fbpx
ಕನ್ನಡ

ಖಾಯಿಲೆ ಇದೆ ಈ ಕೆಲಸ ಮಾಡ್ಬೇಡ ಎಂದ ಡಾಕ್ಟರ್ ನ್ನು ಲೆಕ್ಕಿಸದೆ ಆ ಉಪೇಂದ್ರ ಫ್ಯಾನ್ ಏನ್ ಮಾಡಿದ ಗೊತ್ತಾ ?

ಉಪ್ಪಿಕೊಟ್ಟ ಹಸ್ತಾಕ್ಷರವನ್ನು ಅಭಿಮಾನಿಯೇನು ಮಾಡಿದ ಗೊತ್ತಾ ?

ಅಭಿಮಾನಿಗಳು  ತಾವು ಆರಾಧಿಸುವ ನಟ-ನಟಿಯರನ್ನು ಒಮ್ಮೆ ನೋಡಬೇಕೆಂದು ಕನಸು ಕಾಣುತ್ತಾರೆ. ಆ ಕನಸು ನನಸು ಆದಾಗ ಅವರಿಗೆ ಆಕಾಶ ಮೂರೆ ಗೇಣು.ಅಂತದರಲ್ಲಿ ಆರಾಧಿಸುವ ನಟ-ನಟಿಯರನ್ನು ಮಾತಾಡಿಸುವ  ಅವಕಾಶ ಸಿಕ್ಕರೆ ಮುಗಿದೆ ಹೋಯಿತು.ಇನ್ನೂ ಅವರೇನಾದರೂ ಕೈಕುಲುಕಿದರೆ ಅಷ್ಟೇ….ಮೈಕಲ್ ಜಾಕ್ಸನ್ ಭಾರತಕ್ಕೆ ಬಂದಾಗ ತಮ್ಮ ಅಭಿಮಾನಿಯ ಕೈಕುಲುಕಿದ್ದರು. ಆ ಸ್ಪರ್ಶ ಹಾಗೇ ಇರಬೇಕೆಂದು ಆ ಅಭಿಮಾನಿ ತಿಂಗಳಾನುಗಂಟಲೆ ಕೈಯೇ ತೊಳೆದಿರಲಿಲ್ಲವಂತೆ. ಇತ್ತಿಚಿಗೆ ಉಪ್ಪಿ ಅಭಿಮಾನಿಯೊಬ್ಬ ಹೀಗೆ ವಿಚಿತ್ರವಾಗಿ ವರ್ತಿಸಿದ್ದಾನೆ.ಇದರಿಂದ ಸ್ವತಃ ಉಪ್ಪಿಗೂ ಶಾಕ್ ಆಗಿದೆ.

 

ಸಿನಿಮಾ ಶೂಟಿಂಗ್ ಸ್ಥಳಕ್ಕೆ ಮಿಟಿಂಗ್ ಸಲುವಾಗಿ ಡಾ.ಗೀತಾ ಹಾಗೂ ಅವ್ರ ತಂಡವನ್ನು ಕರೆದಿದ್ದರು. ಆದರೆ ಅವರೋಂದಿಗೆ ಬಂದಿದ್ದ ಓಲಾ ಚಾಲಕ ‘ಲೋಹಿತ್ ನಾಯ್ಡು’ ತಮ್ಮ ಕಟ್ಟಾ ಅಭಿಮಾನಿ , ತಮ್ಮೊಂದಿಗೆ ಮಾತನಾಡಲು ಹಾತೋರೆಯುತ್ತಿದ್ದಾನೆಂದು ಗೊತ್ತಾಗುತ್ತಿದ್ದ ಹಾಗೆ ಉಪ್ಪಿ ಮೊದಲು ತಮ್ಮ  ಅಭಿಮಾನಿಯನ್ನು  ಬರಮಾಡಿಕೊಂಡು ಮಾತನಾಡಿಸಿದರು.

 

ಅವರ ಅಭಿಮಾನಿ ಅವರ ನೆನಪಿನ ಧೋತಕವಾಗಿ ಆಟೋಗ್ರಾಫ್ ಕೇಳಿದ. ಪೇಪರ್ ದಲ್ಲಿ ಕೊಡಲು ಉಪ್ಪಿ ಮುಂದಾದಾಗ ಅವನು ಮಣಿಕಟ್ಟಿನ ಮೇಲೆ ಕೊಡಲು ಕೋರಿದ. ಅದು ಅಳಿಸಿಹೋಗುತ್ತೆ ಅಂತ ಉಪ್ಪಿ ಏಷ್ಟೇ ಹೇಳಿದರೂ  ಅವನು ಕೇಳಲಿಲ್ಲ. ‘ನಾನು ಸತ್ತರೂ ಅದು ಅಳಿಸುವುದಿಲ್ಲ ಸರ್.ನಾನು ನಿಮ್ಮ ಅಭಿಮಾನಿಯೆಂದ’. ಉಪ್ಪಿಗೆ ಏನು ಹೇಳಬೇಕುಯೆಂದು ತಿಳಿಯದೆ ಕೊನೆಗೆ ಆಟೋಗ್ರಾಫ್ ನೀಡಿದರು. ಆದರೆ ಉಪ್ಪಿಯ ಆ  ಹುಚ್ಚು ಅಭಿಮಾನಿ ಉಪ್ಪಿಕೊಟ್ಟ ಆಟೋಗ್ರಾಫ್ ನ್ನೇ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಆ ಅಭಿಮಾನಿಯ ಹುಚ್ಚು ಎಷ್ಟೀದೆಯೆಂದರೆ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವ ಇವನಿಗೆ ಡಾಕ್ಟರ್ ಬೇಡವೆಂದರು  ಉಪ್ಪಿಯ ಚಿತ್ರವನ್ನು ಏದೆಮೇಲೆ ಹಚ್ಚೆ ಹಾಕಿಸಿಕೊಂಡಿಸಿದ್ದಾನೆ.ತನ್ನ ಕಾರಿನ ಮೇಲೆ ಅಂಟಿಸಿದ್ದ ಉಪ್ಪಿಯ ಚಿತ್ರವನ್ನು ತೆಗೆಯುವುದಕ್ಕೆ ಕಂಪನಿಯವರು ಒತ್ತಾಯ ಮಾಡಿದಾಗ  ಕೆಲಸವನ್ನೇ ಬಿಟ್ಟಿದ್ದಾನೆ,ಸಕ್ಕರೆಕಾಯಿಲೆಯಿಂದ ಬಳಲುತ್ತಿರುವ ಇವನು ತನ್ನ ಹುಟ್ಟುಹಬ್ಬದಂದು ಉಪ್ಪಿಯನ್ನು ಒಮ್ಮೆ ಭೇಟಿಮಾಡಿಸಿ ಅಂತ ಎಲ್ಲರ ಮುಂದೆ ಗೋಗರೆದ.ಆದರೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವನು ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲಿಲ್ಲ .

‘’ನನ್ನ ಹುಟ್ಟುಹಬ್ಬದಂದು ನಮ್ಮ ಬಾಸ್ ಭೇಟಿಯಾಗಲಿಲ್ಲ,ನಾನು ಸತ್ತರೆ ನಮ್ಮ ಬಾಸ್ ಉಪ್ಪಿ ಸರ್ ಅವರನ್ನು ಕರೆಸಿ’’- ಅನ್ನುವ ಈ ಹುಡುಗನಿಗೆ ಏನು ಹೇಳಬೇಕೆಂಬುದು ಅರ್ಥವಾಗುವುದಿಲ್ಲ.

ಉಪ್ಪಿನೇ  ಭಿನ್ನ…ಉಪ್ಪಿಯ ಅಭಿಮಾನಿಗಳು ಇನ್ನೂವಿಭಿನ್ನ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top