fbpx
ಸಣ್ಣ ಕಥೆ

ಒಳ್ಳೆಯವರಿಗೆ ಕೆಟ್ಟುದ್ ಮಾಡೋರು ಅವ್ರ್ ಜೊತೇನೆ ಇರ್ತಾರೆ ಅನ್ನೋದಕ್ಕೆ ಈ ಕತೆಯೇ ಉದಾಹರಣೆ!

ಒಳ್ಳೆಯವರಿಗೆ ಕೆಟ್ಟುದ್ ಮಾಡೋರು ಅವ್ರ್ ಜೊತೇನೆ ಇರ್ತಾರೆ ಅನ್ನೋದಕ್ಕೆ ಈ ಕತೆಯೇ ಉದಾಹರಣೆ!

 

ಒಂದಾನೊಂದು ಕಾಲದಲ್ಲಿ ಒಂದು ದಟ್ಟವಾದ ಕಾಡಿನಲ್ಲಿ ಒಂದು ಮಂಗಗಳ ಗುಂಪು ವಾಸಿಸುತ್ತಿತ್ತು ಅವು ಕಾಡಿನಲ್ಲಿ ಶಾಂತಿಯುತವಾಗಿ ಬಾಳ್ವೆ ನಡೆಸುತ್ತಿದ್ದವು. ಎಲ್ಲಾ ಕೋತಿಗಳು ತಮ್ಮ ರಾಜನ ಬಗ್ಗೆ ಒಳ್ಳೆಯ ಅಭಿಪ್ರಾಯದೊಂದಿಗೆ ಗೌರವದಿಂದಿದ್ದವು.ಒಂದು ದಿನ ಮಂಗಗಳ ರಾಜ ಎಲ್ಲಾ ಮಂಗಗಳನ್ನು ಕರೆಸುತ್ತಾನೆ.ಮತ್ತು ಎಲ್ಲಾ ಕೋತಿಗಳಿಗೆ “ಗೆಳೆಯರೇ ನಾವು ಈ ಮಾವಿನ ಮರದ ಮೇಲೆ ಬಹಳ ವರ್ಷಗಳಿಂದ ವಾಸಿಸುತ್ತಿದ್ದೇವೆ ಆದರೆ ಯಾವುದೋ ಸಂಕಷ್ಟ ನಮಗೆ ಎದುರಾಗಬಹುದೆಂದು ನನಗೆ ಅನಿಸುತ್ತಿದೆ” ಎಂದು ಹೇಳಿದನು. ಆಗ ಉಳಿದ ಕೋತಿಗಳು ”ಏಕೆ ಮಹಾರಾಜರೇ” ಎಂದು ಕೇಳಿದವು. ಆಗ ಆ ಕೋತಿಗಳ ರಾಜ “ಮನುಷ್ಯರು ಇನ್ನೂ ಮಾವಿನಹಣ್ಣಿನ ರುಚಿಯನ್ನು ನೋಡಿರುವುದಿಲ್ಲ, ಅವರು ಮಾವಿನ ಹಣ್ಣಿನ ರುಚಿಯನ್ನು ನೋಡಿದ ದಿನವೇ ನಮಗೆಲ್ಲಾ ಆಪತ್ತು ಕಾದಿದೆ “ಎಂದು ಹೇಳಿತು.

ಉಳಿದ ಕೋತಿಗಳು “ಮಹಾರಾಜರೇ! ಹಾಗಾದರೆ ಈಗ ನಾವು ಏನು ಮಾಡೋಣ “ಎಂದು ಕೇಳಿದವು. ಆಗ ಕೋತಿಗಳ ರಾಜ “ನನ್ನ ಹತ್ತಿರ ಒಂದು ಉಪಾಯವಿದೆ. ಮರದಿಂದ ನದಿಗೆ ಒಂದೇ ಒಂದು ಮಾವಿನ ಹಣ್ಣು ಬೀಳದ ಹಾಗೆ ನೋಡಿಕೊಳ್ಳಬೇಕು
ಎಲ್ಲಾ ಕೋತಿಗಳು ಒಂದೇ ಒಂದು ಮಾವಿನಹಣ್ಣು ಕೂಡ ನದಿಗೆ ಬೀಳದ ಹಾಗೆ ಎಚ್ಚರ ವಹಿಸಿದ್ದವು. ಆದ್ರೆ ಎಷ್ಟೇ ಎಚ್ಚರ ವಹಿಸಿ ದರು ಒಂದು ದಿನ ಒಂದು ರಸಭರಿತ ಮಾವಿನ ಹಣ್ಣು ನದಿಗೆ ಬೀಳುತ್ತದೆ.

ಒಬ್ಬ ಮೀನುಗಾರನಿಗೆ ಮೀನುಗಳ ಜೊತೆಯಲ್ಲಿ ಆ ಮಾವಿನ ಹಣ್ಣು ಸಿಗುತ್ತದೆ. ಆದರೆ ಆ ಮೀನುಗಾರನಿಗೆ ಅದು ಏನು ಎಂದು ತಿಳಿಯುದಿಲ್ಲ, ಅವನು ಅವನ ಸ್ನೇಹಿತನನ್ನು “ ನೋಡಿಲ್ಲಿ ಮೀನುಗಳ ಜೊತೆಯಲ್ಲಿ ಇದೇನೋ ಸಿಕ್ಕಿದೆ ಇಲ್ಲಿಯವರೆಗೆ ಈತರವಾದುದನ್ನು ನಾನು ನೋಡಿಯೇ ಇಲ್ಲ, ಇದು ಏನು “ಎಂದು ಕೇಳುತ್ತಾನೆ. ಅದಕ್ಕೆ ಅವನು “ಈ ತರಹದ ಹಣ್ಣನ್ನು ಇದುವರೆಗೂ ನಾವು ನೋಡಿಲ್ಲ, ಈ ಹಣ್ಣನ್ನು ನಾವು ರಾಜನ ಬಳಿ ತೆಗೆದುಕೊಂಡು ಹೋಗೋಣ”ಎಂದು ಹೇಳಿದನು.

ನಂತರ ಅವನು ರಾಜನ ಅರಮನೆಗೆ ಹೊರಟ, “ಮಹಾಪ್ರಭು! ನಾನು ಹಿಡಿದ ಮೀನುಗಳ ಜೊತೆ ಈಹಣ್ಣು ಸಿಕ್ಕಿತ್ತು, ಇದು ಯಾವ ಹಣ್ಣು ಎಂದು ನನಗೆ ಗೊತ್ತಿಲ್ಲ”ಎಂದು ರಾಜನ ಕೈಗೆ ಕೊಟ್ಟನು. ಆಗ ರಾಜನು ಆ ಹಣ್ಣು ತೋರಿಸಿ “ಇದು ಯಾವ ಹಣ್ಣು ಮಂತ್ರಿಗಳೇ “ ಎಂದು ಮಂತ್ರಿಯನ್ನು ಕೇಳುದನು. ಆಗ ಆ ಮಂತ್ರಿಯು “ಅದು ಅತ್ಯಂತ ಅಪರೂಪದ ಮಾವಿನಹಣ್ಣು ಮಹಾಪ್ರಭು, ಅದು ಬಹಳ ರುಚಿಯಾಗಿರುತ್ತದೆ“ ಎಂದು ರಾಜನಿಗೆ ಹೇಳಿದನು. ಆಗ ರಾಜನು ಈ ಮಾವಿನ ಹಣ್ಣು ಎಲ್ಲಿ ಬೆಳೆಯುತ್ತದೆ ಎಂದು ಮಂತ್ರಿಯನ್ನು ಕೇಳುತ್ತಾನೆ ಅದಕ್ಕೆ ಮಂತ್ರಿ ಅದು ದಟ್ಟವಾದ ಕಾಡಿನಲ್ಲಿ ಬೆಳೆಯುತ್ತದೆ ಮಹಾಪ್ರಭು ಎನ್ನುತ್ತಾನೆ. ನಂತರ ರಾಜ “ನಾಳೆಯೇ ಕಾಡಿಗೆ ಹೋಗೋಣ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ” ಎಲ್ಲಾ ತಯಾರಿ ಮಾಡಿಕೊಳ್ಳಿ ಎಂದು ಹೇಳಿದನು..

ಮರುದಿನ ರಾಜನು ಕೆಲವು ಸೈನಿಕರೊಂದಿಗೆ ಕಾಡಿಗೆ ಬರುತ್ತಾನೆ,, ಅವರ ಕಾಡನ್ನು ತಲುಪಿದ್ದಾಗ ಮಂಗಗಳಿಗೆ ಗಾಬರಿಯಾಯಿತು ಮತ್ತು ಅವು ಗಲಿಬಿಲಿಗೊಂಡು ಏನು ಮಾಡಬೇಕು ಎಂದು ತಿಳಿಯದೆ ಕಿರುಚಿಕೊಳ್ಳತೊಡಗಿದವು. ಆಗ ರಾಜ ಸೈನಿಕರನ್ನು “ಸೈನಿಕರೇ ಏನದು ಶಬ್ದ” ಎಂದು ಕೇಳುತ್ತಾನೆ ಅದಕ್ಕವರು ಕೋತಿಗಳು ಸ್ವಾಮಿ ಎನ್ನುತ್ತಾರೆ. ಆಗ ರಾಜನು ಮಾವಿನ ಹಣ್ಣಿನ ಜೊತೆಗೆ ಕೋತಿಗಳ ಮಾಂಸದ ರುಚಿಯನ್ನು ಸವಿಯೋಣ ಎಂದನು, ಅವರು ಕೋತಿಗಳ ಕಡೆಗೆ ಬಾಣಗಳನ್ನು ಬಿಡಲು ಪ್ರಯತ್ನಿಸಿದರು.

ಆಗ ಮಂಗಗಳ ರಾಜ ನದಿಯನ್ನು ದಾಟಲು ಒಂದು ಉಪಾಯ ಮಾಡಿತು, ಅದರಂತೆ ಮಂಗಗಳ ರಾಜನು ಮರದ ಬಳ್ಳಿಯನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಬೇರೆ ದಡದ ಒಂದು ಮರದ ಕೊಂಬೆಯನ್ನು ಹಿಡಿದುಕೊಳ್ಳುತ್ತಾನೆ ಮತ್ತೊಂದು ತುದಿಯನ್ನು ಆ ಮಾವಿನ ಮರಕ್ಕೆ ಕಟ್ಟಿರುತ್ತಾರೆ. ಮಂಗಗಳರಾಜ ಮತ್ತೊಂದು ತುದಿಗೆ ಹೋಗಿ ಅಲ್ಲಿನ ಬೇರೆ ಮರದ ಕೊಂಬೆಯನ್ನು ಹಿಡಿದುಕೊಳ್ಳುತ್ತಾನೆ. ಆ ಬಳ್ಳಿಯನ್ನು ಹಿಡಿದುಕೊಂಡು ಮಂಗಗಳೆಲ್ಲವೂ ಬೇರೆ ದಡಕ್ಕೆ ಬರಬೇಕಿತ್ತು. ಎಲ್ಲ ಮಂಗಗಳು ದಡವನ್ನು ದಾಟುತ್ತಿದ್ದದವು. ಕೊನೆಯಲ್ಲಿ ಆ ಮಂಗಗಳ ರಾಜನನ್ನು ಇಷ್ಟಪಡದ ಒಂದು ಕೆಟ್ಟ ಮಂಗವು ನಿಷ್ಕರುಣೆಯಿಂದ ಮಂಗಗಳ ರಾಜನನ್ನು ಮರದಿಂದ ಕೆಳಕ್ಕೆ ನೂಕುತ್ತದೆ. ಕಾಪಾಡಲು ಯಾರಿಗೂ ಆಗುವುದಿಲ್ಲ, ಮಂಗಗಳ ರಾಜ ಕೆಳಗೆ ಬೀಳುತ್ತಾನೆ. ಮಂಗಗಳ ರಾಜ ಬಂಡೆಯ ಮೇಲೆ ಬಿದ್ದು ಅವನ ತಲೆ ಒಡೆಯುತ್ತದೆ.

ಕಾಡಿಗೆ ಬಂದಿದ್ದ ರಾಜ ಇವೆಲ್ಲವನ್ನೂ ಕಾಡಿನ ಆಚೆದಡದಿಂದಲೇ ನೋಡುತ್ತಿರುತ್ತಾನೆ. ರಾಜ ಆ ಕೋಟಿಯ ಹತ್ತಿರ ಹೋಗಿ ನೀನು ಎಲ್ಲ ಕೋತಿಗಳ ಜೀವವನ್ನು ಉಳಿಸಿದ್ದೀಯ ಆದರೆ ನಿಂಗೆ ಹೇಗಾಯಿತು , ನಿನಗೆ ನಾನು ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದ, ಅದಕ್ಕೆ ಆ ಮಂಗಗಳರಾಜನು “”ಬೇಡ ಸ್ವಾಮಿ, ನಾನು ನನ್ನ ಎಲ್ಲ ಪ್ರಜೆಗಳನ್ನು ಕಾದಿರುವ ಆತ್ಮತೃಪ್ತಿ ಇದೆ,ನನ್ನ ಕರ್ತವ್ಯ ನಾನು ಮಾಡಿದ್ದೇನೆ ” ಎಂದು ಹೇಳಿ ಪ್ರಾಣಬಿಟ್ಟಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top