fbpx
ವಿಶೇಷ

IPS ಆಫೀಸರ್ D.ರೂಪ ಮಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ.

IPS ಆಫೀಸರ್ D.ರೂಪ ಮಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ.

ನಿಮಗೆ ತಿಳಿದಿರುವಂತೆ ರೂಪ ದಂಪತಿಗಳಿಬ್ಬರೂ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಿದ್ರೂ ಅವರು ತಮ್ಮ ಮುದ್ದು ಮಗಳನ್ನು ಮೂರು ವರ್ಷ ಸರ್ಕಾರಿ ಶಾಲೆಯಲ್ಲಿ ಓದಿಸಿದ್ದರು.

ಯಾದಗಿರಿ ಜಿಲ್ಲೆಯೆಂದು ಘೋಷಣೆಯಾದಾಗ D.ರೂಪ ರವರು ಎಸ್.ಪಿ ಆಗಿ ನೇಮಕಗೊಂಡರು. ಅವರು ಎಸ್.ಪಿ ಆಗಿ ನೇಮಕೊಂಡಾಗ ಯಾದಗಿರಿಯ ಪರಿಸ್ಥಿತಿ ತೀರಾ ಕೆಳ ಪರಿಸ್ಥಿತಿಯಲ್ಲಿತ್ತು ಸರಿಯಾದ ಮೂಲ ಸೌಕರ್ಯಗಳ ಕೊರತೆಯಿತ್ತು. ಅವತ್ತು D.ರೂಪ ಅವರಿಗೆ ವಾಸಮಾಡಲು ವಸತಿಗೃಹವೂ ಇರಲಿಲ್ಲ .ಬಾಡಿಗೆ ಮನೆಯಲ್ಲಿರೋಕೆ ಸೂಕ್ತ ಮನೆಗಳೂ ಸಿಕ್ಕಿರಲಿಲ್ಲ..

 

 

ಆದರೆ ಅದೇ ವೇಳೆಗೆ ಅವರ ಪತಿ ಮುನೀತ್ ಅವರು ಸರ್ಕಾರಿ ಯೋಜನೆಯೊಂದಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.ಆಗ ಭೀಮರಾಯನ ಗುಡಿಯಲ್ಲಿ ಅವರಿಗೊಂದು ವಸತಿಗೃಹವನ್ನು ನೀಡಲಾಗಿತ್ತು ಆ ವಸತಿ ಗೃಹದಲ್ಲೇ ರೂಪ ಮತ್ತು ಅವರ ಮಗಳು ಇದ್ದರು. ಆ ಸಮಯದಲ್ಲಿ ರೂಪರವರು ಮಗಳನ್ನ ಸರ್ಕಾರಿ ಶಾಲೆಗೆ ಸೇರಿಸಿದ್ದರು.

ತಮ್ಮ ಮಗಳನ್ನು ಸೇರಿಸಿದ್ದ ಆ ಶಾಲೆಯ ಪರಿಸ್ಥಿತಿ ಹೇಗಿತ್ತೆಂದರೆ ಮಕ್ಕಳಿಗೆ ಕುಳಿತುಕೊಳ್ಳೋಕೆ ಬೆಂಚುಗಳೇ ಇರಲಿಲ್ಲ.ಎಲ್ಲ ಮಕ್ಕಳು ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತಿದ್ದರು. ಅವರೊಡನೆಯೇ ರೂಪಾರ ಪುತ್ರಿಯೂ ಕೂಡ ಮೂರು ವರ್ಷ ನೆಲದ ಮೆಲಿಯೇ ಕೂತು ಪಾಠ ಕೇಳುತ್ತಿದ್ದರು.

ಸರ್ಕಾರಿ ಶಾಲೆ ಎಂದ ತಕ್ಷಣ ಮೂಗು ಮುರಿಯುವ ಎಷ್ಟೋ ಜನರಿಗೆ IPSಆಫೀಸರ್ D.ರೂಪ ಮಾದರಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top