fbpx
ದೇವರು

ಶ್ರಾವಣ ಸೋಮವಾರದ ವ್ರತ ಹೀಗೆ ಮಾಡಿದ್ರೆ ತುಂಬಾ ಒಳ್ಳೇದು

ಶ್ರಾವಣ ಸೋಮವಾರದ  ವ್ರತ.

ಆಷಾಢ ಮಾಸದ ನಂತರ ಶುರುವಾಗುವ ಶ್ರಾವಣ ಮಾಸ ಬಂದಿದೆ.ಶ್ರಾವಣ  ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು  ಶಿವನಿಗೆ  ಎಂದೇ ಸೀಮಿತವಾಗಿದ್ದು.ಶ್ರಾವಣ ಮಾಸ ಎಂದರೆ ಶಿವನಿಗೆ ಪ್ರಿಯ.ಹಬ್ಬಗಳು ಸಾಲು ಸಾಲಾಗಿ ಬರುವ ಮಾಸವೇ ಶ್ರಾವಣ ಮಾಸ.ಶ್ರಾವಣದಲ್ಲಿ ನಾಗರ ಪಂಚಮಿ,ಮಂಗಳ ಗೌರಿ ವ್ರತಗಳನ್ನು ಆಚರಿಸುವ ಪದ್ದತಿಯು ಇದೆ.ಶ್ರಾವಣ ಮಾಸದಲ್ಲಿ ಸೋಮವಾರದ ದಿನಕ್ಕೆ ವಿಶೇಷ ಮಹತ್ವವಿದೆ.

ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿಸಲಾಗಿರುವುದರಿಂದ ಅಥವಾ ಶ್ರಾವಣ ಮಾಸ ಶಿವನ ಮಾಸ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಶ್ರಾವಣ ಮಾಸದ  ಸೋಮವಾರದಂದು ಉಪವಾಸ ಇದ್ದು.ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ,ಅರ್ಚನೆ ಸಲ್ಲಿಸಿ,ಶಿವನ ದರ್ಶನ ಪಡೆಯುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ  ಲಭಿಸಿ  ಜೀವನದಲ್ಲಿ ಇರುವ ಕಷ್ಟಗಳು ತೊಲಗುತ್ತವೆ.

ಶ್ರಾವಣ ಸೋಮವಾರ  ಭಕ್ತಿ ,ಶ್ರದ್ಧೆಯಿಂದ ವ್ರತ ,ಉಪವಾಸ ಮಾಡುವುದರಿಂದ ಜಾತಕದಲ್ಲಿರುವ ಎಲ್ಲಾ ದೋಷಗಳು, ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಎಲ್ಲವೂ ಸಹ ಬಗೆಹರಿಯುತ್ತವೆ.

ಶ್ರಾವಣ ಸೋಮವಾರ ವ್ರತ ಉಪವಾಸವನ್ನು ಪ್ರಾರಂಭಿಸಿ  ಬಿಡದೆ ಸತತವಾಗಿ  16 ಸೋಮವಾರಗಳು  ಉಪವಾಸ ಮಾಡಬೇಕು.ಹೀಗೆ ಮಾಡಿದರೆ ಶಿವನ ಸುಪ್ರೀತನಾಗುತ್ತಾನೆ.ಇದರ ಜೊತೆಗೆ ಶಿವ ಚಾಲೀಸವನ್ನು ಮತ್ತು ಶಿವ ಪುರಾಣದ ಕಥೆಯನ್ನು  ಓದಿದರೆ ಇನ್ನೂ ಒಳ್ಳೆಯದು.

ಶಿವನಿಗೆ ಗಂಗಾಜಲ,ಆರತಿ,ಹಾಲು,ಮೊಸರು,ತುಪ್ಪದ ದೀಪ,ಬಿಳಿ ಅಕ್ಕಿ,ಬಿಳಿ ಚಂದನವನ್ನು  ಸಮರ್ಪಿಸಬೇಕು.

ಶ್ರಾವಣ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನಾದಿಗಳನ್ನು ಮಾಡಿ ಮುಗಿಸಿ ಸ್ವಲ್ಪ ಸಮಯವಾದರೂ  ಶಿವನ ಧ್ಯಾನ ಪೂಜೆ ಮಾಡಿದರೆ ಉತ್ತಮ.

ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡುವಾಗ ಸ್ನಾನದ ನೀರಿನಲ್ಲಿ   ಕರಿ ಎಳ್ಳನ್ನು ಬೆರೆಸಿ ಸ್ನಾನ  ಮಾಡಬೇಕು.

ಹತ್ತಿರದಲ್ಲಿ ಶಿವನ ದೇವಾಲಯವಿದ್ದರೆ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ.ಸಾತ್ವಿಕ ಆಹಾರವನ್ನು ಸೇವಿಸಿ,ಸಾಧ್ಯವಿದ್ದರೆ ಉಪವಾಸ ಮಾಡಿ ಶಿವನ ಕೃಪೆಗೆ ಪಾತ್ರರಾಗಿ.ನಿಮಗೆ ಸಾಧ್ಯವಾದರೆ ಅಗತ್ಯವಿರುವ ಬಡವರಿಗೆ ಅನ್ನದಾನ ಮಾಡಿ.

ಸಂಜೆ ವೇಳೆ ದೀಪ ಹಚ್ಚಿ ಪೂಜೆ ಮಾಡಿ  ಮತ್ತೆ ಕೆಲವು ನಿಮಿಷ ಧ್ಯಾನ ಮಾಡಿ  “ಓಂ ನಮಃ ಶಿವಾಯ” ಎಂದು ಪಠಿಸಿರಿ.

ಶ್ರಾವಣ ಮಾಸದ ಅವಧಿಯಲ್ಲಿ ಈ ರೀತಿ ಮಾಡಿದಲ್ಲಿ ನಿಮ್ಮ ಜೀವನ ಶೈಲಿಯನ್ನು  ಬದಲಾಗಿ, ನಿಮ್ಮ ಆರೋಗ್ಯವು  ಉತ್ತಮಗೊಳ್ಳುವುದು . ನಕಾರಾತ್ಮಕ ಅಂಶಗಳು ತೊಲಗಿ ಧನಾತ್ಮಕ ಶಕ್ತಿಯಿಂದ ಜೀವನ  ಸುಗಮವಾಗಿ ಸಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top