fbpx
ಕನ್ನಡ

ಕನ್ನಡದ ಪರ ಸಿಎಂ.ಸಿದ್ದು ಬ್ಯಾಟಿಂಗ್:ಅನ್ಯರಾಜ್ಯದ ಜನರಿಗೆ ಎಚ್ಚರಿಕೆ!!!

ಕನ್ನಡದ ಪರ ಸಿಎಂ.ಸಿದ್ದು ಬ್ಯಾಟಿಂಗ್:ಅನ್ಯರಾಜ್ಯದ ಜನರಿಗೆ ಎಚ್ಚರಿಕೆ!!!

ಯೂಟ್ಯೂಬ್ ನಲ್ಲಿ ಸಿದ್ದರಾಮಯ್ಯನವರೊನ್ನೊಳಗೊಂಡ 14 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರವು ಕನ್ನಡ ಪರವಾದ ಪರವಾಗಿ ಉತ್ತೇಜನ ನೀಡಿತು.ಈ ವಿಡಿಯೋದಲ್ಲಿ ಸಿ.ಎಂ ಸಿದ್ದರಾಮಯ್ಯ ಕನ್ನಡನಾಡಿಗೆ ಬರುವ ಅನ್ಯರಾಜ್ಯ ಜನರಿಗೆ ಕಟ್ಟುನಿಟ್ಟಾದ ಸಂದೇಶವನ್ನು ರವಾನಿಸಿದ್ದಾರೆ.

“ನೆರೆರಾಜ್ಯದವರು ನಮ್ಮ ಸಹೋದರರು ಮತ್ತು ಸಹೋದರಿರಿದ್ದಂತೆ. ಆದರೆ ನಮ್ಮ ಭಾಷೆ, ನಮ್ಮ ನೆಲ ಅಥವಾ ನಮ್ಮ ನೀರನ್ನು ಯಾರಾದರೂ ಆಕ್ರಮಿಸಿದರೆ ಅದನ್ನು ತಡೆದುಕೊಳ್ಳಲಾಗುವುದಿಲ್ಲ. ಕನ್ನಡ ಮತ್ತು ಕನ್ನಡ ಜನರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ “ಎಂದು ರಾಜ್ಯ ಸರಕಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮುಖ್ಯಮಂತ್ರಿ ಹೇಳಿದರು.

ಕಳೆದ ಕೆಲವು ತಿಂಗಳುಗಳಿಂದ, ಮುಖ್ಯಮಂತ್ರಿ ಅವರ ಕನ್ನಡ ಪರವಾದ ನಿಲುವು ಬಗ್ಗೆ ತುಂಬಾ ಗಟ್ಟಿಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳು ಬೇಡ ಎಂದು ಕೇಂದ್ರಕ್ಕೆ ಬಲವಾದ ಪಾತ್ರವನ್ನು ಬರೆದಿದ್ದರು. ಸಿದ್ದರಾಮಯ್ಯ ಸರ್ಕಾರದಡಿ, ಶಾಲೆಗಳನ್ನು ಕನ್ನಡ ಕಲಿಯಲು ಕಡ್ಡಾಯ ಮಾಡಲಾಗಿದ್ದು, ಕನ್ನಡಿಗರಿಗೆ ಕೆಲಸಗಳಲ್ಲಿ ಮೀಸಲಾತಿ ನೀಡಬೇಕು ಎಂದು ಅವರು ಘೋಷಿಸಿದರು.ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಧ್ವನಿ ಎತ್ತಿದ್ದರು.

ವಿಡಿಯೋದಲ್ಲಿ, ಸಿದ್ದರಾಮಯ್ಯ ಅವರು ಕರ್ನಾಟಕವನ್ನು ವಿಂಗಡಿಸಲು ಬಯಸುವ ಪ್ರತ್ಯೇಕತಾವಾದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಮತ್ತು ಅದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.”ಕರ್ನಾಟಕದ ಏಕೀಕರಣದ ಹೋರಾಟವು ದೀರ್ಘ ಮತ್ತು ಕಠಿಣವಾಗಿತ್ತು. ಬಹಳಷ್ಟು ಜನರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ್ದಾರೆ ಆದರೆ ಈಗ ಜನರು ಸ್ವಾರ್ಥ ಲಾಭಕ್ಕಾಗಿ ರಾಜ್ಯವನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ,ಇದಕ್ಕೆ ನಾನು ಎಂದಿಗೂ ಅನುಮತಿಸುವುದಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ಧ್ವಜದ ವಿವಾದವು ಒಂದು ದೊಡ್ಡ ಚರ್ಚೆಗೆ ಕಾರಣವಾದಾಗಿನಿಂದ, ಬಿಜೆಪಿ ಸಿದ್ದರಾಮಯ್ಯನವರ ಕ್ರಮಗಳನ್ನು ಟೀಕಿಸುತ್ತಿದೆ ಮತ್ತು ರಾಜಕೀಯ ಲಾಭಕ್ಕಾಗಿ ಕರ್ನಾಟಕದಿಂದ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದೆ.

 

ಮಾಹಿತಿ ಇಲಾಖೆಯ ಅಧಿಕಾರಿಗಳು YouTube ನಲ್ಲಿ ಅಪ್ಲೋಡ್ ಮಾಡಿರುವ  ವಿಡಿಯೋವನ್ನು ವೀಕ್ಷಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top