fbpx
ಆರೋಗ್ಯ

ಸಬ್ಬಕ್ಕಿ ಸಸ್ಯಾಹಾರವೋ ಮಾಂಸಾಹಾರವೋ?ಬಗ್ಗೆ ನಿಮಗೆಷ್ಟು ಗೊತ್ತಾ?

ಸಬ್ಬಕ್ಕಿ ಸಸ್ಯಾಹಾರವೋ ಮಾಂಸಾಹಾರವೋ?ಬಗ್ಗೆ ನಿಮಗೆಷ್ಟು ಗೊತ್ತಾ?

 

ಸಬ್ಬಕ್ಕಿ ಪ್ರಾಣಿಜನ್ಯವೋ ಅಥವಾ ಸಸ್ಯಜನ್ಯವೊ ಎನ್ನುವ ವಾದಗಳು ಓದುತ್ತ ಬಂದಿರುವೆ….ಸಬ್ಬಕ್ಕಿ ಬಗ್ಗೆ ನಿಮಗೆ ಗೊತ್ತೆ? ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ. ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಶಾಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ. ಭಾರತದಲ್ಲಿ 95% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ.

 ಸಬ್ಬಕ್ಕಿ ತಯಾರಿಕೆಯ ವಿಧಾನ:

ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
ನಂತರ ಅವುಗಳನ್ನು ಕ್ರಶರ್‍ಗಳಲ್ಲಿ ಹಿಸುಕಲಾಗುತ್ತದೆ. ಈ ಕ್ರಶಿಂಗ್ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ಸೆಟ್ಲ್ ಆಗಲು ಬಿಡಲಾಗುತ್ತದೆ. ಅ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch (ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
ಕೊನೆಯದಾಗಿ ಪಾಲಿಶಿಂಗ್ ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

 

ಸಬ್ಬಕ್ಕಿ ತಿನ್ನೋ ಕಾಲ:

ಸಬ್ಬಕ್ಕಿ, ಸಾಬೂದಾನ ಅಥವಾ ಸೀಮೆಅಕ್ಕಿ ಎಂದೂ ಕರೆಯುವ ಈ ಪದಾರ್ಥವು ಹೆಚ್ಚು ಕಾಬ್ರೋಹೈಡ್ರೇಟ್ ಹೊಂದಿದೆ. ಉಪವಾಸ ಕೈಗೊಳ್ಳುವಾಗ ಇದರ ಬಳಕೆ ಹೆಚ್ಚು. ಆಟವಾಡುವ ಮಕ್ಕಳು ನಿಶಕ್ತಿ ಹೊಂದಿದಾಗ ಇದನ್ನು ಸೇವಿಸಿದರೆ ನಿಶ್ಯಕ್ತಿ ಶಮನವಾಗುವುದು. ಅಲ್ಲದೆ ಇದರಿಂದ ಅನೇಕ ರುಚಿಕರ ಉಪಹಾರವನ್ನುತಯಾರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top