರು.

ಆದ್ದರಿಂದ ಈ ಇಬ್ಬರು ಅವಳಿ ಸಹೋದರರು ಮಾತ್ರ ಈ ವಿಷಯದ  ಬಗ್ಗೆ ಅವರ ಗಮನವನ್ನು  ಕೇಂದ್ರೀಕರಿಸಿದರು.ಇವರು ಮೂರು ಬಾರಿ ಅವರ ತಂದೆಯ ಮೆದುಳಿನ ಮಾಂಸವನ್ನು ತಿಂದರು.

1.ಸಹದೇವ.

ಪಾಂಡುರಾಜರ ಮರಣದ ನಂತರ ಮೊದಲನೇ ಬಾರಿ ಅವರ ತಂದೆಯ ಮೆದುಳಿನ ಮಾಂಸವನ್ನು ತಿಂದಾಗ ಸಹದೇವನಿಗೆ ಈ ಬ್ರಹ್ಮಾಂಡದ ಬಗ್ಗೆ ಜ್ಞಾನ ಬಂತು.ಈ ಬ್ರಹ್ಮಾಂಡ ಹೇಗೆ ಕೆಲಸ ಮಾಡುತ್ತದೆ ಎನ್ನುವ ಜ್ಞಾನದ ಸಂಪೂರ್ಣ  ಅರಿವು ಅವನಿಗೆ ತಿಳಿಯಿತು.

ಎರಡನೇ ಬಾರಿ ತನ್ನ ತಂದೆಯ ಮೆದುಳಿನ ಮಾಂಸವನ್ನು ತಿಂದಾಗ  ಈ ಜಗತ್ತಿನಲ್ಲಿ ಈಗ ಏನಾಗುತ್ತಿದೆ ಎನ್ನುವ ಅರಿವು ಅವನಿಗಾಯಿತು.

ಆದರೆ ಆಶ್ಚರ್ಯಕರ ಸಂಗತಿ ನೆಡೆದಿದ್ದು ಅವನು ಮೂರನೇ ಬಾರಿ ತಿಂದಾಗ.

2.ಮಹಾಭಾರತ.

ಮೂರನೇ ಬಾರಿ  ತನ್ನ ತಂದೆಯ ಮೆದುಳಿನ ಮಾಂಸವನ್ನು ತಿಂದಾಗ  ಸಹದೇವನಿಗೆ ಮುಂದಿನ ಭವಿಷ್ಯದ ಬಗ್ಗೆ ಜ್ಞಾನ ಬಂತು.ಅಂದರೆ ಮುಂದೆ ಏನಾಗುತ್ತದೆ ಎಂದು ಎನ್ನುವುದನ್ನು ಅವನು ಈಗಲೇ  ಎಲ್ಲವನ್ನು  ಹೇಳುವಷ್ಟು ಜ್ಞಾನ ಶಕ್ತಿಯನ್ನು ಅವನು ಪಡೆದನು.ಇದರ ಅರ್ಥ ಅವನಿಗೆ ಮುಂದೆ ಕುರುಕ್ಷೇತ್ರ ಯುದ್ಧವು ನೆಡೆಯುವುದು ಎನ್ನುವ ಬಗ್ಗೆಯೂ ಜ್ಞಾನವಿತ್ತು.ಆ ಒಂದು ಕುರುಕ್ಷೇತ್ರ ಯುದ್ಧವು ಇಡೀ ಕೌರವ ಕುಲವನ್ನೇ ನಾಶ ಪಡಿಸುವುದು ಎಂದು ಅವನಿಗೆ ಮೊದಲೇ ತಿಳಿದಿತ್ತು.

ಆದರೆ ಅವನು ನೀಡಿದ್ದ ಒಂದು ಶಪಥ(ಮಾತಿಗೆ) ಬದ್ಧನಾಗಿ ಇದರ ಬಗ್ಗೆ ಸಹದೇವನು ಯಾರಿಗೂ ಹೇಳಲಿಲ್ಲ.

3.ಸಹದೇವನು ಶಕುನಿಯನ್ನು ಕೊಂದನು.

ಸಹದೇವನು  ಶಪಥ ಮಾಡಿದ್ದ .ಆ ಶಪಥದ  ಪ್ರಕಾರ  ಅವನು ಯಾರಿಗಾದರೂ ಸರಿ  ಮುಂದೆ ಭವಿಷ್ಯದಲ್ಲಿ  ಏನಾಗುತ್ತದೆ ಎಂದು ಯಾರಿಗೂ ಸಹ  ಸತ್ಯ ಹೇಳಬಾರದು ಎಂದು ಶ್ರೀ ಕೃಷ್ಣನಿಗೆ  ಮಾತು ಕೊಟ್ಟಿದ್ದ.

ಒಂದು ವೇಳೆ ಹಾಗೇನಾದರೂ ಅವನು ಕುರುಕ್ಷೇತ್ರದ ಯುದ್ಧದ ಬಗ್ಗೆ  ಯಾರಿಗಾದರೂ  ಹೇಳಿದರೆ  ಅವನು ಸತ್ತು ಹೋಗುತ್ತಿದ್ದ.ಆ ರೀತಿ  ಶಪಥ ಮಾಡಲು ಹೇಳಿದ್ದು ಶ್ರೀ ಕೃಷ್ಣ ಪರಮಾತ್ಮ ಮತ್ತು ಅವನೇನಾದರು ಕೊಟ್ಟ ಮಾತು ತಪ್ಪಿದ್ದಲ್ಲಿ ಮರಣ ಹೊಂದುತ್ತಿದ್ದ.ಆದ್ದರಿಂದ ಎಲ್ಲವನ್ನು ತಿಳಿದಿದ್ದರೂ ಸಹ ಏನು ಗೊತ್ತಿಲ್ಲದಂತೆ ಮೂಕನಾಗಿದ್ದ ಸಹದೇವ. ಕೊನೆಗೆ ಸಹದೇವನೆ  ಕುರುಕ್ಷೇತ್ರ ಯುದ್ಧದಲ್ಲಿ ಶಕುನಿಯನ್ನು ಕೊಂದ.

4.ನಕುಲ.

ಸಹದೇವನ ಇನ್ನೊಬ್ಬ ಅವಳಿ ಸಹೋದರನಾಗಿದ್ದ ನಕುಲ.ಅವನಿಗೆ ಅತ್ಯ ಅದ್ಭುತವಾಗಿ ಮತ್ತು ವೇಗವಾಗಿ ಕುದುರೆ  ಸವಾರಿ ಮಾಡುವ ಶಕ್ತಿಯಿತ್ತು.ಆ ಅದ್ಭುತವಾದ  ಕಲೆ ಅವನಲ್ಲಿತ್ತು.ಎಷ್ಟೇ ಮಳೆ ಬಂದರು ಆ ಮಳೆಯಲ್ಲಿ ಕುದುರೆ ಸವಾರಿ ಮಾಡಿ ಒಂದು ಮಳೆಯು ಹನಿಯು ಸಹ ಅವನ ಮೇಲೆ ಬೀಳದಂತೆ ಅವನ ಕತ್ತಿಯನ್ನು ಬಳಸಿ ಎಲ್ಲಾ ಮಳೆ ಹನಿಯನ್ನು ಸಹ ಅವನ ಮೇಲೆ ಬೀಳದಂತೆ ಹೊರದಬ್ಬುತ್ತಿದ್ದ.ನಂತರ ಅವನು ಸಂಪೂರ್ಣವಾಗಿ ಒಣಗಿರುವಂತೆ ಕಾಣುತ್ತಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top