fbpx
ಮನೋರಂಜನೆ

ಸರಿಗಮಪ 13 ವಿಜೇತರ ಆಯ್ಕೆ ಪ್ರಕ್ರಿಯೆಗೆ ಶೋಷಿಯಲ್ ಮೀಡಿಯಾಗಳಲ್ಲಿ ವಿರೋಧ.

ಸರಿಗಮಪ 13 ವಿಜೇತರ ಆಯ್ಕೆ ಪ್ರಕ್ರಿಯೆಗೆ ಶೋಷಿಯಲ್ ಮೀಡಿಯಾಗಳಲ್ಲಿ ವಿರೋಧ.

 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 13 ಕನ್ನಡ ರಿಯಾಲಿಟಿ ಶೋನ ಮುಖ್ಯಯವಾಗಿದ್ದು ವಿಜೇತರನ್ನು ಆಯ್ಕೆಮಾಡಲಾಗಿದೆ.ಸುನಿಲ್ ಸರಿಗಮಪ ಸೀಸನ್ 13 ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

 

ಜೀ ಕನ್ನಡ ವಾಹಿನಿಯು ಸರಿಗಮಪ ಸೀಸನ್ 13 ರ ಗ್ರಾಂಡ್ ಫಿನಾಲೆ ಸಂಚಿಕೆಯನ್ನು ನೇರಪ್ರಸಾರ ಮಾಡಿತ್ತು. ಸ್ಪರ್ಧಿಗಳ ಗೆಲುವು ವೀಕ್ಷಕರ ಹಾಕಿದ್ದ ವೋಟಿಂಗ್ ಮೇಲೆ ಅವಲಂಬಿತವಾಗಿತ್ತು.ಹಾಗಾಗಿ ಶೋನ ತೀರ್ಪುಗಾರರಿಗೆ ಸ್ಪರ್ಧಿಗಳ ಪ್ರತಿಭೆಯನ್ನಾಧರಿಸಿ ತೀರ್ಪು ಕೊಡುವ ಅವಕಾಶ ಇರಲಿಲ್ಲ. ಹಾಗಾಗಿ ಜನರ ವೋಟಿಂಗ್ ಪ್ರಕಾರ ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಪರಂಪರೆಯ ವಿದ್ಯಾರ್ಥಿ ಸುನಿಲ್ ಸರಿಗಮಪ ಸೀಸನ್ 13 ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಹಾಗೂ ಇದೇ ಮಠದ ಮೆಹಬೂಬ್ ಸಾಬ್ ಅವರು ರನ್ನರ್ ಆಪ್ ಆಗಿದ್ದಾರೆ ಉಳಿದಂತೆ ಶ್ರೀ ಹರ್ಷರವರು ಮೂರನೇ ಸ್ಥಾನ ಮತ್ತು ಧನುಶ್’ರವರು ನಾಲ್ಕನೇ ಸ್ತಾನಕ್ಕೆ ತೃಪ್ತಿಪಟ್ಟಿದ್ದಾರೆ.

ಇದರೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವೋಟಿಂಗ್ ಪ್ರಕ್ರಿಯೆಯಿಂದ ನಿಜವಾದ ಪ್ರತಿಭೆಗೆ ಮೋಸವಾಗಿದೆ ಎಂದು ಪ್ರತಿಕ್ರಯಿಸಿದ್ದಾರೆ. ಜನರಿಗೆ ಸಂಗೀತದ ಬಗ್ಗೆ ಅರಿವಿರುವುದಿಲ್ಲ ಹಾಗಾಗಿ ಪೀನಲ್ ನಲ್ಲಿ ಈ ರೀತಿ ವೋಟಿಂಗ್ ಮೂಲಕ ವಿಜೇತನನ್ನು ಆಯ್ಕೆ ಮಾಡಿರುವುದು ತಪ್ಪು ಎಂಬುದು ಸೋಶಿಯಲ್ ಮೀಡಿಯಾ ದಲ್ಲಿ ಪ್ರತಿಕ್ರಿಯಿಸಿರುವವರ ವಾದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top