fbpx
ಕರ್ನಾಟಕ

ಧ್ರುವಶರ್ಮಾ ಸಾವು ಸಹಜವಲ್ಲ ಆತ್ಮಹತ್ಯೆ?

ಧ್ರುವಶರ್ಮಾ ಸಾವು ಸಹಜವಲ್ಲ ಆತ್ಮಹತ್ಯೆ?

ಸ್ಯಾಂಡಲ್‌ವುಡ್‌ ನಟ ಹಾಗೂ ಸಿಸಿಎಲ್‌ ಟೂರ್ನಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಧ್ರುವ ಶರ್ಮಾ ನಿಧಾನವಾಗಿದ್ದರೆ.35 ವರ್ಷದ ಧ್ರುವಶರ್ಮಾ ಮಾತು ಬಾರದಿದ್ದರೂ ಕಿವಿ ಕೇಳದಿದ್ದರೂ ಅಪ್ರತಿಮ ಕಲಾವಿದರಾಗಿದ್ದರು.ಇವರು ಸಿಸಿಲ್ ನಲ್ಲಿ ಕಿಚ್ಚಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ ತಂಡದ ಪ್ರಮುಖ ಆಟಗಾರನಾಗಿದ್ದರು.

ಈ ನಡುವೆ ದ್ರುವ ಸಾವು ಸಹಜವಾದುದ್ದಲ್ಲ ಆತ್ಮಹತ್ಯೆ ಎಂದು ಧ್ರುವಶರ್ಮಾ ತಂದೆ ಸತೀಶ್ ಶರ್ಮಾ ರಾಜಾನಕುಂಟೆ ಪೊಲೀಸ್ ಠಾಣೆಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಕಂಪನಿಯಲ್ಲಿ ನಷ್ಟ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ತಂದೆ ಕೊಟ್ಟಿರುವ ದೂರಿನಲ್ಲಿ ಉಲ್ಲೇಖವಾಗಿದೆ..ಜುಲೈ 29 ರಂದು ಧ್ರುವ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಕೂಡಲೆಹೆಬ್ಬಾಳದ ಕೊಲಂಬಿಯಾ ಏಷ್ಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕನ್ನಡದ ದಿವ್ಯಾಂಗ ಪ್ರತಿಭೆ ಎಂದೇ ಖ್ಯಾತಿಗಳಿಸಿದ್ದ ಧ್ರುವಶರ್ಮಾ ಇವರು ಸ್ನೇಹಾಂಜಲಿ, ನೀನಂದ್ರೆ ಇಷ್ಟ ಕಣೋ, ಹಿಟ್ ಲಿಸ್ಟ್, ತಿಪ್ಪಜ್ಜಿ ಸರ್ಕಲ್, ‘ಬೆಂಗಳೂರು 560023’ ಚಿತ್ರಗಳಲ್ಲಿ ನಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top