fbpx
ಸಮಾಚಾರ

ಐ.ಟಿ ಕಂಪನಿ ಉದ್ಯೋಗಿಗಳಿಗೆ ಭರ್ಜರಿ ಶಾಕ್ , ನಿಮ್ಮ ಉದ್ಯೋಗ ಎಷ್ಟು ಸೇಫ್ ?

ಐ.ಟಿ ಕಂಪನಿ ಉದ್ಯೋಗಿಗಳಿಗೆ ಭರ್ಜರಿ ಶಾಕ್ , ನಿಮ್ಮ ಉದ್ಯೋಗ ಎಷ್ಟು ಸೇಫ್ ?

ನೆನ್ನೆ ಶನಿವಾರ ಸಾವಿರಾರು ಐ.ಟಿ ಕಂಪನಿ ಉದ್ಯೋಗಿಗಳು ಫ್ರೀಡಂ ಪಾರ್ಕ್ ನಲ್ಲಿ ನೆರೆದು ತಮ್ಮ ಕಂಪನಿಗಳು ಲೇ ಆಫ್ ಮಾಡಿಟ್ಟಿರುವ ಕುರಿತಾಗಿ ಪ್ರತಿಭಟನೆ ನಡೆಸಿದ್ದಾರೆ .


ಇದೆ ಸಮಯದಲ್ಲಿ ಮಾತಾಡಿದ ಐಟಿ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಎ.ಸಿ.ಕುಮಾರಸ್ವಾಮಿ ಮಾತನಾಡಿ ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ಪತ್ರ ಸಲ್ಲಿಸಿ ತಮ್ಮ ಉದ್ಯೋಗಗಳನ್ನು ಕಾಪಾಡುವಂತೆ ಕೇಳಿಕೊಂಡ್ದಿದಾರೆ.

ಬಲವಂತವಾಗಿ ರಾಜಿನಾಮೆ ನೀಡಿ ತೆರಳಿ ಇಲ್ಲವಾದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬುವ ಹೇಳಿಕೆಗಳು ಸಹ ಮಾನವ ಸಂಪನ್ಮೂಲ ಅಧಿಕಾರಿಗಳಿಂದ ಬರುತ್ತಿವೆ ಎಂದು ಪ್ರತಿಭಟನೆ ನಿರತರು ತಮ್ಮ ಅಳಲನ್ನು ತೋಡಿಕೊಂಡರು .

ಕೈಗಾರಿಕಾ ವ್ಯಾಜ್ಯ ಕಾಯ್ದೆ ಅಡಿ ನಮ್ಮ ಐ.ಟಿ ಕಂಪನಿ ಉದ್ಯೋಗಿಗಳು ಬರುವುದಿಲ್ಲ ನಮಗೆ ತೊಂದರೆ ಆದರೆ ಯಾರು ಕೇಳುತ್ತಾರೆ ಎಂದು ಸಹ ಪ್ರತಿಭಟನೆ ನಿರತರು ಹೇಳುತ್ತಾರೆ ,

ಎಂಟು ವರ್ಷಕ್ಕಿಂತ ಹೆಚ್ಚಿಗೆ ಅನುಭವ ಇರುವವರು ಮನೆಗೆ ಹೋರಾಡಿ ಎಂದು ಕಂಪನಿಗಳು ಈಗಾಗಲೇ ತಾಕೀತು ಮಾಡುತ್ತಿವೆ , ನಾವು ಮನೆ ಮಠ ,ಕಾರ್ ಎಂದು ಕೊಂಡುಕೊಂಡ ಸಾಲ ತೀರಿಸುವುದು ಹೀಗೆ ? ನಮ್ಮ ಮಕ್ಕಳ ಮನೆಯವರ ಭವಿಷ್ಯ ಹೇಗೆ ? ಹೀಗೆ ಮುಂದುವರಿದರೆ ಮಕ್ಕಳಿಗೆ ವಿಷ ಕೊಟ್ಟು ನಾವು ಸಾಯಬೇಕು ಅಷ್ಟೇ ಎಂದು ಉದ್ಯೋಗಿಗಳು ಚಿಂತೆ ಪಟ್ಟುಕೊಂಡರು

ಇದಕ್ಕೂ ಮೊದಲು ಟೆಕ್ ಮಹಿಂದ್ರಾ ಕಂಪನಿಯವರು

“ಕಂಪನಿಯಲ್ಲಿ ಕಾಸ್ಟ್ ಆಪ್ಟಿಮೈಸೇಷನ್ ನಡೆಯುತ್ತಿದೆ. ರಾಜೀನಾಮೆ ಪಡೆಯುತ್ತಿರುವವ ಉದ್ಯೋಗಿಗಳ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ. ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ನೀವಾಗಿಯೇ ರಾಜೀನಾಮೆ ನೀಡಿದರೆ, ನಿಮ್ಮನ್ನು ಗೌರವಯುತವಾಗಿ ಕಳಿಸಿಕೊಡಲಾಗುತ್ತದೆ. ಇಲ್ಲದಿದ್ದರೆ, ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ” ಎಂದು ಉದ್ಯೋಗಿಯೊಬ್ಬರಿಗೆ ಕರೆ ಮಾಡಿ ತಿಳಿಸಿದ್ದರು
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು .

ಟಾಟಾ ಮೋಟಾರ್ಸ್​ ನಿಂದ 1500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಇದಕ್ಕೂ ಮೊದಲು ನೀಡಲಾಗಿತ್ತು .

ಒಟ್ಟಿನಲ್ಲಿ ಮಳೆಗಾಲದಲ್ಲಿ ಖಾಯಿಲೆಯಂತೆ ಲೇ ಆಫ್ ಹಾವಳಿ ಸಹ ಮುಂದುವರಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top